Asianet Suvarna News Asianet Suvarna News

Parking Accident ಬ್ರೇಕ್ ಬದಲು ಆ್ಯಕ್ಸಲರೇಟರ್, ಯುವತಿ ಅಚಾತುರ್ಯಕ್ಕೆ 2ನೇ ಮಹಡಿಯಿಂದ ಕೆಳಕ್ಕೆ ಬಿತ್ತು ಕಾರು!

  • ಕಾರು ಪಾರ್ಕಿಂಗ್ ವೇಳೆ ಯುವತಿಯಿಂದ ಎಡವಟ್ಟು
  • 2ನೇ ಮಹಡಿಯಿಂದ ಬಿತ್ತು ಹ್ಯುಂಡೈ ವರ್ನಾ ಕಾರು
  • ಕಾರು ಪುಡಿ ಪುಡಿ, ಮಹಿಳೆ ಅಪಾಯದಿಂದ ಪಾರು
Hyundai verna car crashing it down from 2nd floor during car parking by lady ckm
Author
Bengaluru, First Published Feb 10, 2022, 9:06 PM IST

ಮುಂಬೈ(ಫೆ.10):  ಪಾರ್ಕಿಂಗ್ ವೇಳೆ ಹಲವು ಅವಘಡಗಳು(Parking Accident) ಸಂಭವಿಸಿದೆ. ಇದೀಗ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. 2ನೇ ಮಹಡಿಯಲ್ಲಿ ಕಾರು ಪಾರ್ಕಿಂಗ್(Car Parking) ಮಾಡುತ್ತಿದ್ದ ವೇಳೆ 22ರ ಯುವತಿ(Lady) ಬ್ರೇಕ್ ಬದಲು ಆ್ಯಕ್ಸಲರೇಟರ್ ಪ್ರೆಸ್ ಮಾಡಿದ್ದಾರೆ. ಕಾರು ಇದಕ್ಕಿದ್ದಂತೆ ಹಿಂಭಾಗಕಕ್ಕೆ ಸರಿದಿದೆ. ಕಟ್ಟಡದ ಗಾಜಿಗೆ ಗುದ್ದಿ ಕಾರು 2ನೇ ಮಹಡಿಯಿಂದ ನೇರವಾಗಿ ಕೆಳಕ್ಕೆ ಬಿದ್ದ ಘಟನೆ ಮುಂಬೈನ ಮಲಾಡ್‌ನಲ್ಲಿ ನಡೆದಿದೆ.

22ರ ಹರೆಯದ ಅಪೇಕ್ಷಾ ಮಿರಾನಿ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಕಾರು ಪಾರ್ಕಿಂಗ್ ಮಾಡುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಎರಡನೇ ಮಹಡಿಯಲ್ಲಿ ಪಾರ್ಕಿಂಗ್ ಮಾಡಲು ರಿವರ್ಸ್ ಗೇರ್ ಹಾಕಿದ ಅಪೇಕ್ಷಾ ಕಾರನ್ನು ಹಿಂದಕ್ಕೆ ತೆಗೆದಿದ್ದಾರೆ. ಆದರೆ ಗಾಬರಿಯಾದ ಅಪೇಕ್ಷಾ ಬ್ರೇಕ್ ಬದಲು ಆ್ಯಕ್ಸಲರೇಟರ್ ಒತ್ತಿದ್ದಾರೆ. ಪರಿಣಾಮ ಕಾರು(Car) ವೇಗವಾಗಿ ಹಿಂದಕ್ಕೆ ಸರಿದಿದೆ.

Car Delivery ಕಾರು ಡೆಲಿವರಿ ವೇಳೆ ಎಡವಟ್ಟು, ಶೋ ರೂಂನಲ್ಲಿ ನಿಂತಿದ್ದ ಮಹಿಳೆ, ಕೂತಿದ್ದ ವ್ಯಕ್ತಿಗೆ ಡಿಕ್ಕಿ!

ಹಿಂದಕ್ಕೆ ಸರಿದ ಕಾರು ಕಟ್ಟದ ಗಾಜಿಗೆ ಡಿಕ್ಕಿ ಹೊಡೆದಿದೆ. ಬಳಿಕ ನೇರವಾಗಿ 2ನೇ ಮಹಡಿಯಿಂದ ಕೆಳಕ್ಕೆ ಬಿದ್ದಿದೆ. ಎತ್ತರದಿಂದ ಕೆಳಕ್ಕೆ ಬಿದ್ದ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಆದರೆ ಕಾರಿನೊಳಗಿದ್ದ ಅಪೇಕ್ಷಾ ಅದೃಷ್ಠವಶಾತ್ ಪಾರಾಗಿದ್ದಾರೆ. ಸಣ್ಣ ಗಾಯಗೊಳೊಂದಿಗೆ(Injury) ಹೆಚ್ಚಿನ ಅಪಾಯವಿಲ್ಲದೆ ಪಾರಾಗಿದ್ದಾರೆ. ಇನ್ನು ಅಪಾರ್ಟ್‌ಮೆಂಟ್ ಕೆಳಭಾಗದಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಅತೀ ದೊಡ್ಡ ದುರಂತವೊಂದು ತಪ್ಪಿದೆ.

ಅಪೇಕ್ಷಾ ತಂದೆ ಹತ್ತಿರದ ಪೊಲೀಸ್ ಠಾಣೆಯಲ್ಲಿ(Police Station) ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಸಿಸಿಟಿವಿ ಪರಿಶೀಲಿಸಿ ಮಾಹಿತಿ ಕಲೆಹಾಕಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಯುವತಿ ಅಚಾತುರ್ಯವೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.  ಅಪಾಯದಿಂದ ಪಾರಾದ ಅಪೇಕ್ಷಾ ಘಟನೆ ಹೇಗಾಯ್ತು ಅನ್ನೋದೆ ತಿಳಿಯುತ್ತಿಲ್ಲ. ಕಾರು ಪಾರ್ಕಿಂಗ್ ಮಾಡುವ ವೇಳ ಸಂಭವಿಸಿದೆ. ಆದರೆ ಅಪಘಾತದದ ಆಘಾತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಬದುಕಿ ಬಂದಿರುವುದೇ ಅತೀ ದೊಡ್ಡ ಅದೃಷ್ಠ. ಈಗ ಕಾರು ನೋಡಲು ಬಯವಾಗುತ್ತಿದೆ ಎಂದು ಅಪೇಕ್ಷಾ ಹೇಳಿದ್ದಾರೆ. 

Mahindra Thar ಕಾರು ಡೆಲಿವರಿ ವೇಳೆ ಗ್ರಾಹಕನ ಎಡವಟ್ಟು, ಶೋ ರೂಂ ಗಾಜು ಪುಡಿ ಪುಡಿ, ಅತೀ ದೊಡ್ಡ ದುರಂತದಿಂದ ಪಾರು!

ಬ್ರೇಕ್ ಬದಲು ಆ್ಯಕ್ಸಲರೇಟರ್, ಆಟೋಮ್ಯಾಟಿಕ್ ಕಾರಿನಲ್ಲಿ ಕ್ಲಚ್ ಬದಲು ಆ್ಯಕ್ಸಲರೇಟರ್‌ಗಳಿಂದ ಹೀಗೆ ಹಲವು ಅವಘಡಗಳು ನಡೆದಿದೆ. ಅದರಲ್ಲೂ ಹೊಸ ಕಾರು ಡೆಲಿವರಿ ವೇಳೆ, ಕಾರು ಪರಿಶೀಲನೆ ವೇಳೆ ಇಂತಹ ಅವಘಡಗಳು ಸಂಭವಿಸಿದೆ.  ಇತ್ತೀಚೆಗೆ ಮೊದಲ ಮಹಡಿಯಲ್ಲಿ ಕಾರು ಡೆಲಿವರಿ ವೇಳೆ ಗ್ರಾಹಕ ಟಾಟಾ ಟಿಯಾಗೋ ಕಾರನ್ನು ಒಂದೇ ಸಮನೆ ಆ್ಯಕ್ಸಲರೇಟರ್ ನೀಡಿದ್ದ. ಪರಿಣಾಮ ಕಾರು ನೇರವಾಗಿ ಶೋ ರೂಂ ಗಾಜನ್ನು ಒಡೆದು ಮೊದಲ ಮಹಡಿಯಿಂದ ಕೆಳಕ್ಕೆ ಬಿದ್ದಿತ್ತು.  ಕಾರು ಬಹುತೇಕ ನಜ್ಜು ಗುಜ್ಜಾಗಿತ್ತು. ಆದರೆ ಗ್ರಾಹಕ ಅಪಾಯದಿಂದ ಪಾರಾಗಿದ್ದರು.

ಬೆಂಗಳೂರಿನಲ್ಲಿ ಮಹೀಂದ್ರ ಶೋ ರೂಂ ನಲ್ಲಿ ಥಾರ್ ಜೀಪ್ ಖರೀದಿಸಲು ಆಗಮಿಸಿದ ಗ್ರಾಹಕರ ಕಾರು ಸ್ಟಾರ್ಟ್ ಮಾಡಿ ಪರಿಶೀಲಿಸಿದ್ದ. ಈ ವೇಳೆ ಮೊದಲ ಮಹಡಿಯಲ್ಲಿದ್ದ ಕಾರು ಶೋ ರೂಂ ಗಾಜು ಪುಡಿ ಮಾಡಿ ಫ್ಲೋರ್ ಕಾರಣದಿಂದ ನೇತಾಡಲು ಆರಂಭಿಸಿತ್ತು. ಬಳಿಕ ಜೆಸಿಬಿ ಹಾಗೂ ಹಲವು ಸಿಬ್ಬಂದಿಗಳ ಸಾಹಸದಿಂದ ಜೀಪನ್ನು ಮರಳಿ ನಿಲ್ಲಿಸಲಾಗಿತ್ತು. ಕಾರು ಖರೀದಿಸಲು ಆಗಮಿಸಿದ ಮಹಿಳೆ ಆಟೋಮ್ಯಾಟಿಕ್ ಕಾರು ಸ್ಟಾರ್ಟ್ ಮಾಡಿ ಪರಿಶೀಲಿಸಿದ ವೇಳೆ ಗೊಂದಲಕ್ಕೀಡಾಗಿದ್ದಾರೆ. ಎಕ್ಸಲರೇಟರ್ ಪ್ರೆಸ್ ಮಾಡಿದ ಕಾರಣ ಕಾರು ನೇರವಾಗಿ ಶೋ ರೂಂ ಗಾಜು ಒಡೆದು ಹೊರಬಂದಿದೆ. ಇಷ್ಟೇ ಅಲ್ಲ ಕಾರು ಶೋ ರೂಂ ಕಳೆಗೆ ನಿಲ್ಲಿಸಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ 6 ಕ್ಕಿಂತ ಹೆಚ್ಚು ಕಾರುಗಳು ಜಖಂ ಗೊಂಡಿತ್ತು. 

Latest Videos
Follow Us:
Download App:
  • android
  • ios