ನವದೆಹಲಿ(ಫೆ.20): ಹ್ಯುಂಡೈ ಇಂಡಿಯಾ ಫೆಬ್ರವರಿ ತಿಂಗಳ ಆಫರ್ ಚುರುಕುಗೊಳಿಸಿದೆ. ಹೊಸ ಗ್ರಾಹಕರನ್ನು ಸೆಳೆಯಲು ಹ್ಯುಂಡೈ ಆಯ್ದ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಿಸಿದೆ. ಬಿಎಸ್‌6 ಕಾರುಗಳ ಮೇಲೆ ಡಿಸ್ಕೌಂಟ್ ಘೋಷಿಸಿದೆ. ಗರಿಷ್ಠ 1.5 ಲಕ್ಷ ರೂಪಾಯಿ ವರೆಗೆ ರಿಯಾಯಿತಿ ಆಫರ್ ಘೋಷಿಸಿದೆ.

5 ನಿಮಿಷ ಚಾರ್ಜಿಂಗ್, 100 KM ಮೈಲೇಜ್; ಬಿಡುಗಡೆಯಾಗುತ್ತಿದೆ ಹ್ಯುಂಡೈ IONIQ 5 ಕಾರು!

ಹ್ಯುಂಡೈ ಸ್ಯಾಂಟ್ರೋ, ಔರಾ, ಗ್ರ್ಯಾಂಡ್ i10 Nios, ಎಲಾಂಟ್ರಾ ಹಾಗೂ ಎಲೆಕ್ಟ್ರಿಕ್ ಕಾರಾದ ಕೋನಾ ಕಾರುಗಳ ಮೇಲೆ ಹ್ಯುಂಡೈ ಡಿಸ್ಕೌಂಟ್ ನೀಡಿದೆ. ಈ ಆಫರ್ ಫೆಬ್ರವರಿ 28ರ ವರೆಗೆ ಮಾತ್ರ ಇರಲಿದೆ.  ಹ್ಯುಂಡೈ ಸ್ಯಾಂಟ್ರೋ ಕಾರಿಗೆ ಒಟ್ಟು 50,000 ರೂಪಾಯಿ ಡಿಸ್ಕೌಂಟ್ ಘೋಷಿಸಿದೆ. ಕ್ಯಾಶ್ ಡಿಸ್ಕೌಂಟ್, ಕಾರ್ಪೋರೇಟ್ ಡಿಸ್ಕೌಂಟ್ ಸೇರಿದೆ.

20 ದಿನದಲ್ಲಿ ದಾಖಲೆ ಬರೆದ ಹೊಚ್ಚ ಹೊಸ ಹ್ಯುಂಡೈ i20 ಕಾರು!

ಗ್ರ್ಯಾಂಡ್   i10 Nios ಕಾರಿನ ಮೇಲೆ ಕ್ಯಾಶ್ ಡಿಸ್ಕೌಂಟ್ 45,000 ರೂಪಾಯಿ. ಎಕ್ಸ್‌ಚೇಂಜ್ ಬೋನಸ್ 10,000 ಇನ್ನು ಕಾರ್ಪೋರೇಟ್ ಬೋನಸ್ 5,000 ರೂಪಾಯಿ ಘೋಸಿಸಿದೆ. ಒಟ್ಟು 60,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.  ಹ್ಯುಂಡೈ ಔರಾ ಕಾರಿನ ಮೇಲೆ ಒಟ್ಟು 70,000 ರೂಪಾಯಿ ಡಿಸ್ಕೌಂಟ್ ಘೋಷಿಸಿದೆ.

ಎಲಾಂಟ್ರ ಕಾರಿನ ಮೇಲೆ ಒಟ್ಟು 1 ಲಕ್ಷ ರೂಪಾಯಿ, ಕೋನಾ ಎಲೆಕ್ಟ್ರಿಕ್ ಕಾರಿಗೆ 1.5 ಲಕ್ಷ ರೂಪಾಯಿ ಡಿಸ್ಕೌಂಟ್ ಘೋಷಿಸಿದೆ. ಆದರೆ ಐ20, ವರ್ನಾ, ವೆನ್ಯೂ ಹಾಗೂ ಟಕ್ಸನ್ ಕಾರಿಗೆ ಯಾವುದೇ ರಿಯಾಯಿತಿ ಘೋಷಿಸಿಲ್ಲ. 

ವಿಶೇಷ ಸೂಚನೆ: ಡಿಸ್ಕೌಂಟ್ ಆಫರ್, ನಗರದಿಂದ ನಗರಕ್ಕೆ, ರಾಜ್ಯದಿಂದ ರಾಜ್ಯಕ್ಕೆ ಹಾಗೂ ಡೀಲರ್‌ನಿಂದ ಡೀಲರ್‌ಗೆ ವ್ಯತ್ಯಾಸವಾಗಲಿದೆ.