ನವದೆಹಲಿ(ನ.21): ಹೊಚ್ಚ ಹೊಸ ಹ್ಯುಂಡೈ i20 ಕಾರು ಕಾರು ಪ್ರಿಯರನ್ನು ಇನ್ನಿಲ್ಲದಂತೆ ಆಕರ್ಷಿಸುತ್ತಿದೆ. ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ವಿಭಾಗದಲ್ಲಿ ಸದ್ಯ ಭಾರತದ ಅತ್ಯಂತ ಆಕರ್ಷಕ ಕಾರು ಅನ್ನೋ ಹೆಗ್ಗಳಿಕೆಗೆ ಹ್ಯುಂಡೈ i20 ಪಾತ್ರವಾಗಿದೆ. ಇದೀಗ ಬುಕಿಂಗ್ ಆರಂಭಗೊಂಡ 20 ದಿನದಲ್ಲಿ ಹೊಚ್ಚ ಹೊಸ ಹ್ಯುಂಡೈ i20 ಕಾರು ದಾಖಲೆ ಬರೆದಿದೆ. ಕೇವಲ 20 ದಿನದಲ್ಲಿ 20,000 ಕಾರುಗಳು ಬುಕ್ ಆಗಿವೆ.

21 ಸಾವಿರಕ್ಕೆ ಬುಕ್ ಮಾಡಿ ಹೊಚ್ಚ ಹೊಸ ಹ್ಯುಂಡೈ i20 ಕಾರು!..

ಕಡಿಮೆ ಅವಧಿಯಲ್ಲಿ ಗರಿಷ್ಠ 20 ಸಾವಿರ ಬುಕಿಂಗ್ ಗಡಿ ದಾಟಿದ ಹೆಗ್ಗಳಿಕೆಗೆ ಹ್ಯುಂಡೈ i20 ಪಾತ್ರವಾಗಿದೆ. ಇನ್ನು ದೀಪಾವಳಿ ಹಬ್ಬದ ವೇಳೆ 4,000 ಹ್ಯುಂಡೈ i20 ಕಾರು ವಿತರಣೆ ಮಾಡಲಾಗಿದೆ.  ನೂತನ ಹ್ಯುಂಡೈ i20 ಖರೀದಿ ಮಾಡುವ ಗ್ರಾಹಕರಿಗೆ ಹಲವು ಆಯ್ಕೆಗಳು ಲಭ್ಯವಿದೆ. ವೇರಿಯೆಂಟ್, ಎಂಜಿನ್, ಟ್ರಾನ್ಸ್‌ಮಿಶನ್ ಸೇರಿದಂತೆ ಹಲವು ಆಯ್ಕೆಗಳಿವೆ.

1.0 ಲೀಟರ್, 1.2 ಲೀಟರ್ ಹಾಗೂ 1.5 ಲೀಟರ್ ಎಂಜಿನ್ ವೇರಿಯೆಂಟ್ ಲಭ್ಯವಿದೆ. 5 ಸ್ಪೀಡ್ ಮಾನ್ಯುಯೆಲ್  ಟ್ರಾನ್ಸ್‌ಮಿಶನ್, ಸಿವಿಟಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹಾಗೂ ಟರ್ಬೋ ಪೆಟ್ರೋಲ್ ಎಂಜಿನ್ 6 ಸ್ಪೀಡ್ iMT ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿದೆ. ಇದರ ಜೊತೆಗೆ 7 ಸ್ವೀಡ್ ಟ್ವಿನ್ ಕ್ಲಚ್ ಅಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಕೂಡ ಲಭ್ಯವಿದೆ.

ಆಯ್ದ ಕಾರುಗಳಿಗೆ ಡಿಸ್ಕೌಂಟ್ ಆಫರ್ ಘೋಷಿಸಿದ ಹ್ಯುಂಡೈ!.

ನೂತನ ಹ್ಯುಂಡೈ i20 ಕಾರಿನ ಆರಂಭಿಕ ಬೆಲೆ 6.8 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ. ಮಾರುತಿ ಬಲೆನೋ, ಟಾಟಾ ಅಲ್ಟ್ರೋಜ್ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಹೊಚ್ಚ ಹೊಸ ಹ್ಯುಂಡೈ i20 ಕಾರು ಮಾರುಕಟ್ಟೆಯಲ್ಲಿ ಭಾರಿ ಸಂಚಲ ಸೃಷ್ಟಿಸಿದೆ.