Honda Car Offers ಕಾರು ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್, ಜನವರಿ ಆಫರ್ ಘೋಷಿಸಿದ ಹೋಂಡಾ!

  • ಹೊಸ ವರ್ಷದ ಮೊದಲ ತಿಂಗಳು ಭರ್ಜರಿ ಆಫರ್ ಘೋಷಿಸಿದ ಹೋಂಡಾ
  • ಜನವರಿ ತಿಂಗಳ ಡಿಸ್ಕೌಂಟ್ ಆಫರ್ ಪ್ರಕಟ, 36,000 ರೂಪಾಯಿ ಡಿಸ್ಕೌಂಟ್
  • ಹೋಂಡಾ ಎಲ್ಲಾ ಕಾರುಗಳಿಗೆ ಅನ್ವಯ, ಲಿಮಿಟೆಡ್ ಪಿರೆಡ್ ಆಫರ್
Honda India Announces January 2022 month discount offers of entire range cars up to rs 35596 ckm

ನವದೆಹಲಿ(ಜ.07): ಹೊಸ ವರ್ಷದ(New year 2022) ಆರಂಭದಲ್ಲೇ ಕೊರೋನಾ ಅಬ್ಬರಿಸುತ್ತಿದೆ. 2021ರ ಕೊರೋನಾ ಹೊಡೆತದಿಂದ ಭಾರತದ ಆಟೋಮೊಬೈಲ್(Automobile) ಕ್ಷೇತ್ರ ಇನ್ನು ಚೇತರಿಸಿಕೊಂಡಿಲ್ಲ. ಆಗಲೆ ಮತ್ತೊಂದು ಅಲೆ ಕೇಳಿಬರುತ್ತಿದೆ. ಇದರ ನಡುವೆ ವೀಕೆಂಡ್ ಕರ್ಫ್ಯೂ ಸೇರಿದಂತೆ ಹಲವು ನಿರ್ಬಂಧಗಳು ಜಾರಿಯಾಗಿದೆ. ಹೀಗಾಗಿ ವಾಹನ(Vehicle Sales) ಮಾರಾಟದಲ್ಲೂ ಕುಸಿತ ಕಾಣುತ್ತಿದೆ. ಇದೀಗ ಮತ್ತೆ ವಾಹನ ಮಾರಾಟ ಚುರುಕುಗೊಳಿಸಲು ಹೋಂಡಾ ಭರ್ಜರಿ ಡಿಸ್ಕೌಂಟ್ ಆಫರ್(Honda Discount Offers) ಘೋಷಿಸಿದೆ. 

ಹೋಂಡಾ ಇಂಡಿಯಾ ಜನವರಿ 2022ರ(anuary 2022) ಡಿಸ್ಕೌಂಟ್ ಆಫರ್ ಘೋಷಿಸಿದೆ. ಗರಿಷ್ಠ 35,596 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಇದು ಹೋಂಡಾದ ಎಲ್ಲಾ ಕಾರುಗಳಿಗೆ(Honda Cars) ಅನ್ವಯವಾಗಲಿದೆ. ಇಷ್ಟೇ ಅಲ್ಲ ಈ ಆಫರ್ ಜನವರಿ 31ರ ವರೆಗೆ ಇರಲಿದೆ. ಹೋಂಡಾ ಜಾಝ್ ಕಾರಿನಿಂದ ಹಿಡಿದು ಹೋಂಡಾ ಸಿಟಿ ಕಾರಿನವರೆಗೆ ಆಫರ್ ನೀಡಲಾಗಿದೆ.

ಕಡಿಮೆ ದರ, ಸುರಕ್ಷತೆ: ಹೋಂಡಾ ಅಮೇಜ್ ಕಾರಿನ ಮಾರಾಟ ಅಮೇಜಿಂಗ್!

ಹೋಂಡಾದ ಎಲ್ಲಾ ಕಾರುಗಳ ಮೇಲೆ ಒಟ್ಟು 35,596 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಎಕ್ಸ್‌ಚೇಂಜ್ ಬೋನಸ್, ಕಾರ್ಪೋರೇಟ್ ಬೋನಸ್, ಲೊಯಲ್ಟಿ ಬೋನಸ್ ಸೇರಿದಂತೆ ಇತರ ಕೆಲ ಬೋನಸ್‌ಗಳನ್ನು ಈ ಡಿಸ್ಕೌಂಟ್ ಆಫರ್‌ನಲ್ಲಿ ಸೇರಿಸಲಾಗಿದೆ. ಕೆಲ ಮಾಡೆಲ್ ಮೇಲೆ 10,500 ರೂಪಾಯಿ ನಗದು ಡಿಸ್ಕೌಂಟ್ ಕೂಡ ಘೋಷಿಸಲಾಗಿದೆ. 

ಹೊಂಡಾ ಅಮೇಜ್ ಫೇಸ್‌ಲಿಫ್ಟ್ ಕಾರಿಗೆ ಗರಿಷ್ಠ 15,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದರಲ್ಲಿ ಲೊಯಲ್ಟಿ ಬೋನಸ್ 5,000 ರೂಪಾಯಿ, ಎಕ್ಸ್‌ಚೇಂಜ್ ಬೋನಸ್ 6,000 ರೂಪಾಯಿ ಹಾಗೂ ಕಾರ್ಪೋಪೇಟ್ ಬೋನಸ್ 4,000 ರೂಪಾಯಿ ಒಳಗೊಂಡಿದೆ. ಇನ್ನು WR-V ಕಾರಿಗೆ 26,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಇದು ಎಕ್ಸ್‌ಚೇಂಜ್ ಬೋನಸ್ 10,000 ರೂಪಾಯಿ, ಲಾಯಲ್ಟಿ ಬೋನಸ್ 5,000 ರೂಪಾಯಿ, ಹೋಂಡಾ ಕಾರು ಎಕ್ಸ್‌ಚೇಂಜ್ ಬೋನಸ್ 7,000 ರೂಪಾಯಿ ಹಾಗೂ ಕಾರ್ಪೋರೇಟ್ ಬೋನಸ್ 4,000 ರೂಪಾಯಿ ನೀಡಲಾಗಿದೆ.

ASEAN NCAP ಕ್ರ್ಯಾಶ್ ಟೆಸ್ಟ್: 2021 ಹೋಂಡಾ ಸಿವಿಕ್‌ಗೆ 5 ಸ್ಟಾರ್!

ಹೋಂಡಾ ಸಿಟಿ ಸೆಡಾನ್ ಕಾರಿನ ಮೇಲೆ 20,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಲೋಯಲ್ಟಿ ಬೋನಸ್ 5,000 ರೂಪಾಯಿ, ಹೋಂಡಾ ಕಾರು ಎಕ್ಸ್‌ಚೇಂಜ್ ಬೋನಸ್ 7,000 ರೂಪಾಯಿ ಹಾಗೂ ಕಾರ್ಪೋರೇಟ್ ಬೋನಸ್ 8,000 ರೂಪಾಯಿ ನೀಡಲಾಗಿದೆ. 

ಹೊಂಡಾ ಜಾಝ್ ಕಾರಿಗೆ ಗರಿಷ್ಠ 33,147 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದರಲ್ಲಿ 10,000 ರೂಪಾಯಿ ನಗದು ರಿಯಾಯಿತಿ ಘೋಷಿಸಲಾಗಿದೆ. ಇನ್ನುಳಿದಂತೆ ಎಕ್ಸಸರಿಗಾಗಿ 12,147 ರೂಪಾಯಿ ಡಿಸ್ಕೌಂಟ್ ಮಾಡಲಾಗಿದೆ.  ಕಾರು ಎಕ್ಸ್‌ಜೇಂಚ್ ಬೋನಸ್ ಡಿಸ್ಕೌಂಟ್ 5,000 ರೂಪಾಯಿ, ಲಾಯಲ್ಟಿ ಬೋನಸ್ 5,000 ರೂಪಾಯಿ, ಹೋಂಡಾ ಕಾರು ಎಕ್ಸ್‌ಚೇಂಜ್ ಬೋನಸ್ 7,000 ರೂಪಾಯಿ ಹಾಗೂ ಕಾರ್ಪೋರೇಟ್ ಬೋನಸ್ 4,000 ರೂಪಾಯಿ ಘೋಷಿಸಲಾಗಿದೆ.

ಹೊಸ ವರ್ಷದಲ್ಲಿ ಬಹುತೇಕ ಕಾರು ಕಂಪನಿಗಳು ವಾಹನ ಬೆಲೆ ಹೆಚ್ಚಳ ಮಾಡಿದೆ.  ಆದರೆ ಹೋಂಡಾ ಮಾತ್ರ ಭರ್ಜರಿ ಡಿಸ್ಕೌಂಟ್ ಘೋಷಿಸಿ ಕಾರು ಮಾರಾಟದಲ್ಲಿ ದಾಖಲೆ ಬರೆಯಲು ಸಜ್ಜಾಗಿದೆ. ಈ ಮೂಲಕ ಹೊಸ ವರ್ಷದ ಆರಂಭದಿಂದಲೇ ಮಾರಾಟ ಉತ್ತಮಪಡಿಸಿಕೊಳ್ಳಲು ಹೋಂಡಾ ಪ್ರಯತ್ನಿಸುತ್ತಿದೆ. ಈಗಾಗಲೇ ಲಾಕ್‌ಡೌನ್ ಮಾತುಗಳು ಕೇಳಿಬರುತ್ತಿದೆ. ಹೀಗಾಗಿ ದೇಶದಲ್ಲಿ ಒಂದೊಂದೆ ರಾಜ್ಯಗಳು ಕಠಿಣ ನಿಯಮ ಜಾರಿಗೊಳಿಸಿದರೆ ಮಾರಾಟ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಇದರಿಂದ ಮತ್ತೊಮ್ಮೆ ಆರ್ಥಿಕ ನಷ್ಟ ಎದುರಿಸಲಿದೆ. ಹೀಗಾಗಿ ಆಫರ್ ಮೂಲಕ ಮಾರುಕಟ್ಟೆಯಲ್ಲಿ ಮಾರಾಟ ಹೆಚ್ಟಿಸಿಕೊಳ್ಳಲು ಹೋಂಡಾ ಅವಿರತ ಪ್ರಯತ್ನ ಮಾಡುತ್ತಿದೆ. ಇದೀಗ ಇತರ ಕೆಲ ಆಟೋ ಕಂಪನಿಗಳು ಆಫರ್ ಘೋಷಿಸುವ ಸಾಧ್ಯತೆ ಇದೆ.

Latest Videos
Follow Us:
Download App:
  • android
  • ios