Asianet Suvarna News Asianet Suvarna News

ಕಾರುಗಳಲ್ಲಿ ಆರು ಏರ್ಬ್ಯಾಗ್ ಕಡ್ಡಾಯ: ಆದೇಶದ ಜಾರಿ ಮುಂದೂಡಿಕೆ ಸಾಧ್ಯತೆ

ಭಾರತೀಯ ರಸ್ತೆಗಳಲ್ಲಿ ಅಪಘಾತಗಳನ್ನು ತಡೆಯುವ ಉದ್ದೇಶದಿಂದ 2022ರ ಅಕ್ಟೋಬರ್ 1 ರಂದು ಕಾರುಗಳಲ್ಲಿ ಆರು ಏರ್ಬ್ಯಾಗ್ಗಳ  (air bag) ಅಳವಡಿಕೆ ಕಡ್ಡಾಯಗೊಳಿಸುವುದಾಗಿ ಕೇಂದ್ರ ಸರ್ಕಾರ ಪ್ರಸ್ತಾಪಿಸಿತ್ತು. ಆದರೆ, ಈ ಪ್ರಸ್ತಾಪವನ್ನು ಈಗ 18 ತಿಂಗಳವರೆಗೆ ಮುಂದೂಡುವ ಸಾಧ್ಯತೆಯಿದೆ.

Central Government may extend the implement of six airbag rules
Author
First Published Sep 26, 2022, 12:20 PM IST

ಭಾರತೀಯ ರಸ್ತೆಗಳಲ್ಲಿ ಅಪಘಾತಗಳನ್ನು ತಡೆಯುವ ಉದ್ದೇಶದಿಂದ 2022ರ ಅಕ್ಟೋಬರ್ 1 ರಂದು ಕಾರುಗಳಲ್ಲಿ ಆರು ಏರ್ಬ್ಯಾಗ್ಗಳ  (air bag) ಅಳವಡಿಕೆ ಕಡ್ಡಾಯಗೊಳಿಸುವುದಾಗಿ ಕೇಂದ್ರ ಸರ್ಕಾರ ಪ್ರಸ್ತಾಪಿಸಿತ್ತು. ಆದರೆ, ಈ ಪ್ರಸ್ತಾಪವನ್ನು ಈಗ 18 ತಿಂಗಳವರೆಗೆ ಮುಂದೂಡುವ ಸಾಧ್ಯತೆಯಿದೆ. ಭಾರತದಲ್ಲಿ ಸಾಕಷ್ಟು ಏರ್ಬ್ಯಾಗ್ ಉತ್ಪಾದನಾ ಸಾಮರ್ಥ್ಯವಿಲ್ಲ ಎಂದು ಉದ್ಯಮದ ಮೂಲಗಳು ಬಹಿರಂಗಪಡಿಸಿರುವುದು ಈ ನಿರೀಕ್ಷಿತ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. ಎಲ್ಲಾ ಕಾರುಗಳು ಕಡ್ಡಾಯವಾಗಿ ಆರು ಏರ್ಬ್ಯಾಗ್ಗಳನ್ನು ಹೊಂದಿರಬೇಕಾದರೆ ಏರ್ಬ್ಯಾಗ್ ಉತ್ಪಾದನೆಯು ಬೇಡಿಕೆಯ ಉಲ್ಬಣವನ್ನು ಪೂರೈಸಲು ವರ್ಷಕ್ಕೆ 18 ಮಿಲಿಯನ್ಗಳಷ್ಟು ಅಂದರೆ ಈಗ ಲಭ್ಯವಿರುವುದಕ್ಕಿಂತ ಮೂರು ಪಟ್ಟು ಹೆಚ್ಚಿಸಬೇಕಾಗುತ್ತದೆ.

ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಜನವರಿಯಲ್ಲಿ ಕರಡು ಅಧಿಸೂಚನೆಯನ್ನು (draft notification) ಹೊರಡಿಸಿ ದೇಶದ ಎಲ್ಲಾ ಕಾರುಗಳಲ್ಲಿ ಆರು ಏರ್ಬ್ಯಾಗ್ಗಳನ್ನು ಕಡ್ಡಾಯಗೊಳಿಸಿತ್ತು ಮತ್ತು  2022ರ ಅಕ್ಟೋಬರ್ 1 ರೊಳಗೆ ಪ್ರಸ್ತಾವಿತ ಮಾರ್ಗಸೂಚಿಗಳನ್ನು ಅನುಸರಿಸಲು ಎಲ್ಲಾ ತಯಾರಕರಿಗೆ ನಿರ್ದೇಶನ ನೀಡಿತ್ತು. ಹಿರಿಯ ಉದ್ಯಮ ಕಾರ್ಯನಿರ್ವಾಹಕರೊಬ್ಬರು, “ಅಧಿಸೂಚನೆಯನ್ನು ಕಾನೂನು ಮಾಡಬೇಕಾದ ಆರು ತಿಂಗಳ ಸಚಿವಾಲಯದ ಕಾಲಮಿತಿಯು ತಾಂತ್ರಿಕವಾಗಿ ಮುಗಿದಿದೆ. ಆದ್ದರಿಂದ, ನಾವು  ಅಧಿಸೂಚನೆಯ ಮರುಹಂಚಿಕೆಯನ್ನು  ನಿರೀಕ್ಷಿಸುತ್ತಿದ್ದೇವೆ. ಮಾರ್ಗಸೂಚಿಗಳು ಈಗ 2024ರ ಏಪ್ರಿಲ್ ಅಷ್ಟರಲ್ಲಿ ಕಾರ್ಯಗತಗೊಳ್ಳುವ ನಿರೀಕ್ಷೆಯಿದೆ ಎಂದಿದ್ದಾರೆ.

ದ್ವಿಚಕ್ರ ವಾಹನಗಳಲ್ಲೂ ಬರಲಿದೆ Air Bag: ಪೇಟೆಂಟ್ ಪಡೆದ ಹೊಂಡಾ

Central Government may extend the implement of six airbag rules
2022ರ ಆರ್ಥಿಕ ವರ್ಷ ಅಂದರೆ, 2021ರ ಏಪ್ರಿಲ್  ನಿಂದ 2022ರ ಮಾರ್ಚ್ ವರೆಗೆ ಭಾರತದ ಒಟ್ಟು ಪ್ರಯಾಣಿಕ ವಾಹನ ಮಾರುಕಟ್ಟೆ ಗಾತ್ರವು ಸುಮಾರು ಮೂರು ಮಿಲಿಯನ್ ವಾಹನಗಳಷ್ಟು ಏರಿಕೆಯಾಗಿದೆ. ವರ್ಷದಿಂದ ವರ್ಷಕ್ಕೆ ಶೇ. 12 ರಷ್ಟು ಬೆಳವಣಿಗೆಯನ್ನು ದಾಖಲಿಸಿದ್ದು, ಒಂದೇ ವರ್ಷದಲ್ಲಿ 30,45,465 ವಾಹನಗಳ ಮಾರಾಟ ದಾಖಲಾಗಿದೆ. ಈ ವರ್ಷದ ಆರಂಭದಲ್ಲಿ ಅಂದರೆ ಜನವರಿಯಲ್ಲಿ ಪ್ರಾರಂಭವಾದ ಡ್ಯುಯಲ್-ಏರ್ಬ್ಯಾಗ್ ಆದೇಶವು ಈಗಾಗಲೇ ಒಟ್ಟು ಸಾಮರ್ಥ್ಯದ ಅಗತ್ಯವನ್ನು ಸುಮಾರು ಆರು ಮಿಲಿಯನ್ ಏರ್ಬ್ಯಾಗ್ ಗಳಿಗೆ ಏರಿಸಿದೆ. ಈ ಪೈಕಿ ಈಗಾಗಲೇ ಅಂದಾಜು ಶೇ. 15 ರಷ್ಟು ಪ್ರಯಾಣಿಕ ವಾಹನಗಳು (PV) ಗಳು ಈಗಾಗಲೇ ಆರು ಏರ್ಬ್ಯಾಗ್ಗಳನ್ನು ಹೊಂದಿದೆ. ಏರ್ಬ್ಯಾಗ್‌ಗಳ ಸಂಗ್ರಹವು ಪ್ರಸ್ತುತ ಎಂಟು ಮಿಲಿಯನ್ ವಾಹನಗಳಿಗೆ ಪೂರೈಸುವಷ್ಟಿದೆ. ಪ್ರಯಾಣಿಕ ವಾಹನ (PV) ಮಾರುಕಟ್ಟೆಯ ಉಳಿದ ಶೇ.85ರಷ್ಟು ವಾಹನಗಳನ್ನು ಆರು ಏರ್ಬ್ಯಾಗ್ಗಳಿಗೆ ಬದಲಾಯಿಸಬೇಕಾದರೆ, 10 ಮಿಲಿಯನ್ ಏರ್ಬ್ಯಾಗ್ಗಳಿಗೆ ಹೆಚ್ಚುವರಿ ಸಾಮರ್ಥ್ಯದ ಅವಶ್ಯಕತೆ ಇದೆ. ಆದ್ದರಿಂದ ಸಂಪೂರ್ಣ ಮಾರುಕಟ್ಟೆಯ ಬೇಡಿಕೆ ಪೂರೈಸಲು ಪೂರೈಕೆದಾರರು ಉತ್ಪಾದನೆಯನ್ನು 18 ಮಿಲಿಯನ್ ಏರ್ಬ್ಯಾಗ್ ಘಟಕಗಳಿಗೆ ಹೆಚ್ಚಿಸುವ ತುರ್ತು ಅಗತ್ಯವಿದೆ.

ಉದ್ಯಮದ ತಜ್ಞರ ಪ್ರಕಾರ, 'ನಮ್ಮಲ್ಲಿ ಈಗ ಆರು ಮಿಲಿಯನ್ ವಾಹನಗಳ ಏರ್ಬ್ಯಾಗ್ಗಳ ಸಾಮರ್ಥ್ಯವೂ ಇಲ್ಲ. ಹೊಸ ಮಾರ್ಗಸೂಚಿಗಳು ಸಾಮರ್ಥ್ಯಗಳ ಗಮನಾರ್ಹ ವಿಸ್ತರಣೆ ಮತ್ತು ಏರ್‌ಬ್ಯಾಗ್‌ಗಳು ಮತ್ತು ಅವುಗಳ ಸಂಬಂಧಿತ ಭಾಗಗಳ ಸ್ಥಳೀಕರಣಕ್ಕೆ ಕರೆ ನೀಡುತ್ತವೆ. ಏಕೆಂದರೆ ಪ್ರಸ್ತುತ ಬಹಳಷ್ಟು ಘಟಕಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ'. 'ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೆಚ್ಚಿನ ಸಾಮರ್ಥ್ಯಗಳಲ್ಲಿ ಹೂಡಿಕೆ ಮಾಡಲು ಘಟಕ ತಯಾರಕರು ಮುಂದಾಗಿದ್ದಾರೆ. ಇದರ ಹೊರತಾಗಿಯೂ ಈ ಬೇಡಿಕೆಯನ್ನು ಕಡಿಮೆ ಸಮಯದೊಳಗೆ ಪೂರೈಸುವುದು ಅಸಾಧ್ಯ' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Supreme Court ಏರ್‌ಬ್ಯಾಗ್ ಅಳವಡಿಸದ ಹ್ಯುಂಡೈಗೆ ಹಿನ್ನಡೆ, ಗ್ರಾಹಕನಿಗೆ ಪರಿಹಾರ ಪಾವತಿಸಲು ಸುಪ್ರೀಂ ತಾಕೀತು!

ರಸ್ತೆಗಳಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯಲು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ಕಳೆದ ವರ್ಷ ಎಲ್ಲಾ ಕಾರುಗಳಲ್ಲಿ ಎರಡು ಏರ್ಬ್ಯಾಗ್ಗಳನ್ನು ಕಡ್ಡಾಯಗೊಳಿಸಿತ್ತು. ಈಗ ಮತ್ತೊಮ್ಮೆ ಅಧಿಸೂಚನೆ ಹೊರಡಿಸಿದ್ದು, ಎಲ್ಲಾ ಗಾತ್ರದ ಕಾರುಗಳಲ್ಲಿ ಆರು ಏರ್ಬ್ಯಾಗ್ಗಳ ಅಳವಡಿಕೆ ಕಡ್ಡಾಯ ಎಂದಿದೆ. ಇದಕ್ಕೆ ಉದ್ಯಮ ಹೇಗೆ ರೆಸ್ಪಾಂಡ್ ಮಾಡುತ್ತದೆ  ಎಂಬುದನ್ನು  ಕಾದು ನೋಡಬೇಕಿದೆ. 

 

Follow Us:
Download App:
  • android
  • ios