ಚಿಪ್ ಕೊರತೆಯಿಂದ ಸ್ಥಗಿತಗೊಂಡಿದ್ದ ಕಾರು ವಿತರಣೆಗೆ ಮತ್ತೊಂದು ವಿಘ್ನ, ಐಷಾರಾಮಿ ಕಾರು ಬುಕ್ ಮಾಡಿದ ಗ್ರಾಹಕರಿಗೆ ಆಘಾತ!
- ಐಷಾರಾಮಿ ಕಾರು ಸಾಗಿಸುತ್ತಿದ್ದ ಹಡಗಿನಲ್ಲಿ ಬೆಂಕಿ
- ಕಾರುಗಳು ಬೆಂಕಿಗ ಆಹುತಿ, ಡೆಲಿವರಿಗೆ ಮತ್ತೆ ವಿಘ್ನ
- ಚಿಪ್ ಕೊರತೆಯಿಂದ ಸ್ಥಗಿತಗೊಂಡಿದ್ದ ಕಾರು ವಿತರಣೆ
ಐಷಾರಾಮಿ ಕಾರುಗಳನ್ನು ಹೊತ್ತೊಯ್ಯುತ್ತಿದ್ದ ಸರಕು ಸಾಗಣೆ ಬೃಹತ್ ಹಡಗೊಂದು ಅಟ್ಲಾಂಟಿಕ್ ಸಾಗರದಲ್ಲಿ (Atlantic ocean) ಗುರುವಾರ ಬೆಂಕಿಗೆ ಆಹುತಿಯಾಗಿದೆ. ಇದರಲ್ಲಿ ಪೋರ್ಷೆ, ವೋಕ್ಸ್ವ್ಯಾಗನ್ (Volkswagen) ಸೇರಿ ಹಲವು ಕಾರುಗಳಿದ್ದವು ಎಂದು ಹೇಳಲಾಗುತ್ತಿದೆ. ಕಾರುಗಳು ಬೆಂಕಿಗೆ ಆಹುತಿಯಾದ ಕಾರಣ ಇದೀಗ ಐಷಾರಾಮಿ ಕಾರುಗಳ ವಿತರಣೆ ಮತ್ತೆ ವಿಳಂಭವಾಗಲಿದೆ. ಮೊದಲೇ ಚಿಪ್ ಕೊರತೆಯಿಂದ ಕಾರುಗಳ ಡೆಲಿವರಿ ವಿಳಂಭವಾಗಿದೆ. ಹಲವು ಅಡೆತಡೆ ನಿವಾರಿಸಿ ಕಾರುಗಳನ್ನು ಬುಕ್ ಮಾಡಿದ ಗ್ರಾಹಕರಿಗೆ ನೀಡಲು ಇದೀಗ ಕಾರುಗಳೇ ಇಲ್ಲದಾಗಿದೆ. ಹೀಗಾಗಿ ಐಷಾರಾಮಿ ಕಾರು ಡೆಲಿವರಿಗೆ ಹೊಸ ವಿಘ್ನ ಸೇರಿಕೊಂಡಿದ್ದು, ಗ್ರಾಹಕರ ಕಾಯುವಿಕೆ ಮತ್ತಷ್ಟು ಹೆಚ್ಚಾಗಿದೆ.
ಬೆಂಕಿ ಕಾಣಿಸಿಕೊಂಡ ನಂತರ ಅದರಲ್ಲಿದ್ದ 22 ಸಿಬ್ಬಂದಿಯನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸಲಾಯಿತು. ಆದರೆ ಬೆಂಕಿ ತಗುಲಿದ್ದ ಹಡುಗು 'ಫೆಲಿಸಿಟಿ ಏಸ್' ಮಧ್ಯ ಅಟ್ಲಾಂಟಿಕ್ ಅಜೋರ್ಸ್ ದ್ವೀಪಗಳ ಬಳಿ ತೇಲುತ್ತಿತ್ತು. ಆನ್ಲೈನ್ ಹಡಗಿನ ಟ್ರ್ಯಾಕರ್ಗಳ ಪ್ರಕಾರ, ಈ ಹಡಗು ಜರ್ಮನಿಯ ಎಂಡೆನ್ನಿಂದ ಅಮೆರಿಕದ ರೋಡ್ ದ್ವೀಫದ ಡೇವಿಸ್ವಿಲ್ಲೆ ಬಂದರಿಗೆ ನೌಕಾಯಾನ ಮಾಡುತ್ತಿತ್ತು. ಈ ಹಡಗು 1,100 ಕ್ಕೂ ಐಷಾರಾಮಿ ಕಾರುಗಳನ್ನು ಸಾಗಿಸುತ್ತಿತ್ತು ಎಂದು ಕೂಡ ಮಾಹಿತಿ ಲಭ್ಯವಾಗಿದೆ.
Mukesh Ambani luxury Car: ಅಪರೂಪದ ಕ್ಯಾಡಿಲಾಕ್ ಎಸ್ಕಲೇಟ್ ಎಸ್‌ಯುವಿ ಖರೀದಿಸಿದ ಅಂಬಾನಿ!
ಈ ಘಟನೆಯ ನಂತರ, 200 ಮೀಟರ್ ಉದ್ದದ (650 ಅಡಿ ಉದ್ದ) ಫೆಲಿಸಿಟಿ ಏಸ್ (Falicity Ace) ಸಮುದ್ರದಲ್ಲಿ ತೇಲುತ್ತಿರುವುದರಿಂದ ಆ ಸ್ಥಳದಲ್ಲಿ ಬೇರೆ ಹಡಗು ಸಾಗದಂತೆ ಎಚ್ಚರಿಕೆ ನಿಡಲಾಗಿದೆ ಎಂದು ಪೋರ್ಚುಗೀಸ್ ನೌಕಾದಳದ ವಕ್ತಾರ ಜೋಸ್ ಸೌಸಾ ಲೂಯಿಸ್ ಹೇಳಿದ್ದಾಋೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಫೆಲಿಸಿಟಿ ಏಸ್ 17,000 ಮೆಟ್ರಿಕ್ ಟನ್ (18,700 ಟನ್) ಗಿಂತ ಹೆಚ್ಚಿನ ಸರಕುಗಳನ್ನು ಸಾಗಿಸಬಲ್ಲದು. ವಿಶಿಷ್ಟವಾಗಿ, ಕಾರು ಸಾಗಣೆಗೆ ಇದನ್ನು ಬಳಸಲಾಗುತ್ತದೆ. ಈ ಹಡಗುಗಳು ತಮ್ಮ ಹಿಡಿತದಲ್ಲಿರುವ ಬಹು ಡೆಕ್ಗಳಲ್ಲಿ ಸಾವಿರಾರು ವಾಹನಗಳನ್ನು ಸಾಗಿಸುತ್ತವೆ. ಹಡಗಿನ ನಿರ್ವಾಹಕರು ಅದರಲ್ಲಿನ ಸರಕು ಅಥವಾ ಅದರ ಗ್ರಾಹಕರ ಬಗ್ಗೆ ಮಾಹಿತಿಯನ್ನು ಒದಗಿಸಲು ನಿರಾಕರಿಸಿದ್ದಾರೆ.
ಪೋರ್ಚುಗೀಸ್ ನೌಕಾಪಡೆಯ ಹಡಗು ಜರ್ಮನಿಯಿಂದ ಅಮೆರಿಕದ ಅಟ್ಲಾಂಟಿಕ್ ಸಮುದ್ರಯಾನದಲ್ಲಿ ವಾಹನ ಸಾಗಣೆಗೆ ಪ್ರಯಾಣಿಸಿತು. ಬೆಂಕಿ ಕಾಣಿಸಿಕೊಂಡ ಸಾಕಷ್ಟು ಸಮಯದ ನಂತರವೂ ಬೆಂಕಿ ಉರಿಯುತ್ತಿರುವ ಮತ್ತು ದೊಡ್ಡ ಮೋಡದಂತಿರುವ ಬಿಳಿ ಹೊಗೆಯ ಛಾಯಾಚಿತ್ರಗಳು ದೊರೆತಿವೆ ಎಂದು ನೌಕಾಪಡೆ ತಿಳಿಸಿದೆ. ಅವರು ನೌಕಾಪಡೆಯ ಹಡಗು ಸರಕು ಹಡಗು ಮುಳುಗುವ ಅಪಾಯದಲ್ಲಿದೆಯೇ ಅಥವಾ ಮಾಲಿನ್ಯವನ್ನು ಉಂಟುಮಾಡುತ್ತದೆಯೇ ಎಂಬುದನ್ನು ಇನ್ನೂ ಪರಿಶೀಲಿಸಬೇಕಿದೆ ಎಂದು ಸೌಸಾ ಲೂಯಿಸ್ ಅಸೋಸಿಯೇಟೆಡ್ ಪ್ರೆಸ್ಗೆ ತಿಳಿಸಿದರು.
Luxury Car Sales ಜಾಗತಿಕ ಐಷಾರಾಮಿ ಕಾರು ಮಾರಾಟದಲ್ಲಿ ಮರ್ಸಿಡಿಸ್ ಬೆಂಜ್ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ BMW!
ಹಡಗಿನ ಮಾಲೀಕರು ಸಾಗರಕ್ಕೆ ಹೋಗುವ ಮಾರ್ಗ ಹುಡುಕುತ್ತಿದ್ದಾರೆ. ಆದರೆ ಫೆಲಿಸಿಟಿ ಏಸ್ ಗಾತ್ರ ಸಾಕಷ್ಟು ದೊಡ್ಡದಿರುವುದರಿಂದ ಅದನ್ನು ಪೋರ್ಚುಗಲ್ನ ಅಜೋರ್ಸ್ ದ್ವೀಪಗಳಲ್ಲಿನ ಬಂದರಿಗೆ ಎಳೆಯುವ. ಸಿಬ್ಬಂದಿಯನ್ನು ಹೆಲಿಕಾಪ್ಟರ್ನಲ್ಲಿ ಸುಮಾರು 170 ಕಿಲೋಮೀಟರ್ (100 ಮೈಲುಗಳು) ದೂರದಲ್ಲಿರುವ ದ್ವೀಪಸಮೂಹದಲ್ಲಿರುವ ಫೈಯಲ್ ದ್ವೀಪಕ್ಕೆ ಕರೆದೊಯ್ಯಲಾಯಿತು. ಅವರಲ್ಲಿ ಯಾರಿಗೂ ಗಾಯವಾಗಿಲ್ಲ.
ಬೆಂಕಿ ಕಾಣಿಸಿಕೊಂಡ ಹಡಗಿನಲ್ಲಿ ತಮ್ಮ ಹಲವು ಕಾರುಗಳಿದ್ದವು ಎಂದು ಪೋರ್ಷೆ ತನ್ನ ಹೇಳಿಕೆ ನೀಡಿದೆ. ಈಗಾಗಲೇ ಅದರ ಗ್ರಾಹಕರನ್ನು ವಿತರಕರು ಸಂಪರ್ಕಿಸಿ ಮಾಹಿತಿ ನೀಡುತ್ತಿದ್ದಾರೆ ಎಂದು ದೃಢಪಡಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಲು ಅದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವುದು ಅಗತ್ಯ. ಆ ನಂತರವಷ್ಟೇ ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸಲಾಗುವುದು ಎಂದು ಪೋರ್ಷೆ ಉಪಾಧ್ಯಕ್ಷ ಆಂಗಸ್ ಫಿಟ್ಟನ್ ಹೇಳಿದ್ದಾರೆ.
ಇನ್ನೊಂದೆಡೆ ಹಡಗಿನಲ್ಲಿದ್ದ ವೋಕ್ಸ್ವ್ಯಾಗನ್ ಕಾರುಗಳು ಕೂಡ ಬೆಂಕಿಗೆ ಆಯುತಿಯಾಗಿದೆ. ವೋಕ್ಸ್ವ್ಯಾಗನ್ ವಕ್ತಾರ ಡಿರ್ಕ್ ಅಮೀರ್, "ಅಟ್ಲಾಂಟಿಕ್ನಾದ್ಯಂತ ವೋಕ್ಸ್ವ್ಯಾಗನ್ ಗ್ರೂಪ್ ವಾಹನಗಳನ್ನು ಸಾಗಿಸುವ ಮೂರನೇ ವ್ಯಕ್ತಿಯ ಸರಕು ಹಡಗಿನ ಬೆಂಕಿ ಅವಘಡದ ಕುರಿತು ಮಾಹಿತಿ ಇದೆ. ಈ ಕುರಿತು ನಾವು ಶಿಫ್ಟಿಂಗ್ ಕಂಪನಿಯೊಂದಿಗೆ ಸಂಪರ್ಕದಲ್ಲಿದ್ದೇವೆ. ಪೂರ್ಣ ಮಾಹಿತಿ ದೊರೆತ ನಂತರ ಗ್ರಾಹಕರನ್ನು ಸಂಪರ್ಕಿಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ” ಎಂದು ತಿಳಿಸಿದ್ದಾರೆ.