Asianet Suvarna News Asianet Suvarna News

Fuel Efficiency Tips ನಿಮ್ಮ ಕಾರಿನಲ್ಲಿ ಬೆಸ್ಟ್ ಮೈಲೇಜ್ ಪಡೆಯುವುದು ಹೇಗೆ? ಇಲ್ಲಿವೆ ಸಲಹೆ!

ಕಾರು ಸುರಕ್ಷತೆ ಜತೆಗೆ ಮೈಲೇಜ್ ಕೂಡ ಚೆನ್ನಾಗಿ ಕೊಡಬೇಕು ಎಂಬುದು ಎಲ್ಲ ಭಾರತೀಯ ಗ್ರಾಹಕರ ಅಪೇಕ್ಷೆ. ನಿಮ್ಮ ಕಾರನ್ನು ಬೆಸ್ಟ್ ಮೈಲೇಜ್ ಕೊಡುವಂತೆ ಮೇಂಟೇನ್ ಮಾಡುವ ಟಿಪ್ಸ್ ಇಲ್ಲಿವೆ.

 

 

Car mileage Best way to improve Fuel efficiency on your car 11 tips
Author
Bengaluru, First Published Dec 15, 2021, 7:24 PM IST

ಪ್ರತಿಯೊಬ್ಬ ಗ್ರಾಹಕನೂ ಯಾವುದೇ ಹೊಸ ಅಥವಾ ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವಾಗ ಮೊದಲು ಮೈಲೇಜ್ (Mileage) ಎಷ್ಟು ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತಾನೆ. ಅದು ಬೈಕೇ(Bike) ಆಗಿರಲಿ ಕಾರೇ(car) ಆಗಿರಲಿ. ಪ್ರತಿಯೊಂದು ವಾಹನಕ್ಕೂ ಭಾರತೀಯ ವಾಹನ ಅಧ್ಯಯನ ಸಂಸ್ಥೆ (ARAI) ಮೈಲೇಜ್ ಮಾನ್ಯತಾ ಸರ್ಟಿಫೀಕೇಟ್ ನೀಡುತ್ತದೆ. ರೋಡಿನ ಮೇಲೆ ಗಾಡಿ ನೀಡುವ ಮೈಲೇಜ್‌ಗೂ ಇದಕ್ಕೂ ವ್ಯತ್ಯಾಸ ಇದ್ದರೂ ವಾಹನ ಮಾರಾಟ ವೇಳೆ ಇದೇ ಪ್ರಮಾಣವನ್ನು ಸಂಸ್ಥೆಗಳು ಬಳಸಿಕೊಳ್ಳುತ್ತವೆ. ಆದ್ರೂ ಸಂಸ್ಥೆಗಳು ನೀಡುವ ಮಾಹಿತಿಗಿಂತ ವಾಸ್ತವ ಬೇರೆ. ಹೀಗಾಗಿ ನಿಮ್ಮ ಕಾರಿನಿಂದ ಗರಿಷ್ಠ ಮೈಲೇಜ್ ಗಿಟ್ಟಿಸಿಕೊಳ್ಳುವ ಹೊಣೆ ನಿಮ್ಮದು. ಇಲ್ಲಿ ಕೊಡಲಾಗಿರುವ ಅಮೂಲ್ಯ ಟಿಪ್ಸ್(Tips) ನಿಮ್ಮ ಕಾರಿನ ಮೈಲೇಜ್ ಹೆಚ್ಚಿಸಲು ನೆರವಿಗೆ ಬರುತ್ತದೆ.

1. ನಿಯಮಿತ ಕಾರು ವೇಗ (Speed)

ಬಹುತೇಕ ಕಾರುಗಳು ಗಂಟೆಗೆ 60ರಿಂದ 80 ಕೀ.ಮೀ. ವೇಗದಲ್ಲಿ ಸಂಚರಿಸಿದಲ್ಲಿ ಅತ್ಯುತ್ತಮ ಇಂಧನ ಕ್ಷಮತೆಯನ್ನು ನೀಡುತ್ತದೆ. ಹಾಗಾಗಿ ಸಾಧ್ಯವಾದಷ್ಟು ಈ ವೇಗದಲ್ಲಿ ಕಾರು ಚಾಲನೆ ಮಾಡಲು ಪ್ರಯತ್ನಿಸಿ. ಒಂದು ವೇಳೆ ಗಂಟೆಗೆ 80-90 ಕೀ.ಮೀ.ಗಿಂತಲೂ ಹೆಚ್ಚು ವೇಗದಲ್ಲಿ ಚಲಿಸಿದಲ್ಲಿ ಇಂಧನ ಕ್ಷಮತೆ ಗಣನೀಯವಾಗಿ ಕುಸಿಯುವ ಸಾಧ್ಯತೆಯಿದೆ.

Winter care tips: ಚಳಿಗಾಲದಲ್ಲಿ ಕಾರ್, ಬೈಕ್ ಬಗ್ಗೆ ಕೇರ್ ತೆಗೆದುಕೊಳ್ಳುವುದು ಹೇಗೆ?

2. ನಯವಾದ ಚಾಲನೆ (Smooth driving) 

ಬಹುಶಃ ಇದು ಹೆಚ್ಚಿನ ಇಂಧನ ದಕ್ಷತೆ ಪಡೆಯುವ ಅತ್ಯುತ್ತಮ ಸೂತ್ರ. ಕಾರಿನಲ್ಲಿ ಸಂಚರಿಸುವಾಗ ಗೇರ್ ಬದಲಾವಣೆ ಹಾಗೂ ವೇಗವರ್ಧನೆಯನ್ನು (accelerator) ನಯವಾಗಿ ಬಳಕೆ ಮಾಡಿ.

3. ಸರಿಯಾದ ರೀತಿಯಲ್ಲಿ ಗೇರ್ ಬಳಕೆ (Gear) 

ಹೆಚ್ಚಿನ ಮೈಲೇಜ್ ಗಿಟ್ಟಿಸಿಕೊಳ್ಳಲು ಸಹಜ ಚಾಲನಾ ಕೌಶಲ್ಯವನ್ನು ಕರಗತ ಮಾಡಿಕೊಳ್ಳಬೇಕಾಗಿರುವುದು ಅತಿ ಅಗತ್ಯ. ಅನೇಕ ಮಂದಿ ಚಾಲಕರು ವಾಹನ ಚಲಿಸುತ್ತಿರುವಾಗ ಗೇರ್ ಕಡಿಮೆ ಮಾಡಲು ಮರೆತುಬಿಡುತ್ತಾರೆ ಅಥವಾ ನಿರ್ಲಕ್ಷಿಸುತ್ತಾರೆ. ಇದರಿಂದ ಇಂಧನ ಉಳಿತಾಯದ ಬದಲು ಹೆಚ್ಚು ಪೋಲಾಗುತ್ತದೆ.

ಬೇಸಿಗೆಯಲ್ಲಿ ಡ್ರೈವಿಂಗ್ ಮಾಡುವಾಗ ನಿಮ್ಮ ವಾಹನ ರಕ್ಷಣೆ ಹೇಗೆ? ಇಲ್ಲಿವೆ ಟಿಪ್ಸ್

4. ಟ್ರಾಫಿಕ್‌ಗಳಲ್ಲಿ ಗಾಡಿ ಆಫ್ ಮಾಡಿ (Off in traffic) 

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಇಂದೊಂದು ಸಾಧಾರಣ ನಿಯಮ. ಟ್ರಾಫಿಕ್ ಇರುವೆಡೆಯಲ್ಲಿ 30 ಸೆಕೆಂಡುಗಳಿಗಿಂತಲೂ ಹೆಚ್ಚು ಸಮಯ ವಾಹನ ನಿಲ್ಲಿಸುತ್ತಿದ್ದಲ್ಲಿ ನಿಮ್ಮ ಗಾಡಿಯ ಎಂಜಿನ್ ಆಫ್ ಮಾಡಿರಿ.

5. ಎಸಿ ಮಿತವಾಗಿ ಬಳಸಿ (AC usage)

ಭಾರತೀಯ ರಸ್ತೆಗಳ ಪರಿಸ್ಥಿತಿಯಲ್ಲಿ ಸ್ವಚ್ಛಂದವಾಗಿ ಸಂಚರಿಸುವುದು ತುಂಬಾ ಕಷ್ಟಕರ. ಇಂದಿನ ದಿನಗಳಲ್ಲಿ ಪರಿಸರ ಮಾಲಿನ್ಯ ಹಾಗೂ ತಾಪಮಾನ ಏರಿಕೆಯಿಂದಾಗಿ ಎಸಿ ಬಳಕೆ ಮಾಡಬೇಕಾಗುತ್ತಿದೆ. ಆದರೆ ಎಸಿಯಿಂದಾಗಿ ಹೆಚ್ಚು ಪವರ್ ಹಾಗೂ ಇಂಧನ ವ್ಯಯವಾಗುತ್ತದೆ.

6. ನಿಯಮಿತವಾಗಿ ಕಾರು ಸರ್ವೀಸ್ ಮಾಡಿಸಿ (Regular service)

ಸರಿಯಾಗಿ ಸರ್ವೀಸ್ ಮಾಡದ ಕಾರುಗಳಿಂದ ಉತ್ತಮ ಮೈಲೇಜ್ ನಿರೀಕ್ಷಿಸುವುದು ತಪ್ಪು. ಈ ನಿಟ್ಟಿನಲ್ಲಿ ನಿಯಮಿತವಾಗಿ ಕಾರನ್ನು ಸರ್ವೀಸ್ ಮಾಡಿಸಿಕೊಳ್ಳಿರಿ. ಏರ್ ಫಿಲ್ಟರ್, ಫ್ಯೂಯಲ್ ಫಿಲ್ಟರ್ ಹಾಗೂ ಸ್ಪಾರ್ಕ್ ಪ್ಲಗ್‌ಗಳನ್ನು ಪರಿಶೀಲಿಸುವುದನ್ನು ರೂಢಿ ಮಾಡಿಸಿಕೊಳ್ಳಿ. ಜತೆಗೆ ಪ್ರತಿ 60,000 ಕೀ.ಮೀ.ಗಳಿಗೆ ಕಾರಿನ ಆಕ್ಸಿಜನ್ ಸೆನ್ಸಾರ್ ಪರೀಶೀಲಿಸಿಕೊಳ್ಳಿ.

7. ಕಾರನ್ನು ಹಗುರವಾಗಿಸಿ (less load) 

ನಿಮ್ಮ ಕಾರಿನ ಭಾರ ಹೆಚ್ಚಾದಷ್ಟು ಹೆಚ್ಚು ಇಂಧನ ಪೋಲಾಗುತ್ತದೆ. ಹಾಗಾಗಿ ಅವಶ್ಯಕವಲ್ಲದ ಲಗ್ಗೇಜ್‌ಗಳನ್ನು ಕಾರಿನಿಂದ ಹೊರಗಿಡಿರಿ. ಇದು ಇಂಧನ ಕ್ಷಮತೆಯ ಜೊತೆ ಕಾರು ನಯವಾಗಿ ಚಾಲನೆ ಮಾಡಲು ನೆರವಾಗಲಿದೆ.

8. ತಂಪಾದ ದಿನಗಳಲ್ಲಿ ಪೆಟ್ರೋಲ್ ಹಾಕಿಸಿ (Petrol) 

ತಂಪಾದ ಪೆಟ್ರೋಲ್‌ನ ಸಾಂದ್ರತೆ ಹೆಚ್ಚಲಿದೆ. ಹಾಗಾಗಿ ಬೆಳ್ಳಂಬೆಳಗ್ಗೆ ಬೇಗನೇ ಎದ್ದು ಇಂಧನ ತುಂಬಿಸುವುದು ಉತ್ತಮ. ಈ ಸಂದರ್ಭದಲ್ಲಿ ಪಂಪ್‌ಗಳು ಪರಿಮಾಣಕ್ಕೆ ತಕ್ಕ ಇಂಧನ ಅಳತೆ ಮಾಡುವುದರಿಂದ ನಿಮ್ಮ ಹಣಕ್ಕೆ ತಕ್ಕ ಇಂಧನ ದೊರೆಯಲು ನೆರವಾಗಲಿದೆ. ಹಾಗಾಗಿ ಬೇಸಿಗೆ ಕಾಲದಲ್ಲಿ ಸಾಧ್ಯವಾದಷ್ಟು ಬೆಳಗ್ಗಿನ ಸಮಯದಲ್ಲೇ ಇಂಧನ ತುಂಬಿಸುವುದು ಉತ್ತಮ.

9. ಶಿಫಾರಸು ಮಾಡಿರುವ ಇಂಧನ ಬಳಕೆ 

ಕೆಲವೊಂದು ಪಂಪ್‌ಗಳಲ್ಲಿ 'ಸ್ಪೆಷಲ್ ಇಂಧನ'ಗಳೆಂಬ ಬೋರ್ಡ್‌ಗಳನ್ನು ಲಗತ್ತಿಸಿರುವುದು ಗಮನಿಸಿರಬಹುದು. ಇದು ಹೆಚ್ಚು ಮೈಲೇಜ್ ನೀಡುತ್ತದೆ ಎನ್ನಲಾಗುತ್ತದೆ. ಆದರೆ ಹೀಗೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ.

10. ಮ್ಯಾನುವಲ್ ಮೋಡ್‌ನಲ್ಲಿ ಚಾಲನೆ ಮಾಡಿ (Mnual mode) 

ಸಾಧ್ಯವಾದಲ್ಲಿ ನಿಮ್ಮ ಆಟೋಮ್ಯಾಟಿಕ್ ಕಾರನ್ನು ಮ್ಯಾನುವಲ್ ಮೋಡ್‌ನಲ್ಲಿಯೇ ಚಾಲನೆ ಮಾಡಲು ಪ್ರಯತ್ನಿಸಿ. ಸಾಧಾರಣವಾಗಿ ಆಟೋಮ್ಯಾಟಿಕ್ ಬಾಕ್ಸ್‌ಗಳಲ್ಲಿ ನಿರ್ದಿಷ್ಟ ವೇಗದ ಬಳಿಕವೇ ಅಪ್‌ಶಿಫ್ಟ್ ಮಾಡಲಾಗುತ್ತದೆ. ಇಲ್ಲಿ ಅಪ್‌ಶಿಫ್ಟ್ ವೇಳೆ ಸರಿಯಾದ ಟಾರ್ಕ್ ಜತೆಗೆ ಇಂಧನ ವ್ಯಯವಾಗುತ್ತದೆ. (ವಿ.ಸೂ: ಎಲ್ಲ ಆಟೋಮ್ಯಾಟಿಕ್ ಕಾರಿನಲ್ಲೂ ಮ್ಯಾನುವಲ್ ಮೋಡ್ ಇರುವುದಿಲ್ಲ)

11. ರಿವರ್ಸ್ ಪಾರ್ಕ್ (Reverse park)

ನಿಮ್ಮ ದೈನಂದಿನ ಚಟುವಟಿಕೆಗಳ ಬಳಿಕ ಮನೆಗೆ ಹಿಂತಿರುಗಿದ ಬಳಿಕ ಕಾರನ್ನು ರಿವರ್ಸ್ ಪಾರ್ಕ್ ಮಾಡಿಟ್ಟುಕೊಳ್ಳಿರಿ. ಇದರಿಂದ ಬೆಳಗ್ಗಿನ ಜಾವದಲ್ಲಿ ಎಂಜಿನ್ ಕೂಲಾಗಿದ್ದಾಗ ರಿವರ್ಸ್ ಮಾಡುವ ಗೋಜಿನಿಂದ ತಪ್ಪಿಸಬಹುದಾಗಿದೆ. ಈ ಮೂಲಕ ಅಮೂಲ್ಯ ಇಂಧನವನ್ನು ಉಳಿಸಬಹುದಾಗಿದೆ. ವಿ.ಸೂ: ಸಮತಲ ಪಾರ್ಕಿಂಗ್ ಪ್ರದೇಶ ಹೊಂದಿದವರು ಹೀಗೆ ಮಾಡಬಹುದು. ಇಲ್ಲದಿದ್ದಲ್ಲಿ ಮೇಲ್ಮುಖ ರಿವರ್ಸ್ ಮಾಡುವುದರಿಂದ ಹೆಚ್ಚಿನ ಇಂಧನ ವ್ಯಯವಾಗುತ್ತದೆ.

Follow Us:
Download App:
  • android
  • ios