ಭಾರತೀಯರಿಗೆ ಹಬ್ಬ ಕೇವಲ ಆಚರಣೆ ಮಾತ್ರವಲ್ಲ, ಹೊಸ ಬದುಕು, ಹೊಸ ಚೈತನ್ಯ, ಹೊಸ ಉಲ್ಲಾಸ ಕೂಡ ಹೌದು. ಹೀಗಾಗಿ ಹಬ್ಬದ ದಿನ ಹೊಸತು ಏನಾದರೂ ಖರೀದಿ ಮಾಡುವ ಸಂಪ್ರದಾಯ ಬಹುತೇಕರು ಪಾಲಿಸುತ್ತಾರೆ. ಹಬ್ಬದ ದಿನ ಹೊಸ ಖರೀದಿ ಅಂದರೆ ಹೊಸ ಬದುಕಿನ ಪ್ರಾರಂಭ ಎಂದರ್ಥ. ಜೊತೆಗೆ ಹೊಸ ಖರೀದಿಗೆ ಹಬ್ಬಕ್ಕಿಂತ ಸೂಕ್ತ ಸಮಯ ಇನ್ನೊಂದಿಗೆ. ಇದೀಗ ಈ ದೀಪಾವಳಿ ಹಬ್ಬದಲ್ಲಿ ನಿಮ್ಮ ಬದುಕಿಗೆ ಹೊಸ ಆತಿಥಿ ಮರ್ಸಿಡಿಸ್ ಬೆಂಜ್ ಸ್ವಾಗತಿಸೋ ಮೂಲಕ ಆಚರಿಸಿ ಸಂಭ್ರಮ ಇಮ್ಮಡಿಗೊಳಿಸವ ಸುವರ್ಣ ಅವಕಾಶವಿದೆ.
ಮರ್ಸಡೀಸ್ ಬೆಂಜ್ ಬಹುತೇಕರ ಡ್ರೀಮ್ ಕಾರಾಗಲು ಕೆಲ ಕಾರಣಗಳು ಇಲ್ಲಿವೆ
ಮರ್ಸಿಡಿಸ್ ಬೆಂಝ್ ಕಾರುಗಳು ಆಧುನಿಕ ಶೈಲಿ, ಅಗ್ರೆಸ್ಸೀವ್ ಹಾಗೂ ಸ್ಪೋರ್ಟೀವ್, ಜೊತೆಗೆ ಆರಾಮದಾಯಕ ಹಾಗೂ ಐಷಾರಾಮಿ ಕಾರು ಅನ್ನೋ ಹೆಗ್ಗಳಿಕೆ ಪಾತ್ರವಾಗಿದೆ.
ಹೊಚ್ಚ ಹೊಸ ಮರ್ಸಿಡಿಸ್ ಬೆಂಝ್ ಇ ಕ್ಲಾಸ್ ಸೆಡಾನ್ ಕಾರು ಇಂಟೆಲಿಜೆನ್ಸ್ ಡ್ರೈವ್ ಹಾಗೂ ಬೆಂಜ್ ಕನೆಕ್ಟೆಡ್ ಆ್ಯಪ್ ಮೂಲಕ ತಂತ್ರಜ್ಞಾನದಲ್ಲಿ ಹೊಸ ಅಧ್ಯಾಯ ಆರಂಭಿಸಿದೆ.

ಹಿಂಭಾಗದ ಸೀಟು ಅಷ್ಟೇ ಆರಾಮದಾಯಕವಾಗಿದೆ. ಇತರ ಎಲ್ಲಾ ಕಾರಿಗೆ ಹೋಲಿಸಿದರೆ ರೇರ್ ಸೀಟ್ ಕಂಫರ್ಟ್ ಅತ್ಯುತ್ತಮವಾಗಿದೆ. ರೇರ್ ಸೆಟ್ ಟಚ್‌ಸ್ಕ್ರೀನ್ ಹಾಗೂ ವೈಯರ್‌ಲೆಸ್ ಚಾರ್ಜಿಂಗ್ ಸೌಲಭ್ಯವೂ ಇದೆ.
ವೀಲ್ ಬೇಸ್ ಹೆಚ್ಚಾಗಿರುವ ಕಾರಣ ಕಾರಿನೊಳಗೆ ಲೆಗ್‌ರೂಂ ಸ್ಥಳವಕಾಶ ಹಾಗೂ ಲಾಂಜ್ ಸ್ಥಳವಕಾಶ ಹೆಚ್ಚಾಗಿದೆ. ಇದು ಪ್ರಯಾಣವನ್ನು ಮತ್ತಷ್ಟು ಸುಖಕರವಾಗಿಸುತ್ತದೆ.
ಕಾರಿನೊಳಗೆ ಅತ್ಯುತ್ತಮ ಸೌಂಡ್ ಸ್ಪೀಕರ್ಸ್ ಅಳವಡಿಸಲಾಗಿದೆ. ಒಟ್ಟು 13 ಸೌಂಡ್ ಸ್ಪೀಕರ್ಸ್ ಪ್ರಯಾಣದುದ್ದಕ್ಕೂ ಹಿತ ಅನುಭವ ನೀಡಲಿದೆ.

ಮರ್ಸಿಡಿಸ್ ಬೆಂಝ್ ಇ ಕ್ಲಾಸ್ ಭಾರತೀಯ ಗ್ರಾಹಕರನ್ನು ಹಾಗೂ ಅವರ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ. ಹೀಗಾಗಿ ಇದು ಅತ್ಯುತ್ತಮ ಲಕ್ಸುರಿ ಹಾಗೂ ಆರಾಮದಾಯಕ ಕಾರಾಗಿದೆ. ಕೂಪ್ ಶೈಲಿಯ ರೂಫ್, ಉದ್ದವಾದ ಬಾನೆಟ್‌ನಿಂದ ಇ ಕ್ಲಾಸ್ ಕಾರಿನ ಅಂದ ಮತ್ತಷ್ಟು ಹೆಚ್ಚಾಗಿದೆ. ಸುಗಮ ರಸ್ತೆ ಹಾಗೂ ಒರಟು ರಸ್ತೆಗಳಲ್ಲೂ ಇ ಕ್ಲಾಸ್ ಸೆಡಾನ್ ಕಾರು ಸಲೀಸಾಗಿ ಸಂಚರಿಸಲಿದೆ. ನೂತನ ಮರ್ಸಿಡಿಸ್ ಬೆಂಝ್ ಇ ಕ್ಲಾಸ್ ಸೆಡಾನ್ ಕಾರಿನಲ್ಲಿ ಹೆಚ್ಚುವರಿ ಫೀಚರ್ಸ್ ಸೇರಿಸಲಾಗಿದೆ. ಆದರೆ ಚಾಲಕ ಹಾಗೂ ಪ್ರಯಾಣಿಕರ ಸುರಕ್ಷತೆಯಲ್ಲಿ ರಾಜಿಯಾಗಿಲ್ಲ. ಆಕ್ಟಿವ್ ಬ್ರೇಕ್ ಅಸಿಸ್ಟ್, ಆಕ್ಟಿವ್ ಬಾನೆಟ್ ಮತ್ತು ಇಂಟೆಗ್ರಲ್ ಸೇಫ್ಟಿ ಕಾನ್ಸೆಪ್ಟ್ ನಿಂದ ಕೂಡಿದೆ.

ಹೊಚ್ಚ ಹೊಸ ಮರ್ಸಿಡಿಸ್ ಬೆಂಜ್ ಇ ಕ್ಲಾಸ್ ಕಾರಿನ ಗಮನಾರ್ಹ ಅಂಶ ಅಂದರೆ ಬೆಂಝ್ ಮಿ ಕೆನೆಕ್ಟೆಡ್ ಆ್ಯಪ್ ಅಪ್ಲೀಕೇಶನ್ ಹೊಂದಿದೆ. ಬೆಂಝ್ ಮಿ ಆ್ಯಪನ್ನು ಮರ್ಸಿಡಿಸ್ ಬೆಂಝ್ ಅಭಿವೃದ್ದಿ ಪಡಿಸಿದೆ. ಇದು ಕಾರಿನ ಸುರಕ್ಷತೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇಷ್ಟೇ ಅಲ್ಲ ಗ್ರಾಹಕನಿಗೆ ತಡೆರಹಿತ ಸೇವೆಯೂ ಸಿಗಲಿದೆ.


ಬೆಂಝ್ ಮಿ ಕನೆಕ್ಟೆಡ್ ಆ್ಯಪ್ ಹಲವು ಸೇವೆಗಳನ್ನು ನೀಡುತ್ತದೆ. ಕಾರಿನ ನೈಜ ಸಮಯದ ವಿಶ್ಲೇಷಣೆ, ಕಾರಿನ ಫೀಚರ್ಸ್ ಮೇಲಿನ ರಿಮೂಟ್ ಕಂಟ್ರೋಲ್ , ಬೆಂಝ್ ಗ್ರಾಹಕ ಕೇಂದ್ರ ಜೊತೆ ತಡೆರಹಿತ ಸಂವಹನ ಸೇರಿದಂತೆ ಹಲವು ಸೇವೆಗಳನ್ನು ಮಿ ಆ್ಯಪ್ ಮೂಲಕ ಪಡೆಯಬಹುದು.

- ಹವಾಮಾನ ಕುರಿತ ಮಾಹಿತಿ ಸೇರಿದಂತೆ ಹಲವು ಮಾಹಿತಿಗಳನ್ನು ಆಟೋಮ್ಯಾಟಿಕ್ ಆಗಿ ನೀಡಲಿದೆ.
- ಮರ್ಸಿಡಿಸ್ ಬೆಂಝ್ ಮಿ ಆ್ಯಪ್ ಮೂಲಕ ಕಾರಿನ ಎಂಜಿನ್ ಸ್ಟಾರ್ಟ್ ಮತ್ತು ಆಫ್ ಮಾಡುಬಹುದು.
- ಜಿಯೋ ಫೆನ್ಸಿಂಗ್ ಸೇವೆಯಂತ ಹೊಸ ಫೀಚರ್ಸ್ ಮಿ ಆ್ಯಪ್‌ಗೆ ಸೇರಿಸಲಾಗಿದೆ. ಈ ಮೂಲಕ ಕಾರು ಮಾಲೀಕನ ನಿಯಂತ್ರಿಸಿದ ಪರಿಮಿತಿ ಮೀರಿ ಚಲಿಸಿದರೆ ಸೂಚನೆ ನೀಡಲಿದೆ.
- ಬೆಂಝ್ ಮಿ ಆ್ಯಪ್ ಮೂಲಕ ಕಾರಿನ ವಿಂಡೋ ಹಾಗೂ ಸನ್‌ರೂಫ್ ಆಪರೇಟ್ ಮಾಡಬಹುದು.

ಪಾರ್ಕಿಂಗ್ ಸ್ಥಳದಲ್ಲಿ ಕಾರು ಎಲ್ಲಿ ಪಾರ್ಕ್ ಮಾಡಿದ್ದೇವೆ ಎಂಬುದು ಹುಡುಕುವುದೇ ದೊಡ್ಡ ಸವಾಲಾಗಿರುತ್ತದೆ. ಆದರೆ ಮಿ ಆ್ಯಪ್ ಮೂಲಕ ವೆಹಿಕಲ್ ಫೈಂಡರ್ ಆಯ್ಕೆ ಉಪಯೋಗಿಸಿ ಮಿಂಚಿನ ವೇಗದಲ್ಲಿ ಕಾರು ಎಲ್ಲಿದೆ ಅನ್ನೋದನ್ನು ಪತ್ತೆ ಹಚ್ಚಬಹುದು.

ಮಿ ಆ್ಯಪ್ ಮೂಲಕ ಕಾರು ಎಲ್ಲಿದೆ, ಎಲ್ಲಿ ಸಂಚರಿಸುತ್ತಿದೆ ತಿಳಿದುಕೊಳ್ಳುವುದು ಮಾತ್ರವಲ್ಲ, ಕಾರು ಅದೆಷ್ಟೋ ದೂರದಲ್ಲಿದ್ದರೂ, ಕಾರಿನ ನಿಯಂತ್ರಣ ತೆಗೆದುಕೊಳ್ಳಬಹುದು. ವಿಶೇಷವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುವಾಗ, ಶಾಲೆಯಿಂದ ಬರುವಾಗ ಕಾರು ಎಲ್ಲಿ ಸಂಚರಿಸುತ್ತಿದೆ ಅನ್ನೋದನ್ನು ಮನೆಯಿಂದಲೋ ಅಥವಾ ಕಚೇರಿಯಲ್ಲೇ ಕುಳಿತು ಗಮನಿಸಬಹುದು. ಇಷ್ಟೇ ಅಲ್ಲ ತಕ್ಷಣವೇ ಕಾರಿನ ನಿಯಂತ್ರಣವನ್ನೂ ಪಡೆದುಕೊಳ್ಳಬಹುದು.

ಮರ್ಸಿಡಿಸ್ ಬೆಂಝ್ ಇ ಕ್ಲಾಸ್ ಸೆಡಾನ್ ನಿಮ್ಮ ಕನಸಿನ ಕಾರಾಗಿದ್ದರೆ, ಮತ್ತ್ಯಾಕೆ ತಡ, ಈ ಹಬ್ಬದ ಸಂಭ್ರಮದಲ್ಲಿ ಸುಲಭವಾಗಿ ಮರ್ಸಿಡಿಸ್ ಬೆಂಝ್ ಇ ಕ್ಲಾಸ್ ಕಾರನ್ನು ಮನೆಗೆ ತರಲು ಸರಿಯಾದ ಸಮಯ. ಇದೀಗ ವಿಶೇಷ ಮಾಲೀಕತ್ವ ಆಫರ್‌ನೊಂದಿಗೆ ಮರ್ಸಿಡಿಸ್ ಬೆಂಝ್ ಇ ಕ್ಲಾಸ್ ಕಾರು ಖರೀದಿಗೆ ಲಭ್ಯವಿದೆ.  ತಿಂಗಳಿಗೆ 49,555 ರೂಪಾಯಿ EMI ಪ್ಲಾನ್‌ನಿಂದ ಆರಂಭಗೊಳ್ಳುತ್ತಿದೆ.

ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ