ಬಿಎಂಡಬ್ಲ್ಯು ಐಎಕ್ಸ್ ಇವಿ ಎಸ್‌ಯುವಿ: ಬಿಡುಗಡೆಯ ದಿನವೇ ಸೋಲ್ಡ್ ಔಟ್!

40, 76.6 ಕೆಎಚ್‌ ಬ್ಯಾಟರಿ ಪ್ಯಾಕ್‌

ಒಂದು ಚಾರ್ಜ್‌ಗೆ 425 ಕಿಮೀ ಸಂಚರಿಸುವ ಸಾಮರ್ಥ್ಯ

ಶೀಘ್ರದಲ್ಲೇ ಎರಡನೇ ಸುತ್ತಿನ ಬುಕಿಂಗ್‌ ಆರಂಭ

BMW iX Electric SUV sold out on the day of launch

ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪನಿ ಬಿಎಂಡಬ್ಲ್ಯು ಎರಡು ದಿನಗಳ ಹಿಂದಷ್ಟೇ ಬಿಡುಗಡೆಗೊಳಿಸಿದ್ದ ತನ್ನ ಎಲೆಕ್ಟ್ರಿಕ್‌ ಆಲ್‌-ವ್ಹೀಲ್‌ ಮಾದರಿಯ ಐಎಕ್ಸ್‌ (IX) ಕಾರು ಒಂದೇ ದಿನದಲ್ಲೇ ಸೋಲ್ಡ್‌ ಔಟ್‌ ಆಗಿದೆ! ಬಿಎಂಡಬ್ಲ್ಯು ಸೋಮವಾರ ಬಿಎಂಡಬ್ಲ್ಯು ಎಲೆಕ್ಟ್ರಿಕ್‌ ಸ್ಪೋರ್ಟ್ಸ್‌ ಆ್ಯಕ್ಟಿವಿಟಿ ವೆಹಿಕಲ್‌ (Electric Sports Activity Vehicle) ಐಎಕ್ಸ್‌ ಎಲೆಕ್ಟ್ರಿಕ್‌ ಕಾರನ್ನು ಬಿಡುಗಡೆಗೊಳಿಸಿತ್ತು. ಮಂಗಳವಾರದ ಒಳಗೆ ಈ ಎಲ್ಲಾ ಕಾರುಗಳು ಖರೀದಿಯಾಗಿವೆ.ಮೊದಲ ಹಂತದ ಬುಕಿಂಗ್‌ನಲ್ಲಿಯೇ ದೇಶಾದ್ಯಂತದ ಡೀಲರ್‌ಶಿಪ್‌ಗಳಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಕಂಡುಬಂದಿತ್ತು. ಈ ವಾಹನಗಳ ಡೆಲಿವರಿ 2022ರ ಏಪ್ರಿಲ್‌ನಿಂದ ಆರಂಭಗೊಳ್ಳಲಿದೆ. 2022ರ ಮೊದಲ ತ್ರೈಮಾಸಿಕದಲ್ಲಿ ಬಿಎಂಡಬ್ಲ್ಯು ಎರಡನೇ ಹಂತದ ಬುಕಿಂಗ್‌ ಆರಂಭಿಸಲಿದೆ.

ಬಿಎಂಡಬ್ಲ್ಯು ಸಮೂಹದ ಭಾರತದ ಅಧ್ಯಕ್ಷ (Indian President) ವಿಕ್ರಮ್‌ ಪಾವಾ, “ಬಿಎಂಡಬ್ಲ್ಯು ಐಎಕ್ಸ್‌ ಬಿಡುಗಡೆಯಾಗುತ್ತಿದ್ದಂತೆ ನಮ್ಮ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಬಂದಿದೆ. ಈಗ ನಾವು ಬಿಎಂಡಬ್ಲ್ಯು ಎಸ್‌ (BMW SUV) ಎವಿಗಾಗಿ ಕಾಯುತ್ತಿರುವ ಇತರ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಸಿದ್ಧತೆ ಆರಂಭಿಸಿದ್ದೇವೆ” ಎಂದರು.

ಆಡಿ ಕಾರಿನ ಒಡತಿಯಾದ ಕಿಯಾರಾ ಆಡ್ವಾಣಿ

ಬಿಎಂಡಬ್ಲ್ಯು ಈ ಕಾರನ್ನು 2021ರ ಡಿಸೆಂಬರ್ 13ರಂದು ಬಿಡುಗಡೆಗೊಳಿಸಿತ್ತು. ನಂತರ ಅದನ್ನು ಸಂಪೂರ್ಣ ತಯಾರಾದ ರೀತಿ(ಸಿಬಿಯು) ಮಾದರಿಯಲ್ಲಿಯೇ ಭಾರತಕ್ಕೆ ತರಲಾಗಿದೆ. ಇದಕ್ಕೆ 1.15 ಕೋಟಿ ರೂ.ಶೋರೂಂ ಬೆಲೆ ಇದೆ.

ಇದು ಡ್ಯುಯಲ್‌ ಎಲೆಕ್ಟ್ರಿಕ್‌ ಮೊಟೋ ಸೆಟ್‌ಅಪ್‌ ಮತ್ತು ಆಲ್‌ ವ್ಹೀಲ್‌ ಡ್ರೈವ್‌ (All Wheel Drive) ಸೌಲಭ್ಯದೊಂದಿಗೆ ಬರುತ್ತದೆ. ಈ ಎಲೆಕ್ಟ್ರಿಕ್‌ ಎಸ್‌ಯುವಿ ಪೆಟ್ರೋಲ್‌ (petrol)-ಡೀಸೆಲ್‌ (Diesel) ವೇರಿಯಂಟ್‌ಗಳಿಗಿಂತ ಭಿನ್ನವಾಗಿ ಕಾಣುತ್ತದೆ. ಇದರಲ್ಲಿ ಫ್ರೇಮ್‌ರಹಿತ ಡೋರ್‌ಗಳಿವೆ. ಇದರ ಮುಂಭಾಗದಲ್ಲಿ ಬಹುದೊಡ್ಡ ಗ್ರಿಲ್‌, ತೆಳು ಹೆಡ್‌ಲ್ಯಾಂಪ್‌ಗಳು, ಕ್ವಾರ್ಟರ್‌ ಲೈಟ್‌ ಬ್ಯಾಂಡ್‌, ಅದೇ ರೀತಿಯ ಟೈಲ್‌ ಲ್ಯಾಂಪ್‌ಗಳು, ಕ್ಲಾಂಶೆಲ್‌ ಬೋನೆಟ್‌ ವಿನ್ಯಾಸಗಳನ್ನು ಹೊಂದಿದೆ. ಇದರ 21 ಇಂಚಿನ ಏರೋಡೈನಮಿಕಲಿ ಹೆಚ್ಚಿನ ಸಾಮರ್ಥ್ಯ ನೀಡುವ ಚಕ್ರಗಳು 255/50 ಪ್ರೊಫೈಲ್‌ ಟೈರ್‌ಗಳನ್ನು ಒಳಗೊಂಡಿದೆ.

ಇದರ ಒಳಾಂಗಣ ಮಾತ್ರ ಹಿಂದಿನ ಬಿಎಂಡಬ್ಲ್ಯು ಎಕ್ಸ್‌7 (X7) ಎಸ್‌ಯುವಿಯಂತೆಯೇ ಇದೆ. ಇದು ಹೆಕ್ಸಾಗನಲ್‌ ಆಕಾರದ ಸ್ಟೀರಿಂಗ್‌ ವ್ಹೀಲ್‌, ವಿಭಿನ್ನ ವಿನ್ಯಾಸದ 12.3 ಇಂಚಿನ ಇನ್‌ಸ್ಟ್ರೂಮೆಂಟಲ್‌ ಕ್ಲಸ್ಟರ್‌ ಮತ್ತು 14.9 ಇಂಚಿನ ಇನ್ಫೊಟೈನ್‌ಮೆಂಟ್‌ ಡಿಸ್‌ಪ್ಲೇ ಇದೆ. ಈ ಡಿಸ್‌ಪ್ಲೇ ಚಾಲಕರ ಕಡೆ ಬಾಗಿದಂತೆ ತೋರುತ್ತದೆ.

ಸೀಟುಗಳಲ್ಲಿ ಮೈಕ್ರೋಫೈಬರ್‌ (Microfiber) ಫಿನಿಷ್‌ ನೀಡಲಾಗಿದೆ. ಇದರೊಂದಿಗೆ ಬಿಎಂಡಬ್ಲ್ಯು ಬಾಗಿದ ಡಿಸ್‌ಪ್ಲೇ, ಬಿಎಂಡಬ್ಲ್ಯು ಕನೆಕ್ಟೆಡ್‌ ಡ್ರೈವ್, ವರ್ಚ್ಯುವಲ್‌ ಅಸಿಸ್ಟೆಂಟ್‌, ವೈರ್‌ಲೆಸ್‌ ಚಾರ್ಜಿಂಗ್‌, ವೈರ್‌ಲೆಸ್‌ ಆಂಡ್ರ್ಯಾಯ್ಡ್‌ ಆಟೋ/ಆ್ಯಪಲ್‌ ಕಾರ್‌ಪ್ಲೇ, ಪಾರ್ಕಿಂಗ್‌ ಅಸಿಸ್ಟೆಂಟ್‌ ಪ್ಲಸ್‌, 18 ಸ್ಪೀಕರ್‌ಗಳೊಂದಿಗೆ ಹರ್ಮನ್‌ ಕಾರ್ಡನ್‌ ಸರೌಂಡ್‌ ಸಿಸ್ಮಮ್‌, ರಿವರ್ಸಿಂಗ್‌ ಅಸಿಸ್ಟೆಂಟ್‌ ಇತ್ಯಾದಿ ಸೌಲಭ್ಯಗಳಿವೆ.

ಬಾಲಿವುಡ್ ಸೆಲೆಬ್ರಿಟಿಗಳನ್ನು ಮೋಡಿದ ಕಾರು

ಬಿಎಂಡಬ್ಲ್ಯು  ಐಎಕ್ಸ್‌ ಎಕ್ಸ್‌ ಡ್ರೈವ್ 40, 76.6 ಕೆಎಚ್‌ ಬ್ಯಾಟರಿ ಪ್ಯಾಕ್‌ನೊಂದಿಗೆ (Battery Pack) ಬರುತ್ತದೆ. ಇದು 326 ಎಚ್‌ಪಿ ಗರಿಷ್ಠ ಪವರ್‌ ಮತ್ತು 620 ಎನ್‌ಎಂನ ಟಾರ್ಕ್‌ ನೀಡುತ್ತದೆ. ಸಂಪೂರ್ಣ ಚಾರ್ಜ್ (Charge) ಮಾಡಿದರೆ ಈ ಕಾರು 425 ಕಿಮೀ ತಡೆರಹಿತವಾಗಿ ಸಂಚರಿಸಬಹುದು. ಕೇವಲ 6.1 ಸೆಕೆಂಡುಗಳಲ್ಲಿ ಇದು 0 ಇಂದ 100 ಕಿಮೀ ವೇಗದ ಆಕ್ಸಿಲೇಟರ್‌ (Accelerator) ನೀಡುವ ಸಾಮರ್ಥ್ಯ (Capacity) ಹೊಂದಿದೆ.

ಇದು ಮರ್ಸಿಡಿಸ್‌, ಆಡಿ ಮತ್ತು ಜಾಗ್ವಾರ್‌ ಇವಿ (jaguarEV) ಕಾರುಗಳಿಗೆ ಸ್ಪರ್ಧೆ ನೀಡಲಿದೆ. 

Latest Videos
Follow Us:
Download App:
  • android
  • ios