Auto Sales January 2022: ದೇಶೀಯ ಮಾರುಕಟ್ಟೆಯಲ್ಲಿ ಹೋಂಡಾ ಮಾರಾಟ ಶೇ. 7.88ರಷ್ಟು ಕುಸಿತ!
*2022ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಹೊಂಡಾ ಮಾರಾಟದಲ್ಲಿ ಕುಸಿತ
*ತಿಂಗಳ ಮಾರಾಟದಲ್ಲಿ ಹೆಚ್ಚಳ
*2022ರಲ್ಲಿ ಎರಡು ಹೊಸ ಕಾರುಗಳ ಬಿಡುಗಡೆ ನಿರೀಕ್ಷೆ
Auto Desk: ಹೋಂಡಾ ಕಾರ್ಸ್ ಇಂಡಿಯಾ(Honda cars India), 2022ರ ಜನವರಿಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ವರ್ಷದಿಂದ ವರ್ಷಕ್ಕೆ (YoY) ಶೇ 7.88 ರಷ್ಟು ಕುಸಿತ ದಾಖಲಿಸಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಮಾರಾಟವಾದ 11,319 ವಾಹನಗಳಿಗೆ ಹೋಲಿಸಿದರೆ ಕಂಪನಿ ಈ ವರ್ಷ 10,427 ವಾಹನಗಳನ್ನು ಮಾರಾಟ ಮಾಡಿದೆ. 2022ರ ಜನವರಿಯಲ್ಲಿ ಹೋಂಡಾ ಕಾರ್ಸ್ ಇಂಡಿಯಾ ಶೇ. 7.88 ರಷ್ಟು ಮಾರಾಟ ಕುಸಿತವನ್ನು ದಾಖಲಿಸಿದರೆ, ಅದರ ತಿಂಗಳಿಂದ ತಿಂಗಳಿಗೆ (MoM) ಮಾರಾಟವು ಶೇ. 20.71 ರಷ್ಟು. ಹೆಚ್ಚಾಗಿದೆ.
ಇದೇ ಅವಧಿಯಲ್ಲಿ ಕಂಪನಿಯ ರಫ್ತು ಕೂಡ ಶೇ.39.65 ರಷ್ಟು ಏರಿಕೆಯಾಗಿದ್ದು,1,722 ವಾಹನಗಳನ್ನು ರಫ್ತು ಮಾಡಲಾಗಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 1,233 ವಾಹನಗಳನ್ನು ರಫ್ತು ಮಾಡಲಾಗಿತ್ತು. ಒಟ್ಟಾರೆಯಾಗಿ (ದೇಶೀಯ ಮತ್ತು ರಫ್ತು ಸೇರಿದಂತೆ), ಕಂಪನಿಯು 2022 ರ ಜನವರಿಯಲ್ಲಿ 12,149 ವಾಹನಗಳನ್ನು ಮಾರಾಟ ಮಾಡಿದ್ದು, 2021ರ ಜನವರಿ ರಲ್ಲಿ ಮಾರಾಟವಾದ 12,552 ವಾಹನಗಳಿಗೆ ಹೋಲಿಸಿದರೆ, ಈ ವರ್ಷ ಶೇ.3.2 ರಷ್ಟು ಇಳಿಕೆಯಾಗಿದೆ.
ಇದನ್ನೂ ಓದಿ: January 2022 Auto Sales: ಶೇ.1.4ರಷ್ಟು ಮಾರಾಟ ಪ್ರಗತಿ ದಾಖಲಿಸಿದ ಕಿಯಾ ಇಂಡಿಯಾ!
ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ನ ಮಾರ್ಕೆಟಿಂಗ್ ಮತ್ತು ಮಾರಾಟದ ನಿರ್ದೇಶಕ ಯುಯಿಚಿ ಮುರಾಟಾ, "ಪೂರೈಕೆ ಸರಪಳಿ ಅವ್ಯವಸ್ಥೆ ಮತ್ತು ಕೋವಿಡ್ ಸಂಬಂಧಿತ ಸವಾಲುಗಳ ಹೊರತಾಗಿಯೂ, ನಾವು 2022 ಅನ್ನು ಭರವಸೆಯ ಮಾರಾಟ ದಾಖಲಿಸಿದ್ದೇವೆ. 2022ರ ಮೊದಲ ತಿಂಗಳು ಕಂಪನಿಗೆ ಉತ್ತಮವಾಗಿವೆ. ಕೆಲವು ನಗರಗಳಲ್ಲಿ ಈಗಲೂ ವಾರಾಂತ್ಯ-ಲಾಕ್ಡೌನ್ಗಳನ್ನು ಹೇರಲಾಗಿದ್ದರೂ, ಪರಿಸ್ಥಿತಿ ಸಕಾರಾತ್ಮಕ ಮತ್ತು ಸ್ಥಿರವಾಗಿರುವಂತೆ ಕಾಣುತ್ತಿದೆ’ ಎಂದರು.
ವಾಹನಗಳ ಡೆಲಿವರಿಯಲ್ಲಿ ಯಾವುದೇ ವಿಳಂಬವಾಗದಂತೆ ಗಮನ ಹರಿಸಲಾಗಿದೆ ಎಂದ ಅವರು ಸೆಮಿ ಕಂಡಕ್ಟರ್ ಕೊರತೆಯನ್ನು ಎದುರಿಸಲು ಕಂಪನಿ ಸಜ್ಜಾಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “.ನಮ್ಮ ಎಲ್ಲಾ ಉತ್ಪಾದನೆಗಳು ಸಮಯಕ್ಕೆ ಸರಿಯಾಗಿ ನಮ್ಮ ಡೀಲರ್ ಪಾಲುದಾರರಿಗೆ ರವಾನೆಯಾಗುತ್ತಿದೆ. ಹೋಂಡಾ ಮಾಡೆಲ್ಗಳ ಎಲ್ಲಾ ರೀತಿಯ ಬೇಡಿಕೆಯನ್ನು ಪೂರೈಸುತ್ತಿದೆ. ಚಿಪ್ ಕೊರತೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಕೀರ್ತಿ ನಮ್ಮ ಕಂಪನಿಗೆ ಸಲ್ಲಬೇಕು" ಎಂದು ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: January 2022 Auto Sales: ಸ್ಕೋಡಾ ಕುಶಾಕ್‌ಗೆ ಹೆಚ್ಚಿದ ಬೇಡಿಕೆ: ಕಾರುಗಳ ಮಾರಾಟ 3 ಪಟ್ಟು ಏರಿಕೆ!
2022 ರ ಜನವರಿಯಲ್ಲಿನ ಮಾರಾಟದ ಅಂಕಿ ಅಂಶವು 2021ರ ಡಿಸೆಂಬರ್ನ ಮಾರಾಟ ಅಂಕಿಅಂಶಗಳಿಗಿಂತ ಹೆಚ್ಚಿದೆಈ ಜಪಾನಿನ ಕಾರು ತಯಾರಕರು 2022 ರ ಡಿಸೆಂಬರ್ನಲ್ಲಿ 8,638 ವಾಹನಗಳನ್ನು ಮಾರಾಟ ಮಾಡಿದ್ದರಿಂದ 2022ರ ಜನವರಿ ತಿಂಗಳಿನಿಂದ ತಿಂಗಳಿಗೆ (MoM) 20.71 ಶೇ. ಬೆಳವಣಿಗೆಯನ್ನು ದಾಖಲಿಸಿದೆ.
ಈ ನಡುವೆ, ಹೊಸ ಖರೀದಿದಾರರನ್ನು ಆಕರ್ಷಿಸಲು, ಹೋಂಡಾ ಕಾರ್ಸ್ ಇಂಡಿಯಾ ಜನವರಿ ತಿಂಗಳಲ್ಲಿ 35,956 ರೂ.ವರೆಗಿನ ಆಫರ್ಗಳನ್ನು ಘೋಷಿಸಿತ್ತು. ಕಾರು ತಯಾರಕರು ಜಾಝ್ ಹ್ಯಾಚ್ಬ್ಯಾಕ್ನಿಂದ ಹಿಡಿದು ಅದರ ಸಂಪೂರ್ಣ ಶ್ರೇಣಿಯ ಮೇಲೆ ಲಾಭದಾಯಕ ರಿಯಾಯಿತಿಗಳನ್ನು ಪ್ರಕಟಿಸಿದ್ದರು. ಅಸ್ತಿತ್ವದಲ್ಲಿರುವ ಹೋಂಡಾ ಗ್ರಾಹಕರಿಗೆ ಹೆಚ್ಚುವರಿ ಪ್ರಯೋಜನಗಳೆಂದರೆ ಲಾಯಲ್ಟಿ ಬೋನಸ್ ಮತ್ತು ಹೋಂಡಾ ಕಾರ್ ಎಕ್ಸ್ಚೇಂಜ್ ಬೋನಸ್. ಆಫರ್ಗಳನ್ನು ನೀಡಲಾಗಿದೆ.
ಹೋಂಡಾ ಅಮೇಜ್ ಫೇಸ್ಲಿಫ್ಟ್ ಗರಿಷ್ಠ 15,000 ರೂ, 5,000 ರೂ. ಲಾಯಲ್ಟಿ ಬೋನಸ್, 6,000 ರೂ. ವಿನಿಮಯ ಬೋನಸ್ ಮತ್ತು 4,000 ರೂ. ಕಾರ್ಪೊರೇಟ್ ರಿಯಾಯಿತಿಯನ್ನು ನೀಡಲಾಗಿತ್ತು.
2022-24 ನೇ ಸಾಲಿನಲ್ಲಿ ಹೊಂಡಾ ಕಾರ್ಸ್, ಎಚ್ ಆರ್- ವಿ (HR-V), ಬ್ರಿಯೋ 2020 (Brio 2020) ನಂತಹ ಕಾರುಗಳನ್ನುಭಾರತದಲ್ಲಿ ಬಿಡುಗಡೆಯಾಗಲಿವೆ. ಈ 2 ಕಾರುಗಳು ಮುಂದಿನ ಮೂರು ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮುಂದಿನ ಎರಡು ವರ್ಷಗಳ ಪಟ್ಟಿಯಲ್ಲಿ 2 SUV ಗಳು ಮತ್ತು 2 ಹ್ಯಾಚ್ಬ್ಯಾಕ್ಗಳಿವೆ.