Asianet Suvarna News Asianet Suvarna News

ಅತ್ಯಾಧುನಿಕ ತಂತ್ರಜ್ಞಾನ, ಗರಿಷ್ಠ ಸೇಫ್ಟಿ, ಹೊಚ್ಚ ಹೊಸ ಹ್ಯುಂಡೈ ಟಕ್ಸನ್ ಅನಾವರಣ!

  • ADAS ತಂತ್ರಜ್ಞಾನ ಹೊಂದಿರುವ ಟಕ್ಸನ್ ಕಾರು ಬಿಡುಗಡೆ
  • ಆಗಸ್ಟ್ 4 ರಂದು ಹೊಚ್ಚ ಹೊಸ ಟಕ್ಸನ್ ಕಾರು ಮಾರುಕಟ್ಟೆಗೆ
  • ಮುಂದಿನ ವಾರದಿಂದ ಹ್ಯುಂಡೈ ಟಕ್ಸನ್ ಕಾರು ಬುಕಿಂಗ್ ಆರಂಭ
ADAS technology safety and class design Hyundai Tucson premium suv unveils in India ckm
Author
Bengaluru, First Published Jul 13, 2022, 2:40 PM IST

ನವದೆಹಲಿ(ಜು.13): ಸ್ಪೋರ್ಟೀವ್ ಡಿಸೈನ್, ಅತ್ಯಾಕರ್ಷಕ ಶೈಲಿ, ADAS ತಂತ್ರಜ್ಞಾನ,  ಗರಿಷ್ಠ ಸೇಫ್ಟಿ ಫೀಚರ್ಸ್ ಒಳಗೊಂಡ ಹೊಚ್ಚ ಹೊಸ ಹ್ಯುಂಡೈ ಟಕ್ಸನ್ ಕಾರು ಭಾರತದಲ್ಲಿ ಅನಾವರಣಗೊಂಡಿದೆ.  ನೂತನ ಕಾರು ಆಗಸ್ಟ್ 4 ರಂದು ದೇಶದಲ್ಲಿ ಬಿಡುಗಡೆಯಾಗಲಿದೆ. ಮುಂದಿನ ವಾರದಿಂದ ನೂತನ ಕಾರಿನ ಬುಕಿಂಗ್ ಆರಂಭಗೊಳ್ಳಲಿದೆ. ಆಗಸ್ಟ್ ಮೊದಲ ಅಂದರೆ ಬಿಡುಗಡೆ ಬೆನ್ನಲ್ಲೇ ಕಾರು ವಿತರಣೆ ಕೂಡ ಆರಂಭಗೊಳ್ಳಲಿದೆ. ಟಕ್ಸನ್ ಭಾರತದ ಮೊದಲ ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್(ADAS)ತಂತ್ರಜ್ಞಾನ ಹೊಂದಿದ ಕಾರಾಗಿದೆ. ಈ ತಂತ್ರಜ್ಞಾನದಿಂದ ಚಾಲನಕನಿಗೆ ಮುನ್ನಚ್ಚರಿಕೆ ಹಾಗೂ ಸುರಕ್ಷಿತ ಪ್ರಯಾಣಕ್ಕೆ ನೆರವಾಗುತ್ತದೆ.  ಹೆಚ್ಚುವರಿ ಫೀಚರ್ಸ್ ಸೇರಿದಂತೆ ಹಲವು ಹೊಸತನಗಳನ್ನು ಹೊಂದಿದೆ ನೂತನ ಹ್ಯುಂಡೈ ಟಕ್ಸನ್ ಇದೀಗ ಭಾರತದ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ. ಈ ಮೂಲಕ ಭಾರತದಲ್ಲಿ ಪ್ರಿಮಿಯಂ SUV ಕಾರು ವಿಭಾಗದಲ್ಲಿ ಇತರ ಪ್ರತಿಸ್ಪರ್ಧಿಗಳಿಗೆ ಪ್ರಬಲ ಸ್ಪರ್ಧೆ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹ್ಯುಂಡೈ ಟಕ್ಸನ್ ಕಾರು ಭಾರತದಲ್ಲಿ ಮೊದಲ ಬಾರಿಗೆ 2005ರಲ್ಲಿ ಬಿಡುಗಡೆಯಾಗಿದೆ. 2009ರಲ್ಲಿ ಟಕ್ಸನ್(Hyundai Tucson SUV) ಸೆಕೆಂಡ್ ಜನರೇಶನ್ ಕಾರು ಬಿಡುಗಡೆ ಮಾಡಿತ್ತು. 2016ರಲ್ಲಿ ಮೂರನೇ ಜನರೇಶನ್ ಕಾರು ಬಿಡುಗಡೆ ಮಾಡಿದೆ. ಪ್ರಿಮಿಯಂ ಎಸ್‌ಯುವಿ ವಿಭಾಗದಲ್ಲಿ ಸದ್ಯ ಟಾಟಾ ಹ್ಯಾರಿಯರ್, ಎಂಜಿ ಮೋಟಾರ್ಸ್ ಕಾರುಗಳು ಭಾರತದಲ್ಲಿ ಭಾರಿ ಬೇಡಿಕೆ ಪಡೆದುಕೊಂಡಿದೆ. ಇತ್ತ ಹ್ಯುಂಡೈ ತನ್ನ ಮಿಡ್ ಸೈಜ್ ಎಸ್‌ಯುವಿ ಹ್ಯುಂಡೈ ಕ್ರೆಟಾ ಹಾಗೂ ಸಬ್ ಕಾಂಪಾಕ್ಟ್ ಎಸ್‌ಯುವಿ ವೆನ್ಯೂ ಕಾರುಗಳು ಭಾರತದ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿತ್ತು. ಆದರೆ ಪ್ರಿಮಿಯಂ ಎಸ್‌‌ಯುವಿ ಟಕ್ಸನ್ ನಿರೀಕ್ಷಿತ ಬೇಡಿಕೆ ಪಡೆದುಕೊಳ್ಳಲು ವಿಫಲವಾಗಿತ್ತು. ಆದರೆ ಈ ಬಾರಿ ಹ್ಯುಂಡೈ ಟಕ್ಸನ್ ಹಲವು ಬದಲಾವಣೆಗಳೊಂದಿಗೆ ಕಾರು ಬಿಡುಗಡೆ ಮಾಡಿದೆ.

Auto PLI Scheme ಪ್ರೋತ್ಸಾಹ ಧನಕ್ಕೆ ಟಾಟಾ, ಮಹೀಂದ್ರಾ, ಹ್ಯುಂಡೈ ಆಯ್ಕೆ: ಮಾರುತಿ ಪಟ್ಟಿಯಿಂದ ಹೊರಗೆ!

ಹ್ಯುಂಡೈ ಟಕ್ಸನ್ ಎಂಜಿನ್
ಹೊಚ್ಚ ಹೊಸ ಹ್ಯುಂಡೈ ಟಕ್ಸನ್ ಕಾರು ಪೆಟ್ರೋಲ್ ಹಾಗೂ ಡೀಸೆಲ್ ವೇರಿಯೆಂಟ್‌ನಲ್ಲಿ ಲಭ್ಯವಿದೆ. 2.0 ಲೀಟರ್ ಪೆಟ್ರೋಲ್ ಎಂಜಿನ್ ಕಾರು 156 PS ಪವರ್ ಹಾಗೂ 192 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು 2.0 ಲೀಟರ್ ಡೀಸೆಲ್ ಎಂಜಿನ್ ಕಾರು  186 PS ಪವರ್ ಹಾಗೂ  400Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 

ADAS technology safety and class design Hyundai Tucson premium suv unveils in India ckm

ನೂತನ ಟಕ್ಸನ್ ಕಾರು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಫ್ರಂಟ್ ಹಾಗೂ ರೇರ್ ADAS ಫೀಚರ್ಸ್ ಹೊಂದಿದ್ದು, ರೇಡಾರ್ ಸಿಸ್ಟಮ್ ತಂತ್ರಜ್ಞಾನ ಒಳಗೊಂಡಿದೆ. ಮತ್ತೊಂದು ವಿಶೇಷತೆ ಎಂದರು ಈ ಕಾರಿನಲ್ಲಿ ಫ್ರಂಟ್ ಕ್ಯಾಮಾರ ಕೂಡ ಲಭ್ಯವಿದೆ. ಇದರಿಂದ ಪಾರ್ಕಿಂಗ್ ವೇಳೆ ಅಥವಾ ರಿವರ್ಸ್, ಯೂ ಟರ್ನ್ ವೇಳೆ ಕಾರಿನ ಮುಂಭಾಗಕ್ಕೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಈ ಫ್ರಂಟ್ ಕ್ಯಾಮರ ನೆರವಾಗಲಿದೆ. ಫ್ರಂಟ್ ಕ್ಯಾಮರ ಚಾಲನಕನಿಗೆ ಅಲರ್ಟ್ ನೀಡಲಿದೆ.

 

Hyundai Ioniq 5 EV ಕೈಗೆಟುಕುವ ದರ, 480 ಕಿ.ಮೀ ಮೇಲೇಜ್, ಶೀಘ್ರದಲ್ಲೇ ಭಾರತದಲ್ಲಿ ಕಾರು ಬಿಡುಗಡೆ!

ನೂತನ ಹ್ಯುಂಡೈ ಟಕ್ಸನ್ ಕಾರು ಸ್ಮಾರ್ಟ್ ಸೆನ್ಸ್ ಸೇಫ್ಟಿ ಫೀಚರ್ಸ್ ಒಳಗೊಂಡಿದೆ.  ಈ ಮೂಲಕ ಗರಿಷ್ಠ ಸೇಫ್ಟಿ ಒದಗಿಸಲಿದೆ. ಇನ್ನು 6 ಏರ್‌ಬ್ಯಾಗ್ ಅಳವಡಿಸಲಾಗಿದೆ.  ಎಬಿಎಸ್, ಇಬಿಡಿ, ಹಿಲ್ ಅಸಿಸ್ಟ್ ಸೇರಿದಂತೆ ಹಲವು ಸೆಫ್ಟಿ ಫೀಚರ್ಸ್ ಹೊಂದಿದೆ.  ಇನ್ನು ಟಾಪ್ ವೇರಿಯೆಂಟ್ ಕಾರು ಡುಯ್ಯೆಲ್ ಟೋನ್ ಕಲರ್‌ನಲ್ಲಿ ಲಭ್ಯವಿದೆ.  ಕೀ ಲೆಸ್ ಎಂಟ್ರಿ ಹೊಂದಿದ್ದು,  ಬೂಸ್ ಸೌಂಡ್ ಸಿಸ್ಟಮ್ ಹೊಂದಿದೆ.  ವೆಂಟಿಲೇಟೆಡ್ ಸೀಟ್, 360 ಡಿಗ್ರಿ ಕ್ಯಾಮಾರ 10.1 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಆಟೋ ಡಿಮ್ಮಿಂಗ್ ಐವಿಆರ್‌ಎಂ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ.
 

Follow Us:
Download App:
  • android
  • ios