Asianet Suvarna News Asianet Suvarna News

ಭಾರತದ ಶೇ.90ರಷ್ಟು ಕಾರುಗಳಲ್ಲಿರೋಲ್ಲAir Bags: ಐಷಾರಾಮಿ ಕಾರುಗಳಿಗೆ ಮಾತ್ರ ಸೀಮಿತ

ಭಾರತೀಯ ರಸ್ತೆಗಳಲ್ಲಿ ಸಂಚರಿಸುತ್ತಿರುವ ಎಲ್ಲಾ ಕಾರುಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು (Airbags) ಕಡ್ಡಾಯಗೊಳಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಆದರೆ, ಇಲ್ಲಿಯವರೆಗೆ ಶೇ.90ರಷ್ಟು ಕಾರುಗಳು ಅದನ್ನು ಪಾಲಿಸಿಲ್ಲ.

90  [percent of Indian cars does not have six airbags government sources
Author
First Published Sep 6, 2022, 3:08 PM IST

ಭಾರತೀಯ ರಸ್ತೆಗಳಲ್ಲಿ ಸಂಚರಿಸುತ್ತಿರುವ ಎಲ್ಲಾ ಕಾರುಗಳಲ್ಲಿ ಆರು ಏರ್ಬ್ಯಾಗ್ಗಳನ್ನು (Airbags) ಕಡ್ಡಾಯಗೊಳಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಆದರೆ, ಇಲ್ಲಿಯವರೆಗೆ ಶೇ.90ರಷ್ಟು ಕಾರುಗಳು ಅದನ್ನು ಪಾಲಿಸಿಲ್ಲ. ಈ ಸುರಕ್ಷತಾ ಸೌಲಭ್ಯ (Safety feature) ಕೇವಲ ಐಷಾರಾಮಿ ಕಾರುಗಳಿಗೆ ಮಾತ್ರ ಸೀಮಿತವಾಗಿದೆ ಎಂದು  ತಿಳಿದುಬಂದಿದೆ. ಈ ಕುರಿತು ನಿಖರ ಅಂಕಿ ಅಂಶಗಳು ಲಭ್ಯವಾಗಿಲ್ಲವಾದರೂ, ಆಟೊಮೊಬೈಲ್ ಉದ್ಯಮ ಮತ್ತು ಸರ್ಕಾರಿ ಮೂಲಗಳ ಪ್ರಕಾರ, ಕಾರುಗಳು ಆರು ಏರ್ಬ್ಯಾಗ್ಗಳನ್ನು ಅಳವಡಿಸಿದ್ದರೂ, ಗ್ರಾಹಕರು ಅದೇ ಮಾದರಿಯ ಕಡಿಮೆ ದರದ ಕಾರಿನ ವೇರಿಯಂಟ್ಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಎರಡು ಏರ್ಬ್ಯಾಗ್ಗಳಿಗಿಂತ ಹೆಚ್ಚಿರುವ ಕಾರುಗಳಿಗೆ ಬೇಡಿಕೆ ಕಡಿಮೆಯಿದೆ. ಈ ಕಾರುಗಳಲ್ಲಿ ಎರಡು ಏರ್ಬ್ಯಾಗ್ ಕೂಡ ಈ ವರ್ಷದ ಜನವರಿಯಲ್ಲಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ ನಂತರ ಕಡ್ಡಾಯವಾಗಿ ಅಳವಡಿಸಲಾಗುತ್ತಿದೆ. 

ಭಾರತ ವಿಶ್ವದಲ್ಲೇ ಅತಿ ಹೆಚ್ಚು ರಸ್ತೆ ಅಪಘಾತಗಳನ್ನು ದಾಖಲಿಸುವ ದೇಶ. ಈಗ ಕಾರುಗಳಲ್ಲಿ ಏರ್ಬ್ಯಾಗ್ಗಳನ್ನು ಅಳವಡಿಸುವುದರಿಂದ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುವವರ ಸಂಖ್ಯೆಯನ್ನು ಕಡಿಮೆಗೊಳಿಸುವುದು ಸರ್ಕಾರದ ಉದ್ದೇಶ. ವಿಶ್ವದ ಒಟ್ಟು ವಾಹನ ಸಂಖ್ಯೆಯಲ್ಲಿ ಭಾರತ ಶೇ.1ರಷ್ಟು ವಾಹನಗಳನ್ನು ಹೊಂದಿದೆ. ಆದರೆ, ಇದರ ರಸ್ತೆ ಅಪಘಾತಗಳ ಪ್ರಮಾಣ ಮಾತ್ರ ಶೇ.11ರಷ್ಟಿದೆ. ಒಂದೆಡೆ ಸರ್ಕಾರ ಎಲ್ಲಾ ಕಾರುಗಳಲ್ಲಿ ಸುರಕ್ಷತಾ ಅಂಶಗಳ ಅಳವಡಿಕೆಗೆ ಒತ್ತು ನೀಡುತ್ತಿದ್ದರೆ, ಆಟೊಮೊಬೈಲ್ ಉದ್ಯಮದ ಒಂದು ವಲಯ ಮತ್ರ, ಸೀಟ್ ಬೆಲ್ಟ್ಗಳನ್ನು (seat belt) ಕಡ್ಡಾಯಗೊಳಿಸುವುದು, ಮದ್ಯಪಾನ ಮಾತ್ರ ಅತಿ ವೇಗದಲ್ಲಿ ಕಾರು ಚಲಾಯಿಸುವುದು ಮತ್ತು ತಪ್ಪಾದ ಮಾರ್ಗಗಳಲ್ಲಿ ವಾಹನ ಚಲಾಯಿಸುವುದನ್ನು ತಡೆಯುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಿದೆ. ಈ ಕಾರಣಗಳಿಮದ 2021ರಲ್ಲಿ ದೇಶದಲ್ಲಿ 1.6 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ವಾದಿಸುತ್ತಿದ್ದಾರೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 2022ರ ಅಕ್ಟೋಬರ್ನಿಂದ ಆರು ಏರ್ಬ್ಯಾಗ್ಗಳನ್ನು ಕಡ್ಡಾಯಗೊಳಿಸುವ ಪ್ರಸ್ತಾವನೆ ಇರಿಸಿದೆ. ಆದರೆ, ಈ ಗುರಿ ತಲುಪಲು ಕಷ್ಟಸಾಧ್ಯ ಎಂಬ ಸನ್ನಿವೇಶ ಎದುರಾಗಿದೆ. ಆಟೊ ಉದ್ಯಮದ ಒಂದು ವಲಯದ ವಿರೋಧದ ನಡುವೆಯೂ ಸರ್ಕಾರ ಈ ನಿಯಮದ ಕರಡು ಪ್ರತಿಗಳನ್ನು ಬಿಡುಗಡೆಗೊಳಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಈ ಯೋಜನೆ ಇನ್ನೂ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ. 
ಆರು ಏರ್ಬ್ಯಾಗ್ಗಳ ಅಳವಡಿಕೆಯನ್ನು ವಿರೋಧಿಸುವವರನ್ನು ಪ್ರಶ್ನಿಸಿರುವ ಗಡ್ಕರಿ, ಇದೇ ಜನರು ವಿದೇಶಗಳಿಗೆ ಆರು ಏರ್ಬ್ಯಾಗ್ ಇರುವ ಕಾರುಗಳನ್ನು ರಫ್ತು ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ಕಳೆದ ಸಂಸತ್ ಅಧಿವೇಶನದಲ್ಲಿ ಈ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ಅವರು, 2020ರಲ್ಲಿ ಈ ಸೌಲಭ್ಯ ಅಳವಡಿಕೆಯಾಗಿದ್ದರೆ ಸುಮಾರು 13 ಸಾವಿರ ಜೀವಗಳನ್ನು ಉಳಿಸಬಹುದಿತ್ತು ಎಂದಿದ್ದರು. 

ಆದರೆ, ಜನರು ಎರಡು ಏರ್ಬ್ಯಾಗ್ಗಳಿರುವ ಕಾರುಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿರುವುದರಿಂದ, ಕಂಪನಿಗಳು ಹೆಚ್ಚಿನ ಏರ್ಬ್ಯಾಗ್ ಅಳವಡಿಸುವ ತರಾತುರಿಯಲ್ಲಿ ಇದ್ದಂತಿಲ್ಲ. 
ಪ್ರಸ್ತುತ ಮಾರುತಿ (Maruti), ಹ್ಯುಂಡೈ (Hyundai) ಹಾಗೂ ಟಾಟಾ ಮೋಟಾರ್ಸ್ (Tata Motors), ಕಡಿಮೆ ದರದ ಕಾರುಗಳನ್ನು ಬಯಸುವ ಗ್ರಾಹಕರತ್ತ ಗಮನ ಹರಿಸುವ ಜೊತೆಗೆ, ಕೆಲವು ಮಾಡಲ್ಗಳಲ್ಲಿ ಆರು ಏರ್ಬ್ಯಾಗ್ಗಳನ್ನು ಕೂಡ ಅಳವಡಿಸಿದೆ. ಐಷಾರಾಮಿ ಕಾರುಗಳ ವಿಚಾರಕ್ಕೆ ಬಂದರೆ, ಮರ್ಸಿಡೀಸ್-ಬೆನ್ಸ್ (Mercedes Benz), ಆಡಿ (Audi) ಹಾಗೂ ವೋಲ್ವೋ (Volvo) ಕಾರುಗಳು ಈಗಾಗಲೇ ಆರು ಏರ್ಬ್ಯಾಗ್ಗಳನ್ನು ಹೊಂದಿವೆ. ಮತ್ತು ಬಹುತೇಕ ದೊಡ್ಡ ಕಾರುಗಳಲ್ಲಿ ಇದು ಸ್ಟಾಂಡರ್ಡ್ ಫೀಚರ್ ಆಗಿ ಅಳವಡಿಕೆಯಾಗಿದೆ.
ಮರ್ಸಿಡೀಸ್ (Mercedes) ತನ್ನ ಎಸ್-ಕ್ಲಾಸ್ (S-Class) ಸೆಡಾನ್ನಲ್ಲಿ ಐದು ಏರ್ಬ್ಯಾಗ್ಗಳನ್ನು ನೀಡಿದ್ದರೆ, ಮೇಬ್ಯಾಕ್ನಲ್ಲಿ (Maybach)13  ಏರ್ಬ್ಯಾಗ್ಗಳಿವೆ. 
 

Follow Us:
Download App:
  • android
  • ios