ಬರೋಬ್ಬರಿ 5,000 ರೆಸ್ಟೋರೆಂಟ್ ಗಳು ಜೊಮ್ಯಾಟೋ ಪಟ್ಟಿಯಿಂದ ಹೊರಕ್ಕೆ!
ಏಕಾಏಕಿ 5 ಸಾವಿರ ರೆಸ್ಟೋರೆಂಟ್ ಗಳನ್ನು ಕೈಬಿಟ್ಟ ಜೊಮ್ಯಾಟೋ| ಜನಪ್ರಿಯ ಆನ್‌ಲೈನ್ ಆಹಾರ ವಿತರಕ ಸಂಸ್ಥೆ ಜೊಮ್ಯಾಟೋ| ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಪಟ್ಟಿಯಿಂದ ರೆಸ್ಟೋರೆಂಟ್ ಗಳು ಹೊರಕ್ಕೆ| ಎಫ್‌ಎಸ್‌ಎಸ್‌ಎಐ ನ ನೈರ್ಮಲ್ಯ ಮಾನದಂಡಗಳನ್ನು ಪಾಲಿಸದ ಹಿನ್ನೆಲೆ
ನವದೆಹಲಿ(ಫೆ.23): ಆನ್‌ಲೈನ್ ಆಹಾರ ವಿತರಕ ಸಂಸ್ಥೆ ಜೊಮ್ಯಾಟೋ ತನ್ನ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳಲ್ಲಿರುವ ಸುಮಾರು 5,000 ರೆಸ್ಟೋರೆಂಟ್ ಗಳನ್ನು ತನ್ನ ಪಟ್ಟಿಯಿಂದ ಹೊರ ಹಾಕಿದೆ.
ಎಫ್‌ಎಸ್‌ಎಸ್‌ಎಐ ನ ನೈರ್ಮಲ್ಯ ಮಾನದಂಡಗಳನ್ನು ಪಾಲಿಸದ ಹಿನ್ನೆಲೆಯಲ್ಲಿ 5,000 ರೆಸ್ಟೋರೆಂಟ್ ಗಳನ್ನು ಕೈಬಿಡಲಾಗಿದೆ ಎಂದು ಜೊಮ್ಯಾಟೋ ಸ್ಪಷ್ಟಪಡಿಸಿದೆ.
ಇನ್ನೂ ಹೆಚ್ಚಿನ ವಾಣಿಜ್ಯ ಸುದ್ದಿಗಳನ್ನು ಇಲ್ಲಿ ಓದಿ: https://kannada.asianetnews.com/business
ದೇಶದ ಸುಮಾರು 150 ನಗರಗಳಲ್ಲಿರುವ ಈ 5,000 ರೆಸ್ಟೋರೆಂಟ್ ಗಳ ಪರಿಶೀಲನೆ ನಡೆಸಲಾಗಿ, ನೈರ್ಮಲ್ಯ ಮತ್ತು ಶುದ್ಧೀಕರಣ ಮಾನದಂಡಗಳನ್ನು ಪಾಲಿಸದ ಈ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯ ಎಂದು ಜೊಮನ್ಯಾಟೋ ತಿಳಿಸಿದೆ.
ಇಂದಿನ ಕನ್ನಡಪ್ರಭವನ್ನು ಇಲ್ಲಿ ಓದಿ: http://kpepaper.asianetnews.com/
ಈ ಕುರಿತು ಮಾಹಿತಿ ನೀಡಿರುವ ಜೊಮ್ಯಾಟೋ ಸಿಇಒ ಮೊಹಿತ್ ಗುಪ್ತಾ, ಕಂಪನಿ ದಿನಕ್ಕೆ ಸುಮಾರು 400 ಹೊಸ ರೆಸ್ಟೋರೆಂಟ್ ಗಳನ್ನು ತನ್ನ ಪಟ್ಟಿಯಲ್ಲಿ ಸೇರಿಸುತ್ತಿದ್ದು, ಮಾನದಂಡಗಳನ್ನು ಸರಿಯಾಗಿ ಪರಿಶೀಲಿಸಿ ಹೊಸ ರೆಸ್ಟೋರೆಂಟ್ ಗಳನ್ನು ಸೇರಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.