Asianet Suvarna News Asianet Suvarna News

2022 ಮುಗಿಯೋ ಮುನ್ನ ತಪ್ಪದೇ ಈ ಕೆಲ್ಸ ಮಾಡಿ ಮುಗಿಸಿ

ಇನ್ನೂ ಐಟಿಆರ್ ಸಲ್ಲಿಕೆ ಮಾಡದಿರೋರಿಗೆ ವಿಳಂಬ ಐಟಿಆರ್ ಸಲ್ಲಿಕೆಗೆ ಡಿ.31 ಕೊನೆಯ ಅವಕಾಶ. ಹೀಗಾಗಿ ಹೊಸ ವರ್ಷವನ್ನು ಸ್ವಾಗತಿಸಲು ಪ್ಲ್ಯಾನ್ ಮಾಡುತ್ತಿರೋರು ಈ ತನಕ ಐಟಿಆರ್ ಸಲ್ಲಿಕೆ ಮಾಡದಿದ್ರೆ ಡಿ.31ರೊಳಗೆ ಅದನ್ನು ಕೂಡ ಮಾಡಿ ಮುಗಿಸಲು ಪ್ಲ್ಯಾನ್ ಮಾಡಿ. 

Your Money Tax moves to make before end of 2022
Author
First Published Dec 19, 2022, 12:13 PM IST

Business Desk: ಹೊಸ ವರ್ಷದ ಪ್ರಾರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ. ಹಾಗೆಯೇ ಹೊಸ ವರ್ಷದ ಸ್ವಾಗತಕ್ಕೆ ಕೆಲವರು  ಭರ್ಜರಿ ಸಿದ್ಧತೆಯಲ್ಲೂ ತೊಡಗಿದ್ದಾರೆ. ಆದರೆ, ಹೊಸ ವರ್ಷಕ್ಕೆ ಕಾಲಿಡುವ ಮುನ್ನ ಈ ವರ್ಷದ ಅಂತ್ಯದೊಳಗೆ ಕೆಲವೊಂದು ಪ್ರಮುಖ ಕೆಲಸಗಳನ್ನು ಮಾಡಿ ಮುಗಿಸಬೇಕಾದ ಅಗತ್ಯವಿದೆ. ಅದರಲ್ಲೂ ಕೆಲವು ಕೆಲಸಗಳನ್ನು ಡಿಸೆಂಬರ್ ಅಂತ್ಯದೊಳಗೆ ಮುಗಿಸದೆ ಹೋದರೆ ನಿಮ್ಮ ಜೇಬಿನ ಹೊರೆ ಹೆಚ್ಚುವ ಸಾಧ್ಯತೆಯಿರುತ್ತದೆ. ಅದರಲ್ಲೂ ಆದಾಯ ತೆರಿಗೆಗೆ ಸಂಬಂಧಿಸಿದ ಪ್ರಮುಖ ಕೆಲಸವೊಂದನ್ನು ನೀವು ಮಾಡಿ ಮುಗಿಸಲೇಬೇಕಿದೆ. ಹಿಂದಿನ ವರ್ಷದ ಆದಾಯ ತೆರಿಗೆ ರಿಟರ್ನ್ಸ್ (ಐಡಿಆರ್) ಸ್ವಯಂಪ್ರೇರಣೆಯಿಂದ ಸಲ್ಲಿಕೆ ಮಾಡಲು ಡಿಸೆಂಬರ್ 31 ಅಂತಿಮ ದಿನಾಂಕ. ಹೌದು ನೀವು ನಿಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಜುಲೈ 31ರೊಳಗೆ ಸಲ್ಲಿಕೆ ಮಾಡಲು ವಿಫಲರಾಗಿದ್ರೆ ನಿಮಗೆ ಡಿಸೆಂಬರ್ 31ರ ತನಕ ಸ್ವಯಂಪ್ರೇರಣಿಯಿಂದ ಸಲ್ಲಿಕೆ ಮಾಡಲು ಅವಕಾಶವಿದೆ. ಇದಕ್ಕೆ ವಿಳಂಬ ಐಟಿಆರ್ ಸಲ್ಲಿಕೆ ಎನ್ನುತ್ತಾರೆ. ಆದಾಯ ತೆರಿಗೆ ವ್ಯಾಪ್ತಿಗೊಳಪಡುವವರು ಐಟಿಆರ್ ಸಲ್ಲಿಕೆ ಮಾಡೋದು ಅತ್ಯಗತ್ಯ. ಒಂದು ವೇಳೆ ಐಟಿಆರ್ ಸಲ್ಲಿಕೆ ಮಾಡದಿದ್ರೆ ಮುಂದೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ವಿಳಂಬ ಐಟಿಆರ್
ಐಟಿಆರ್ ಸಲ್ಲಿಕೆ ಮಾಡೋದ್ರಿಂದ ಆದಾಯ ತೆರಿಗೆ ಇಲಾಖೆಯ ದೃಷ್ಟಿಯಲ್ಲಿ ನೀವು ಒಳ್ಳೆಯವರು ಅನ್ನಿಸಿಕೊಳ್ಳುತ್ತೀರ ಎಂದಷ್ಟೇ ಭಾವಿಸಬೇಡಿ. ಇದರಿಂದ ಅನೇಕ ವೈಯಕ್ತಿಕ ಪ್ರಯೋಜನಗಳು ಕೂಡ ಇವೆ. ವಿದೇಶಿ ಪ್ರಯಾಣಕ್ಕೆ ವೀಸಾ ಮಾಡಿಸೋದ್ರಿಂದ ಹಿಡಿದು ತೆರಿಗೆ ರೀಫಂಡ್ ಸಮಯದಲ್ಲಿ ಒಂದಿಷ್ಟು ನಗದು ಹಿಂಪಡೆಯುವ ತನಕ ಕೆಲವು ಪ್ರಯೋಜನಗಳಿವೆ. ಈ ಆರ್ಥಿಕ ಸಾಲಿನ ಐಟಿಆರ್ ಸಲ್ಲಿಕೆಗೆ ಜುಲೈ 31ರ ತನಕ ಕಾಲಾವಕಾಶ ನೀಡಲಾಗಿತ್ತು. ಆದರೆ, ಕೆಲವರಿಗೆ ಇದು ಸಾಧ್ಯವಾಗೋದಿಲ್ಲ. ಅಂಥವರಿಗೆ ಆದಾಯ ತೆರಿಗೆ ಇಲಾಖೆ ವಿಳಂಬ ಐಟಿಆರ್ ಸಲ್ಲಿಕೆಗೆ ಅವಕಾಶ ನೀಡಿದೆ. ಈ ವಿಳಂಬ ಐಟಿಆರ್ ಸಲ್ಲಿಕೆಗೆ ಡಿಸೆಂಬರ್ 31 ಕೊನೆಯ ದಿನಾಂಕ. 

ಸಾವರಿನ್ ಗೋಲ್ಡ್ ಬಾಂಡ್ ಮೂರನೇ ಸರಣಿ ಡಿ.19ರಿಂದ ಪ್ರಾರಂಭ; ಆನ್ ಲೈನ್ ನಲ್ಲಿ ಖರೀದಿಸೋದು ಹೇಗೆ?

ಪರಿಷ್ಕೃತ ರಿಟರ್ನ್
ಅಂತಿಮ ಗಡುವಿನ ಮುನ್ನ ನೀವು ಐಟಿಆರ್ ಸಲ್ಲಿಕೆ ಮಾಡಿದ್ದು, ಅದರಲ್ಲಿನ ಕೆಲವು ತಪ್ಪುಗಳನ್ನು ಸರಿಪಡಿಸಿ ಪರಿಷ್ಕೃತ ರಿಟರ್ನ್ (Revised return) ಸಲ್ಲಿಕೆ ಮಾಡಲು ಕೂಡ ಡಿಸೆಂಬರ್ 31 ಅಂತಿಮ ದಿನಾಂಕ. ಕಳೆದ ವರ್ಷಕ್ಕೆ ನೀವು ಐಟಿಆರ್ ಸಲ್ಲಿಕೆ ಮಾಡಿದ್ದು, ಸೆಕ್ಷನ್ 80ಸಿ ಅಡಿಯಲ್ಲಿ ನೀವು ತಪ್ಪಾಗಿ ತೆರಿಗೆ ಕಡಿತ ಕ್ಲೈಮ್ ಮಾಡಿದ್ರೆ ಆಗ ನೀವು ರಿಟರ್ನ್ ಪರಿಷ್ಕರಿಸಬಹುದು. ಪರಿಷ್ಕೃತ ರಿಟರ್ನ್ ಸಲ್ಲಿಕೆಗೆ ಯಾವುದೇ ಮಿತಿಯಿಲ್ಲ, ಎಷ್ಟು ಬಾರಿ ಬೇಕಾದ್ರೂ ಸಲ್ಲಿಕೆ ಮಾಡಬಹುದು. ಆದರೆ, ಪರಿಷ್ಕೃತ ರಿಟರ್ನ್ ಸಲ್ಲಿಕೆಗೆ ಡಿಸೆಂಬರ್ 31 ಅಂತಿಮ ಗಡುವು ಅನ್ನೋದು ನೆನಪಿರಲಿ.

ವಿಳಂಬ ಐಟಿಆರ್ ಸಲ್ಲಿಕೆ ಹೇಗೆ?
ಮನೆಯಲ್ಲೇ ಕುಳಿತು ಆನ್ ಲೈನ್ ಮೂಲಕ ವಿಳಂಬ ಅಥವಾ ಪರಿಷ್ಕೃತ ಐಟಿಆರ್ ಸಲ್ಲಿಕೆ ಮಾಡಬಹುದು. ಈ ಪ್ರಕ್ರಿಯೆ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಿದ ಮಾದರಿಯಲ್ಲೇ ಇರುತ್ತದೆ. ಆದಾಯ ತೆರಿಗೆ ಇಲಾಖೆ ಇ-ಪೋರ್ಟಲ್ ನಲ್ಲಿ ಸಲ್ಲಿಕೆ ಮಾಡಬಹುದು.

ಟೆಕ್ಕಿಗಳಿಗೆ ಎಲ್ಐಸಿಯ ಹೊಸ ಪಾಲಿಸಿ; ವರ್ಷಕ್ಕೆ 4000ರೂ. ಪ್ರೀಮಿಯಂ ಪಾವತಿಸಿದ್ರೆ 50ಲಕ್ಷ ರೂ. ಕವರೇಜ್!

ವಿಳಂಬ ಐಟಿಆರ್ ಸಲ್ಲಿಕೆಯಿಂದ ಏನೆಲ್ಲ ಸಮಸ್ಯೆ?
ನೀವು ವಿಳಂಬ (Belated) ಅಥವಾ ಪರಿಷ್ಕೃತ (Revised) ಐಟಿಅರ್ ಸಲ್ಲಿಕೆಗೆ ದಂಡ ಶುಲ್ಕ ಕಟ್ಟಬೇಕು. ಹಣಕಾಸು ಕಾಯ್ದೆ ಅನ್ವಯ ಈ ದಂಡವನ್ನು ನಿಗದಿಪಡಿಸಲಾಗಿದ್ದು, 1,000ರೂ.ನಿಂದ  5,000ರೂ. ತನಕ ಇರುತ್ತದೆ.  ತೆರಿಗೆ ವ್ಯಾಪ್ತಿಗೊಳಪಡೋ ವಾರ್ಷಿಕ ಆದಾಯ  2.5ಲಕ್ಷ ರೂ.ಗಿಂತ ಕಡಿಮೆಯಿದ್ರೆ ದಂಡ ಶುಲ್ಕ ಪಾವತಿಯಿಂದ ವಿನಾಯ್ತಿ ಇದೆ.  ಈ ವರ್ಷ ತೆರಿಗೆದಾರರು ಅನುಭವಿಸಿದ ನಷ್ಟವನ್ನು ಮುಂದಿನ ಆರ್ಥಿಕ ಸಾಲಿನಲ್ಲಿ ಅವರು ಗಳಿಸೋ ಲಾಭಕ್ಕೆ ಸರಿಹೊಂದಿಸೋ (Setoff) ಅವಕಾಶವನ್ನು ಕಳೆದುಕೊಳ್ಳುತ್ತಾರೆ. ಇನ್ನು ತೆರಿಗೆದಾರರ ಆದಾಯದಿಂದ ಈಗಾಗಲೇ ಹೆಚ್ಚುವರಿಯಾಗಿ ಕಡಿತಗೊಂಡ ತೆರಿಗೆಗೆ ಸೂಕ್ತ ದಾಖಲೆಗಳನ್ನು ಒದಗಿಸಿದ್ರೆ ಅದನ್ನು ಆದಾಯ ತೆರಿಗೆ ಇಲಾಖೆ ಮರುಪಾವತಿ (Refund) ಮಾಡುತ್ತದೆ. ಆದ್ರೆ ಅಂತಿಮ ಗಡುವಿನೊಳಗೆ  ಐಟಿಆರ್ ಫೈಲ್ ಮಾಡದ ತೆರಿಗೆದಾರರಿಗೆ ಮರುಪಾವತಿ ಮಾಡೋದಿಲ್ಲ. ಅಷ್ಟೇ ಅಲ್ಲ, ಒಂದು ವೇಳೆ ತೆರಿಗೆದಾರ ಈ ತನಕ ಪಾವತಿ ಮಾಡಿದ ತೆರಿಗೆ ಮೊತ್ತ ಆದಾಯ ತೆರಿಗೆ ಇಲಾಖೆ ಲೆಕ್ಕ ಹಾಕಿದ ಮೊತ್ತಕ್ಕಿಂತ ಕಡಿಮೆ ಇದ್ರೆ ಬಾಕಿ ತೆರಿಗೆ ಪಾವತಿಸೋ ಜೊತೆಗೆ ಅದಕ್ಕೆ ಬಡ್ಡಿ (Interest) ಕೂಡ ಕಟ್ಟಬೇಕಾಗುತ್ತದೆ. 
 

Follow Us:
Download App:
  • android
  • ios