ಮುಂಬೈ(ಆ.23): ರಿಲಯನ್ಸ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಮುಖೇಶ್ ಅಂಬಾನಿ ಯಾರಿಗೆ ಗೊತ್ತಿಲ್ಲ ಹೇಳಿ?. ವಿಶ್ವದ ಅಗ್ರ ಶ್ರೀಮಂತರ ಪೈಕಿ ಒಬ್ಬರಾಗಿರುವ ಮುಖೇಶ್ ಅಂಬಾನಿ ಮತ್ತವರ ಕುಟುಂಬ ದೇಶದ ಅತ್ಯಂತ ಪ್ರತಿಷ್ಠಿತ ಕುಟುಂಬಗಳಲ್ಲಿ ಒಂದು.

ಇತ್ತೀಚೆಗೆ ಮುಖೇಶ್ ಅಂಬಾನಿ ಕೇರಳ ಪ್ರವಾಹಕ್ಕೆ 21 ಕೋಟಿ ರೂ. ಧನಸಹಾಯ ಮಾಡಿದ್ದಾರೆ. ಅಲ್ಲದೇ 51 ಕೋಟಿ ರೂ. ಪರಿಹಾರ ಸಾಮಗ್ರಿ ಕಳುಹಿಸುವ ವಾಗ್ದಾನ ಮಾಡಿದ್ದಾರೆ. ಇದೆಲ್ಲಾ ಮುಖೇಶ್ ಅಂಬಾನಿ ಬಗ್ಗೆ ಸಾರ್ವಜನಿಕರಿಗೆ ಗೊತ್ತಿರುವ ಮಾಹಿತಿ. ಆದರೆ ಅಂಬಾನಿ ಮತ್ತು ಅವರ ಕುಟುಂಬದ ಕುರಿತು ಬಹುತೇಕರಿಗೆ ಗೊತ್ತಿರದ ಅನೇಕ ಸಂಗತಿಗಳಿವೆ.

ಅದೆನಪ್ಪಾ ಅಂತಾ ಸಂಗತಿಗಳು ಅಂತೀರಾ?. ಮುಖೇಶ್ ಅಂಬಾನಿ ಅವರ ಒಂದು ನಿಮಿಷದ ವೇತನ ಎಷ್ಟು ಅಂತಾ ನಿಗೆ ಗೊತ್ತಾ?. ದಿನದ ವೇತನದ ಬಗ್ಗೆ ಮಾಹಿತಿ ಇದೆಯಾ?.

ಮುಖೇಶ್ ಅಂಬಾನಿ ಅವರ ಒಂದು ನಿಮಿಷದ ಸಂಬಳ 2.35 ಲಕ್ಷ ರೂ. ಅದರಂತೆ ಮುಖೇಶ್ ಒಂದು ದಿನಕ್ಕೆ ಬರೋಬ್ಬರಿ 1.4 ಕೋಟಿ ರೂ. ಮುಂಬೈನಲ್ಲಿರುವ ಅಂಬಾನಿ ಮನೆ ಎಂಟಿಲೀಯಾ ಬರೋಬ್ಬರಿ 1000 ಕೋಟಿ ರೂ. ಬೆಲೆ ಬಾಳುತ್ತದೆ.  ಅಂಬಾನಿ ಅವರ ಒಡೆತನದಲ್ಲಿ ಒಟ್ಟು ಮೂರು ಪ್ರೈವೆಟ್ ಜೆಟ್‌ಗಳಿವೆ. ಅಂಬಾನಿ ಮತ್ತವರ ಕುಟುಂಬ ಇದೇ ವಿಮಾನದಲ್ಲಿ ಜಗತ್ತಿನ ಯಾವ ಭಾಗಕ್ಕಾದರೂ ಪ್ರಯಾಣಿಸಬಹುದು.