ನವದೆಹಲಿ(ಡಿ.06): ಡಿಜಿಟಲ್‌ ಪೇಮೆಂಟ್‌ ಪ್ರೋತ್ಸಾಹಿಸಲು ಹಿಂದೂಸ್ತಾನ್‌ ಪೆಟ್ರೋಲಿಯಂ ನೂತನ ಕೊಡುಗೆ ಘೋಷಿಸಿದೆ. ಇನ್ಮುಂದೆ ಆ್ಯಪ್‌ನಲ್ಲಿ ಬಿಲ್ ಪಾವತಿಸಿದರೆ ಲೀಟರ್‌ ಪೆಟ್ರೋಲ್‌ ಉಚಿತ ಸಿಗಲಿದೆ. 

ಆಧಾರ್‌ ಆಧಾರಿತ ಪೇಮೆಂಟ್‌ ವ್ಯವಸ್ಥೆ, ಆನ್‌ಲೈನ್‌ ಬ್ಯಾಂಕಿಂಗ್‌, ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಸೇರಿದಂತೆ ಡಿಜಿಟಲ್‌ ವ್ಯವಸ್ಥೆಯಲ್ಲಿ ಹಣ ಪಾವತಿ ಮಾಡುವವರಿಗೆ ಪ್ರತಿ ಸಿಲಿಂಡರ್‌ಗೆ 5 ರೂ. ರಿಯಾಯ್ತಿ ಕೂಡ ಘೋಷಿಸಲಾಗಿದೆ. 

ಸಂಸ್ಥೆಯ HP Re-Fuel ಆ್ಯಪ್ ಡೌನ್‌ಲೋಡ್‌ ಮಾಡಿಕೊಂಡು ಅದರ ಮೂಲಕ ಗ್ಯಾಸ್‌ ಸಿಲಿಂಡರ್‌ನ ಬಿಲ್‌ ಪಾವತಿಸಿದಲ್ಲಿ, ರಿವಾರ್ಡ್‌ ಪಾಯಿಂಟ್‌ ಸಿಗಲಿದೆ ಎಂದು ಸಂಸ್ಥೆ ತಿಳಿಸಿದೆ. ಇದರ ಸಹಾಯದಿಂದ ಹೆಚ್ ಪಿ ಪೆಟ್ರೋಲ್‌ ಬಂಕ್‌ಗಳಲ್ಲಿ 1 ಲೀಟರ್‌ ಉಚಿತ ಪೆಟ್ರೋಲ್ ಪಡೆಯಬಹುದಾಗಿದೆ. ಈ ಕೊಡುಗೆ ಡಿ. 31ರವರೆಗೆ ಮಾತ್ರ ಲಭ್ಯವಿದೆ.