ಅಮರಾವತಿ(ಜು.19): ಮಹತ್ವದ ಬೆಳವಣಿಗೆಯೊಂದರಲ್ಲಿ ಅಮರಾವತಿ ಯೋಜನೆಯಿಂದ ವಿಶ್ವ ಬ್ಯಾಂಕ್ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದೆ.

ಅಮರಾವತಿ ಸುಸ್ಥಿರ ಮೂಲಸೌಕರ್ಯ ಮತ್ತು ಸಾಂಸ್ಥಿಕ ಅಭಿವೃದ್ಧಿ ಯೋಜನೆಯಲ್ಲಿ 300 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲು ನಿರ್ಧರಿಸಿದ್ದ ವಿಶ್ವ ಬ್ಯಾಂಕ್, ಇದೀಗ ಈ ನಿರ್ಧಾರದಿಂದ ಹಿಂದೆ ಸರಿದಿದೆ.

ಈ ಕುರಿತು ಪ್ರತಿಕ್ರಿಯೆಗೆ ನಿರಾಕರಿಸಿರುವ ವಿಶ್ವಬ್ಯಾಂಕ್, ಅಮರಾವತಿ ಯೋಜನೆಯಿಂದ ಹಿಂದೆ ಸರಿಯುವ ತನ್ನ ನಿರ್ಧಾರಕ್ಕೆ ಸೂಕ್ತ ಕಾರಣವನ್ನೂ ತಿಳಿಸಿಲ್ಲ.

ಮೂಲಗಳ ಪ್ರಕಾರ, ಅಮರಾವತಿ ಯೋಜನೆ ವಿರುದ್ಧ ರೈತರು ಭಾರೀ ಪ್ರಮಾಣದಲ್ಲಿ ದೂರು ನೀಡುತ್ತಿರುವದರಿಂದ, ಸರ್ಕಾರ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವವರೆಗೂ ಯೋಜನೆಗೆ ಹೂಡಿಕೆ ಮಾಡದಿರಲು ವಿಶ್ವ ಬ್ಯಾಂಕ್ ನಿರ್ಧರಿಸಿದೆ ಎನ್ನಲಾಗಿದೆ.