Asianet Suvarna News Asianet Suvarna News

ಅಕೌಂಟಲ್ಲಿ ಕೇವಲ 500 ರೂ. ಇದ್ರೂ ಒಂದೇ ವರ್ಷದಲ್ಲಿ 11 ಲಕ್ಷ ಸಾಲ ತೀರಿಸಿದ ದಂಪತಿ!

ಸಾಲ ಅನ್ನೋದು ನೆತ್ತಿ ಮೇಲೆ ತೂಗಾಡುವ ಕತ್ತಿಯಂತೆ. ಯಾವಾಗ ನಮ್ಮ ಪ್ರಾಣ ತೆಗೆಯುತ್ತೆ ತಿಳಿಯೋದಿಲ್ಲ. ಸಾಲ ಮಾಡೋದೇ ತಪ್ಪು. ಮಾಡಿದ್ರೆ ಅದನ್ನು ತೀರಿಸುವ ಕಲೆ ಗೊತ್ತಿರಬೇಕು. ಹೊಸ ಹಣದ ಮೂಲ ಸಿಗ್ತಿಲ್ಲ ಎಂದಾಗ ಈ ದಂಪತಿ ಟಿಪ್ಸ್ ಫಾಲೋ ಮಾಡಿ.
 

Woman Pay Off Eleven Lakh Rupees Loan Sell Rubbish For Cash Buy Second Hand Clothes To Saving Tips roo
Author
First Published May 22, 2024, 12:16 PM IST

ಜನರಿಗೆ ಖರ್ಚಿನ ಮೇಲೆ ಹಿಡಿದ ಇರೋದಿಲ್ಲ. ಖರ್ಚಿಗಿಂತ ಸಂಬಳ ಹೆಚ್ಚಿದ್ದರೆ ಜೀವನ ಸುಲಭ. ಅದೇ ಸಂಬಳ ಕಡಿಮೆ ಇದ್ದು, ಖರ್ಚು ಹೆಚ್ಚಾದಾಗ ಸಾಲದ ಹೊರೆಯಲ್ಲಿ ಸಿಕ್ಕಿ ಬೀಳ್ತೇವೆ. ಒಬ್ಬೊಬ್ಬರ ಬಳಿ ಈಗ ಮೂರ್ನಾಲ್ಕು ಕ್ರೆಡಿಟ್ ಕಾರ್ಡ್ (Credit Card) ಇರುತ್ತೆ. ಒಂದರ ಲಿಮಿಟ್ ಮೀರಿದ ಮೇಲೆ ಜನರು ಇನ್ನೊಂದು ಕ್ರೆಡಿಟ್ ಕಾರ್ಡ್ ಉಜ್ಜುತ್ತಾರೆ. ಕ್ರೆಡಿಟ್ ಕಾರ್ಡ್ ನಿಂದ ಹಣ ಖರ್ಚಾಗುವ ಕಾರಣ ನಮಗೆ ಆ ಕ್ಷಣಕ್ಕೆ ಹಣ ಖರ್ಚಾದ ಅನುಭವ ಆಗೋದಿಲ್ಲ. ಆದ್ರೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡೋವಾಗ ಇಷ್ಟೊಂದು ಹಣ ಖರ್ಚಾಗಿದ್ಯಾ ಎಂದು ಅಚ್ಚರಿಗೊಳ್ತೇವೆ. ಇಲ್ಲೊಂದು ದಂಪತಿಯ ಗಳಿಕೆ ಏನೂ ಕಡಿಮೆ ಇರಲಿಲ್ಲ. ಬರೋಬ್ಬರಿ 2.5 ಲಕ್ಷ ರೂಪಾಯಿ ತಿಂಗಳ ಸಂಪಾದನೆ ಇತ್ತು. ಆದ್ರೆ ಖಾತೆಯಲ್ಲಿ ಇದ್ದಿದ್ದು 500 ರೂಪಾಯಿ ಮಾತ್ರ. ಅಷ್ಟೇ ಅಲ್ಲ ತಲೆಮೇಲೆ 11 ಲಕ್ಷ ಸಾಲವಿತ್ತು. ಎಲ್ಲವನ್ನೂ ಅವರು ಒಂದೇ ವರ್ಷದಲ್ಲಿ ತೀರಿಸಿ ಈಗ ನಿರಾಳವಾಗಿದ್ದಾರೆ. 11 ಲಕ್ಷ ರೂಪಾಯಿ ಸಾಲವನ್ನು ಹೇಗೆ ತೀರಿಸಿದ್ವಿ ಎಂಬುದನ್ನು ಅವರು ಜನರಿಗೆ ತಿಳಿಸಿದ್ದಾರೆ.  

ಈ ದಂಪತಿ ವಾಸವಾಗಿದ್ದು ಇಂಗ್ಲೆಂಡ್‌ (England)ನ ಲೀಸೆಸ್ಟರ್‌ ನಲ್ಲಿ. ಮಹಿಳೆಗೆ 28 ವರ್ಷ. ಹೆಸರು ಕ್ಲೋಯ್ ಗಾಡ್ಲ್ಯಾಂಡ್. ಪತಿಗೆ 33 ವರ್ಷ. ಪತಿ ಜಾಕ್ ಗಾರ್ಡನ್ ಜಿಮ್ ಟ್ರೇನರ್ (Gym trainer) ಆಗಿ ಕೆಲಸ ಮಾಡ್ತಾನೆ. ಇವರಿಬ್ಬರಿಗೆ 2 ವರ್ಷದ ಮಗಳಿದ್ದಾಳೆ. ದಂಪತಿ 15 ವರ್ಷದ ಮಗುವಿನ ಜವಾಬ್ದಾರಿ ಹೊತ್ತಿದ್ದಾರೆ. ಅಂದ್ರೆ ಆ ಮಗುವಿನ ಎಲ್ಲ ಖರ್ಚು, ಶಿಕ್ಷಣವನ್ನು ಇವರೇ ನೋಡಿಕೊಳ್ತಿದ್ದಾರೆ. ಜಾಕ್ ಗಾರ್ಡನ್ ವರ್ಷದ ಪ್ಯಾಕೇಜ್ 30 ಲಕ್ಷ. ಅಂದ್ರೆ ತಿಂಗಳಿಗೆ 2.5 ಲಕ್ಷ ಸಂಬಳ ಸಿಗುತ್ತದೆ. ಭಾರತದಲ್ಲಿ ನಮಗೆ ಇದು ಅತಿ ಹೆಚ್ಚಾದ್ರೆ ಇಂಗ್ಲೆಂಡ್ ನಲ್ಲಿ ಇದು ತುಂಬಾ ಕಡಿಮೆ ಸಂಬಳ. 

Zomato ಸ್ಟಾರ್ಟ್‌ ಮಾಡ್ತೀನಿ ಅಂದಾಗ ನನ್ನ ತಂದೆಯೇ ಅನುಮಾನ ಪಟ್ಟಿದ್ರು ಎಂದ ದೀಪೇಂದರ್‌ ಗೋಯೆಲ್‌!

ಸಂಬಳ (Salary) ಕಡಿಮೆ ಇರುವ ಕಾರಣ ದಂಪತಿ 2 ಬೆಡ್ ರೂಮಿನ ಚಿಕ್ಕ ಮನೆಯಲ್ಲಿ ಬಾಡಿಗೆ ವಾಸ ಮಾಡ್ತಿದ್ದಾರೆ. ತಿಂಗಳಿಗೆ 750 ಪೌಂಡ್ ಅಂದ್ರೆ 79 ಸಾವಿರ ರೂಪಾಯಿ ಬಾಡಿಗೆ ಪಾವತಿ ಮಾಡ್ತಾರೆ. ನಿತ್ಯದ ಖರ್ಚಿಗಾಗಿ ಕ್ರೆಡಿಟ್ ಕಾರ್ಡ್ ಉಜ್ಜುತ್ತಿದ್ದ ಇವರಿಗೆ ಒಂದು ದಿನ ಶಾಕ್ ಆಯ್ತು. ಸೇವಿಂಗ್ ಅಕೌಂಟ್ ನಲ್ಲಿ ಬರೀ 500 ರೂಪಾಯಿ ಇತ್ತು. ಮೂರು ಕ್ರೆಡಿಟ್ ಕಾರ್ಡ್ ಬಿಲ್ ಹಾಗೂ ಬೇರೆ ಮೂರು ಲಕ್ಷ ಸಾಲ ಸೇರಿ ಒಟ್ಟೂ 11 ಲಕ್ಷ ಸಾಲ ಅವರ ಮೇಲಿತ್ತು. ಇದನ್ನು ನೋಡಿ ಕ್ಲೋಯ್ ಗಾಡ್ಲ್ಯಾಂಡ್ ಹಾಗೂ ಆಕೆ ಪತಿ ದಂಗಾದ್ರು. 

ಇವರ ಪ್ಲಾನ್ ಮಾಡಿದ್ರೆ ನೀವು ಹಣ ಉಳಿಸಬಹುದು : ಹೆಚ್ಚು ಸಂಪಾದನೆ ಮಾರ್ಗ ಸಿಗದ ಕಾರಣ ಅವರು ಖರ್ಚು (Expenses) ಕಡಿಮೆ ಮಾಡುವ ನಿರ್ಧಾರಕ್ಕೆ ಬಂದ್ರು. ಇದೇ ಕಾರಣಕ್ಕೆ ಇಬ್ಬರೂ ಜಿಪುಣರಾದ್ರು. ಒಂದು ವರ್ಷಗಳ ಕಾಲ ಇಬ್ಬರು ಯಾವುದೇ ಹೊಸ ವಸ್ತುವನ್ನು ಅವರು ಖರೀದಿಸಲಿಲ್ಲ. ಅಗತ್ಯ ಬಟ್ಟೆಯನ್ನು ಚಾರಿಟಿ ಅಥವಾ ಸೆಕೆಂಡ್ ಹ್ಯಾಂಡ್ (Second Hand) ಬಟ್ಟೆ ಅಂಗಡಿಯಿಂದ ಖರೀದಿಸುತ್ತಿದ್ದರು. ಮಗುವಿನ ಬಟ್ಟೆ ಮತ್ತು ಆಟಿಕೆಯನ್ನು ಕೂಡ ಅವರು ಸೆಕೆಂಡ್ ಹ್ಯಾಂಡ್ ಶಾಪ್‌ನಿಂದ ಖರೀದಿಸುತ್ತಿದ್ದರು. ಕ್ಲೋಯ್ ಗಾಡ್ಲ್ಯಾಂಡ್, ಸ್ನೇಹಿತರಿಗಾಗಿ ಬಟ್ಟೆ ವಿನಿಮಯ ಪಾರ್ಟಿ ಏರ್ಪಡಿಸಿದ್ದಳು. ಮನೆಗೆ ಬರುವ ಸ್ನೇಹಿತರು ತಮಗಿಷ್ಟವಿಲ್ಲದ ಬಟ್ಟೆಯನ್ನು ತಂದು ಬೇರೆಯವರಿಗೆ ನೀಡ್ತಿದ್ದರು. ಇದರಿಂದ ಹೊಸ ಬಟ್ಟೆ ಖರೀದಿ ಮಾಡುವ ಅಗತ್ಯ ಕ್ಲೋಯ್ ಗಾಡ್ಲ್ಯಾಂಡ್ ಗೆ ಬರಲಿಲ್ಲ. 

ಹೋದ ಡ್ರೈವರ್ ಕೆಲಸ, ಕೈಹಿಡಿದ ಮುದ್ರಾ ಯೋಜನೆ;ಡೈರಿ ಉದ್ಯಮದಿಂದ ತಿಂಗಳಿಗೆ 80 ಸಾವಿರ ಗಳಿಸುತ್ತಿರುವ ಬಿಹಾರದ ವ್ಯಕ್ತಿ

ಇಷ್ಟಕ್ಕೆ ಕ್ಲೋಯ್ ಗಾಡ್ಲ್ಯಾಂಡ್ ನಿಲ್ಲಲಿಲ್ಲ. ಮನೆಯಲ್ಲಿರುವ ಬೇಡದ ವಸ್ತುಗಳಿಂದ ಹಾಗೂ ಬೇರೆಯವರ ಮನೆಯ ಕಸದ ಬುಟ್ಟಿಯಲ್ಲಿರುವ ಬೇಡದ ವಸ್ತುಗಳಿಂದ ಉಡುಗೊರೆ ವಸ್ತುಗಳನ್ನು ತಯಾರಿಸಿ ಆನ್ಲೈನ್ ನಲ್ಲಿ ಮಾರುತ್ತಿದ್ದಳು. ಹೀಗೆ ಮಿತವ್ಯಯ ಮಾಡಿ ಹಣ ಉಳಿಸಿದ ಕ್ಲೋಯ್ ಗಾಡ್ಲ್ಯಾಂಡ್ ದಂಪತಿ 12 ತಿಂಗಳಲ್ಲಿ ಕ್ರೆಡಿಟ್ ಕಾರ್ಡ್ ಸಾಲ ತೀರಿಸಿ, ಖುಷಿಯಾಗಿದ್ದಾರೆ. ಭವಿಷ್ಯದಲ್ಲಿ ಕ್ರೆಡಿಟ್ ಕಾರ್ಡ್ ಬಳಸದಿರುವ ನಿರ್ಧಾರಕ್ಕೆ ಬಂದಿದ್ದಾರೆ. 

Latest Videos
Follow Us:
Download App:
  • android
  • ios