Earning Money : ಇಂದೆಂಥ ಕೆಲಸ..! ರಾಜಕುಮಾರಿ ಡ್ರೆಸ್ ಧರಿಸಿ ಲಕ್ಷ ಗಳಿಸ್ತಾಳೆ ಈಕೆ
ಪ್ರಪಂಚದಲ್ಲಿ ಹಣ ಗಳಿಸೋಕೆ ನಾನಾ ದಾರಿ ಇದೆ. ಜನರು ತಮ್ಮದೇ ಮಾರ್ಗದಲ್ಲಿ ಹಣ ಸಂಪಾದನೆ ಮಾಡ್ತಾರೆ. ಈ ಮಹಿಳೆ ಬಾಲ್ಯದ ಕನಸನ್ನು ನನಸು ಮಾಡಿಕೊಳ್ಳುವ ಜೊತೆಗೆ ಬ್ಯಾಂಕ್ ಖಾತೆ ತುಂಬಿಸಿಕೊಳ್ತಿದ್ದಾಳೆ.
ಚಿಕ್ಕ ಮಕ್ಕಳು ಯಾವ ಕಾರ್ಟೂನ್ ನೋಡುತ್ತಾರೋ ಅವರಂತೆ ನಾವೂ ಆಗಬೇಕೆಂದು ಕನಸು ಕಾಣ್ತಾರೆ. ಟಿವಿ, ಮೊಬೈಲ್ ಗಳಲ್ಲಿ ಬರುವ ಹಲವು ಬಗೆಯ ಕಾರ್ಟೂನ್ ಗಳನ್ನು ನೋಡಿಕೊಂಡು ಅವರು ಧರಿಸುವಂತಹ ಬಟ್ಟೆ ಬೇಕೆಂದು ಹಠಹಿಡಿಯುತ್ತಾರೆ. ಗಂಡುಮಕ್ಕಳು ಸ್ಪೈಡರ್ ಮ್ಯಾನ್, ಸುಪರ್ ಮ್ಯಾನ್ ಡ್ರೆಸ್ ಹಾಕಲು ಇಷ್ಟಪಟ್ಟರೆ ಹೆಣ್ಣು ಮಕ್ಕಳು ಬಾರ್ಬಿ ಅಥವಾ ರಾಜಕುಮಾರಿಯರ ಡ್ರೆಸ್ ಗಳನ್ನು ಹಾಕಿಕೊಳ್ಳಲು ಬಯಸುತ್ತಾರೆ.
ಚಿಕ್ಕವರಿರುವಾಗ ಇರುವ ಇಂತಹ ಆಸೆಗಳು ದೊಡ್ಡವರಾಗುತ್ತಿದ್ದಂತೆ ದೂರವಾಗುತ್ತದೆ. ಹಾಗೊಮ್ಮೆ ದೊಡ್ಡವರಾದ ಮೇಲೂ ಚಿಕ್ಕಮಕ್ಕಳಂತೆ ಬಟ್ಟೆ (Clothes) ಧರಿಸಿದರೆ ಅದು ಬಾಲಿಶ ಎನಿಸುತ್ತದೆ. ಆದರೆ ಕೆಲವರು ದೊಡ್ಡವರಾದ ಮೇಲೂ ಇಂತಹ ಬಟ್ಟೆಗಳನ್ನು ಧರಿಸುವುದನ್ನು ಇಷ್ಟಪಡುತ್ತಾರೆ. ಅಮೆರಿಕ (America) ದ ಲಾಸ್ ಎಂಜಲೀಸ್ ನಲ್ಲಿರುವ 27 ವರ್ಷದ ಮಾಯಾ ಬ್ರೌನ್ ಎನ್ನುವ ಯುವತಿಗೆ ಬಾಲ್ಯದಿಂದಲೂ ಡಿಜ್ನಿ (Disney) ಪಾತ್ರಗಳನ್ನು ಇಷ್ಟಪಡುತ್ತಿದ್ದಳು. ಅವಳು ಶಾಲೆಗೆ ಹೋಗುವ ಸಮಯದಲ್ಲಿ ನಾನು ಪ್ರೊಫೆಶನಲ್ ರಾಜಕುಮಾರಿ ಆಗಬೇಕೆಂದು ವಿಚಾರ ಮಾಡುತ್ತಿದ್ದಳು. ಚಿಕ್ಕಂದಿನಲ್ಲಿ ಅವಳಿಗಿದ್ದ ಆಸೆ ಈಗ ನೆರವೇರಿದೆ. ಈಗ ಏಕೆ ಪ್ರೊಫೆಶನಲ್ ರಾಜಕುಮಾರಿಯಾಗಿ ಗಂಟೆಗೆ ಸಾವಿರ ಸಾವಿರ ರೂಪಾಯಿ ಹಣ ಗಳಿಸುತ್ತಿದ್ದಾಳೆ.
ಅನಂತ್ ಅಂಬಾನಿ ಮದುವೆ ಸಮಾರಂಭದಿಂದ ಬೇಗ ನಿರ್ಗಮಿಸಿದ್ದೇಕೆ ರಿಹಾನ್ನಾ?
ರಾಜಕುಮಾರಿಯಂತೆ ಬಟ್ಟೆ ಧರಿಸಿವುದೇ ಈಕೆಯ ಕೆಲಸ : ಮಾಯಾಗೆ ಚಿಕ್ಕಂದಿನಿಂದಲೂ ರಾಜಕುಮಾರಿಯಂತೆ ರೆಡಿಯಾಗುವುದೆಂದರೆ ಬಹಳ ಇಷ್ಟವಾಗಿತ್ತು. ಈಕೆ ತಾನು ಯಾವಾಗಲೂ ರಾಜಕುಮಾರಿಯಂತೆಯೇ ಕಾಣಿಸಬೇಕು ಎನ್ನುವ ಬಯಕೆ ಇತ್ತು. ಶಾಲೆಯಲ್ಲಿ ಫ್ಯಾನ್ಸಿ ಡ್ರೆಸ್ ಸ್ಪರ್ಧೆ ಇದ್ದಾಗಲೂ ಈಕೆ ರಾಜಕುಮಾರಿಯಂತೇ ಶೃಂಗಾರ ಮಾಡಿಕೊಳ್ಳುತ್ತಿದ್ದಳು ಎಂದು ಡೈಲಿ ಸ್ಟಾರ್ ನ್ಯೂಸ್ ವರದಿ ಮಾಡಿದೆ. ಚಿಕ್ಕಂದಿನಲ್ಲಿರುವ ಈಕೆಯ ಆಸೆ ಈಗ ಆಕೆಯ ನೌಕರಿಯಾಗಿ ಬದಲಾಗಿದೆ. ರಾಜಕುಮಾರಿಯಾಗಿ ಸಿಂಗರಿಸಿಕೊಳ್ಳುವುದೇ ಈಕೆಯ ಜಾಬ್ ಆಗಿದೆ. 2022 ಫೆಬ್ರವರಿಯಲ್ಲಿ ಮಾಯಾ ಬ್ರೌನ್ ಈ ಹೊಸ ರೀತಿಯ ನೌಕರಿಯನ್ನು ಆರಂಭಿಸಿದಳು. ಪ್ರಿನ್ಸೆಸ್ ನಂತೆ ರೆಡಿಯಾಗಿ ಪಾರ್ಟಿಗಳಿಗೆ ಹೋಗಿ ಅಲ್ಲಿ ಮಕ್ಕಳಿಗೆ ಮನರಂಜನೆ ನೀಡುವುದೇ ಮಾಯಾ ಬ್ರೌನ್ ಕೆಲಸವಾಗಿದೆ. ಈ ಕೆಲಸಕ್ಕೆ ಈಕೆಗೆ ಒಳ್ಳೆಯ ವರಮಾನವೂ ಸಿಗುತ್ತದೆ. ತನ್ನ ನೌಕರಿಯನ್ನು ಹೆಚ್ಚು ಪ್ರೀತಿಸುವ ಮಾತಾ ಬ್ರೌನ್ ಒಮ್ಮೆ ಅಲಾವುದ್ದೀನ್ ಕಾರ್ಟೂನಿನ ಜ್ಯಾಸ್ಮೀನ್ ಆದರೆ ಮತ್ತೊಮ್ಮೆ ಮೋನಾ ಆಗುತ್ತಾಳೆ. ಹೀಗೆ ಡಿಸ್ನಿ ಕಾರ್ಟೂನ್ ನಲ್ಲಿ ಬರುವ ರಾಜಕುಮಾರಿಯರ ಪಾತ್ರಗಳನ್ನು ಈಕೆ ಧರಿಸುತ್ತಾಳೆ.
ನಿಜವಾದ ರಾಜಕುಮಾರಿಯೇ ಎದುರು ನಿಂತಿದ್ದಾಳೆ ಎನಿಸುವಷ್ಟು ಸುಂದರವಾಗಿ ಕಾಣುವ ಮಾಯಾಗೆ ತಯಾರಾಗಲು ಸುಮಾರು 1 ಗಂಟೆ ಸಮಯ ಬೇಕು. ಹೀಗೆ ರೆಡಿಯಾದ ಮೇಲೆ ಈಕೆ ಪಾರ್ಟಿಗೆ ಹೋಗಿ ಅಲ್ಲಿನ ಮಕ್ಕಳೊಂದಿಗೆ ಆಟವಾಡುತ್ತ ಸಮಯ ಕಳೆಯುತ್ತಾಳೆ. ಬರ್ತಡೇ ಪಾರ್ಟಿಗಳಾದಾಗ ಮಕ್ಕಳು ಮಾಯಾ ಬ್ರೌನ್ ನೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸುತ್ತಾರೆ. ಈಕೆ ಮಕ್ಕಳಿಗೆ ಕಥೆಗಳನ್ನು ಹೇಳುತ್ತಾಳೆ ಮತ್ತು ಅವರೊಂದಿಗೆ ಫೊಟೋಗಳನ್ನು ಕೂಡ ತೆಗೆಸಿಕೊಳ್ಳುತ್ತಾಳೆ. ಅಂತಹ ಪಾರ್ಟಿಗಳಲ್ಲಿ 1 ಗಂಟೆಗೆ ಈಕೆ ಸುಮಾರು 8000 ರೂಪಾಯಿಗಳಿಗೂ ಹೆಚ್ಚು ಗಳಿಸುತ್ತಾಳೆ. ಒಂದು ದಿನಕ್ಕೆ ಈಕೆ 2 ಪಾರ್ಟಿಗಳಲ್ಲಿ ಭಾಗಿಯಾಗುತ್ತಾಳೆ.
ನಟಿ ಪ್ರಿಯಾಂಕಾ ಚೋಪ್ರಾ ಬುದ್ದಿಮಾತಿಗೆ ತಲೆದೂಗಿದ ಹಾಲಿವುಡ್; ಅಂಥದ್ದೇನು ಹೇಳಿದ್ರು ನೋಡ್ರಿ!
ಮಕ್ಕಳಿಗೆ ಇದರಿಂದ ವಿಶೇಷ ಅನುಭವವಾಗುತ್ತದೆ. ಡಿಸ್ನಿ ಲ್ಯಾಂಡ್ ಗೆ ಹೋಗಲು ಸಾಧ್ಯವಾಗದ ಮಕ್ಕಳು ನನ್ನನ್ನು ನೋಡಿ ಬಹಳ ಸಂತೋಷಪಡುತ್ತಾರೆ. ಅಂತಹ ಕ್ಷಣಗಳು ನನಗೆ ವಿಶೇಷ ಅನುಭವ ನೀಡುತ್ತದೆ. ಮಕ್ಕಳಲ್ಲಿ ಕುತೂಹಲ, ಸಂತೋಷ ಮೂಡಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ಮಾಯಾ ಬ್ರೌನ್ ಹೇಳುತ್ತಾಳೆ. ಮಕ್ಕಳು ಹೋದ ಕಡೆಗಳಲ್ಲಿ ಇಂತಹ ಕಾರ್ಟೂನ್ ಪಾತ್ರಗಳು ಇದ್ದರೆ ಅದೇ ಮಕ್ಕಳಿಗೆ ಪ್ರಮುಖ ಆಕರ್ಷಣೆಯಾಗುತ್ತದೆ. ಮಕ್ಕಳು ಅಂತಹ ಕಾರ್ಟೂನ್ ಪಾತ್ರಗಳೊಂದಿಗೆ ಸಂತೋಷದಿಂದ ಕಾಲಕಳೆಯುತ್ತಾರೆ. ಮಕ್ಕಳಿಗೂ ಇದು ವಿಶೇಷ ಅನುಭವವನ್ನು ನೀಡುತ್ತದೆ.