UPI ಲೈಟ್: ಆನ್‌ಲೈನ್ ಪಾವತಿಯಲ್ಲಿ ಹೊಸ ಕ್ರಾಂತಿ
UPI ಲೈಟ್ ಕಡಿಮೆ ಮೌಲ್ಯದ ವಹಿವಾಟುಗಳನ್ನು ಸರಳಗೊಳಿಸುತ್ತದೆ. ಇಂಟರ್ನೆಟ್ ಸಂಪರ್ಕವಿಲ್ಲದೆ ವೇಗದ, ಆಫ್‌ಲೈನ್ ಪಾವತಿಗಳನ್ನು ಸುಲಭಗೊಳಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಪಾವತಿಯನ್ನು ಉತ್ತೇಜಿಸುತ್ತದೆ.
ಕಳೆದ ಒಂದು ದಶಕದಲ್ಲಿ ಆನ್ಲೈನ್ ಪೇಮೆಂಟ್ ಪ್ರಮಾಣ ಹೆಚ್ಚಳಗೊಂಡಿದೆ. ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಡಿಜಿಟಲ್ ಪೇಮೆಂಟ್ನಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದೆ. ಇಂದು ಜನರು ಸಣ್ಣ ಪಾವತಿಯೂ ಸೇರಿದಂತೆ ಹಣ ವರ್ಗಾವಣೆಗೆ ಯುಪಿಐ ಬಳಕೆ ಮಾಡುತ್ತಿದ್ದಾರೆ. ಡಿಜಿಟಲ್ ನಗದು ವರ್ಗಾವಣೆ, ಪೇಮೆಂಟ್ ಯುಪಿಐ ಮೂಲಕ ಮಾಡೋದು ತುಂಬಾ ಸರಳವಾಗಿದೆ. ನೈಜ ಸಮಯದಲ್ಲಿಯೇ ಹಣ ವರ್ಗಾವಣೆಯಾಗುತ್ತದೆ. ಇದೀಗ ಭಾರತೀಯ ರಾಷ್ಟ್ರೀಯ ಪಾವತಿಗಳ ನಿಗಮ UPI Lite ಪರಿಚಯಿಸಿದ್ದು, ಯುಪಿಐನಲ್ಲಿದ್ದ ಸಮಸ್ಯ ಮತ್ತು ಸವಾಲುಗಳನ್ನು ಬಗೆಹರಿಸುತ್ತದೆ. ಇಂಟರ್ನೆಟ್ ಸಂಪರ್ಕವಿಲ್ಲದೆ ವೇಗವಾದ, ಕಡಿಮೆ ಮೌಲ್ಯದ ವಹಿವಾಟುಗಳ ಮೇಲೆ ಕೇಂದ್ರೀಕರಿಸಲಾಗಿದೆ. UPI ಲೈಟ್ ಭವಿಷ್ಯದಲ್ಲಿ ಆನ್ಲೈನ್ ಪೇಮೆಂಟ್ ಬಹುದೊಡ್ಡ ಪಾವತಿ ವಿಧಾನವಾಗಲಿದೆ. ಈ ಲೇಖನ ಯುಪಿಐ ಲೈಟ್ ಎಂದರೇನು? ಬಳಕೆದಾರರಿಗೆ ಸಿಗುವ ಲಾಭಗಳೇನು ಎಂಬುದರ ಕುರಿತ ವಿವರವಾದ ಮಾಹಿತಿಯನ್ನು ಒಳಗೊಂಡಿದೆ.
ಯುಪಿಐ ಲೈಟ್ ಎಂದರೇನು?
ಯುಪಿಐ ಲೈಟ್ ಎಂಬುವುದು ಯುಪಿಐನ ಸರಳೀಕೃತವಾದ ವಿಧಾನವಾಗಿದೆ. ಕಡಿಮೆ ಮೌಲ್ಯದ ವಹಿವಾಟುಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಮಾಡಲು ಯುಪಿಐ ಲೈಟ್ ಪರಿಚಯಿಸಲಾಗಿದೆ. ಯುಪಿಐನಲ್ಲಿ ಎಲ್ಲಾ ವಿಧದ ಪೇಮೆಂಟ್ ಮಾಡಬಹುದಾಗಿದೆ. ಆದರೆ ಚಿಕ್ಕ ಪೇಮೆಂಟ್ಗಳಲ್ಲಿ ಕೊಂಚ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದವು. ಈ ಸಮಸ್ಯೆ ನಿವಾರಿಸುವ ಉದ್ದೇಶದಿಂದ ಯುಪಿಐನಿಂದ ಸುಧಾರಿತ ಯುಪಿಐ ಲೈಟ್ ಪರಿಚಯಿಸಲಾಗಿದೆ.
UPI ಲೈಟ್ ಬಳಕೆದಾರರಿಗೆ ಸಣ್ಣ ವಹಿವಾಟುಗಳನ್ನು ನಡೆಸಲು ಅನುಮತಿಸುತ್ತದೆ. ಇಂಟರ್ನೆಟ್ ಸೌಲಭ್ಯವಿಲ್ಲದೇ 200 ರೂಪಾಯಿವರೆಗೂ ಪೇಮೆಂಟ್ ಮಾಡಬಹುದು. ಸ್ಲೋ ನೆಟ್ವರ್ಕ್ ಅಥವಾ ನೆಟ್ವರ್ಕ್ ರಹಿತ (ಆಫ್ಲೈನ್ ಮೋಡ್) ಪ್ರದೇಶಗಳಲ್ಲಿಯೂ ಯುಪಿಐ ಲೈಟ್ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ಯುಪಿಐ ಲೈಟ್ ಅನ್ನು ಗೇಮ್ ಚೇಂಜರ್ ಎಂದು ಬಣ್ಣಿಸಲಾಗುತ್ತಿದೆ. ಸಾಂಪ್ರದಾಯಿಕ ಯುಪಿಐ ಸಿಸ್ಟಮ್ನಲ್ಲಿನ ಸಮಸ್ಯೆಗಳನ್ನು ಯುಪಿಐ ಲೈಟ್ ಬಗೆಹರಿಸುತ್ತದೆ.
1.ನೆಟ್ವರ್ಕ್ ಅವಲಂಬನೆ
ಯಾವುದೇ ಯುಪಿಐ ವಹಿವಾಟು ನಡೆಸಬೇಕಾದ್ರೆ ಇಂಟರ್ನೆಟ್ ಸಂಪರ್ಕ ಬೇಕು. ಸ್ಲೋ ನೆಟ್ವರ್ಕ್ ಪ್ರದೇಶದಲ್ಲಿ ಪೇಮೆಂಟ್ ಸಮಯ ತೆಗೆದುಕೊಳ್ಳುತ್ತದೆ. ಆದ್ರೆ ಈ ಸಮಸ್ಯೆಯನ್ನು ಅಂದ್ರೆ ಕಡಿಮೆ ಪಾವತಿ ವೇಳೆ UPI ಲೈಟ್ ನಿವಾರಿಸುತ್ತದೆ. ಆಫ್ಲೈನ್ನಲ್ಲಿಯೇ UPI ಲೈಟ್ ಪಾವತಿ ಮಾಡಬಹುದಾಗಿದೆ. ಇದು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಲಾಭದಾಯಕವಾಗರಲಿದೆ. ಪ್ರಯಾಣದ ಸಂದರ್ಭದಲ್ಲಿಯೂ ನೆಟ್ವರ್ಕ್ ಸಮಪರ್ಕವಾಗಿರಲ್ಲ. ಈ ಸಂದರ್ಭದಲ್ಲಿಯೂ ಯುಪಿಐ ಲೈಟ್ ಬಳಕೆ ಮಾಡಬಹುದು.
2.ವೇಗದ ವಹಿವಾಟು
ಕೆಲವೊಮ್ಮೆ ಯುಪಿಐ ಪೇಮೆಂಟ್ ಮಾಡುವ ಸಂದರ್ಭದಲ್ಲಿ ಸರ್ವರ್ ಜಾಮ್ನಿಂದಾಗಿ ಸಮಸ್ಯೆ ಆಗುತ್ತಿರುತ್ತದೆ. ಅತಿಹೆಚ್ಚು ಜನಸಂದಣಿ ಹೊಂದಿರುವ ಪ್ರದೇಶಗಳಲ್ಲಿ ಯುಪಿಐ ಕಾರ್ಯದ ವೇಗ ಕಡಿಮೆಯಾಗತ್ತದೆ. ಆದರೆ UPI ಲೈಟ್ ಸಣ್ಣ ವಹಿವಾಟುಗಳನ್ನು ವೇಗ ಮತ್ತು ಕ್ಷಿಪ್ರವಾಗಿ ಮಾಡುತ್ತದೆ. ಸರ್ವರ್ ಸ್ಲೋ ಇದ್ದರೂ UPI ಲೈಟ್ ಕೆಲಸ ಮಾಡುತ್ತದೆ.
3.ನೆಟ್ವರ್ಕ್ ಎರರ್ ಆದ್ರೂ ಸುರಕ್ಷಿತ ಪೇಮೆಂಟ್
ಸದ್ಯದ ಯುಪಿಐ ಪೇಮೆಂಟ್ಗಳಲ್ಲಿ ನೆಟ್ವರ್ಕ್ ಅಥವಾ ಸರ್ವರ್ ಸಮಸ್ಯೆಯುಂಟಾದ್ರೆ ಯಾವುದೇ ರೀತಿಯ ಪೇಮೆಂಟ್ ಮಾಡಲು ಸಾಧ್ಯವಾಗಲ್ಲ ಎಂಬ ದೂರು ಬಳಕೆದಾರರಿಂದ ಕೇಳಿ ಬರುತ್ತದೆ. ಆದ್ರೆ ಯುಪಿಐ ಲೈಟ್ ಕಡಿಮೆ ಬೆಲೆ ಪೇಮೆಂಟ್ ಸಂದರ್ಭದಲ್ಲಿ ಬ್ಯಾಂಕ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಹಣದ ವಹಿವಾಟು ಫೇಲ್ ಆಗುವ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.
4.ಸಣ್ಣ ಪೇಮೆಂಟ್ಗೆ ಅನುಕೂಲಕರ
ತಿಂಡಿ ಖರೀದಿಸುವುದು, ಸಾರಿಗೆ ಹಣ ಪಾವತಿಸುವುದು ಅಥವಾ ಸಣ್ಣ ಚಿಲ್ಲರೆ ಖರೀದಿಗಳಂತಹ ದಿನನಿತ್ಯದ ಮೈಕ್ರೋ-ಪಾವತಿಗೆ, UPI ಲೈಟ್ ಸಹಾಯಕವಾಗಲಿದೆ. ಸಣ್ಣ ಪಾವತಿಗಳಿಗೆ ಬಳಕೆದಾರರು ಪ್ರತಿಬಾರಿಯೂ ಪಿನ್ ಎಂಟ್ರಿ ಮಾಡುವ ಅವಶ್ಯಕತೆ ಇರಲ್ಲ. ಯುಪಿಐ ವಹಿವಾಟು ಯಾವುದೇ ಅಡ್ಡಿ ಇಲ್ಲದೇ ತ್ವರಿತವಾಗಿ ಮಾಡಬಹುದು.
ಹೇಗೆ ಕೆಲಸ ಮಾಡುತ್ತೆ ಯುಪಿಐ ಲೈಟ್?
ಯುಪಿಐ ಲೈಟ್ ಕೆಲಸ ಸಹ ತುಂಬಾ ಸರಳವಾಗಿ ಮತ್ತು ಪರಿಣಾಮಕಾರಿಯಾಗಿರುತ್ತದೆ. ಈಗಾಗಲೇ ಯುಪಿಐ ಆಪ್ ಹೊಂದಿದ್ದರೆ, ಲೈಟ್ ಆಪ್ ಆಕ್ಟಿವ್ ಮಾಡಿಕೊಳ್ಳಬಹುದು. PhonePe, Bajaj Pay ಮತ್ತು Google Pay ಆಪ್ಗಳೆಲ್ಲವೂ ಯುಪಿಐ ಆಧಾರಿತವಾಗಿರುತ್ತವೆ. ಒಮ್ಮೆ ಯುಪಿಐ ಲೈಟ್ ಆಕ್ಟಿವ್ ಆದ ಬಳಿಕ ಕಡಿಮೆ ಮೌಲ್ಯದ ವಹಿವಾಟುಗಳಿಗಾಗಿ ವ್ಯಾಲೆಟ್ ರಚನೆ ಮಾಡಲಾಗುತ್ತದೆ. ಈ ವ್ಯಾಲೆಟ್ಗೆ ಲಿಂಕ್ ಮಾಡಿರುವ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಬಹುದು. ಒಂದು ಬಾರಿ ಗರಿಷ್ಠ 2 ಸಾವಿರ ರೂ.ವರೆಗೆ ಹಣ ವರ್ಗಾಯಿಸಬಹುದು. ಇದೇ ಹಣವನ್ನು ಕಡಿಮೆ ಪಾವತಿಗಳಿಗೆ ಬಳಸಬಹುದು. ಆಫ್ಲೈನ್ ಸಂದರ್ಭದಲ್ಲಿ ಇದೇ ವ್ಯಾಲೆಟ್ನಿಂದ ನೀವು ಪಾವತಿಸಬಹುದು. ಇದು ಸರ್ವರ್ ದಟ್ಟಣೆಯ ಸಮಸ್ಯೆಯನ್ನು ಸಹ ನಿವಾರಿಸುತ್ತದೆ. ಬಳಕೆದಾರರು ನೆಟ್ವರ್ಕ್ ವ್ಯಾಪ್ತಿಯಿಂದ ಹೊರಗಡೆಯಿದ್ರೂ ಯಾವುದೇ ಅಡಚಣೆಯಿಲ್ಲದೇ UPI ಲೈಟ್ ಬಳಸಿ ಪೇಮೆಂಟ್ ಮಾಡಬಹುದಾಗಿದೆ.
UPI ಲೈಟ್ನ ಪ್ರಯೋಜನಗಳು
1.ಹೆಚ್ಚು ಅನುಕೂಲ
ದಿನಸಿ/ತಿಂಡಿ ಖರೀದಿ, ಬಸ್ ಟಿಕೆಟ್ ಹಣ ಪಾವತಿ ಅಥವಾ ಯಾವುದೇ ವಸ್ತುಗಳ ಖರೀದಿ ವೇಳೆ ಯುಪಿಐ ಲೈಟ್ ಬಳಸಿ ಪೇಮೆಂಟ್ ಮಾಡಬಹುದು. ಇಂತಹ ಚಿಕ್ಕ ಪಾವತಿಗಳಿಗಾಗಿ ಇಂಟರ್ನೆಟ್ ಆನ್ ಮಾಡೋದು ಕಡ್ಡಾಯವಿಲ್ಲ. ಇಂಟರ್ನೆಟ್ ಸಂಪರ್ಕವಿಲ್ಲದೇ ಪೇಮೆಂಟ್ ಮಾಡಲು ಯುಪಿಐ ಲೈಟ್ ಅನುಮತಿಸುತ್ತದೆ. ಚಿಕ್ಕ ವಹಿವಾಟು ಸಂದರ್ಭದಲ್ಲಿ ಪ್ರತಿಬಾರಿಯೂ ಪಿನ್ ಎಂಟ್ರಿ ಮಾಡುವ ಅವಶ್ಯಕತೆ ಇರಲ್ಲ. ಇದು ಬಳಕೆದಾರರ ಸಮಯವನ್ನು ಉಳಿಸುತ್ತದೆ.
2.ಆಫ್ಲೈನ್ ಸಾಮರ್ಥ್ಯ
ಆಫ್ಲೈನ್ನಲ್ಲಿ ಪಾವತಿಗಳನ್ನು ಮಾಡುವಾಗ ಯುಪಿಐ ಲೈಟ್ನ ವ್ಯಾಲೆಟ್ ಆಕ್ಟಿವೇಟ್ ಆಗುತ್ತದೆ. ಇಂಟರ್ನೆಟ್ ರೇಂಜ್ ಕಡಿಮೆ ಇರೋ ಪ್ರದೇಶದಲ್ಲಿಯೂ ನೀವು ಯುಪಿಐ ಲೈಟ್ ಬಳಸಿ ಸಣ್ಣ ಸಣ್ಣ ಪೇಮೆಂಟ್ ಮಾಡಬಹುದು. ಇಂಟರ್ನೆಟ್ ಅಸ್ತಿತ್ವ ಇಲ್ಲದ ಪ್ರದೇಶದಲ್ಲಿಯೂ ಡಿಜಿಟಲ್ ಪೇಮೆಂಟ್ ಮಾಡಲು ಯುಪಿಐ ಲೈಟ್ ಸಹಾಯಕಾರಿಯಾಗಿದೆ.
3.ಮೈಕ್ರೋ-ಪಾವತಿ
UPI ಲೈಟ್ ಮೈಕ್ರೊ-ಪಾವತಿಗಳಿಗೆ ತಕ್ಕಂತೆ ತಯಾರಿಸಲ್ಪಟ್ಟಿದೆ. ಹಾಗಾಗಿ ಅತಿ ಕಡಿಮೆ ಪೇಮೆಂಟ್ಗಳಿಗೆ ಮಾತ್ರ UPI ಲೈಟ್ ಬಳಸಬೇಕು. ಯುಪಿಐ ಲೈಟ್ ಕಡಿಮೆ ಪೇಮೆಂಟ್ಗಾಗಿ ಸಮರ್ಥ ಮತ್ತು ಸುವ್ಯವಸ್ಥಿತ ಪ್ರಕ್ರಿಯೆಯನ್ನು ಹೊಂದಿದೆ. ಸಾಂಪ್ರದಾಯಿಕ ಯುಪಿಐನಲ್ಲಿ ಕೆಲವೊಮ್ಮೆ ಪಿನ್ ಹಾಕಿದರೂ ಪೇಮೆಂಟ್ ಫೇಲ್ ಆಗುವ ಸಾಧ್ಯತೆ ಇರುತ್ತದೆ. ಆದರೆ ಯುಪಿಐ ಲೈಟ್ನಲ್ಲಿ ಪಿನ್ ಹಾಕದೇ ಇದ್ದರೂ ತ್ವರಿತಗತಿಯಲ್ಲಿ ಪೇಮೆಂಟ್ ಆಗುತ್ತದೆ.
4.ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಪಾವತಿಯ ಉತ್ತೇಜನ
ಇಂಟರ್ನೆಟ್ ಇಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ಯುಪಿಐ ಲೈಟ್ ಆನ್ಲೈನ್ ಅಥವಾ ಡಿಜಿಟಲ್ ಪೇಮೆಂಟ್ನ್ನು ಉತ್ತೇಜಿಸುವ ಕೆಲಸವನ್ನು ಮಾಡುತ್ತದೆ. ಇಂಟರ್ನೆಟ್ ಸಂಪರ್ಕವಿಲ್ಲದ ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಇಂದಿಗೂ ನಗದು ವಹಿವಾಟು ನಡೆಸಲಾಗುತ್ತದೆ. UPI ಲೈಟ್ನ ಆಫ್ಲೈನ್ ವೈಶಿಷ್ಟ್ಯ ಜನರನ್ನು ಡಿಜಿಟಲ್ ಪೇಮೆಂಟ್ನತ್ತ ಆಕರ್ಷಿಸುತ್ತದೆ.
5. ಭದ್ರತೆ
UPI ಲೈಟ್ಗೆ ಭದ್ರತೆಯು ಆದ್ಯತೆಯಾಗಿ ಉಳಿದಿದೆ. ಸಾಂಪ್ರದಾಯಿಕ UPI ವ್ಯವಸ್ಥೆಯಂತೆ, UPI ಲೈಟ್ ಸಹ ಬಳಕೆದಾರರಿಗೆ ಭದ್ರತೆಯ ಭರವಸೆಯನ್ನು ನೀಡುತ್ತದೆ. UPI ಪಿನ್ ಮೂಲಕ ವ್ಯಾಲೆಟ್ ರಚನೆ ಮತ್ತು ಹಣ ವರ್ಗಾವಣೆಯನ್ನು ಖಚಿತಪಡಿಸಿಕೊಳ್ಳಬೇಕು. ಕೇವಲ ಅಧಿಕೃತ ಬಳಕೆದಾರರು ಮಾತ್ರ ಯುಪಿಐ ಲೈಟ್ಗೆ ಹಣ ವರ್ಗಾವಣೆ ಮಾಡಬಹುದು. ವಹಿವಾಟಿನ ಮಿತಿ ಚಿಕ್ಕದಾಗಿರುವ ಕಾರಣ ಅಪಾಯದ ಪ್ರಮಾಣವೂ ಸಹ ಕಡಿಮೆಯಾಗಿರುತ್ತದೆ.
UPI ಲೈಟ್ ಯಾಕೆ ಗೇಮ್ ಚೇಂಜರ್?
UPI ಲೈಟ್ನ ಪರಿಚಯವು ಜನರು ಮೊಬೈಲ್ ಪಾವತಿಗಳನ್ನು ವೀಕ್ಷಿಸುವ ವಿಧಾನವನ್ನು ಮರುರೂಪಿಸುವ ಸಾಮರ್ಥ್ಯವನ್ನು ಹೊಂದಿದೆ. ವಿಶೇಷವಾಗಿ ಭಾರತದಂತಹ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಯಲ್ಲಿ UPI ಲೈಟ್ ಸಾಂಪ್ರದಾಯಿಕ ಯುಪಿಐನಲ್ಲಿ ಸಮಸ್ಯೆಗಳನ್ನು ದೂರ ಮಾಡಿದೆ. ಹಾಗಾಗಿ ಯುಪಿಐ ಲೈಟ್ ಅನ್ನು ಗೇಮ್ ಚೇಂಜರ್ ಎಂದು ಕರೆಯಲಾಗುತ್ತಿದೆ.
1.ಹಣಕಾಸಿನ ಸೇರ್ಪಡೆಯ ಹೆಚ್ಚಳ
ಯುಪಿಐ ಲೈಟ್ ಹೆಚ್ಚಿನ ಜನರನ್ನು ಆಕರ್ಷಿಸುತ್ತದೆ. ಇದರಿಂದ ಗ್ರಾಹಕರು ಯುಪಿಐ ವ್ಯಾಲೆಟ್ ಮೂಲಕ ಆನ್ಲೈನ್ನಲ್ಲಿ ಹಣ ವರ್ಗಾವಣೆ ಮಾಡಿಕೊಳ್ಳಬೇಕು. ನಂತರ ಇಂಟರ್ನೆಟ್ ರಹಿತ ಪ್ರದೇಶದಲ್ಲಿ ಸುಲಭವಾಗಿ ಪಾವತಿ ಮಾಡಬಹುದಾಗಿದೆ. ಯುಪಿಐನಲ್ಲಿ ಸಮಸ್ಯೆಗಳನ್ನು ನಿವಾರಣೆ ಮಾಡುತ್ತಿರುವ ಕಾರಣ ಡಿಜಿಟಲ್ ಬ್ಯಾಂಕಿಂಗ್ ಸೇವೆಯನ್ನು ಹೆಚ್ಚಳ ಮಾಡಿದೆ.
2.ನಗದು ರಹಿತ ಆರ್ಥಿಕತೆ ಚಾಲನೆ
ಭಾರತ ಸರ್ಕಾರ ಡಿಜಿಟಲ್ ವ್ಯವಹಾರ ಉತ್ತೇಜನಕ್ಕೆ ಪ್ರೋತ್ಸಾಹ ನೀಡುತ್ತಿದೆ. ನೆಟ್ವರ್ಕ್ ಎರರ್ ಸಮಸ್ಯೆ ಇರೋ ಪ್ರದೇಶದಲ್ಲಿ ಡಿಜಿಟಲ್ ಪೇಮೆಂಟ್ ಹೆಚ್ಚಳಕ್ಕೆ ಯುಪಿಐ ಲೈಟ್ ಸಹಾಯ ಮಾಡುತ್ತದೆ. ಭವಿಷ್ಯದಲ್ಲಿ ಇದು ನಗದು ವಹಿವಾಟಿನ ಮೇಲಿನ ಒಟ್ಟಾರೆ ಅವಲಂಬನೆಯನ್ನು ಕಡಿಮೆ ಮಾಡಬಹುದು. PhonePe ಮತ್ತು Bajaj Finserv ನಂತಹ ಅಪ್ಲಿಕೇಶನ್ಗಳು ಭಾರತದಲ್ಲಿ ಡಿಜಿಟಲ್ ವಹಿವಾಟುಗಳ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿವೆ. ಇದೀಗ ಯುಪಿಐ ಲೈಟ್ ಮತ್ತಷ್ಟು ಬಳಕೆದಾರರನ್ನು ಆಕರ್ಷಿಸುವ ಕೆಲಸ ಮಾಡುತ್ತದೆ. ಆನ್ಲೈನ್ ಪೇಮೆಂಟ್ ಮಾಡೋದರಿಂದ ಬಳಕೆದಾರರಿಗೆ ಕ್ಯಾಶ್ಬ್ಯಾಕ್, ರಿಯಾಯ್ತಿ, ವಿವಿಧ ಖರೀದಿಗಳ ಮೇಲೆ ವಿಶೇಷ ಆಫರ್ ಸಹ ಸಿಗುತ್ತದೆ. ಆದರೆ ಇದ್ಯಾವೂದು ನಗದು ರೂಪದ ವ್ಯವಹಾರದಲ್ಲಿ ಹೆಚ್ಚುವರಿ ಲಾಭ ಸಿಗುವುದಿಲ್ಲ.
Conclusion
UPI ಲೈಟ್ ಮೊಬೈಲ್ ಪಾವತಿ ಅಥವಾ ಆನ್ಲೈನ್ ಪೇಮೆಂಟ್ನಲ್ಲಿ ಗಮನಾರ್ಹ ಬೆಳವಣಿಗೆಗೆ ಕಾರಣವಾಗಿದೆ. ಸಣ್ಣ ವ್ಯವಹಾರಗಳಿಗೆ ಅದು ನೆಟ್ವರ್ಕ್ ವ್ಯಾಪ್ತಿಯಿಂದ ದೂರ ಇರೋ ಪ್ರದೇಶಗಳಲ್ಲಿ ಮೊಬೈಲ್ ಪೇಮೆಂಟ್ ಮಾಡಲು ಯುಪಿಐ ಲೈಟ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ಭವಿಷ್ಯದಲ್ಲಿ ಮತ್ತಷ್ಟು ಡಿಜಿಟಲ್ ಪೇಮೆಂಟ್ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಳವಾಗಲಿದೆ. ಯುಪಿಐ ಲೈಟ್ ವ್ಯಾಲೆಟ್ ಸಂಗ್ರಹದ ಮೊತ್ತ ಹೆಚ್ಚಳವಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಬಜಾಜ್ ಫಿನ್ಸರ್ವ್ನಂತಹ ಪ್ಲಾಟ್ಫಾರ್ಮ್ಗಳು UPI ಲೈಟ್ ಅನ್ನು ಒಪ್ಪಿಕೊಂಡಿದ್ದು, ಸರಳೀಕೃತ ಪಾವತಿ ವಿಧಾನದ ಕುರಿತು ಪ್ರಚಾರ ಸಹ ನಡೆಸುತ್ತಿವೆ.