EPF ಖಾತೆಯಿಂದ ಹಣ ವಿತ್ ಡ್ರಾ ಮಾಡೋ ಮುನ್ನ ತಿಳಿದಿರಲಿ ಈ ವಿಚಾರ;ಇಲ್ಲವಾದ್ರೆ ತೆರಿಗೆ ಕಟ್ಟಬೇಕಾಗುತ್ತದೆ ಎಚ್ಚರ!

ಇಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡುವ ಮುನ್ನ ಕೆಲವೊಂದು ವಿಚಾರಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಅದರಲ್ಲೂ ಯಾವೆಲ್ಲ ಸಂದರ್ಭಗಳಲ್ಲಿ ಇಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡಿದ್ರೆ ತೆರಿಗೆ ವಿಧಿಸಲಾಗುತ್ತದೆ ಎಂಬುದನ್ನು ತಿಳಿದಿರೋದು ಅಗತ್ಯ. 
 

When is your EPF withdrawal taxable Know tax implications key considerations for PF withdrawals anu

Business Desk: ಭಾರತದಲ್ಲಿ ತಿಂಗಳ ವೇತನ ಪಡೆಯೋರು ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆಗಳನ್ನು ಹೊಂದಿರುತ್ತಾರೆ. ನಿವೃತ್ತಿ ಜೀವನಕ್ಕಾಗಿರುವ ಈ ಹೂಡಿಕೆ ಉದ್ಯೋಗಿಗಳ ನೆಚ್ಚಿನ ಆಯ್ಕೆಯೂ ಆಗಿದೆ. ಪ್ರತಿ ತಿಂಗಳು ಉದ್ಯೋಗಿಯ ವೇತನದ ಒಂದು ಭಾಗವನ್ನು ಇಪಿಎಫ್  ಖಾತೆಗೆ ಜಮೆ ಮಾಡಲಾಗುತ್ತದೆ. ಹಾಗೆಯೇ ಉದ್ಯೋಗದಾತರು (ಕಂಪನಿ ಅಥವಾ ಸಂಸ್ಥೆ) ಕೂಡ ನಿರ್ದಿಷ್ಟ ಮೊತ್ತವನ್ನು ಈ ಖಾತೆಗೆ ಜಮೆ ಮಾಡುತ್ತಾರೆ. ಈ ಖಾತೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಪ್ರತಿ ವರ್ಷ ಬಡ್ಡಿ ನೀಡಲಾಗುತ್ತದೆ. ಇಪಿಎಫ್ ನಿವೃತ್ತಿ ಬದುಕಿನ ಹೂಡಿಕೆ ಯೋಜನೆಯಾಗಿದ್ದು, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ನಿರ್ವಹಿಸುತ್ತದೆ. ಇದಕ್ಕೆ ಕೇಂದ್ರ ಸರ್ಕಾರದ ಬೆಂಬಲ ಕೂಡ ಇದೆ. ಪ್ರಸ್ತುತ ಇಪಿಎಫ್ ಖಾತೆಯಲ್ಲಿನ ಹೂಡಿಕೆಗೆ ಶೇ.8.15ರಷ್ಟು ಬಡ್ಡಿದರವಿದೆ. ನಿವೃತ್ತಿ ಬಳಿಕ ಇಪಿಎಫ್ ಖಾತೆಯಲ್ಲಿನ ಹಣವನ್ನು ಬಡ್ಡಿದರದ ಸಹಿತ ವಿತ್ ಡ್ರಾ ಮಾಡಬಹುದು. ಆದರೆ, ಇತರ ಆದಾಯದ ಮೂಲಗಳಂತೆ ನಿರ್ದಿಷ್ಟ ಸಂದರ್ಭಗಳಲ್ಲಿ ಇಪಿಎಫ್ ವಿತ್ ಡ್ರಾ ಮೇಲೆ ಕೂಡ ತೆರಿಗೆ ವಿಧಿಸಲಾಗುತ್ತದೆ. ಹೀಗಾಗಿ ಇಪಿಎಫ್ ನಿಧಿ ವಿತ್ ಡ್ರಾ ಮಾಡುವ ಮುನ್ನ ಕೆಲವೊಂದು ಷರತ್ತುಗಳನ್ನು ಗಮನಿಸೋದು ಅಗತ್ಯ.

ಇಪಿಎಫ್ ವಿತ್ ಡ್ರಾ ಮುನ್ನ ಈ 3 ವಿಚಾರ ತಿಳಿದಿರಲಿ
1.ನಿವೃತ್ತಿ ವಯಸ್ಸಿಗೆ ತಲುಪಿದ ತಕ್ಷಣ ಸಂಪೂರ್ಣ ಇಪಿಎಫ್ ಮೊತ್ತವನ್ನು ವಿತ್ ಡ್ರಾ ಮಾಡಬಹುದು. ನಿವೃತ್ತಿ ವಯಸ್ಸನ್ನು ಇಪಿಎಫ್ 55 ವರ್ಷಕ್ಕೆ ನಿಗದಿಪಡಿಸಿದೆ. ಹೀಗಾಗಿ 55 ವರ್ಷ ತಲುಪಿದ ಬಳಿಕ ಇಪಿಎಫ್ ಖಾತೆಯಲ್ಲಿನ ಹಣವನ್ನು ವಿತ್ ಡ್ರಾ ಮಾಡಬಹುದು.
2. ಇನ್ನು ಒಬ್ಬ ಉದ್ಯೋಗಿ ನಿವೃತ್ತಿಗಿಂತ ಒಂದು ವರ್ಷ ಮುಂಚೆ ಪಿಎಫ್ ನಿಧಿಯ ಶೇ.90ರಷ್ಟು ಹಣವನ್ನು ವಿತ್ ಡ್ರಾ ಮಾಡಬಹುದು.
3.ಉದ್ಯೋಗವಿಲ್ಲದೆ ಒಂದು ತಿಂಗಳಾದ ಬಳಿಕ ಇಪಿಎಫ್ ಖಾತೆಯಿಂದದ ಶೇ.75ರಷ್ಟು ಹಣವನ್ನು ವಿತ್ ಡ್ರಾ ಮಾಡಲು ಅವಕಾಶವಿದೆ. ಹಾಗೆಯೇ ಉದ್ಯೋಗವಿಲ್ಲದೆ ಎರಡು ತಿಂಗಳಾದ ಬಳಿಕ ಇಪಿಎಫ್ ಖಾತೆಯಲ್ಲಿನ ಸಂಪೂರ್ಣ ಮೊತ್ತವನ್ನು ವಿತ್ ಡ್ರಾ ಮಾಡಲು ಅವಕಾಶವಿದೆ. 

EPF Alert:ಹೊಸ ಉದ್ಯೋಗಿಗಳು ಗಮನಿಸಿ, ಇಪಿಎಫ್ ಖಾತೆಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಲು ಹೀಗೆ ಮಾಡಿ..

ಈ ನಿಯಮಗಳು ಉದ್ಯೋಗಿಗೆ ಇಪಿಎಫ್ ಖಾತೆಯಲ್ಲಿನ ಹಣವನ್ನು ವಿವಿಧ ಉದ್ದೇಶಗಳಿಗೆ ಬಳಸಲು ಅವಕಾಶ ನೀಡಿವೆ. ಹಣಕಾಸಿನ ತುರ್ತು ಸಂದರ್ಭ ಹಾಗೂ ಜೀವನದ ಪ್ರಮುಖ ಘಟನೆಗಳ ಸಂದರ್ಭಗಳಲ್ಲಿ ಕೂಡ ಈ ನಿಧಿಯನ್ನು ಬಳಸಿಕೊಳ್ಳಬಹುದಾಗಿದೆ. ಆದರೆ, ನೆನಪಿಡಿ, ನಿರ್ದಿಷ್ಟ ಪರಿಸ್ಥಿತಿಗಳು ಹಾಗೂ ವಿತ್ ಡ್ರಾಗೆ ಅಗತ್ಯವಾದ ದಾಖಲೆಗಳು ಬದಲಾಗಬಹುದು. ಆದಕಾರಣ ಉದ್ಯೋಗಿಗಳು ತಮ್ಮ ಉದ್ಯೋಗದಾತ ಸಂಸ್ಥೆ ಅಥವಾ ಇಪಿಎಫ್ ಒ ಅನ್ನು ಸಂಪರ್ಕಿಸುವ ಮೂಲಕ ವಿತ್ ಡ್ರಾ ಪ್ರಕ್ರಿಯೆಗೆ ಅಗತ್ಯವಾದ ಮಾರ್ಗದರ್ಶನ ಪಡೆಯಬಹುದು. 

ಇಪಿಎಫ್ ಕುರಿತ ದೂರುಗಳನ್ನು ಎಲ್ಲಿ ದಾಖಲಿಸಬಹುದು? ಹೇಗೆ? ಇಲ್ಲಿದೆ ಮಾಹಿತಿ

ಯಾವಾಗ ತೆರಿಗೆ ವಿಧಿಸಲಾಗುತ್ತದೆ?
ಉದ್ಯೋಗಿಗಳು ಇಪಿಎಫ್ ಖಾತೆಗೆ ನೀಡಿದ ಕೊಡುಗೆ ಮೇಲೆ ಸಾಮಾನ್ಯವಾಗಿ ತೆರಿಗೆ ವಿಧಿಸಲಾಗುವುದಿಲ್ಲ. ಹಿಂದಿನ ವರ್ಷ ಈ ಖಾತೆಗೆ ಮಾಡಿದ ಕೊಡುಗೆ ಮೇಲೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಕಡಿತದ ಪ್ರಯೋಜನ ಪಡೆಯಬಹುದು. ಒಂದು ವೇಳೆ ಒಬ್ಬ ಉದ್ಯೋಗಿ ಒಂದು ಅಥವಾ ಅದಕ್ಕಿಂತ ಹೆಚ್ಚಿನ ಸಂಸ್ಥೆಗಳಲ್ಲಿ ಐದು ವರ್ಷಗಳ ನಿರಂತರ ಸೇವೆ ಪೂರ್ಣಗೊಳಿಸುವ ಮುನ್ನ ಇಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡಿದರೆ ಆಗ ಮೂಲದಲ್ಲಿ ತೆರಿಗೆ ಕಡಿತಗೊಳಿಸಲಾಗುವುದು (ಟಿಡಿಎಸ್). ಆದರೆ, ವಿತ್ ಡ್ರಾ ಮೊತ್ತ50,000ರೂ.ಗಿಂತ ಕಡಿಮೆಯಿದ್ದಾಗ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. ಹಾಗೆಯೇ ನಿರಂತರ ಸೇವೆಯ ಐದು ವರ್ಷಗಳ ಬಳಿಕ ಉದ್ಯೋಗಿ ತನ್ನ ಇಪಿಎಫ್ ಖಾತೆಯಿಂದ ಹಣ ವಿತ್ ಡ್ರಾ ಮಾಡಿದ್ರೆ ಆಗ ತೆರಿಗೆ ವಿಧಿಸೋದಿಲ್ಲ. 
 

Latest Videos
Follow Us:
Download App:
  • android
  • ios