ಪೆಟ್ರೋಲ್ - ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆ, ನಿಮ್ಮ ಜಿಲ್ಲೆಯಲ್ಲಿ ಇಂದು ತೈಲ ಬೆಲೆ ಎಷ್ಟಿದೆ?

ದೇಶ ಲೋಕಸಭೆ ಚುನಾವಣೆಗೆ ಇಳಿದಿರುವ ಹೊತ್ತಿನಲ್ಲಿಯೇ ಕೇಂದ್ರ ಸರ್ಕಾರ ಇಂಧನ ಬೆಲೆಯನ್ನು ಇಳಿಸುವ ನಿರ್ಧಾರ ಮಾಡಿತ್ತು. ಇದರಿಂದಾಗಿ 1 ವರ್ಷದಿಂದ 100 ಗಡಿ ದಾಟಿದ್ದ ಪೆಟ್ರೋಲ್‌ ಬೆಲೆ ಈಗ 100 ಒಳಗೆ ಬಂದು ನಿಂತಿದೆ.
 

what is the petrol diesel price today 30th march 2024 in your city san

ಬೆಂಗಳೂರು (ಮಾ.28):  ಕೇಂದ್ರ ಸರ್ಕಾರ ಲೋಕಸಭೆ ಚುನಾವಣೆ ಹಾದಿಯಲ್ಲಿ ಇರುವಾಗಲೇ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಗಳಲ್ಲಿ ಇಳಿಕೆ ಮಾಡಿತ್ತು. ಇದರಿಂದಾಗಿ ಅಂದಾಜು 1 ವರ್ಷಗಳ ಕಾಲ 100ರ ಗಡಿ ದಾಟಿ ಆಟವಾಡುತ್ತಿದ್ದ ಪೆಟ್ರೋಲ್‌ ಬೆಲೆ ಈಗ 100 ಹಾಗೂ 99 ರ ನಡುವೆ ಕೆರೆ-ದಡ ಆಟವಾಡುತ್ತಿದೆ. ದೇಶದೆಲ್ಲಡೆಯಂತೆ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿದಿನ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಲೇ ಇರುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಇರುವ ಪೆಟ್ರೋಲ್‌-ಡೀಸೆಲ್‌ ಬೆಲೆ ವಿವರ ಇಲ್ಲಿದೆ.

ದೇಶದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬೂಮ್‌ ಆಗುತ್ತಿದ್ದರೂ, ಸರಕು ಸಾಗಣೆಗೆ ದೇಶ ಇಂದಿಗೂ ನೆಚ್ಚಿಕೊಂಡಿರುವುದು ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲೆ. ಇದರ ಬೆಲೆ ಹೆಚ್ಚಾದಲ್ಲಿ ಸಾಗಣೆ ವೆಚ್ಚ ಕೂಡ ಏರುವ ಕಾರಣ ಕೊನೆಗೆ ಅದು ಜನಸಾಮಾನ್ಯರ ಜೇಬಿನ ಮೇಲೆಯೇ ಪರಿಣಾಮ ಬೀರುತ್ತದೆ. ಹಾಗಾಗಿ ಪ್ರತಿ ದಿನ ಇವುಗಳ ದರದ ಮೇಲೆ ಕಣ್ಣಿಡುವುದು ಅವಶ್ಯಕ. 100ರ ಗಡಿ ದಾಟಿ ಕುಳಿತಿದ್ದ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಆ ಬಳಿಕ ಯಾವುದೇ ಏರಿಕೆಯಾಗಿರಲಿಲ್ಲ. ಆದರೆ, ಚುನಾವಣೆಯ ಹೊತ್ತಿನಲ್ಲಿ ಸರ್ಕಾರ ಇಂಧನಗಳ ಬೆಲೆಯಲ್ಲಿ ಇಳಿಕೆ ಮಾಡಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್‌ಗೆ 94.72. ರೂಪಾಯಿ ಇದೆ.  ಮುಂಬೈನಲ್ಲಿ 104.21, ಕೋಲ್ಕತ್ತಾದಲ್ಲಿ 105.17, ಚೆನ್ನೈನಲ್ಲಿ 101.57 ರೂಪಾಯಿ ಇದೆ. ಹಾಗೆಯೇ ಡಿಸೇಲ್ ದರದಲ್ಲಿಯೂ ಯಾವುದೇ ಬದಲಾವಣೆ ಆಗಿಲ್ಲ. ದೆಹಲಿಯಲ್ಲಿ 87.62, ಮುಂಬೈನಲ್ಲಿ 92.15, ಕೋಲ್ಕತ್ತಾ  90.76, ಚೆನ್ನೈನಲ್ಲಿ  92.43 ರೂಪಾಯಿ ಇದೆ.  

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಕ್ರಮವಾಗಿ ದರಗಳು ಇಂತಿದೆ

ಬಾಗಲಕೋಟೆ - ರೂ. 100.45 / ರೂ. 86.51
ಬೆಂಗಳೂರು - ರೂ. 99.84 / ರೂ. 85.93 
ಬೆಂಗಳೂರು ಗ್ರಾಮಾಂತರ - ರೂ. 99.99 / ರೂ. 86.07
ಬೆಳಗಾವಿ - ರೂ. 100.54 / ರೂ. 86.59
ಬಳ್ಳಾರಿ - ರೂ. 101.63 / ರೂ. 87.57
ಬೀದರ್ - ರೂ. 100.18 / ರೂ. 86.27
ವಿಜಯಪುರ - ರೂ. 99.62 / ರೂ. 85.76
ಚಾಮರಾಜನಗರ - ರೂ.99.96 / ರೂ. 86.04 
ಚಿಕ್ಕಬಳ್ಳಾಪುರ - ರೂ. 99.84 / ರೂ. 85.93
ಚಿಕ್ಕಮಗಳೂರು - ರೂ. 100.56 / ರೂ. 86.42
ಚಿತ್ರದುರ್ಗ - ರೂ. 101.80 / ರೂ. 87.52
ದಕ್ಷಿಣ ಕನ್ನಡ - ರೂ. 99.24 / ರೂ. 85.36
ದಾವಣಗೆರೆ - ರೂ. 101.81 / ರೂ. 87.53
ಧಾರವಾಡ - ರೂ. 99.60 / ರೂ. 85.74
ಗದಗ - ರೂ. 100.15 / ರೂ. 86.24
ಕಲಬುರಗಿ - ರೂ. 100.11 / ರೂ. 86.21
ಹಾಸನ - ರೂ. 100.23/ ರೂ. 86.10
ಹಾವೇರಿ - ರೂ. 100.79 / ರೂ. 86.82
ಕೊಡಗು - ರೂ. 101.21 / ರೂ. 87.02
ಕೋಲಾರ - ರೂ. 99.78/ ರೂ. 85.88
ಕೊಪ್ಪಳ - ರೂ. 100.11 / ರೂ. 87.12
ಮಂಡ್ಯ - ರೂ. 100.08 / ರೂ. 86.15
ಮೈಸೂರು - ರೂ. 99.40 / ರೂ. 85.54
ರಾಯಚೂರು - ರೂ. 100.57 / ರೂ. 86.63
ರಾಮನಗರ - ರೂ. 100.29 / ರೂ. 86.34
ಶಿವಮೊಗ್ಗ - ರೂ. 100.83 / ರೂ.86.69
ತುಮಕೂರು - ರೂ. 100.35 / ರೂ. 86.40
ಉಡುಪಿ - ರೂ. 99.52 / ರೂ. 85.61
ಉತ್ತರ ಕನ್ನಡ - ರೂ. 100.85 / ರೂ. 86.81
ವಿಜಯನಗರ - ರೂ. 101.02 / ರೂ.87.02
ಯಾದಗಿರಿ - ರೂ. 100.22 / ರೂ. 86.30

Latest Videos
Follow Us:
Download App:
  • android
  • ios