Asianet Suvarna News Asianet Suvarna News

ವೈರಲ್ ಚೆಕ್: ಇನ್ಮುಂದೆ ಪ್ರತೀ ಶನಿವಾರವೂ ಬ್ಯಾಂಕುಗಳು ಬಂದ್!

ಇನ್ನು ಮುಂದೆ ಭಾರತದ ಎಲ್ಲಾ ಬ್ಯಾಂಕುಗಳು ವಾರದಲ್ಲಿ 5 ದಿನ ಮಾತ್ರ ತೆರದಿರಲಿದ್ದು, ಪ್ರತಿ ಶನಿವಾರ ಮತ್ತು ಭಾನುವಾರ ಎರಡೂ ದಿನ ಬ್ಯಾಂಕ್‌ ಕೆಲಸ ನಿರ್ವಹಿಸುವುದಿಲ್ಲ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ನಿಜಾನಾ? ಈ ವೈರಲ್ ಸಂದೇಶದ ಹಿಂದಿನ ಅತ್ಯಾ ಸತ್ಯತೆ ಏನು? ಇಲ್ಲಿದೆ ವಿವರ

Viral Check message falsely claims all banks to be closed every Saturday starting June 1st
Author
Bangalore, First Published Apr 17, 2019, 9:28 AM IST

ನವದೆಹಲಿ[ಏ.17]: ಇನ್ನು ಮುಂದೆ ಭಾರತದ ಎಲ್ಲಾ ಬ್ಯಾಂಕುಗಳು ವಾರದಲ್ಲಿ 5 ದಿನ ಮಾತ್ರ ತೆರದಿರಲಿದ್ದು, ಪ್ರತಿ ಶನಿವಾರ ಮತ್ತು ಭಾನುವಾರ ಎರಡೂ ದಿನ ಬ್ಯಾಂಕ್‌ ಕೆಲಸ ನಿರ್ವಹಿಸುವುದಿಲ್ಲ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Viral Check message falsely claims all banks to be closed every Saturday starting June 1st

ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿರುವ ಸಂದೇಶದಲ್ಲಿ, ಬ್ಯಾಂಕುಗಳು ಇನ್ನುಮುಂದೆ ವಾರದಲ್ಲಿ 5 ದಿನ ಕೆಲಸ ಮಾಡುವುದಾಗಿ ಆರ್‌ಬಿಐ ನಿರ್ದೇಶಿಸಿದೆ. ಬ್ಯಾಂಕುಗಳ ಕೆಲಸದ ಅವಧಿ ಬೆಳಗ್ಗೆ 9:30-5:30. ಇದೇ ರೀತಿ ಬೇರೆ ವಿಭಾಗಗಳೂ ಏಕೆ ನಿಯಮ ತರಬಾರದು? ಮೆಟ್ರೋ ಸಿಟಿಗಳಾದ ಮುಂಬೈ, ಸೂರತ್‌ನಲ್ಲಿ ಜನರು ಸಾಕಷ್ಟುಹಣ ದುಡಿಯುತ್ತಾರೆ, ಆದರೆ ಅವರ ಜೀವನ ಗುಣಮಟ್ಟಹೇಗಿದೆ?’ ಎಂದು ಬರೆಯಲಾಗಿದೆ. ಜೂನ್‌ 1ರಿಂದ ಎಲ್ಲಾ ಬ್ಯಾಂಕುಗಳಲ್ಲಿ ಈ ನಿಯಮ ಜಾರಿಯಾಗುವುದಾಗಿಯೂ ಹೇಳಲಾಗಿದೆ.

ಆದರೆ ಆಲ್ಟ್‌ನ್ಯೂಸ್‌ ಈ ಬಗ್ಗೆ ಪರಿಶೀಲಿಸಿದಾಗ ಇದೊಂದು ಸುಳ್ಳು ಸಂದೇಶ ಎಂದು ತಿಳಿದುಬಂದಿದೆ. 2017ರಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಈ ಸುಳ್ಳು ಸಂದೇಶ ಹರಿದಾಡುತ್ತಿದೆ. ವಾಸ್ತವವಾಗಿ ಆರ್‌ಬಿಐ ಪ್ರಕಟಣೆ 2015ರ ಪ್ರಕಾರ ಎಲ್ಲಾ ಬ್ಯಾಂಕುಗಳು ಎರಡನೇ ಮತ್ತು ನಾಲ್ಕನೇ ಶನಿವಾರ ಮಾತ್ರ ಕೆಲಸ ನಿರ್ವಹಿಸುವುದಿಲ್ಲ. ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ ಉಳಿದೆಲ್ಲಾ ದಿನ ಕಾರ್ಯನಿರ್ವಹಿಸಲಿವೆ.

Follow Us:
Download App:
  • android
  • ios