ಭಾರತ ಬಿಟ್ಟು ಲಂಡನ್‌ಗೆ ಹೋದ ಸಾಲಗಾರ ಮಲ್ಯ, ಇಂಗ್ಲೆಂಡ್‌ಗೇ 'ಕಿಂಗ್‌ಫಿಶರ್‌ ಬಿಯರ್‌' ಕರೆಸಿಕೊಂಡ್ರು!

ವಿಜಯ್ ಮಲ್ಯ ಸ್ಥಾಪಿಸಿದ ಕಿಂಗ್‌ಫಿಶರ್ ಬಿಯರ್ ಕಂಪನಿಯು ತನ್ನ ಪ್ರೀಮಿಯಂ ಬಿಯರ್, ಕಿಂಗ್‌ಫಿಶರ್ ಅಲ್ಟ್ರಾವನ್ನು ಇಂಗ್ಲೆಂಡ್‌ನಲ್ಲಿ ಬಿಡುಗಡೆ ಮಾಡಿದೆ. 2009 ರಲ್ಲಿ ಭಾರತದಲ್ಲಿ ಬಿಡುಗಡೆಯಾದಾಗಿನಿಂದ ಈ ಬಿಯರ್ ಜನಪ್ರಿಯತೆಯನ್ನು ಗಳಿಸಿದೆ ಮತ್ತು ಈಗ ಇಂಗ್ಲೆಂಡ್‌ನಲ್ಲಿ ಲಭ್ಯವಿದೆ.

Vijay Mallya Happy Kingfisher Ultra available in the UK for the first time san

ಬೆಂಗಳೂರು (ನ.11): ಭಾರತದ ಇದ್ದಬದ್ದ ಬ್ಯಾಂಕ್‌ಗಳಲ್ಲಿ ಸಾಲ ಮಾಡಿಕೊಂಡು, ಕೇಸ್‌ ಆಗುತ್ತಿದ್ದಂತೆ ದೇಶ ಬಿಟ್ಟು ಪರಾರಿಯಾಗಿದ್ದ ಸಾಲಗಾರ ವಿಜಯ್‌ ಮಲ್ಯ ಪಾಲಿಗೆ ಖುಷಿ ಪಡುವಂಥ ಸುದ್ದಿ ಸಿಕ್ಕಿದೆ. ತಮ್ಮ ಮದ್ಯ ಕಂಪನಿಯ ಬಹುಪಾಲು ಷೇರುಗಳನ್ನು ಇಂಗ್ಲೆಂಡ್‌ ಮೂಲದ ಡಿಯಾಜಿಯೋ ಕಂಪನಿಗೆ ಅವರು ಒಪ್ಪಿಸಿದ್ದಾರೆ. ಯುಬಿ ಕಂಪನಿಯಲ್ಲಿ ಅವರ ಪಾಲು ಈಗ ಶೇ. 8ರಷ್ಟು ಮಾತ್ರ. ಆದರೆ, ಲಂಡನ್‌ನಲ್ಲಿ ಬೇರೆ ಕಂಪನಿಯ ಬಿಯರ್‌ಗಳನ್ನು ಸವಿಯುತ್ತಿದ್ದ ಮಲ್ಯಗೆ ಈಗ ಅವರೇ ಸ್ಥಾಪಿಸಿದ್ದ ಕಂಪನಿಯ ಬಿಯರ್‌ ಸವಿಯುವ ಅವಕಾಶ ಸಿಕ್ಕಿದೆ. ಹೌದು, ಕಿಂಗ್‌ಫಿಶರ್ ತನ್ನ ಪ್ರೀಮಿಯಂ ಬಿಯರ್ ಕಿಂಗ್‌ಫಿಷರ್ ಅಲ್ಟ್ರಾ ಈಗ ಇಂಗ್ಲೆಂಡ್‌ನಲ್ಲಿ ಲಭ್ಯವಿರುವುದಾಗಿ ಘೋಷಣೆ ಮಾಡಿದೆ. ಕಿಂಗ್‌ಫಿಶರ್ ಅಲ್ಟ್ರಾ, ಅದರ 6-ಹಂತದ ಫಿಲ್ಟ್ರೇಷನ್‌  ಮತ್ತು ಕೈಯಿಂದ ಆರಿಸಿದ ಹಾಪ್‌ಗಳಿಗೆ ಹೆಸರುವಾಸಿಯಾಗಿದೆ, ಇದು ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರೀಮಿಯಂ ಬಿಯರ್ ಆಗಿದೆ.

2009 ರಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಆದಾಗಿನಿಂದ ಅಲ್ಟ್ರಾ ಭಾರತದಲ್ಲಿ 2021-2023 (CAGR) ನಡುವೆ ವರ್ಷದಿಂದ ವರ್ಷಕ್ಕೆ 20% ಬೆಳವಣಿಗೆಯನ್ನು ಕಂಡಿದೆ ಮತ್ತು ಇದು ಪ್ರೀಮಿಯಂ ಕಾರ್ಯಕ್ರಮಗಳ ಫೇವರಿ್‌ ಬಿಯರ್‌ ಆಗಿದೆ. ಕಿಂಗ್‌ಫಿಶರ್‌ ಅಲ್ಟ್ರಾ ಪ್ರತಿಷ್ಠಿತ ಈವೆಂಟ್‌ಗಳ ಪ್ರಾಯೋಜಕತ್ವವನ್ನು ಹೊಂದಿದೆ. ಇಂಡಿಯನ್ ಡರ್ಬಿ, ಸನ್‌ಬರ್ನ್ ಫೆಸ್ಟಿವಲ್ ಮತ್ತು ಹಲವಾರು ಉನ್ನತ-ಪ್ರೊಫೈಲ್ ಫ್ಯಾಶನ್ ಶೋಗಳ ಪ್ರಾಯೋಜಕತ್ವ ಇದರಾಗಿದೆ.

"ಕಿಂಗ್‌ಫಿಶರ್ ಅಲ್ಟ್ರಾವನ್ನು UK ಮಾರುಕಟ್ಟೆಗೆ ಪರಿಚಯಿಸಲು ನಾವು ಸಂತೋಷಪಡುತ್ತೇವೆ" ಎಂದು ಕಿಂಗ್‌ಫಿಶರ್‌ನ ಹಿರಿಯ ಬ್ರ್ಯಾಂಡ್ ಮ್ಯಾನೇಜರ್ ಆಂಡಿ ಸನ್ನಕ್ಸ್ ಹೇಳಿದ್ದಾರೆ.'ಭಾರತದಲ್ಲಿ ಈ ಬಿಯರ್‌ನ ಸವಿಯನ್ನು ಸವಿದ ಅದೃಷ್ಟವಂಥರಿಗೆ ಇದರ ಗೋಲ್ಡ್‌ ಸ್ಟ್ಯಾಂಡರ್ಡ್‌ ಬಗ್ಗೆ ಅರಿವಿರುತ್ತದೆ. 2009 ರಲ್ಲಿ ತನ್ನ ತವರಾದ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಆದಾಗಿನಿಂದ, ಕಿಂಗ್‌ಫಿಶರ್ ಅಲ್ಟ್ರಾ ಭಾರತದಲ್ಲಿ ಸುಂಟರಗಾಳಿ ಎಬ್ಬಿಸಿದೆ. ಇದು ಪ್ರೀಮಿಯಂಗೆ ಸಮನಾರ್ಥಕ ಪದ ಎನಿಸಿದೆ. ಈಗ ಇನ್ನು ಮುಂದೆ ಅದು ಇಂಗ್ಲೆಂಡ್‌ನ ಸರದಿ ಎನ್ನಲು ನಾವು ಉತ್ಸುಕರಾಗಿದ್ದೇವೆ' ಎಂದಿದ್ದಾರೆ.

ಬೆಂಗಳೂರಿನಲ್ಲಿ 2500 ಕೋಟಿ ಮೌಲ್ಯದ ಜಾಗತಿಕ ಸಾಮರ್ಥ್ಯ ಕೇಂದ್ರ ಸ್ಥಾಪಿಸಿದ ಝೈಸ್ ಇಂಡಿಯಾ, 600 ಜನರಿಗೆ ಉದ್ಯೋಗ

"ಭಾರತದಿಂದ ನೇರವಾಗಿ ಆಮದು ಮಾಡಿಕೊಳ್ಳಲಾಗುತ್ತದೆ. ಅಲ್ಟ್ರಾ ನಿಜವಾಗಿಯೂ ಅದರ ಲಘುವಾದ ಗರಿಗರಿಯಾದ ರುಚಿ ಮತ್ತು ನಯವಾದ ಮುಕ್ತಾಯದೊಂದಿಗೆ ಸ್ಪಾಟ್ ಅನ್ನು ಹಿಟ್ ಮಾಡುತ್ತದೆ ಮತ್ತು ನಮ್ಮ ಬೆಳೆಯುತ್ತಿರುವ ಕಿಂಗ್‌ಫಿಶರ್ ಪೋರ್ಟ್‌ಫೋಲಿಯೊಗೆ ಪರಿಪೂರ್ಣ ಸೇರ್ಪಡೆಯಾಗಿದೆ. ಒಂದು ವರ್ಷದ ಹಿಂದೆ ನಾವು ಕಿಂಗ್‌ಫಿಶರ್‌ ಜೀರೋವನ್ನು ಅನಾವರಣ ಮಾಡಿದ್ದೆವು. ನೋ & ಲೋ ಕೆಟಗರಿ ಅವರಿಗಾಗಿ ಇದನ್ನು ಬಿಡುಗಡೆ ಮಾಡಿದ್ದವು. ಆದ್ದರಿಂದ ಮೂಲ ಕಿಂಗ್‌ಫಿಶರ್ ಪ್ರೀಮಿಯಂ ಜೊತೆಗೆ, ಕಿಂಗ್‌ಫಿಶರ್ ಅಲ್ಟ್ರಾ ನಮ್ಮ ಕೊಡುಗೆಯನ್ನು ಪೂರ್ಣಗೊಳಿಸುತ್ತದೆ ಅದು ಈಗ ವ್ಯಾಪಕ ಶ್ರೇಣಿಯ ಗ್ರಾಹಕರ ಅಭಿರುಚಿಗೆ ಸರಿಹೊಂದುತ್ತದೆ ಎಂದಿದ್ದಾರೆ.

ಬೆಂಗಳೂರಿಗೆ ಬೊಂಬಾಟ್‌ ನ್ಯೂಸ್‌, ಬ್ಯಾಟರಿ ಸೆಲ್‌ ಉತ್ಪಾದನೆಗೆ ಇಳಿದ MGL, ರಾಜಧಾನಿಯಲ್ಲಿ ಗಿಗಾ ಫ್ಯಾಕ್ಟರಿ ನಿರ್ಮಾಣ

Latest Videos
Follow Us:
Download App:
  • android
  • ios