‘ಟಿವಿ ಇದೆ, ಬಾತ್ ರೂಂ ಇದೆ, ವರಾಂಡಾ ಇದೆ: ಮಲ್ಯ ನೀವೇ ಬರಬೇಕಿದೆ’!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 24, Aug 2018, 8:19 PM IST
Vijay Mallya Case, Video Of Mumbai Jail For UK
Highlights

ಮುಂಬೈನ ಅರ್ಥರ್ ರೋಡ್‌ ಜೈಲಿನ ವಿಡಿಯೋ! ಬ್ಯಾರಕ್ ನಂಬರ್ 12ರ ವಿಶೇಷತೆಗಳು ಏನೆನು?! ಭಾರತಕ್ಕೆ ಮಲ್ಯ ಕರೆತರಲು ಸಜ್ಜಾದ ಸಿಬಿಐ! ನ್ಯಾಯಾಲಯಕ್ಕೆ ಜೈಲಿನ ವಿಡಿಯೋ ಕಳುಹಿಸಿದ ಸಿಬಿಐ

ಮುಂಬೈ(ಆ.24): ಒಂದು ಟಿವಿ ಸೆಟ್, ವೈಯಕ್ತಿಕ ಶೌಚಾಲಯ, ಹಾಸಿಗೆ, ಬಾತ್ ರೂಂ ಏರಿಯಾ, ವಿಶಾಲವಾದ ಒಂದು ವರಾಂಡಾ..ಇದು ಮುಂಬೈನ ಅರ್ಥರ್ ರೋಡ್‌ ಜೈಲಿನಲ್ಲಿರುವ ಬ್ಯಾರಕ್ ನಂಬರ್ 12 ನ ಕೆಲ ವಿಶೇಷತೆಗಳು. ಇನ್ನೇನು ಕೆಲವೇ ದಿನಗಳಲ್ಲಿ ಇಲ್ಲಿ ಮದ್ಯದ ದೊರೆ ವಿಜಯ್ ಮಲ್ಯ ಬಂದು ನೆಲೆಸಿದ್ದಾರೆ.

ಸಾವಿರಾರು ಕೋಟಿ ಸಾಲ ಮಾಡಿ ವಿದೇಶಕ್ಕೆ ಪಲಾಯನ ಮಾಡಿರುವ ವಿಜಯ್ ಮಲ್ಯ ಅವರನ್ನು, ಬಂಧಿಸಿಡಲು ಮುಂಬೈನ ಅರ್ಥರ್ ರೋಡ್‌ ಜೈಲಿನಲ್ಲಿ ತಯಾರಾದ ಹೈಟೆಕ್ ಜೈಲಿನ ವಿಡಿಯೋ ಬಹಿರಂಗವಾಗಿದೆ. 

ಮಲ್ಯ ಅವರನ್ನು ಭಾರತಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದ್ದು, ಭಾರತದ ಜೈಲುಗಳ ಪರಿಸ್ಥಿತಿ ಕುರಿತಂತೆ ಆಕ್ಷೇಪ ವ್ಯಕ್ತಪಡಿಸಿದ್ದ ಅವರಿಗೆ ಪ್ರತ್ಯುತ್ತರವಾಗಿ ಭಾರತೀಯ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಜೈಲಿನ ಸೌಲಭ್ಯಗಳ ವಿವರವಾದ ವೀಡಿಯೋ  ಕಳುಹಿಸಿದ್ದಾರೆ.

ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ನಡೆದ ವಿಚಾರಣೆ ವೇಳೆ ಮಲ್ಯ, ಭಾರತದ ಜೈಲುಗಳಲ್ಲಿ ಸರಿಯಾದ ನೈಸರ್ಗಿಕ ಗಾಳಿ, ಬೆಳಕಿನ ವ್ಯವಸ್ಥೆ ಇಲ್ಲ ಎಂದು ಆಕ್ಷೇಪಿಸಿದ್ದರು. ಇದಕ್ಕೆ ಸಿಬಿಐ ಜೈಲು ಸಔಲಭ್ಯಗಳನ್ನು ತೋರಿಸುವ ವಿಡಿಯೋವನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ.

ಮುಂಬೈನ ಅರ್ಥರ್ ರೋಡ್ ನಲ್ಲಿರುವ ಜೈಲಿನಲ್ಲಿ ಮಲ್ಯರನ್ನು ಇರಿಸಲಾಗುತ್ತದೆ. ಇದರಲ್ಲಿನ ಬ್ಯಾರಕ್ ನಂಬರ್ 12 ನಲ್ಲಿರುವ ಸೌಲಭ್ಯಗಳ ವಿವರವನ್ನೊಳಗೊಂಡ ವೀಡಿಯೋ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ. ಜೈಲು ಭದ್ರತೆಯು ಅಂತರಾಷ್ಟ್ರೀಯ ಮಾನದಂಡಗಳಿಗೆ ತಕ್ಕ ಹಾಗಿದ್ದು, ಹೆಚ್ಚುವರಿ ಸಿಬ್ಬಂದಿ ಕೂಡ ಭದ್ರತೆ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಸಿಬಿಐ ಸ್ಪಷ್ಟಪಡಿಸಿದೆ. 

loader