ಸುಂದರ್ ಪಿಚೈ, ಸತ್ಯ ನಾಡೆಲ್ಲಾ ಸೇರಿದಂತೆ ದಿಗ್ಗಜರನ್ನೇ ಮತ್ತೊಬ್ಬ ಭಾರತೀಯ ವೈಭವ್ ತನೇಜಾ ಮೀರಿಸಿದ್ದಾರೆ. ಈ ತನೇಜಾ ವಿಶ್ವದಲ್ಲೇ ಅತೀ ಹೆಚ್ಚು ವೇತನ ಪಡೆಯುತ್ತಿರುವ ಉದ್ಯೋಗಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರೆ.  

ನವದೆಹಲಿ(ಮೇ.24) ಅತೀ ಹೆಚ್ಚು ವೇತನ ಪಡೆಯುತ್ತಿರುವ ಉದ್ಯೋಗಿ ಯಾರು? ಗೂಗಲ್ ಸಿಇಒ ಸುಂದರ್ ಪಿಚೈ, ಮೈಕ್ರೋಸಾಫ್ಟ್‌ನ ಸತ್ಯ ನಾಡೆಲ್ಲಾ ಸೇರಿದಂತೆ ಹಲವರು ಪ್ರತಿಷ್ಠಿತ ಕಂಪನಿಗಳಲ್ಲಿ ಕೋಟಿ ಕೋಟಿ ರೂಪಾಯಿ ವೇತನ ಪಡೆಯುತ್ತಿದಾರೆ. ಆದರೆ ಇವರೆನ್ನೆಲ್ಲಾ ಭಾರತೀಯ ಮೂಲದ ಮತ್ತೊಬ್ಬ ವೈಭವ್ ತನೇಜಾ ಮೀರಿಸಿದ್ದಾರೆ. ವೈಭವ್ ತನೇಜಾ ಕಳೆದ ವರ್ಷ ಪೆಡದ ಸ್ಯಾಲರಿ ಸೇರಿದಂತೆ ಒಟ್ಟು ಮೊತ್ತ ಬರೋಬ್ಬರಿ 1,195 ಕೋಟಿ ರೂಪಾಯಿ. ವೈಭವ್ ತನೇಜಾ ಗರಿಷ್ಠ ವೇತನ ಪಡೆದ ಸಿಎಫ್ಒ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತೀಯ ಮೂಲದ ವೈಭವ್ ತನೇಜಾ ವಿಶ್ವದ ಅತೀ ದೊಡ್ಡ ಕಂಪನಿಯಾಗಿರುವ ಅಮೆರಿದ ಟೆಸ್ಲಾದಲ್ಲಿ ಚೀಫ್ ಫಿನಾನ್ಶಿಯಲ್ ಆಫೀಸರ್(ಸಿಎಫ್ಒ) ಆಗಿದ್ದಾರೆ.

ಸುಂದರ್ ಪಿಚೈ, ಸತ್ಯ ನಾಡೆಲ್ಲಾ ವಾರ್ಷಿಕ ಸ್ಯಾಲರಿಗಿಂತ ಹೆಚ್ಚು ತನೇಜಾ ವೇತನ

ಎಲಾನ್ ಮಸ್ಕ್ ಒಡೆತನದ ಟೆಸ್ಲಾ ಕಂಪನಿಯ ಸಿಎಫ್ಒ ವೈಭವ್ ತನೇಜಾ 2024ರ ಸಾಲಿನ ಸ್ಯಾಲರಿ 139 ಮಿಲಿಯನ್ ಅಮೆರಿಕನ್ ಡಾಲರ್. ಭಾರತೀಯ ರೂಪಾಯಿಗಳಲ್ಲಿ 1195 ಕೋಟಿ ರೂಪಾಯಿ. ತಿಂಗಳಿಗೆ 99.58 ಕೋಟಿ ರೂಪಾಯಿ ವೇತನ ಪಡೆಯುತ್ತಿದ್ದಾರೆ. ವೈಭವ್ 2024ರ ಸಾಲಿನಲ್ಲಿ 139 ಮಿಲಿಯನ್ ಅಮೆರಿಕನ್ ಡಾಲರ್ ವೇತನ ಪಡೆದಿದ್ದರೆ, ಗೂಗಲ್ ಸಿಇಒ ಸುಂದರ್ ಪಿಚೈ ಕಳೆದ ವರ್ಷದ ಸ್ಯಾಲರಿ 10.73 ಮಿಲಿಯನ್ ಅಮೆರಿಕನ್ ಡಾಲರ್. ಮೈಕ್ರೋಸಾಫ್ಟ್‌ನ ಸತ್ಯ ನಾಡೆಲ್ಲಾ 2024ರಲ್ಲಿ 79.1 ಮಿಲಿಯನ್ ವೇತನ ಪಡೆದಿದ್ದಾರೆ. ಇವರಿಬ್ಬರ ಒಟ್ಟು ವೇತನಕ್ಕೂ ಹೆಚ್ಚಿದ ವೈಭವ್ ತನೇಜಾ ಸ್ಯಾಲರಿ.

ವೈಭವ್ ತನೇಜಾ ಕಳೆದ ವರ್ಷ ಪಡೆದ ಒಟ್ಟು ಮೊತ್ತದಲ್ಲಿ ನೇರ ಕ್ಯಾಶ್ ಸ್ಯಾಲರಿ ಮೊತ್ತ ಕಡಿಮೆ. ಆದರೆ ಬಹುತೇಕ ಮೊತ್ತವನ್ನು ಷೇರು ಹಾಗೂ ಈಕ್ವಿಟಿ ರೂಪದಲ್ಲಿ ಪಡೆದಿದ್ದಾರೆ. ಟೆಸ್ಲಾ ಷೇರುಗಳ ಮೂಲಕ ವೈಭವ್ ತನೇಜಾ ಸಾವಿರ ಕೋಟಿ ರೂಪಾಯಿ ಪಡೆದಿದ್ದಾರೆ.

2017ರಲ್ಲಿ ಟೆಸ್ಲಾ ಕಂಪನಿ ಸೇರಿಕೊಂಡ ವೈಭವ್ ತನೇಜಾ

2017ರಲ್ಲಿ ವೈಭವ್ ತನೇಜಾ ಟೆಸ್ಲಾ ಕಂಪನಿ ಸೇರಿಕೊಂಡರು. ಇದಕ್ಕೂ ಮೊದಲು ಸೋಲಾರ್ ಸಿಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 2016ರಲ್ಲಿ ಸೋಲಾರ್ ಸಿಟಿ ಕಂಪನಿಯನ್ನು ಟೆಸ್ಲಾ ಖರೀದಿಸಿತ್ತು. ಭಾರತ ಹಾಗೂ ಅಮೆರಿಕದಲ್ಲಿ ವೈಭವ್ ತನೇಜಾ ಕೆಲಸ ಮಾಡಿದ್ದಾರೆ. ಅಸಿಸ್ಟೆಂಟ್ ಕಾರ್ಪೋರೇಟ್ ಕಂಟ್ರೋಲರ್ ಆಗಿ ಕೆಲಸಕ್ಕೆ ಸೇರಿದ ವೈಭವ್ ತನೇಜಾ, 2023ರಲ್ಲಿ ಚೀಫ್ ಫಿನಾನ್ಶಿಯಲ್ ಆಫೀಸರ್ ಆಗಿ ಬಡ್ತಿ ಪಡೆದಿದ್ದರು.

2021ರಲ್ಲಿ ತನೇಜಾಗೆ ಮತ್ತೊಂದು ಜವಾಬ್ದಾರಿ ನೀಡಲಾಗಿದೆ. ಭಾರತದಲ್ಲಿ ಟೆಸ್ಲಾ ಆರಂಭ ಹಾಗೂ ಆಪರೇಶನ್ ಜವಾಬ್ದಾರಿಯನ್ನು ವೈಭವ್‌ಗೆ ನೀಡಿದ್ದಾರೆ. ಟೆಸ್ಲಾ ಇಂಡಿಯಾ ಮೋಟಾರ್ ಹಾಗೂ ಎನರ್ಡಿ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕರಾಗಿ ವೈಭವ್ ತನೇಜಾ ಅವರಿಗೆ ಜವಾಬ್ದಾರಿ ನೀಡಲಾಗಿದೆ. ಟೆಸ್ಲಾ ಕಂಪನಿಯ ಸಿಎಫ್ಒ ಆಗಿ ಕಾರ್ಯನಿರ್ವಹಿಸುತ್ತಿರುವ ಮೊದಲ ಭಾರತೀಯ ವೈಭವ್ ತನೇಜಾ ಅಲ್ಲ. ಇದಕ್ಕೂ ಮೊದಲು 2017ರಿಂದ 2019ರ ವರೆಗೆ ದೀಪಕ್ ಅಹುಜಾ ಟೆಸ್ಲಾ ಸಿಎಫ್ಒ ಆಗಿ ಕಾರ್ಯನಿರ್ವಹಿಸಿದ್ದರು.

47 ವರ್ಷದ ವೈಭವ್ ತನೇಜಾ ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ. 2000ನೇ ಇಸವಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿ ವೃತ್ತಿ ಆರಂಭಿಸಿದ ವೈಭವ್ ತನೇಜಾ 2006ರಲ್ಲಿ ಅಮೆರಿಕದಲ್ಲಿ ಅಧಿಕೃತ ಪಬ್ಲಿಕ್ ಅಕೌಂಟೆಂಟ್ ಆಗಿ ಸೇವೆ ಆರಂಭಿಸಿದ್ದರು.