Asianet Suvarna News Asianet Suvarna News

1.3 ಬಿಲಿಯನ್ ಕೊಡಲ್ಲ: ಪಾಕ್ ಮುಸುಡಿಗೆ ಗುದ್ದಿದ ಯುಎಸ್!

ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾದ ಪಾಕಿಸ್ತಾನ| ಪಾಕ್ ಗೆ ಆರ್ಥಿಕ ಗುದ್ದು ನೀಡಿದ ಅಮೆರಿಕ| 1.3 ಬಿಲಿಯನ್ ಡಾಲರ್ ಮೊತ್ತದ ಆರ್ಥಿಕ ನೆರವನ್ನು ಸ್ಥಗಿತ| ಭಯೋತ್ಪಾದನೆ ಪೋಷಿಸುವವರೆಗೂ ನೆರವಿಲ್ಲ ಎಂದ ಟ್ರಂಪ್|

US Suspended Finacial Assistance to Pakistan
Author
Bengaluru, First Published Feb 23, 2019, 9:18 PM IST

ವಾಷಿಂಗ್ಟನ್(ಫೆ.23): ಪುಲ್ವಾಮಾ ಉಗ್ರ ದಾಳಿ ಹಿನ್ನೆಲೆಯಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕ ಕೂಡ ಪಾಕಿಸ್ತಾನಕ್ಕೆ ಆರ್ಥಿಕ ಗುದ್ದು ನೀಡಿದೆ.

ಪಾಕ್ ಮೇಲೆ ಬಿತ್ತು ಬಾಂಬ್: ಮೋದಿ ಹೊಡೆತಕ್ಕೆ ಇಮ್ರಾನ್ ಲಬೋ ಲಬೋ!

ವಿಶ್ವ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿರುವ ಪಾಕಿಸ್ತಾನಕ್ಕೆ ಅಮೆರಿಕ ಮತ್ತೊಂದು ಶಾಕ್ ನೀಡಿದ್ದು, ಹಾಲಿ ವಿತ್ತೀಯ ವರ್ಷದಲ್ಲಿ ಪಾಕಿಸ್ತಾನಕ್ಕೆ ನೀಡಬೇಕಿದ್ದ ಸುಮಾರು 1.3 ಬಿಲಿಯನ್ ಡಾಲರ್ ಮೊತ್ತದ ಆರ್ಥಿಕ ನೆರವನ್ನು ಸ್ಥಗಿತಗೊಳಿಸಿದೆ.

ಪಾಕ್ ಮೇಲೆ ಮತ್ತೊಂದು ಬಾಂಬ್: ಇಮ್ರಾನ್ ನೀರಿಳಿಸ್ತಿದ್ದಾರೆ ಮೋದಿ!

ಈ ಹಿಂದೆ ಪಾಕಿಸ್ತಾನಕ್ಕೆ 1.3 ಬಿಲಿಯನ್ ಡಾಲರ್ ಹಣ ನೀಡಲು ಅಮೆರಿಕ ಕಾಂಗ್ರೆಸ್ ಅನುಮೋದನೆ ನೀಡಿತ್ತು. ಇದೀಗ ಪುಲ್ವಾಮ ಉಗ್ರ ದಾಳಿ ಬಳಿಕ ಟ್ರಂಪ್ ಸರ್ಕಾರ ಈ ಆರ್ಥಿಕ ನೆರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವುದಾಗಿ ಘೋಷಣೆ ಮಾಡಿದೆ.

ಪಾಕ್ ಮೇಲೆ 3ನೇ ಬಾಂಬ್: ಅಲ್ಲಿ ಟೊಮೆಟೊ ಇಲ್ಲ, ಅಲ್ಲಿಂದ ಸಿಮೆಂಟ್ ಬೇಕಿಲ್ಲ!

ಈ ಬಗ್ಗೆ ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದು, ಪಾಕಿಸ್ತಾನಕ್ಕೆ ಪ್ರತಿ ವರ್ಷ 9 ಸಾವಿರ ಕೋಟಿ ರೂ. ಆರ್ಥಿಕ ನೆರವು ನೀಡುತ್ತಿದ್ದರೂ ವಿಶ್ವ ಸಮುದಾಯಕ್ಕೆ ಅದರಿಂದ ಲಾಭವೇನೂ ಆಗಿಲ್ಲ ಎಂದು ಹರಿಹಾಯ್ದಿದ್ದಾರೆ.

 

Follow Us:
Download App:
  • android
  • ios