Asianet Suvarna News Asianet Suvarna News

ಪಾಕಿಸ್ತಾನ್ ಈಸ್ ಡ್ಯಾಮ್ ಶಿಟ್: ಟ್ರಂಪ್ ಮಾತು ಫುಲ್ ಹಿಟ್!

ಪಾಕ್‌ಗೆ ಆರ್ಥಿಕ ನೆರವು ಸಾಧ್ಯವಿಲ್ಲ ಎಂದ ಡೋನಾಲ್ಡ್ ಟ್ರಂಪ್! ಪಾಕ್‌ಗೆ ಅಮೆರಿಕದ ಮಿಲಿಟರಿ ನೆರವು ಕನಸಿನ ಮಾತು ಎಂದ ಅಧ್ಯಕ್ಷ! ನಮ್ಮ ದುಡ್ಡು ತಿಂದು ನಮಗೇ ಮೋಸ ಮಾಡಿದ ರಾಷ್ಟ್ರ ಪಾಕಿಸ್ತಾನ! ಭಯೋತ್ಪಾದನೆ ನಿಗ್ರಹದ ಹೆಸರಲ್ಲಿ ಅಮೆರಿಕಕ್ಕೆ ಪಂಗನಾಮ ಹಾಕಿದ ಪಾಕ್! ಪಾಕ್ ಕಪಟ ನಾಟಕ ನನ್ನ ಮುಂದೆ ನಡೆಯಲ್ಲ ಎಂದ ಡೋನಾಲ್ಡ್ ಟ್ರಂಪ್

 

US Presient Defended His Decision To Stop Aid For Pakistan
Author
Bengaluru, First Published Nov 19, 2018, 3:29 PM IST
  • Facebook
  • Twitter
  • Whatsapp

ವಾಷಿಂಗ್ಟನ್(ನ.19): ಪಾಕಿಸ್ತಾನಕ್ಕೆ ಆರ್ಥಿಕ ಮತ್ತು ಮಿಲಿಟರಿ ನೆರವು ಸ್ಥಗಿತಗೊಳಿಸಿರುವ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ನಮ್ಮ ದುಡ್ಡು ತಿಂದ ಪಾಕಿಸ್ತಾನ ಅಮೆರಿಕಕ್ಕೆ ಯಾವುದೇ ಸಹಾಯ ಮಾಡಿಲ್ಲ ಎಂದು ಆರೋಪಿಸಿದ್ದಾರೆ.

ಇಷ್ಟು ದಿನ ಭಯೋತ್ಪಾದನೆ ನಿಗ್ರಹ ಹೆಸರಲ್ಲಿ ನಮ್ಮಿಂದ ಬಿಲಿಯನ್ ಗಟ್ಟಲೇ ಹಣ ಪೀಕಿದ ಪಾಕಿಸ್ತಾನ, ಕೊನೆಗೆ ಅಲ್ ಖೈದಾ ನಾಯಕ ಓಸಾಮಾ ಬಿನ್ ಲ್ಯಾಡನ್ ಗೆ ಆಶ್ರಯ ನೀಡಿದ್ದು ಇಡೀ ಜಗತ್ತಿಗೆ ಗೊತ್ತಿದೆ ಎಂದು ಟ್ರಂಪ್ ಗುಡುಗಿದ್ದಾರೆ.

ಜಾಗತಿಕ ಭಯೋತ್ಪಾನೆ ನಿಗ್ರಹದಲ್ಲಿ ಪಾಕಿಸ್ತಾನವನ್ನು ಪ್ರಮುಖ ಪಾಲುದಾರ ರಾಷ್ಟ್ರವನ್ನಾಗಿ ಮಾಡಿದ್ದೇ ಅಮೆರಿಕದ ದೊಡ್ಡ ತಪ್ಪು ಎಂದಿರುವ ಟ್ರಂಪ್, ಇದೇ ನೆವದಲ್ಲಿ ಅಭಿವೃದ್ಧಿ ಮಂತ್ರ ಜಪಿಸಿ ಪಾಕಿಸ್ತಾನ ನಮ್ಮಿಂದ ಬಿಲಿಯನ್ ಗಟ್ಟಲೇ ಆರ್ಥಿಕ ನೆರವು ಪಡೆದು ಅಮೆರಿಕಕ್ಕೆ ಮೋಸ ಮಾಡಿದೆ ಎಂದು ಹರಿಹಾಯ್ದಿದ್ದಾರೆ.

ಪಾಕಿಸ್ತಾನದ ಈ ಕಪಟ ನಾಟಕ ಅರಿತಿರುವ ತಮ್ಮ ಸರ್ಕಾರ, ಆ ದೇಶಕ್ಕೆ ಯಾವುದೇ ರೀತಿಯ ಆರ್ಥಿಕ ಮತ್ತು ಮಿಲಿಟರಿ ನೆರವು ನೀಡದಿರಲು ತೀರ್ಮಾನಿಸಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ತನ್ನ ಸೇನಾ ಹೆಡ್ ಕ್ವಾರ್ಟರ್ ಬಳಿಯೇ ಲಾಡೆನ್ ಗೆ ಆಶ್ರಯ ನೀಡಿದ್ದ ಪಾಕಿಸ್ತಾನಕ್ಕೆ ಅಮೆರಿಕ ಕಣ್ಣು ಮುಚ್ಚಿ ಪ್ರತಿ ವರ್ಷ 1.3 ಬಿಲಿಯನ್ ಯುಎಸ್ ಡಾಲರ್ ಆರ್ಥಿಕ ನೆರವು ಕೊಡುತ್ತಿತ್ತು ಎಂದು ಟ್ರಂಪ್ ಅಪಹಾಸ್ಯ ಮಾಡಿದ್ದಾರೆ.

Follow Us:
Download App:
  • android
  • ios