ಆರ್ಥಿಕ ಜಗತ್ತು ತಲ್ಲಣ, ಅಮೆರಿಕ ಹಣದುಬ್ಬರ 40 ವರ್ಷಗಳ ಗರಿಷ್ಠಕ್ಕೆ!
* ದೇಶದ ಷೇರು, ಕರೆನ್ಸಿ ಮಾರುಕಟ್ಟೆಗಳು ತತ್ತರ
* ವಿತ್ತ ಜಗತ್ತು ತಲ್ಲಣ
-* ಅಮೆರಿಕ ಹಣದುಬ್ಬರ 40 ವರ್ಷಗಳ ಗರಿಷ್ಠಕ್ಕೆ
ನವದೆಹಲಿ: ಸೋಮವಾರ ವಿಶ್ವದ ಬಹುತೇಕ ಷೇರುಸೂಚ್ಯಂಕ ಭಾರೀ ಕುಸಿತ ಕಾಣುವ ಮೂಲಕ ಹೂಡಿಕೆದಾರರಿಗೆ ಭಾರೀ ಶಾಕ್ ನೀಡಿವೆ. ಬಹುತೇಕ ದೇಶಗಳಲ್ಲಿ ಹಣದುಬ್ಬರ ಏರಿಕೆ ಸಮಸ್ಯೆ, ಡಾಲರ್‌ಗೆ ಬೇಡಿಕೆ ಹೆಚ್ಚಿದ್ದು, ಚೀನಾದಲ್ಲಿ ಮತ್ತೆ ಕೋವಿಡ್ ಸಂಖ್ಯೆಯಲ್ಲಿನ ಏರಿಕೆಗಳು ಷೇರು ಸೂಚ್ಯಂಕದ ಕುಸಿತಕ್ಕೆ ಕಾರಣವಾಗಿದೆ.
ಅಮೆರಿಕದ ನಾಸ್ಡಾಕ್ ಸೂಚ್ಯಂಕ 513 ಅಂಕ ಕುಸಿತು 10826ರಲ್ಲಿ, ಜಪಾನ್‌ನ ನಿಕ್ಕಿ 836 ಅಂಕ ಕುಸಿದು 26987ರಲ್ಲಿ, ಸಿಂಗಾಪುರದ ಹ್ಯಾಂಗ್‌ಸೆಂಗ್ 738 ಅಂಕ ಕುಸಿದು 21067ರಲ್ಲಿ, ಶಾಂಘೈ ಕಾಂಪೋಸಿಟ್ 30 ಅಂಕ ಕುಸಿದು 3255ರಲ್ಲಿ, ಲಂಡನ್‌ನ ಎಫ್‌ಟಿಎಸ್‌ಇ 125 ಅಂಕ ಕುಸಿದು 7191ರಲ್ಲಿ, ಜರ್ಮನಿಯ ಡಿಎಎಕ್ಸ್ 313 ಅಂಕ ಕುಸಿದು 13444ರಲ್ಲಿ, ಫ್ರಾನ್ಸ್‌ನ ಸಿಎಸಿ 160 ಅಂಕ ಕುಸಿದು 6026ರಲ್ಲಿ ಮುಕ್ತಾಯವಾಗಿದೆ.
ಅಮೆರಿಕದಲ್ಲಿ ಹಣದುಬ್ಬರ 40 ವರ್ಷಗಳ ಗರಿಷ್ಠಕ್ಕೆ ತಲುಪಿರುವುದು ಹಾಗೂ ಅಲ್ಲಿನ ಕೇಂದ್ರೀಯ ಬ್ಯಾಂಕ್ ಬಡ್ಡಿ ದರ ಏರಿಕೆ ಮಾಡಿದ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಅಲ್ಲೋಲ- ಕಲ್ಲೋಲವಾಗಿದೆ. ವಿಶ್ವಾದ್ಯಂತ ಷೇರು, ಕರೆನ್ಸಿ ಪೇಟೆಗಳಲ್ಲಿ ತಲ್ಲಣ ಉಂಟಾಗಿದೆ.
ಸೆನ್ಸೆಕ್ಸ್ 1456 ಅಂಕ ಕುಸಿತ
ಮುಂಬೈ: ಬಾಂಬೆ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ 1456 ಅಂಕ ಕುಸಿತ ಕಂಡಿದೆ. 52846ರಲ್ಲಿ ವಹಿವಾಟು ಮುಗಿಸಿದೆ. ಇದರಿಂದ ಹೂಡಿಕೆದಾರರಿಗೆ ಒಂದೇ ದಿನ 6.64 ಲಕ್ಷ ಕೋಟಿ ರು. ನಷ್ಟವಾಗಿದೆ. 2 ದಿನದಲ್ಲಿ ಹೂಡಿಕೆದಾರರ 10 ಲಕ್ಷ ರು. ಸಂಪತ್ತು ಕರಗಿದೆ.
ರುಪಾಯಿ 78.04ಕ್ಕೆ ಕುಸಿತ: ಅತಿ ಕನಿಷ್ಠ!
ಮುಂಬೈ: ಡಾಲರ್ ಎದುರು ರುಪಾಯಿ ಮೌಲ್ಯ ಸೋಮವಾರ 11 ಪೈಸೆ ಇಳಿದು 78.04 ರು.ಗೆ ಕುಸಿದಿದೆ. ಇದು ರುಪಾಯಿಯ ಸಾರ್ವಕಾಲಿಕ ಕನಿಷ್ಠ ಮೊತ್ತ.
ವಿಶ್ವಾದ್ಯಂತ ಷೇರು ಸೂಚ್ಯಂಕಗಳು ಪಲ್ಟಿ
ಅಮೆರಿಕದ ನಾಸ್ಡಾಕ್, ಜಪಾನ್‌ನ ನಿಕ್ಕಿ, ಸಿಂಗಾಪುರದ ಹ್ಯಾಂಗ್‌ಸೆಂಗ್, ಶಾಂಘೈ, ಲಂಡನ್, ಜರ್ಮನಿ, ಫ್ರಾನ್ಸ್ ಸೂಚ್ಯಂಕಗಳು ಕೂಡ ಕುಸಿತ ಕಂಡಿವೆ.