ತರಿಗೆದಾರರಿಗೆ ಗುಡ್ ನ್ಯೂಸ್, ಆರೋಗ್ಯ ಕ್ಷೇತ್ರಕ್ಕೂ ಬಂಪರ್, ಫೆ.1ರ ಕೇಂದ್ರ ಬಜೆಟ್ ನಿರೀಕ್ಷೆ

ಫೆ.1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಬಜೆಟ್ ಮೇಲೆ ನಿರೀಕ್ಷೆಗಳು ಹೆಚ್ಚಾಗಿದೆ. ಈ ಪೈಕಿ ತೆರಿಗೆದಾರರಿಗೆ ಗುಡ್ ನ್ಯೂಸ್ ಸಿಗುವ ಸಾಧ್ಯತೆ ಇದೆ. ಬಜೆಟ್ ಮೇಲಿರುವ ನಿರೀಕ್ಷೆ ಹಾಗೂ ಬದಲಾವಣೆ ಸಾಧ್ಯಗಳೇನು?

Union Budget 2025 big relief to taxpayers to Health Insurance tax deduction expectation list

ನವದೆಹಲಿ(ಜ.16)  ಕೇಂದ್ರ ಬಜೆಟ್ ಚರ್ಚೆಗಳು ಆರಂಭಗೊಂಡಿದೆ. ಕೈಗಾರೆಕೆ, ಆರೋಗ್ಯ, ಆಟೋಮೊಬೈಲ್, ಟೆಕ್ನಾಲಜಿ, ಶಿಕ್ಷಣ ಸೇರಿದಂತೆ ಪ್ರತಿ ಕ್ಷೇತ್ರ ಕೂಡ ಈ ಬಾರಿಯ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಪ್ರಮುಖವಾಗಿ ಪ್ರಾಮಾಣಿಕವಾಗಿ ಟ್ಯಾಕ್ಸ್ ಕಟ್ಟುವ ಮದ್ಯಮ ವರ್ಗದ ಜನ ಮತ್ತಷ್ಟು ವಿನಾಯಿತಿ ಬಯಸಿದ್ದಾರೆ. ಇದರ ಜೊತೆಗೆ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೂ ಆದ್ಯತೆ ಸಿಗುವ ಸಾಧ್ಯತೆಗಳಿವೆ. ಈ ಬಾರಿಯ ಬಜೆಟ್‌ ಮೇಲೆ ಹಲವು ನಿರೀಕ್ಷೆಗಳಿವೆ. 

ಜನವರಿ ಮೊದಲ ವಾರದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಕ್ಷೇತ್ರಗಳ ಗಣ್ಯರು, ತಜ್ಞರ ಜೊತೆ ಸಮಾಲೋಚನೆ ನಡೆಸಿದ್ದಾರೆ. ವಿವಿಧ ಕ್ಷೇತ್ರಗಳ ಬೇಡಿಕೆ, ಒತ್ತಾಯ ಹಾಗೂ ಬದಲಾವಣೆ ಫೀಡ್ ಬ್ಯಾಕ್ ಪಡೆದಿದ್ದಾರೆ. ಡಿಸೆಂಬರ್ 6 ರಿಂದ ಜನವರಿ 6ರ ವರೆಗೆ ಒಂದು ತಿಂಗಳ ಕಾಲ ನಿರ್ಮಲಾ ಸೀತಾರಾಮನ್ ವಿವಿಧ ಕ್ಷೇತ್ರದ ಸ್ಟೇಕ್‌ಹೋಲ್ದರ್ಸ್ ಜೊತೆ ಚರ್ಚೆ ನಡೆಸಿದ್ದಾರೆ. ಅಭಿಪ್ರಾಯ ಪಡೆದಿದ್ದಾರೆ. ಸಂಪ್ರದಾಯದ ಪ್ರಕಾರ ಫೆಬ್ರವರಿ 1 ರಂದು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಈ ಕುರಿತು ಕೇಂದ್ರ ಸರ್ಕಾರ ಇನ್ನಷ್ಟೇ ಅಧಿಕೃತ ಪ್ರಕಟಣೆ ಹೊರಡಿಸಬೇಕಿದೆ. ಆದರೆ ಈ ಬಾರಿ ಫೆಬ್ರವರಿ 1 ಶನಿವಾರವಾಗಿರುವ ಕಾರಣ ಬದಲಾವಣೆ ಕುರಿತು ಮಾತುಗಳು ಕೇಳಿಬಂದಿತ್ತು. ಆದರೆ ದಿನಾಂಕ ಬದಲಾವಣೆ ಸಾಧ್ಯತೆಗಳಿಲ್ಲ.

ಕೇಂದ್ರ ಬಜೆಟ್‌ನಲ್ಲಿ ಇಪಿಎಫ್‌ಒ ಕನಿಷ್ಠ ಪಿಂಚಣಿ ₹7500ಕ್ಕೆ ಏರಿಕೆ ಸಾಧ್ಯತೆ!

ತೆರಿಗೆದಾರರ ಅತೀ ದೊಡ್ಡ ಆಗ್ರಹ
ಮಧ್ಯಮ ವರ್ಗದ ಜನ ತೆರಿಗೆಯಿಂದ ಬಳಲಿ ಬೆಂಡಾಗಿದ್ದಾರೆ. ಪ್ರಮುಖವಾಗಿ ವೇತನ ವರ್ಗ ತೆರಿಗೆ ಪಾವತಿಯಲ್ಲಿ ಮತ್ತಷ್ಟು ವಿನಾಯಿತಿ ಬಯಸಿದ್ದಾರೆ. ಈ ಕುರಿತು ಭಾರಿ ಚರ್ಚೆಗಳು ನಡೆಯುತ್ತಿದೆ. ಈ ಬಾರಿ ತೆರಿಗೆ ವಿನಾಯಿತಿಯನ್ನು 10 ಲಕ್ಷಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಭಾರತದ ಕೋಟ್ಯಾಂತರ ಮಂದಿ ಇದೀಗ ತೆರಿಗೆ ವಿನಾಯಿತಿಗೆ ಆಗ್ರಹಿಸಿದ್ದಾರೆ. ಇತ್ತೀಚೆಗಷ್ಟೇ ಕೇಂದ್ರ ಹಣಕಾಸು ಸಚಿವೆ ತೆರಿಗೆ ವಿಚಾರದಲ್ಲಿ ಭಾರಿ ಟ್ರೋಲ್ ಆಗಿದ್ದರು. ಪಾಪ್‌ಕಾರ್ನ್‌ಗೆ ತೆರಿಗೆ ಸೇರಿದಂತೆ ಹಲವು ತೆರಿಗೆ ವಿಚಾರದಲ್ಲಿ ಟ್ರೋಲ್ ಆಗಿದ್ದರು. ಹೀಗಾಗಿ ಈ ಬಾರಿಯ ಬಜೆಟ್ ಮೇಲೆ ಮಧ್ಯಮ ವರ್ಗ ಹೆಚ್ಚಿನ ಗಮನಕೇಂದ್ರೀಕರಿಸಿದೆ.

ಆರೋಗ್ಯ ವಿಮೆ ಮೇಲೆ ತೆರೆಗೆ ಕಡಿತ
ಆರೋಗ್ಯ ವಿಮೆಗಳು ಕಡಿಮೆ ದರದಲ್ಲಿ ಲಭ್ಯವಾಗುವ ಸಾಧ್ಯತೆಗಳಿವೆ. ಕಾರಣ ಈ ಬಾರಿ ಆರೋಗ್ಯ ವಿಮೆ ಮೇಲಿನ ತೆರಿಗೆ ಕಡಿತಗೊಳಿಸುವ ಪ್ರಸ್ತಾವನೆಗಳಿವೆ. 2047ರ ವೇಳೆ ಭಾರತದ ಪ್ರತಿಯೊಬ್ಬರಿಗೆ ಆರೋಗ್ಯ ವಿಮೆ ಲಭ್ಯವಾಗಬೇಕು ಅನ್ನೋ ಗುರಿಯೊಂದಿಗೆ ಮುನ್ನುಗ್ಗುತ್ತಿರುವ ಕೇಂದ್ರ ಸರ್ಕಾರ ಆರೋಗ್ಯ ವಿಮೆ ಮತ್ತಷ್ಟು ಸರಳೀಕೃತಗೊಳಿಸವು ಸಾಧ್ಯತೆ ಇದೆ. 

ಇದೇ ವೇಳೆ ಕೇಂದ್ರ ಬಜೆಟ್ ಮೇಲೆ ಹಲವು ಕ್ಷೇತ್ರಗಳು ಭಾರಿ ನಿರೀಕ್ಷೆ ಇಟ್ಟುಕೊಂಡಿದೆ. ಪ್ರಮುಖವಾಗಿ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಉತ್ತೇಜನ ನಿರೀಕ್ಷಿಸಲಾಗಿದೆ. ಯುವ ಸಮೂಹಕ್ಕೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಬಜೆಟ್‌ನಲ್ಲಿ ಯೋಜನೆಗಳನ್ನು ನಿರೀಕ್ಷಿಸಲಾಗಿದೆ. ಈ ಮೂಲಕ ನಿರೋದ್ಯಗ ಪ್ರಮಾಣ ಕಡಿಮೆ ಮಾಡಲು ಹಾಗೂ ದೇಶ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆಗಳಲ್ಲೊಂದಾಗ ಉದ್ಯೋಗ ಕ್ಷೇತ್ರದ ಸವಾಲು ಮೆಟ್ಟಿನಿಲ್ಲುವ ನಿರೀಕ್ಷೆ ಇಟ್ಟಕೊಳ್ಳಲಾಗಿದೆ.

ಮಹಿಳೆ ಹಾಗೂ ಮಕ್ಕಳ ಯೋಜನೆ, ಕೃಷಿ, ರೈತ, ಶಿಕ್ಷಣ, ಬಡವರು ಸೇರಿದಂತೆ ಪ್ರತಿ ಕ್ಷೇತ್ರಗಳು ಒಂದಲ್ಲಾ ಒಂದು ನಿರೀಕ್ಷೆಯನ್ನು ಇಟ್ಟುಕೊಂಡಿದೆ. 

ಬಜೆಟ್‌ಗೂ ಮುನ್ನ ಈ 4 ಡಿಫೆನ್ಸ್ ಷೇರುಗಳ ಮೇಲೆ ಹೂಡಿಕೆ ಮಾಡಿದ್ರೆ ಜೇಬು ತುಂಬ ಹಣ!
 

Latest Videos
Follow Us:
Download App:
  • android
  • ios