22ರ ಹರೆಯದ ಮ್ಯಾಂಚೆಸ್ಟರ್ ವಿದ್ಯಾರ್ಥಿನಿ ಲಾರಾ ಆನ್‌ಲೈನ್ ಹರಾಜಿನಲ್ಲಿ ತನ್ನ ಕನ್ಯತ್ವವನ್ನು 18 ಕೋಟಿ ರೂ.ಗೆ ಮಾರಾಟ ಮಾಡಿದ್ದಾಳೆ. ಹಾಲಿವುಡ್ ನಟನೊಬ್ಬ ಅತಿ ಹೆಚ್ಚು ಬಿಡ್ ಮಾಡಿ ಗೆದ್ದಿದ್ದಾನೆ. ಲಾರಾ ತನ್ನ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದು, ವಿಷಾದವಿಲ್ಲ ಎಂದಿದ್ದಾಳೆ. ಈ ಕೃತ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ದುಡ್ಡಿಗಾಗಿ ಏನು ಬೇಕಾದರೂ ಮಾಡಲು ರೆಡಿ ಇರುವ ದೊಡ್ಡ ವರ್ಗವೇ ಇದೆ. ತಮ್ಮ ಅಂಗಾಂಗಗಳನ್ನು ಮಾರಾಟ ಮಾಡುವವರನ್ನು ಕೇಳಿರಬಹುದು. ಆದರೆ ಕನ್ಯತ್ವವನ್ನೇ ಮಾರಾಟ ಮಾಡಲು ಬಿಡ್​ ಕರೆದಿರುವುದನ್ನು ಎಲ್ಲಿಯಾದ್ರೂ ಕಂಡಿರುವಿರಾ? ಆದರೆ ಇಲ್ಲಿ ಹಾಗೆ ಆಗಿದೆ. ಇಂಗ್ಲೆಂಡ್​ನ ಮ್ಯಾಂಚೆಸ್ಟರ್‌ನ 22 ವರ್ಷದ ವಿದ್ಯಾರ್ಥಿನಿ ಲಾರಾ ಆನ್‌ಲೈನ್ ಹರಾಜಿನ ಮೂಲಕ ತನ್ನ ಕನ್ಯತ್ವವನ್ನು ಮಾರಾಟಕ್ಕೆ ಇಟ್ಟಿದ್ದಳು. ಈ ಹರಾಜನ್ನು ಎಸ್ಕಾರ್ಟ್ ಏಜೆನ್ಸಿಯ ವೆಬ್‌ಸೈಟ್‌ನಲ್ಲಿ ಆಯೋಜಿಸಲಾಗಿತ್ತು. ರಾಜಕಾರಣಿಗಳು, ಉದ್ಯಮಿಗಳು ಮತ್ತು ಪ್ರಸಿದ್ಧ ಸೆಲೆಬ್ರಿಟಿಗಳು ಇದರಲ್ಲಿ ಆಸಕ್ತಿ ತೋರಿಸಿದ್ದರು. ಅಂತಿಮವಾಗಿ ಹಾಲಿವುಡ್ ನಟನೊಬ್ಬ 1.7 ಮಿಲಿಯನ್ ಪೌಂಡ್‌ಗಳು ಅಂದರೆ ಸುಮಾರು 18 ಕೋಟಿ ರೂಪಾಯಿಗೆ ಬಿಡ್ ಮಾಡಿ ಕನ್ಯತ್ವ ಗೆದ್ದಿದ್ದಾನೆ! 

 ಕನ್ಯತ್ವ ಮಾರಾಟಕ್ಕಿಟ್ಟಿರುವ ಬಗ್ಗೆ ಮಾತನಾಡಿರುವ ಲಾರಾ, ನನಗೆ ನನ್ನ ನಿರ್ಧಾರದ ಬಗ್ಗೆ ಯಾವುದೇ ವಿಷಾದವಿಲ್ಲ ಎಂದಿದ್ದಾಳೆ. ನನ್ನ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಇದುದ ಒಂದು ಬುದ್ಧಿವಂತ ಮಾರ್ಗ ಎಂದು ನನಗೆ ಅನ್ನಿಸುತ್ತದೆ. ಅನೇಕ ಹುಡುಗಿಯರು ಯಾವುದೇ ಕಾರಣವಿಲ್ಲದೆ ತಮ್ಮ ಕನ್ಯತ್ವವನ್ನು ಕಳೆದುಕೊಳ್ಳುತ್ತಾರೆ. ಕನಿಷ್ಠ ಪಕ್ಷ ನನಗೆ ಆರ್ಥಿಕ ಭದ್ರತೆ ಸಿಕ್ಕಿತು. ಈಗ ನಾನು ಕೋಟ್ಯಧಿಪತಿಯಾಗಿದ್ದೇನೆ ಎಂದು ಯಾವುದೇ ಅಳುಕು ಇಲ್ಲದೆಯೇ ಹೇಳಿದ್ದಾಳೆ. ಹೆಚ್ಚಿನ ಮಹಿಳೆಯರು ತಮ್ಮ ಕನ್ಯತ್ವವನ್ನು ಕಳೆದುಕೊಳ್ಳುವುದರಿಂದ ಯಾವುದೇ ಆರ್ಥಿಕ ಅಥವಾ ಭಾವನಾತ್ಮಕ ಲಾಭವನ್ನು ಪಡೆಯುವುದಿಲ್ಲ. ಆದರೆ ನಾನು ಲಾರಾ ಕನ್ಯತ್ವವನ್ನು ಆರ್ಥಿಕವಾಗಿ ಸ್ವತಂತ್ರರಾಗಲು ಸಹಾಯ ಮಾಡುವ ಅಮೂಲ್ಯ ಆಸ್ತಿಯಾಗಿ ನೋಡಿದ್ದೇನೆ. ನಾನು ಸ್ವಾತಂತ್ರ್ಯವನ್ನು ಸಾಧಿಸಲು ಒಂದು ಕಾರ್ಯತಂತ್ರದ ಆಯ್ಕೆಯನ್ನು ಆರಿಸಿಕೊಂಡಿದ್ದೇನೆ ಎಂದಿದ್ದಾಳೆ. 

ಸಾಹಿಲ್​ನ ಬಲೆಗೆ ಬಿದ್ದ 12 ಬಾಲೆಯರು ಕೊನೆಗೆ ಕಂಡದ್ದು ಪೋ* ವೆಬ್​ಸೈಟ್​ನಲ್ಲಿ! ಪೊಲೀಸರು ಗಪ್​ಚುಪ್?

ಈ ಹರಾಜನ್ನು ಪ್ರಸಿದ್ಧ ಎಸ್ಕಾರ್ಟ್ ಏಜೆನ್ಸಿಯ ವೆಬ್‌ಸೈಟ್ ಮೂಲಕ ರಹಸ್ಯವಾಗಿ ಮಾಡಲಾಗಿತ್ತು. ಅನೇಕ ಶ್ರೀಮಂತ ಮತ್ತು ಪ್ರಭಾವಿ ಜನರು ಅದರಲ್ಲಿ ಆಸಕ್ತಿ ತೋರಿಸಿದ್ದರು. ಹಾಲಿವುಡ್ ಸೆಲೆಬ್ರಿಟಿ ಜೊತೆಗಿನ ಒಪ್ಪಂದವನ್ನು ಅಂತಿಮಗೊಳಿಸುವ ಮೊದಲು, ಉನ್ನತ ಉದ್ಯಮಿಗಳು ಮತ್ತು ರಾಜಕಾರಣಿಗಳಿಂದ ಆಫರ್‌ಗಳು ಬಂದಿದ್ದವು ಎಂದು ಲಾರಾ ಹೇಳಿದ್ದಾಳೆ. ಒಪ್ಪಂದವನ್ನು ಪೂರ್ಣಗೊಳಿಸಲು, ಲಾರಾ ತನ್ನ ಕನ್ಯತ್ವವನ್ನು ದೃಢೀಕರಿಸಲು ಖರೀದಿದಾರರ ಮುಂದೆ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದಳು. ಎರಡೂ ಪಕ್ಷಗಳ ರಕ್ಷಣೆಗಾಗಿ ಇಡೀ ಪ್ರಕ್ರಿಯೆಯನ್ನು ಗೌಪ್ಯವಾಗಿಡಲಾಗಿತ್ತು.

ಈ ಸುದ್ದಿ ವೈರಲ್​ ಆಗುತ್ತಲೇ ಲಾರಾಳ ಈ ನಿರ್ಧಾರವು ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಕೆಲವರು ಕನ್ಯತ್ವ ಮಾರಾಟ ಮಾಡುವುದು ತಪ್ಪು ಎಂದು ನಂಬಿದರೆ, ಇನ್ನು ಕೆಲವರು ಅದು ವೈಯಕ್ತಿಕ ಆಯ್ಕೆ ಎಂದು ನಂಬುತ್ತಾರೆ. ಸಂಸ್ಕೃತಿ ಮತ್ತು ಶುದ್ಧತೆಯನ್ನು ಉಲ್ಲೇಖಿಸಿ ಅನೇಕ ಜನರು ಈ ನಿರ್ಧಾರವನ್ನು ತಪ್ಪು ಎಂದು ಕರೆಯುತ್ತಿದ್ದಾರೆ, ಆದರೆ ಇದು ಆರ್ಥಿಕ ಪ್ರಯೋಜನಗಳನ್ನು ನೀಡುತ್ತಿದ್ದರೆ ಹಾಗೆ ಮಾಡುವುದು ತಪ್ಪಲ್ಲ ಎಂದು ಹಲವರು ನಂಬುತ್ತಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಮದ್ವೆ ಹೆಸ್ರಲ್ಲಿ 12 ಮಂದಿಗೆ ಟೋಪಿ ಹಾಕಿದ 21ರ ಖತರ್ನಾಕ್​ ಲೇಡಿ ಭಯಾನಕ ಸ್ಟೋರಿ ಕೇಳಿ!