Asianet Suvarna News Asianet Suvarna News

ಹೀಗೊಂದು ಜಿಎಸ್ಟಿ ತೆರಿಗೆ ವಂಚೆನೆ..ಅದು 60 ಕೋಟಿ ರೂ.

ಸರಕು ಮತ್ತು ಸೇವಾ ತೆರಿಗೆ ಜಾರಿಯಾದ ಮೇಲೆ ತೆರಿಗೆ ಕಳ್ಳತನ ಅಸಾಧ್ಯ ಎಂದೇ ಎಲ್ಲರೂ ಪರಿಭಾವಿಸಿದ್ದರು. ಆರ್ಥಿಕ ತಜ್ಞರು ಸಹ ಇದೇ ಮಾತನ್ನು ಹೇಳಿದ್ದರು. ಆದರೆ ಇಲ್ಲಿಬ್ಬರು ಉದ್ಯಮಿಗಳು ಬರೋಬ್ಬರಿ 60 ಕೋಟಿ ರೂ. ತೆರಿಗೆ ವಂಚನೆ ಮಾಡಿದ್ದಾರೆ. ಅವರು ವಂಚನೆ ಮಾಡಿದ್ದು ಹೇಗೆ? ಇಲ್ಲಿದೆ ಉತ್ತರ

 

Two Kanpur Businessmen Arrested for Rs 60 crore GST Fraud

ಲಕ್ನೋ[ಜು.6]  60 ಕೋಟಿ ರೂ. ತೆರಿಗೆ ವಂಚನೆ ಆರೋಪದಲ್ಲಿ ಇಬ್ಬರು ಉದ್ಯಮಿಗಳನ್ನು ಬಂಧಿಸಲಾಗಿದೆ. ಮನೋಜ್ ಕುಮಾರ್ ಮತ್ತು ಚಂದ್ರ ಪ್ರಕಾಶ್ ಥಾಯಲ್ ಎಂಬುವರನ್ನು ಬಂಧಿಸಲಾಗಿದ್ದು ಇವರು ಕೆಲ ಕಂಪನಿ ನಡೆಸುವುದರೊಂದಿಗೆ ತೆರಿಗೆ ವಂಚನೆ ಐಡಿಯಾಗಳನ್ನು ನೀಡುತ್ತಿದ್ದರು.

ಲಕ್ನೋದ  ಜಿ ಎಸ್ ಟಿ ವಿಭಾಗದ ನಿರ್ದೇಶಕರು ಈ ಬಗ್ಗೆ ಪ್ರಕಟಣೆಯೊಂದನ್ನು ನೀಡಿದ್ದು, ನಕಲಿ ಬಿಲ್ ಗಳನ್ನು ಸೃಷ್ಟಿಸಿ ಹೇಗೆ ತೆರಿಗೆ ವಂಚಿಸುತ್ತಿದ್ದರು ಎಂಬುದನ್ನು ತಿಳಿಸಿದ್ದಾರೆ.

ಸಿಮೆಂಟ್, ಕಲ್ಲಿದ್ದಲು, ಕಚ್ಚಾ ವಸ್ತುಗಳು, ಪ್ಲಾಸ್ಟಿಕ್, ಲೋಹ ಸೇರಿದಂತೆ ವಿವಿಧ ವಸ್ತುಗಳನ್ನು ತಮ್ಮ ಗ್ರಾಹಕರಿಗೆ ಪೂರೈಕೆ ಮಾಡಿದ್ದೇವೆ ಎಂಬ ಇನ್ ವೈಸ್ ಸಿದ್ಧ ಮಾಡುತ್ತಿದ್ದರು. ಈ ಮೂಲಕ ಇನ್ ಪುಟ್ ಟ್ಯಾಕ್ಸ್ ಕ್ರೆಡಿಟ್ ಲಾಭ ಪಡೆದುಕೊಳ್ಳುತ್ತಿದ್ದರು. 

ಕಳೆದ ಒಂದು ವರ್ಷದಲ್ಲಿ 400 ಕೋಟಿ ರೂ. ಅಧಿಕ ನಕಲಿ ಇನ್ ವೈಸ್ ಸಿದ್ಧಮಾಡಿ ಜಿಎಸ್ ಟಿಗೆ 60 ಕೋಟಿ ರೂ. ವಂಚಿಸಿದ್ದರು. ನಕಲಿ ಇ-ವೆ  ಬಿಲ್ ಗಳನ್ನು ತಯಾರಿಸಿ ತಮ್ಮದೆ ಹಣವನ್ನು ಆರ್ ಟಿಜಿಎಸ್ ಮೂಲಕ ಟ್ರಾನ್ಸ್ ಫರ್ ಮಾಡಿಸಿಕೊಂಡು ನಂತರ ಕ್ಯಾಶ್ ರೂಪದಲ್ಲಿ ಹಣ ಪಡೆದುಕೊಳ್ಳುತ್ತಿದ್ದರು.

Follow Us:
Download App:
  • android
  • ios