Asianet Suvarna News Asianet Suvarna News

ಚೀನಾ-ಯುಸ್ ಬಡಿದಾಡೋದು ನೋಡಿ ಮುಸಿ ಮುಸಿ ನಕ್ಕ ಜೇಟ್ಲಿ!

ಚೀನಾ-ಅಮೆರಿಕ ವಣಿಜ್ಯ ಸಮರ ಭಾರತಕ್ಕೆ ಲಾಭ! ಜಾಗತಿಕ ವಾಣಿಜ್ಯ ಸಮರ ಭಾರತಕ್ಕೆ ಅನುಕೂಲ! ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅಭಿಮತ! ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ವಸ್ತುಗಳಿಗೆ ಬೇಡಿಕೆ! ಅಮೆರಿಕ ಮಾರುಕಟ್ಟೆಯಲ್ಲಿ ಸ್ಪರ್ಧೆ ಒಡ್ಡುತ್ತಿರುವ ಭಾರತೀಯ ವಸ್ತುಗಳು

Trade war will help India emerge as bigger trading base says Arun Jaitley
Author
Bengaluru, First Published Sep 28, 2018, 4:42 PM IST

ನವದೆಹಲಿ(ಸೆ.28): ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ವಾಣಿಜ್ಯ ಸಮರದಿಂದಾಗಿ ಭಾರತಕ್ಕೆ ಅನುಕೂಲವಾಗುವ ಸಾಧ್ಯತೆ ಹೆಚ್ಚಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 

ಪ್ರಸ್ತುತ ಅಮೆರಿಕ ಮತ್ತು ಚೀನಾ ಮಧ್ಯೆ ವಾಣಿಜ್ಯ ಮತ್ತು ವ್ಯಾಪಾರ ಸಮರ ನಡೆಯುತ್ತಿದ್ದು, ಉಭಯ ರಾಷ್ಟ್ರಗಳ ಮಧ್ಯೆ ಆಮದು ಮತ್ತು ರಫ್ತು ಸಮಸ್ಯೆ ಸೃಷ್ಟಿಯಾಗುತ್ತಿದೆ. ಜೊತೆಗೆ ಚೀನಾದ ಉತ್ಪನ್ನಗಳ ಮೇಲೆ ಅಮೆರಿಕ ಅತ್ಯಧಿಕ ತೆರಿಗೆ ವಿಧಿಸುತ್ತಿದ್ದು, ಚೀನಾದಲ್ಲೂ ಅಮೆರಿಕ ಉತ್ಪನ್ನಗಳಿಗೆ ನಿರ್ಬಂಧ, ಆಮದು ತೆರಿಗೆ ವಿಧಿಸಲಾಗುತ್ತಿದೆ. 

ಆದರೆ ಇದರಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಮತ್ತು ವಿಶೇಷವಾಗಿ ಅಮೆರಿಕದಲ್ಲಿ ಭಾರತೀಯ ಉತ್ಪನ್ನಗಳಿಗೆ ಹೆಚ್ಚಿನ ಪ್ರಮಾಣದ ಬೇಡಿಕೆ ವ್ಯಕ್ತವಾಗಿದೆ. ಭಾರತದಿಂದ ಯಂತ್ರೋಪಕರಣ, ವಾಹನ ಮತ್ತು ಬಿಡಿಭಾಗಗಳು, ಎಲೆಕ್ಟ್ರಾನಿಕ್ ಉತ್ಪನ್ನ, ಕೆಮಿಕಲ್, ಪ್ಲಾಸ್ಟಿಕ್ ಮತ್ತು ರಬ್ಬರ್ ಉತ್ಪನ್ನಗಳು ರಫ್ತಾಗುತ್ತಿದ್ದು, ಅಮೆರಿಕ ಮಾರುಕಟ್ಟೆಯಲ್ಲಿ ಸ್ಪರ್ಧೆ ಒಡ್ಡುವ ಜೊತೆಗೆ ಬೇಡಿಕೆ ಕುದುರಿಸಿಕೊಂಡಿವೆ. 

ತೈಲ ಬೆಲೆ ಏರಿಕೆ, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದಾಗಿ ಭಾರತೀಯ ವಾಣಿಜ್ಯ ಮಾರುಕಟ್ಟೆಗೆ ಸಂಕಷ್ಟ ಒದಗಿದ್ದರೂ, ಅಮೆರಿಕ ಮತ್ತು ಚೀನಾ ನಡುವಣ ವಾಣಿಜ್ಯ ಸಮರ ಭಾರತೀಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಜತೆಗೆ, ಜಾಗತಿಕವಾಗಿ ಅವಕಾಶ ತೆರೆದಿದೆ ಎಂದು ಸಚಿವ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.

Follow Us:
Download App:
  • android
  • ios