2024 ಜುಲೈನಲ್ಲಿ ಖರೀದಿಸಲು ಯೋಗ್ಯವಾದ ಟಾಪ್ 10 ಕ್ರಿಪ್ಟೋಗಳು..!
ನಿಮ್ಮ ಹೂಡಿಕೆಯ ಬಂಡವಾಳವನ್ನು ದ್ವಿಗುಣಗೊಳಿಸಲು ಕ್ರಿಪ್ಟೋ ಹೂಡಿಕೆಗಳು ಉತ್ತಮ ಮಾರ್ಗ. ಆದರೂ, ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾವಿರಾರು ಕ್ರಿಪ್ಟೋಗಳಲ್ಲಿ ಹೂಡಿಕೆ ಮಾಡಲು ಯೋಗ್ಯವಾಗಿರುವ ಉತ್ತಮ ಕ್ರಿಪ್ಟೋ ಕರೆನ್ಸಿಯನ್ನು ಕಂಡು ಹಿಡಿಯುವುದು ಸವಾಲಿನ ಸಂಗತಿ.
ಮಾರುಕಟ್ಟೆಯ ಏರಿಳಿತಗಳ ಹೊರತಾಗಿಯೂ, ಕ್ರಿಪ್ಟೋ ಸ್ವತ್ತು ತಾಳ್ಮೆ ಇರೋ ಹೂಡಿಕೆದಾರರಿಗೆ ಅಪಾರ ಭರವಸೆಯನ್ನು ನೀಡುತ್ತವೆ. ನಿರ್ದಿಷ್ಠವಾಗಿ ಹೇಳುಬೇಕೆಂದರೆ, ಹೊಸ ಡೊಮೇನ್‌ಗಳಲ್ಲಿ ಬ್ಲಾಕ್‌ಲೈನ್ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿರುವುದರಿಂದ ಎಥೆರಿಯಮ್, ಸೋಲಾನಾ ಮತ್ತು ಕಾಸ್ಮೊಸ್‌ನಂತರ ಉದಯೋನ್ಮುಖ ಕ್ರಿಪ್ಟೋ ಯೋಜನೆಗಳು ಗಮನ ಸೆಳೆಯುತ್ತಿವೆ. ಕ್ರಿಪ್ಟೋ ಹೂಡಿಕೆದಾರರಾಗಿ, 2 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿರುವ ಭಾರತದ ಅತಿದೊಡ್ಡ ಕ್ರಿಪ್ಟೋ ವಿನಿಮಯ ಕೇಂದ್ರವಾದ ಕಾಯಿನ್ ಸ್ವಿಚ್‌ನಲ್ಲಿ ನೀವು ಈ ನಾಣ್ಯಗಳನ್ನು ಖರೀದಿಸಬಹುದು.
ಜುಲೈ 2024 ರಲ್ಲಿ ಹೂಡಿಕೆ ಮಾಡಲು ಯೋಗ್ಯವಾದ ಕೆಲವು ಅತ್ಯುತ್ತಮ ಕ್ರಿಪ್ಟೋಗಳ ಪಟ್ಟಿ ಇಲ್ಲಿದೆ. ಹೂಡಿಕೆಗಾಗಿ ಅನನ್ಯವಾಗಿರುವ ಟಾಪ್ 10 ಕ್ರಿಪ್ಟೋ ಕರೆನ್ಸಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಓದಿ.
ಪ್ರಸ್ತುತ ಖರೀದಿಸಲು ಯೋಗ್ಯವಾಗಿರುವ ಅತ್ಯುತ್ತಮ ಕ್ರಿಪ್ಟೋಗಳು:
ನಿಮ್ಮ ಹೂಡಿಕೆಯ ಬಂಡವಾಳವನ್ನು ದ್ವಿಗುಣಗೊಳಿಸಲು ಕ್ರಿಪ್ಟೋ ಹೂಡಿಕೆಗಳು ಉತ್ತಮ ಮಾರ್ಗ. ಆದರೂ, ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾವಿರಾರು ಕ್ರಿಪ್ಟೋಗಳಲ್ಲಿ ಹೂಡಿಕೆ ಮಾಡಲು ಯೋಗ್ಯವಾಗಿರುವ ಉತ್ತಮ ಕ್ರಿಪ್ಟೋ ಕರೆನ್ಸಿಯನ್ನು ಕಂಡು ಹಿಡಿಯುವುದು ಸವಾಲಿನ ಸಂಗತಿ.
ಹೂಡಿಕೆ ಮಾಡಲು ಯೋಗ್ಯವಾಗಿರುವ ಟಾಪ್ 10 ಕ್ರಿಪ್ಟೋ ಕರೆನ್ಸಿಗಳ ಪಟ್ಟಿ ಇಲ್ಲಿದೆ. ಈ ಕ್ರಿಪ್ಟೋ ಟೋಕನ್‌ಗಳಲ್ಲಿ ಹೂಡಿಕೆ ಮಾಡಲು ನೀವು ನಿಮ್ಮ ಕಾಯಿನ್ ಸ್ವಿಚ್ ಖಾತೆಗೆ ಲಾಗ್ ಇನ್ ಆಗಬಹುದು.
1. ಬಿಟ್ ಕಾಯಿನ್
ಈ ಹೂಡಿಕೆಯಲ್ಲಿ ಮೊದಲ ಕ್ರಿಪ್ಟೋವಾಗಿರುವ ಬಿಟ್ ಕಾಯಿನ್ 2009 ರಿಂದ ಅಸ್ತಿತ್ವದಲ್ಲಿದೆ. ಇದು ಅತ್ಯಂತ ಜನಪ್ರಿಯ ಕ್ರಿಪ್ಟೋ ಆಗಿದ್ದು, ಜೂನ್ ಅಂತ್ಯದ ವೇಳೆಗೆ $1.24 ಟ್ರಿಲಿಯನ್ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ. ಬಿಟ್ ಕಾಯಿನ್ ಒಂದು ಬ್ಲೂ-ಚಿಪ್ ಕ್ರಿಪ್ಟೋ ಆಗಿದ್ದು, ಕಾಲಾನುಕ್ರಮದಲ್ಲಿ ಹೂಡಿಕೆದಾರರಿಗೆ ಉತ್ತಮ ಆದಾಯವನ್ನು ನೀಡುತ್ತದೆಂದು ಸಾಬೀತಾದ ದಾಖಲೆ ಹೊಂದಿದೆ. ಬಿಟ್‌ಕಾಯಿನ್ ಇತ್ತೀಚೆಗೆ ಯುಎಸ್ ಮತ್ತು ಹಾಂಗ್ ಕಾಂಗ್‌ನ ಸ್ಪಾಟ್ ಬಿಟ್‌ಕಾಯಿನ್ ಇಟಿಎಫ್‌ಗಳ ಅನುಮೋದನೆಯೊಂದಿಗೆ ಇನ್ನಷ್ಟು ಪ್ರಾಮುಖ್ಯತೆ ಪಡೆಯಿತು. ಇಟಿಎಫ್‌ಗಳ ಅನುಮೋದನೆಯು ಬಿಟ್ ಕಾಯಿನ್ ಮುಖ್ಯವಾಹಿನಿಗೆ ತಂದಿದ್ದು, ಈಗ ಚಿಲ್ಲರೆ ಮತ್ತು ಸಾಂಸ್ಥಿಕ ಹೂಡಿಕೆದಾರರು ಷೇರುಗಳನ್ನು ಖರೀದಿಸುವಂತೆಯೇ ಈ ನಾಣ್ಯದಲ್ಲಿ ಚಿಂತೆಯಿಲ್ಲದೆ ಹೂಡಬಹುದು. ಇಟಿಎಫ್ ಅನುಮೋದನೆ ಮತ್ತು BTCಯ ವಿಭಜನೆ ನಂತರ ಪೂರೈಕೆಯಲ್ಲಾದ ಕಡಿತವು ಈ ಕ್ರಿಪ್ಟೋ ಬೆಳವಣಿಗೆ ಪೂರಕವಾಯಿತು.
2. ಟನ್‌ಕಾಯಿನ್ (Toncoin)
TON,'ದಿ ಓಪನ್ ನೆಟ್ವರ್ಕ್' ನ ಸಂಕ್ಷಿಪ್ತ ರೂಪವಾಗಿದ್ದು, ಇದು ಟೆಲಿಗ್ರಾಮ್ ಅಭಿವೃದ್ಧಿಪಡಿಸಿದ ಲೇಯರ್-1 ಬ್ಲಾಕ್‌ಲೈನ್ ಆಗಿದೆ. ಆದಾಗ್ಯೂ, 2020 ರಲ್ಲಿ ಟೆಲಿಗ್ರಾಮ್ TON ಜೊತೆಗಿನ ಸಂಬಂಧವನ್ನು ಕೊನೆಗೊಳಿಸಿತು. ಪ್ರಸ್ತುತ, TONಅನ್ನು ಸ್ವಿಟ್ಜರ್ಲೆಂಡ್ ಮೂಲದ ಲಾಭೋದ್ದೇಶವಿಲ್ಲದ ಸಂಸ್ಥೆಯಾದ TON ಫೌಂಡೇಶನ್ ನಿರ್ವಹಿಸುತ್ತದೆ.
ಬ್ಲಾಕ್‌ಲೈನ್‌ನ ಸ್ಥಳೀಯ ಟೋಕನ್ ಆಗಿರುವ TON, ನೆಟ್ವರ್ಕ್ ಕಾರ್ಯಾಚರಣೆಗಳು, ವಹಿವಾಟುಗಳು, ಆಟಗಳು ಅಥವಾ TON ನಲ್ಲಿ ನಿರ್ಮಿಸಲಾದ ಸಂಗ್ರಹಣೆಗಳಿಗಾಗಿ ಬಳಸಲಾಗುತ್ತದೆ. ಜೂನ್‌ನಲ್ಲಿ ಟೆಲಿಗ್ರಾಮ್ ಗೇಮ್ ಸಮುದಾಯದ ಟೋಕನ್ ಆದ Notcoin (NOT) ಏರ್‌ಡ್ರಾಪ್‌ನ ಜನಪ್ರಿಯತೆಯಿಂದ ಪ್ರಯೋಜನ ಪಡೆದ ಟನ್, ವಿಶಾಲ ಕ್ರಿಪ್ಟೋ ಮಾರುಕಟ್ಟೆಯಲ್ಲಿ ಅತ್ಯುತ್ತಮ ರಿಟರ್ನ್ಸ್ ನೀಡಿದ ಕ್ರಿಪ್ಟೋ ಆಗಿ ಹೊರಹೊಮ್ಮಿತು. ಹೆಚ್ಚುವರಿಯಾಗಿ, ಐತಿಹಾಸಿಕ ಕ್ರಿಪ್ಟೋ ಫಂಡ್ ಪಂತೇರಾ (Pantera) ಕೂಡ ಟನ್‌ನಲ್ಲಿ ಹೂಡಿಕೆ ಮಾಡಿತು. TON ನಾಣ್ಯವು ಉತ್ತಮ ಹೂಡಿಕೆಯ ಅವಕಾಶವನ್ನು ಒದಗಿಸುತ್ತಿದ್ದು, ನೀವು ಇದನ್ನು ಕಾಯಿನ್ ಸ್ವಿಚ್‌ನಲ್ಲಿ ಸುಲಭವಾಗಿ ಖರೀದಿಸಬಹುದು.
3. ಎಥೆರಿಯಮ್ (Ethereum)
ಮಾರುಕಟ್ಟೆ ಬಂಡವಾಳದಲ್ಲಿ ಎರಡನೇ-ಅತಿದೊಡ್ಡ ಕ್ರಿಪ್ಟೋ ಆಗಿರುವ ಎಥೆರಿಯಮ್ (Ethereum), ಹೂಡಲು ಯೋಗ್ಯವಾಗಿರುವ ಅತ್ಯುತ್ತಮ ಕ್ರಿಪ್ಟೋಗಳಲ್ಲಿ ಒಂದು. ದು ಹಲವಾರು ಕ್ರಿಪ್ಟೋಗಳಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಲೇ, ಸ್ಮಾರ್ಟ್ ಒಪ್ಪಂದಗಳ ಅನುಷ್ಠಾನಕ್ಕೆ ಮಾಧ್ಯಮವಾಗಿದೆ. ಎಥೆರಿಯಮ್ ಪ್ರೋಗ್ರಾಮ್ ಮಾಡಬಹುದಾದ ಲೇಯರ್-1 ಬ್ಲಾಕ್‌ಲೈನ್ ಆಗಿದ್ದು, ವಿಕೇಂದ್ರೀಕೃತ ಹಣಕಾಸು ಜನಪ್ರಿಯತೆಯನ್ನು ಪಡೆಯುತ್ತಿರುವಾಗ, ಇದು ಇನ್ನಷ್ಟು ವೇಗವಾಗಿ ಬೆಳೆಯಲಿದೆ.
ಹೆಚ್ಚುವರಿಯಾಗಿ, ಬ್ಲಾಕ್‌ಲೈನ್‌ನ ಸ್ಥಳೀಯ ಟೋಕನ್ ಅಗಿರುವ ಈಥರ್ (Ether), ಯುಎಸ್‌ನಲ್ಲಿ ಇಟಿಎಎಫ್‌ಟಿಗಳನ್ನು ಪ್ರಾರಂಭಿಸಲು ಅನುಮೋದನೆಗಾಗಿ ಕಾಯುತ್ತಿದೆ. ಈ ಬೆಳವಣಿಗೆ ಮುಂಬರುವ ತಿಂಗಳಲ್ಲಿ ಈಥರ್‌ನ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸಲಿದೆ. CoinSwitch ಮತ್ತು WazirX ನಂತಹ ಕ್ರಿಪ್ಟೋ ಟ್ರೇಡಿಂಗ್ ಫ್ಲಾಟ್‌ಫಾರ್ಮ್‌ಗಳಲ್ಲಿ ನೀವು ಈಥರ್‌ನಲ್ಲಿ ಹೂಡಿಕೆ ಮಾಡಬಹುದು.
4. ಸೋಲಾನಾ (Solana)
ಸೋಲಾನಾ ಎಂಬುದು ಸುಲಭ ವಿಸ್ತರಣೆಗಾಗಿ ರಚಿಸಲಾದ ವಿಕೇಂದ್ರೀಕೃತ ಬ್ಲಾಕ್‌ಲೈನ್. ಪವರ್ ಡಿಫೈ ಬಳಕೆದಾರರಿಗೆ ಮತ್ತು ಸ್ಮಾರ್ಟ್ ಒಪ್ಪಂದಗಳಿಗೆ ಸಹಾಯ ಮಾಡುವುದರ ಮೇಲೆ ಕೇಂದ್ರೀತವಾಗಿರುವ ಸೋಲಾನಾ ತ್ವರಿತ ಮತ್ತು ಸುರಕ್ಷಿತ ವಹಿವಾಟು ಪ್ರಕ್ರಿಯೆಗಾಗಿ ಪ್ರೂಫ್-ಆಫ್-ಸ್ಟೇಕ್ ಮತ್ತು ಪ್ರೂಫ್ ಆಫ್-ಹಿಸ್ಟರಿ ಎಂಬ ವಿಶಿಷ್ಟವಾದ ಹೈಬ್ರಿಡ್ ಕಾರ್ಯವಿಧಾನವನ್ನು ಬಳಸುತ್ತದೆ.
ಇದರ ತ್ವರಿತ ಸಂಸ್ಕರಣೆಯ ವೇಗ, ಹೊಸ ಮೆಮೆ-ಕಾಯಿನ್ ಲಾಂಚ್‌ಗಳಿಗೆ ಸೋಲಾನಾವನ್ನು ಆದ್ಯತೆಯ ವೇದಿಕೆಯನ್ನಾಗಿ ಮಾಡುತ್ತದೆ. ಉದಾಹರಣೆಗೆ, ಬಾಂಕ್ (BONK) ಸೋಲಾನಾ-ಚಾಲಿತ ಮೆಮೆ ನಾಣ್ಯವಾಗಿದೆ.
ಸೋಲಾನಾದ ಸ್ಥಳೀಯ ಟೋಕನ್ ಆದ SOL, ಬ್ಲಾಕ್ಚೈನ್ಗೆ ಶಕ್ತಿ ನೀಡುತ್ತದೆ. SOL ಅನ್ನು 2020 ರಲ್ಲಿ ಪ್ರಾರಂಭಿಸಲಾಯಿತು, ಆಗ ಇದರ ಬೆಲೆ $0.77 ಆಗಿತ್ತು. ಇದು ಜೂನ್ ಕೊನೆ ವಾರದಲ್ಲಿ ಸುಮಾರು $147 ರ ಮೌಲ್ಯ ಹೊಂದಿದ್ದು, ಸುಮಾರು 20,000% ನಷ್ಟು ದೊಡ್ಡ ಆದಾಯವನ್ನು ನೀಡಿದೆ. CoinSwitch ನ ಮೂಲಕ SOL ನಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಸೋಲಾನಾ ಯಶಸ್ಸಿನ ಕಥೆಯಲ್ಲಿ ಭಾಗಿಯಾಗಬಹುದು.
5. XRP
XRP ಎಂಬುದು XRP ಲೆಡ್ಜನ್‌ನ ಸ್ಥಳೀಯ ಟೋಕನ್ ಆಗಿದ್ದು, ರಿಪ್ಪಲ್ ಲ್ಯಾಬಿನಿಂದ ರಚಿಸಲ್ಪಟ್ಟು ಮತ್ತು ನಿರ್ವಹಿಸಲ್ಪಡುತ್ತಿರುವ ಓಪನ್ ಸೋರ್ಸ್, ವಿಕೇಂದ್ರೀಕೃತ, ಅನುಮತಿಯಿಲ್ಲದ ಪಾವತಿ ವ್ಯವಸ್ಥೆ ಇದು. ನೆಟ್ವರ್ಕ್‌ನಲ್ಲಿ ಫಿಯೆಟ್ ಕರೆನ್ಸಿ ಮತ್ತು ಇತರ ಕ್ರಿಪ್ಟೋ ಸೇರಿ ಕರೆನ್ಸಿಗಳ ವಿನಿಮಯವನ್ನು ಸುಲಭಗೊಳಿಸಲು XRP ಅನ್ನು ಬಳಸಬಹುದು.
XRP ಲೆಡ್ಜರ್ 2012 ರಿಂದ ಕಾರ್ಯನಿರ್ವಹಿಸುತ್ತಿದೆ. ಇದರ ಜನಪ್ರಿಯತೆಯು XRP ಅನ್ನು ಆಕರ್ಷಕ ಹೂಡಿಕೆಯ ಅವಕಾಶವನ್ನಾಗಿ ಪರಿವರ್ತಿಸಿದೆ. ಪ್ರಸ್ತುತ, XRPಯು ಮಾರುಕಟ್ಟೆ ಬಂಡವಾಳದ ಪ್ರಮಾಣದಲ್ಲಿ ಏಳನೇ-ಅತಿದೊಡ್ಡ ಕ್ರಿಪ್ಟೋ ಆಗಿದೆ.
6. ಬೈನಾನ್ಸ್ ಕಾಯಿನ್ (BNB)
BNB (ಬೈನಾನ್ಸ್ ಕಾಯಿನ್), ಮಾರುಕಟ್ಟೆ ಬಂಡವಾಳೀಕರಣದ ಪ್ರಮಾಣದಲ್ಲಿ ನಾಲ್ಕನೇ ಅತಿ ದೊಡ್ಡ ಕ್ರಿಪ್ಟೋ ಆಗಿದ್ದು, Binance ಬಿಡುಗಡೆ ಮಾಡಿದ ಉಪಯುಕ್ತತೆಯ ಟೋಕನ್ ಆಗಿದೆ. BNB ಅನ್ನು ಬೈನಾನ್ಸ್ನಲ್ಲಿ ವ್ಯಾಪಾರ ಶುಲ್ಕವನ್ನು ಪಾವತಿಸಲು ಬಳಸಲಾಗುತ್ತದೆ.
BNB ಯ ಮೌಲ್ಯವು ಬೈನಾನ್ಸ್ ಟ್ರೇಡಿಂಗ್ ಪ್ಲಾಟ್ಫಾರ್ಮ್ನಲ್ಲಿನ ವ್ಯಾಪಾರ ಚಟುವಟಿಕೆಯ ಪರಿಮಾಣಕ್ಕೆ ನೇರವಾಗಿ ಸಂಬಂಧಿಸಿದೆ. ವ್ಯಾಪಾರದ ಸಂಪುಟಗಳಲ್ಲಿನ ಹೆಚ್ಚಳವು BNB ಟೋಕನ್ನ ಮೌಲ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಕ್ರಿಪ್ಟೋ ಜನಪ್ರಿಯತೆ ಹೆಚ್ಚುತ್ತಿರುವಂತೆ ಮತ್ತು Binance ಹೊಸ ಮಾರುಕಟ್ಟೆಗಳಿಗೆ ಪ್ರವೇಶಿಸಲು ಸಿದ್ಧವಾಗುತ್ತಿರುವಾಗ, BNB ಹೂಡಿಕೆದಾರರನ್ನು ಆಕರ್ಷಿಸಲು ಸಿದ್ಧವಾಗುತ್ತಿದೆ. ಇವೆಲ್ಲ ಕಾರಣಗಳಿಂದ ಜುಲೈ 2024 ರಲ್ಲಿ, BNB ಹೂಡಿಕೆ ಮಾಡಲು ಒಂದು ಉತ್ತಮ ಟೋಕನ್.
7. ಯುನಿಸ್ವಾಪ್ (Uniswap)
ಎಥೇರಿಯಂ ಬ್ಲಾಕ್‌ಲೈನ್‌ನಲ್ಲಿ DeFi ಟೋಕನ್‌ಗಳನ್ನು ವ್ಯಾಪಾರ ಮಾಡುವ ಪರಿಣತ ವಿಕೇಂದ್ರೀಕೃತ ಟ್ರೇಡಿಂಗ್ ಪ್ರೋಟೋಕಾಲ್ ಆಗಿ ಯುನಿಸ್ವಾಪ್ಅನ್ನು ಪ್ರಾರಂಭಿಸಲಾಯಿತು. 2018ರಲ್ಲಿ ಜಾರಿಯಾದ ಈ ನೆಟ್ವರ್ಕ್, ಸ್ವಯಂಚಾಲಿತ ಮಾರುಕಟ್ಟೆ ತಯಾರಕೆಗೆ (AMM) ಉದಾಹರಣೆಯಾಗಿದೆ.
ಯುನಿಸ್ವ್ಯಾಪ್ ಎನ್ನುವುದು ಡೆವಲಪರ್‌ಗಳ, ವ್ಯಾಪಾರಿಗಳು ಮತ್ತು ಲಿಕ್ವಿಡಿಟಿ ಪೂರೈಕೆದಾರರ ಒಂದು ಪರಿಸರ ವ್ಯವಸ್ಥೆಯಾಗಿದ್ದು, ಇದು ಮುಕ್ತ ಮತ್ತು ಎಲ್ಲರೂ ಪ್ರವೇಶಿಸಬಹುದಾದ ಹಣಕಾಸು ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ.
UNI, ಯುನಿಸ್ವಾಪ್ ಪ್ರೋಟೋಕಾಲ್‌ನ ಸ್ಥಳೀಯ ಟೋಕನ್ ಆಗಿದೆ. UNI ಟೋಕನ್ ಹೊಂದಿರುವವರು ಮತ್ತು ಪ್ರತಿನಿಧಿಗಳು ಯುನಿಸ್ವಾಪ್ ಪ್ರೋಟೋಕಾಲ್ಅನ್ನು ನಿಯಂತ್ರಿಸುತ್ತಾರೆ. DeFi ಮತ್ತು ಕ್ರಿಪ್ಟೋ ಸ್ವತ್ತುಗಳ ಜನಪ್ರಿಯತೆ ಹೆಚ್ಚಾದಂತೆ, ಯುನಿಸ್ವಾಪ್ ಪ್ಲಾಟ್‌ಫಾರ್ಮ್‌ನಲ್ಲಿ ವ್ಯಾಪಾರದ ಪ್ರಮಾಣಗಳು ಹೆಚ್ಚಾಗುತ್ತಿವೆ. Uniswap ಪ್ರೋಟೋಕಾಲ್‌ನ ಜನಪ್ರಿಯತೆ UNI ಟೋಕನ್‌ಗೆ ಇನ್ನಷ್ಟು ಉತ್ತೇಜನ ನೀಡುತ್ತಿದ್ದು, ಇದೂ ಒಂದು ಉತ್ತಮ ಹೂಡಿಕೆ.
8. ಕಾಸ್ಮೊಸ್ (Cosmos)
ಬ್ಲಾಕ್‌ಲೈನ್ ತಂತ್ರಜ್ಞಾನದ ಕೆಲವು ಅತಿ ಕಠಿಣ ಸಮಸ್ಯೆಗಳಿಗೆ ಕಾಸ್ಮೊಸ್ ಒಂದು ಪರಿಹಾರ. ಕಾಸ್ಮೊಸ್ ಯೋಜನೆಯು ಬ್ಲಾಕ್‌ಲೈನ್ ತಂತ್ರಜ್ಞಾನವನ್ನು ಸರಳಗೊಳಿಸುತ್ತಾ ಮತ್ತು ವಿಕೇಂದ್ರೀಕೃತ ಅಪ್ಲಿಕೇಶನ್‌ಗಳನ್ನು ವಿಷದೀಕರಿಸುತ್ತಾ ಮಾಡ್ಯುಲರ್ ಫ್ರೇಮ್ವರ್ಕ್ಅನ್ನು ನೀಡುವ ಮೂಲಕ ಡೆವಲಪರ್ಗಳಿಗೆ ಸಹಾಯ ಮಾಡುತ್ತದೆ. ATOM, ಕಾಸ್ಮೊಸ್ ಸರಣಿಯ ಸ್ಥಳೀಯ ಟೋಕನ್. ಆ್ಯಟಮ್ಅನ್ನು ಹೈಬ್ರಿಡ್ ಪ್ರೂಫ್-ಆಫ್-ಸ್ಟಾಕ್ ಅಲ್ಗಾರಿದಮ್ ಮೂಲಕ ಗಳಿಸಬಹುದು ಅಥವಾ ಕಾಯಿನ್ ಸ್ವಿಚ್‌ನಂತಹ ಕ್ರಿಪ್ಟೋ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಖರೀದಿಸಬಹುದು. ನಿಮ್ಮ ಕ್ರಿಪ್ಟೋ ಪೋರ್ಟ್ಫೋಲಿಯೊದಲ್ಲಿ ಸ್ಥಾನ ಹೊಂದಲು ATOM ಅರ್ಹವಾಗಿದೆ.
9. ಲೈಟ್ ಕಾಯಿನ್ (Litecoin)
ಕ್ರಿಪ್ಟೋ ಜಗತ್ತಿನಲ್ಲಿ ಬಿಟ್‌ಕಾಯಿನ್ ಅನ್ನು ಚಿನ್ನಕ್ಕೆ ಹೋಲಿಸಿದರೆ, ಈ ಲೈಟ್ ಕಾಯಿನ್‌ಗೆ ಬೆಳ್ಳಿ ಎನ್ನಲಾಗುತ್ತದೆ. ಬಿಟ್ಕಾಯಿನ್‌ನ ಪ್ರೋಟೋಕಾಲ್ ಆಧರಿಸಿ ರಚಿಸಲಾಗಿರುವ ಲೈಟ್ ಕಾಯಿನ್, ಹ್ಯಾಶಿಂಗ್ ಅಲ್ಗಾರಿದಮ್, ಹಾರ್ಡ್ ಕ್ಯಾಪ್, ಬ್ಲಾಕ್ ಟ್ರಾನ್ಸಾಕ್ಷನ್ ಸಮಯಗಳು ಮತ್ತು ಇತರ ಅಂಶಗಳ ವಿಷಯದಲ್ಲಿ ಬಿಟ್‌ಕಾಯಿನ್‌ನಿಂದ ಭಿನ್ನವಾಗಿದೆ.
ಲೈಟ್ ಕಾಯಿನ್ ಕೇವಲ 2.5 ನಿಮಿಷಗಳ ಬ್ಲಾಕ್ ಸಮಯ ಮತ್ತು ಕಡಿಮೆ ವಹಿವಾಟು ಶುಲ್ಕವನ್ನು ಹೊಂದಿದ್ದು,ಇದು ಮೈಕ್ರೋ-ಟ್ರಾನ್ಸಾಕ್ಷನ್‌ಗಳು ಮತ್ತು ಪಾಯಿಂಟ್-ಆಫ್-ಸೇಲ್ ಪಾವತಿಗಳಿಗೆ ಸೂಕ್ತವಾಗಿದೆ.
LTC ಎಂಬುದು ಲೈಟ್ ಕಾಯಿನ್ ಬ್ಲಾ ಕ್ಚೈನ್ನ ಸ್ಥಳೀಯ ಟೋಕನ್ ಆಗಿದೆ. BTC ಯಂತೆಯೇ LTC ಅನ್ನು ಗಣಿಗಾರಿಕೆ ಮಾಡಬೇಕು ಮತ್ತು ಇದು 84 ಮಿಲಿಯನ್ ಪೂರೈಕೆಯ ಮಿತಿಯನ್ನು ಹೊಂದಿದೆ. LTC ಒಂದು ಉತ್ತಮ ಕ್ರಿಪ್ಟೋ ಹೂಡಿಕೆ ಪರ್ಯಾಯವಾಗಿದ್ದು, ನೀವೀಗ ಇದನ್ನು ಕಾಯಿನ್ ಸ್ವಿಚ್ನಲ್ಲಿ ಖರೀದಿಸಬಹುದು!
10. ಶಿಬಾ ಇನು (Shiba Inu)
ಎಥೇರಿಯಂ ನೆಟ್ವರ್ಕ್ನಲ್ಲಿನ ಒಂದು ಮೆಮೆ ನಾಣ್ಯವಾಗಿರುವ ಶಿಬಾ ಇನು, ಜೂನ್ ಅಂತ್ಯದ ವೇಳೆಗೆ ಮಾರುಕಟ್ಟೆ ಬಂಡವಾಳದಲ್ಲಿ ಹದಿಮೂರನೇ ಅತಿ ದೊಡ್ಡ ಕ್ರಿಪ್ಟೋ ಆಗಿದೆ. ಒಂದು ಮೆಮೆ ನಾಣ್ಯವಾಗಿ ಪ್ರಾರಂಭವಾದ SHIBನ ವಹಿವಾಟು ಸಮಯದೊಂದಿಗೆ ಬೆಳೆಯಿತು.
ನಿಮ್ಮ ಕ್ರಿಪ್ಟೋ ಹೂಡಿಕೆಗೆ SHIB ಅನ್ನು ಸೇರಿಸುವುದರಿಂದ ನೀವು ನಿಮ್ಮ ಪೋರ್ಟ್ಫೋಲಿಯೊವನ್ನು ವೈವಿಧ್ಯಗೊಳಿಸಬಹುದು. ಇದಲ್ಲದೇ, SHIB ಒಂದು ಉತ್ತಮ ಊಹಾತ್ಮಕ ಹೂಡಿಕೆಯಾಗಿದ್ದು, ಕಡಿಮೆ ಅವಧಿಯಲ್ಲಿ ನಿಮಗೆ ಹೆಚ್ಚಿನ ಆದಾಯ ತಂದುಕೊಡುವ ಮೂಲಕ ಹೂಡಿಕೆವಿಷಯದಲ್ಲಿ ಒಂದು ಹೆಜ್ಜೆ ಮುಂದೆ ಇರಲು ನಿಮಗಿದು ಸಹಾಯ ಮಾಡುತ್ತದೆ.
ಆರಂಭಿಕರಿಗಾಗಿ ಹೂಡಿಕೆ ಮಾಡಲು ಅತ್ಯುತ್ತಮ ಕ್ರಿಪ್ಟೋ
ಜುಲೈ 2024 ರಲ್ಲಿ ಹೂಡಿಕೆ ಮಾಡಲು ನಾವು ಟಾಪ್ 10 ಕ್ರಿಪ್ಟೋಕರೆನ್ಸಿಗಳನ್ನು ಪಟ್ಟಿ ಮಾಡಿದ್ದೇವೆ. ಹೊಸ ಕ್ರಿಪ್ಟೋ ಹೂಡಿಕೆದಾರರಾಗಿ, ನೀವು ಈ ಟೋಕನ್‌ಗಳ ಮಿಶ್ರಣವನ್ನು ಖರೀದಿಸಬಹುದು ಮತ್ತು ಕ್ರಿಪ್ಟೋ ವ್ಯಾಪಾರದ ತಂತ್ರಗಳನ್ನು ಕಲಿಯಲು ನಿಮ್ಮ ಹೂಡಿಕೆಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು. ನೀವು ಕ್ರಿಪ್ಟೋ ಮೇಲೆ ಹಿಡಿತವನ್ನು ಸಾಧಿಸಿದಂತೆ, ನಿಮ್ಮ ಜ್ಞಾನ, ತಿಳುವಳಿಕೆ ಮತ್ತು ಸಂಶೋಧನೆ ಆಧಾರದ ಮೇಲೆ ಕ್ರಿಪ್ಟೋ ಹೂಡಿಕೆ ಅವಕಾಶಗಳನ್ನು ಗುರುತಿಸಲು ಪ್ರಾರಂಭಿಸಬಹುದು.
ದೀರ್ಘಾವಧಿಯ ಹೂಡಿಕೆದಾರರಿಗೆ ಖರೀದಿಸಲು ಅತ್ಯುತ್ತಮ ಕ್ರಿಪ್ಟೋ
ದೀರ್ಘಾವಧಿಯ ಹೂಡಿಕೆದಾರರಿಗೆ ಹೂಡಿಕೆ ಮಾಡಲು ಸೂಕ್ತವಾದ ಕ್ರಿಪ್ಟೋಗಳು, ಪ್ರಬಲವಾದ ಮೂಲ ಅಂಶಗಳನ್ನು ಹೊಂದಿರುವಂತಹ ಕ್ರಿಪ್ಟೋ ಯೋಜನೆಗಳಾಗಿರಬೇಕು. ದೀರ್ಘಾವಧಿಯ ಹೂಡಿಕೆದಾರರಾಗಿ ನೀವು ದೊಡ್ಡ-ಪ್ರಮಾಣದ ಹೊಂದಾಣಿಕೆ, ವಿಸ್ತರಣೆ ಮತ್ತು ವೆಚ್ಚ-ಪರಿಣಾಮಕಾರಿತ್ವದ ಸಾಮರ್ಥ್ಯವನ್ನು ಹೊಂದಿರುವ ಭರವಸೆಯ ಯೋಜನೆಗಳನ್ನು ಹುಡಕಬೇಕು. ಅಂತಹ ಯೋಜನೆಗಳಿಗೆ ಸಂಬಂಧಿಸಿದ ಟೋಕನ್‌ಗಳು ದೀರ್ಘಾವಧಿಯ ಬೆಳವಣಿಗೆಯ ಹೆಚ್ಚಿನ ಸಂಭವನೀಯತೆಯನ್ನು ಹೊಂದಿವೆ.
ಖರೀದಿಸಲು ಉತ್ತಮವಾದ ಕ್ರಿಪ್ಟೋ ಕರೆನ್ಸಿಗಳನ್ನು ಹೇಗೆ ಆಯ್ಕೆ ಮಾಡಬೇಕು?
ಹೂಡಿಕೆ ಮಾಡಲು ಉತ್ತಮ ಕ್ರಿಪ್ಟೋವನ್ನು ನಿರ್ಧರಿಸುವ ಮೊದಲು, ಒಬ್ಬರು ಬಹು ಪರಿಮಾಣಗಳನ್ನು ಮತ್ತು ಚೆಕ್‌ಪಾಯಿಂಟ್‌ಗಳನ್ನು ಹೊಂದಿರಬೇಕು. ವ್ಯಾಪಕವಾಗಿ ಬಳಸಲಾಗುವ ಕ್ರಿಪ್ಟೋ ಹೂಡಿಕೆಯ ಗುರುತುಗಳೆಂದರೆ: ಲಭ್ಯತೆ, ಮಾರುಕಟ್ಟೆ ಬಂಡವಾಳೀಕರಣ ಮತ್ತು ಯೋಜನೆಯ ಮೂಲಭೂತಗಳು.
ಲಭ್ಯತೆ
ಕ್ರಿಪ್ಟೋದ ಲಭ್ಯತೆ ಅದರಲ್ಲಿ ಹೂಡಿಕೆ ಮಾಡುವ ನಿಮ್ಮ ಸಾಮರ್ಥ್ಯಕ್ಕೆ ನಿರ್ಣಾಯಕ. ಟೋಕನ್ ಸುಲಭವಾಗಿ ಲಭ್ಯವಿಲ್ಲದಿದ್ದರೆ ಅಥವಾ CoinSwitch ಮತ್ತು WazirX ನಂತಹ ಜನಪ್ರಿಯ ವಿನಿಮಯ ಕೇಂದ್ರಗಳಲ್ಲಿ ಪಟ್ಟಿ ಮಾಡದಿದ್ದರೆ, ಅದನ್ನು ಖರೀದಿಸಲು ಅಥವಾ ಹೂಡಿಕೆ ಮಾಡಲು ನಿಮಗೆ ಕಷ್ಟ. ಇದಲ್ಲದೇ, ನೀವು ವಿರಳವಾಗಿ ಲಭ್ಯವಿರುವ ಟೋಕನ್‌ಗಳಲ್ಲಿ ಹೂಡಿಕೆ ಮಾಡಲು ಯಶಸ್ವಿಯಾದರೂ, ನಿಮ್ಮ ಹೂಡಿಕೆಯನ್ನು ಹಿಂತೆಗೆಯುವಲ್ಲಿ ನೀವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ವಿಶ್ವಾಸಾರ್ಹ ಮೂಲಗಳಿಂದ ಸುಲಭವಾಗಿ ಲಭ್ಯವಿರುವ ಕ್ರಿಪ್ಟೋ ಟೋಕನ್‌ಗಳನ್ನು ಮಾತ್ರ ಖರೀದಿಸಲು ಸಲಹೆ ನೀಡಲಾಗುತ್ತದೆ.
ಮುಖೇಶ್ ಅಂಬಾನಿಯ ಮೂವರು ಮಕ್ಕಳಲ್ಲಿ ಶ್ರೀಮಂತರು ಯಾರು? ಆಕಾಶ್, ಇಶಾ,ಅನಂತ್ ಆಸ್ತಿ ಮೌಲ್ಯ ಎಷ್ಟು?
ಮಾರುಕಟ್ಟೆ ಬಂಡವಾಳೀಕರಣ
ದೊಡ್ಡ ಮಾರುಕಟ್ಟೆ ಬಂಡವಾಳೀಕರಣ ಹೊಂದಿರುವ ಟೋಕನ್‌ಗಳು ಭಾರಿ ಜನಪ್ರಿಯತೆಯನ್ನು ಹೊಂದಿರುವ ಜೊತೆಗೆ ಹೆಚ್ಚು ಲಿಕ್ಟಿಟಿಡಿ ಹೊಂದಿವೆ. ಇದಕ್ಕಾಗಿಯೇ ಇಲ್ಲಿ ಹೂಡಿಕೆ ಮಾಡಲು ಪಟ್ಟಿ ಮಾಡಲಾಗಿರುವ ಎಲ್ಲಾ ಟಾಪ್ 10 ಕ್ರಿಪ್ಟೋಕರೆನ್ಸಿಗಳು ದೊಡ್ಡ ಮಾರುಕಟ್ಟೆ ಬಂಡವಾಳೀಕರಣ ಹೊಂದಿರುವ ಟೋಕನ್‌ಗಳಾಗಿವೆ.
ಪ್ರಸ್ತುತ ಯಾವ ಕ್ರಿಪ್ಟೋ ಖರೀದಿಸಬೇಕು?
ಹೊಸ ಕ್ರಿಪ್ಟೋ ಹೂಡಿಕೆದಾರರಿಗೆ, ಹೂಡಿಕೆ ಮಾಡಲು ಉತ್ತಮವಾದ ಕ್ರಿಪ್ಟೋಗಳು ಬಲವಾದ ಮೂಲಭೂತಗಳನ್ನು ಹೊಂದಿರುವ, ಸುಲಭವಾಗಿ ಲಭ್ಯವಾಗುವ ಮತ್ತು ದೊಡ್ಡ ಮಾರುಕಟ್ಟೆ ಬಂಡವಾಳೀಕರಣದೊಂದಿರಬೇಕು. ವಿಭಿನ್ನ ಬಳಕೆದಾರ ಸಮಸ್ಯೆಗಳನ್ನು ಪರಿಹರಿಸುವ ವಿವಿಧ ಬ್ಲಾಕ್‌ಲೈನ್ ಟೋಕನ್‌ಗಳೊಂದಿಗೆ ಕ್ರಿಪ್ಟೋ ಹೂಡಿಕೆಯ ಪೋರ್ಟ್‌ಫೋಲಿಯೋವನ್ನು ರಚಿಸಬಹುದು. ಇದು ನಿಮ್ಮ ಹೂಡಿಕೆಗಳನ್ನು ವೈವಿಧ್ಯಗೊಳಿಸಲೂ ನಿಮಗೆ ಸಹಾಯ ಮಾಡುತ್ತದೆ.