ಬ್ಯಾಂಕ್ ಗಳ ಸ್ಥಿರ ಠೇವಣಿಗಳು ಹೂಡಿಕೆಗೆ ಅತ್ಯಂತ ಸುರಕ್ಷಿತ ಆಯ್ಕೆಯಾಗಿವೆ. ಅದರಲ್ಲೂ ಎಸ್ ಬಿಐ ಬಹುಆಯ್ಕೆ ಠೇವಣಿ ಯೋಜನೆ ಗ್ರಾಹಕರಿಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಹೂಡಿಕೆದಾರ ಬಯಸಿದಾಗ ಚೆಕ್ ಅಥವಾ ಎಟಿಎಂ ಅಥವಾ ಐಎನ್ ಬಿ ಮೂಲಕ ಹಣ ವಿತ್ ಡ್ರಾ ಮಾಡಬಹುದು. 

ನವದೆಹಲಿ (ನ.7): ಕಡಿಮೆ ಅಪಾಯದ ಹೂಡಿಕೆ ಆಯ್ದುಕೊಳ್ಳುವವರಿಗೆ ಬ್ಯಾಂಕುಗಳ ಸ್ಥಿರ ಠೇವಣಿ ಸುರಕ್ಷಿತ ಆಯ್ಕೆಯಾಗಿದೆ. ಭಾರತದ ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ದೇಶಾದ್ಯಂತ ಇರುವ ಲಕ್ಷಾಂತರ ಗ್ರಾಹಕರಿಗೆ ಅನೇಕ ವಿಧದ ಸ್ಥಿರ ಠೇವಣಿ ಯೋಜನೆಗಳನ್ನು ಪರಿಚಯಿಸಿದೆ. ಇಂಥ ಸ್ಥಿರ ಠೇವಣಿ (ಎಫ್ ಡಿ) ಯೋಜನೆಗಳಲ್ಲಿ ವಿಶೇಷ ಎಫ್ ಡಿ ಪ್ಲ್ಯಾನ್ ಎಸ್ ಬಿಐ ಬಹುಆಯ್ಕೆ ಠೇವಣಿ (ಎಂಒಡಿ) ಯೋಜನೆ ಕೂಡ ಒಂದು. ಈ ಯೋಜನೆಯಲ್ಲಿ ಹೂಡಿಕೆದಾರರಿಗೆ ಅವರು ಬಯಸಿದಾಗ ಚೆಕ್ ಅಥವಾ ಎಟಿಎಂ ಅಥವಾ ಐಎನ್ ಬಿ ಮೂಲಕ ಹಣ ವಿತ್ ಡ್ರಾ ಮಾಡಲು ಅವಕಾಶ ನೀಡಲಾಗಿದೆ. ಈ ಠೇವಣಿಗಳಲ್ಲಿ ಹಣ ಸಂಪೂರ್ಣವಾಗಿ ನಗದು ರೂಪದಲ್ಲಿದ್ದು, ಚೆಕ್, ಎಟಿಎಂ, ಐಎನ್ ಬಿ ಮೂಲಕ ಎಷ್ಟು ಬಾರಿ ಬೇಕಾದ್ರೂ ವಿತ್ ಡ್ರಾ ಮಾಡಬಹುದು. ಎಂಒಡಿ ಖಾತೆಯನ್ನು 10,000ರೂ.ನಿಂದ ಪ್ರಾರಂಭಿಸಬಹುದಾಗಿದ್ದು, ಕನಿಷ್ಠ ಒಂದು ವರ್ಷದಿಂದ ಗರಿಷ್ಠ ಐದು ವರ್ಷಗಳ ತನಕ ಈ ಖಾತೆಯಲ್ಲಿ ಹಣ ಜಮೆ ಮಾಡಬಹುದು. 

ಎಸ್ ಬಿಐ (SBI) ಬಹು ಆಯ್ಕೆ ಠೇವಣಿ ಅಥವಾ ಎಂಒಡಿ (MOD) ಯೋಜನೆ ಟರ್ಮ್ ಠೇವಣಿಯಾಗಿದ್ದು, ಉಳಿತಾಯ (Saving) ಅಥವಾ ಚಾಲ್ತಿ (Curent) ಖಾತೆಯೊಂದಿಗೆ ಲಿಂಕ್ (Link) ಆಗಿದೆ. ಹೀಗಾಗಿ ನಿಮಗೆ ಅಗತ್ಯ ಬಿದ್ದಾಗಲೆಲ್ಲ ಇದರಿಂದ ನೀವು ಹಣ ವಿತ್ ಡ್ರಾ (Withdraw) ಮಾಡಬಹುದು. ಅಂದರೆ ಈ ಯೋಜನೆಯಲ್ಲಿ ಅವಧಿ ಪೂರ್ಣ ವಿತ್ ಡ್ರಾಗೆ (Withdraw) ಅವಕಾಶವಿದೆ. ಆದರೆ, ಇದರ ಮೇಲಿನ ಹೂಡಿಕೆಗೆ (Invest) ನೀವು ಟಿಡಿಎಸ್ (TDS) ಪಾವತಿಸಬೇಕಾಗುತ್ತದೆ. ಒಂದು ವೇಳೆ ಈ ಖಾತೆಯಲ್ಲಿ(Deposi) ಹಣ ಹೂಡಿಕೆ (Investment) ಮಾಡಿರೋರು ಹಣ ಹಿಂಪಡೆಯಲು ಬಯಸುತ್ತಿದ್ದರೆ, ಲಿಂಕ್ ಮಾಡಲಾಗಿರುವ ಖಾತೆಯಲ್ಲಿ ಸಾಕಷ್ಟು ಹಣವಿಲ್ಲದಿದ್ರೆ ಎಂಒಡಿಎಸ್ ನಿಂದ ಹಣ ಹಿಂಪಡೆಯಬಹುದು. ಎಂಒಡಿಯಿಂದ ಹಣ ಹಿಂಪಡೆದ ಬಳಿಕ ನಿಮ್ಮ ಖಾತೆಯಲ್ಲಿ ಉಳಿಯುವ ಹಣಕ್ಕೆ ಸ್ಥಿರ ಠೇವಣಿಗೆ ನೀಡುವ ಬಡ್ಡಿ ದರವೇ ಸಿಗುತ್ತದೆ. ಎಂಒಡಿಯಲ್ಲಿ ಸಾಲ, ನಾಮಿನಿ ಸೌಲಭ್ಯ ಕೂಡ ಇದೆ.

ಮೆಟ್ರೋ ಕ್ಯಾಶ್ & ಕ್ಯಾರಿ ರಿಲಯನ್ಸ್ ತೆಕ್ಕೆಗೆ? 4,060 ಕೋಟಿ ರೂ. ಒಪ್ಪಂದಕ್ಕೆ ಜರ್ಮನಿ ಸಂಸ್ಥೆ ಒಪ್ಪಿಗೆ

ಎಂಒಡಿ ಖಾತೆಯನ್ನು ಎಸ್ ಬಿಐ (SBI) ಒಂದು ಶಾಖೆಯಿಂದ ಇನ್ನೊಂದು ಶಾಖೆಗೆ ವರ್ಗಾಯಿಸಬಹುದು. ಎಂಒಡಿ (MOD) ಖಾತೆ ಹೊಂದಿರುವ ಗ್ರಾಹಕರು ಲಿಂಕ್ಡ್ ಉಳಿತಾಯ ಖಾತೆಯಲ್ಲಿ ಪ್ರತಿ ತಿಂಗಳು ಕನಿಷ್ಠ ಬ್ಯಾಲೆನ್ಸ್ (Minimum Balance) ನಿರ್ವಹಣೆ ಮಾಡೋದು ಅಗತ್ಯ. ಉಳಿತಾಯ ಖಾತೆಯಲ್ಲಿ ಕನಿಷ್ಠ 3,000ರೂ. ಕನಿಷ್ಠ ಬ್ಯಾಲೆನ್ಸ್ ಇರಬೇಕು. ಒಂದು ವೇಳೆ ನಿಮ್ಮ ಉಳಿತಾಯ ಖಾತೆಯಲ್ಲಿ ಬ್ಯಾಲೆನ್ಸ್ (Balance)ಕಡಿಮೆಯಾದ್ರೆ ಎಫ್ ಡಿ (FD) ಮುರಿದು ನಿಮ್ಮ ಉಳಿತಾಯ ಖಾತೆಗೆ (Saving account) ಹಣ ಹಾಕಲಾಗುತ್ತದೆ. 

ಈ ಯೋಜನೆಯ ಇನ್ನೊಂದು ವಿಶೇಷವೆಂದ್ರೆ ಇದರಲ್ಲಿ ವೈಯಕ್ತಿಕವಾಗಿ, ಜಂಟಿಯಾಗಿ, ಅಪ್ರಾಪ್ತರು ಕೂಡ ಹೂಡಿಕೆ ಮಾಡಬಹುದು. ಕಂಪನಿ ಅಥವಾ ಸಂಸ್ಥೆಗಳು ಕೂಡ ಈ ಖಾತೆಯಲ್ಲಿ ಹೂಡಿಕೆ ಮಾಡಬಹುದು. 

ಮತ್ತೆ ಏರಿಕೆಯಾಗುತ್ತಾ ಸಿಮೆಂಟ್ ಬೆಲೆ? ಪ್ರತಿ ಚೀಲಕ್ಕೆ 10-30ರೂ. ಹೆಚ್ಚಳ ನಿರೀಕ್ಷೆ

ಇನ್ನು 5ಲಕ್ಷ ರೂ. ತನಕದ ಎಫ್ ಡಿ (FD) ಮೇಲೆ ನೀವು ಅವಧಿಗೂ ಮುನ್ನ ಮುರಿದರೆ ನಿಮಗೆ ಶೇ.0.50 ರಷ್ಟು ದಂಡ ವಿಧಿಸಲಾಗುತ್ತದೆ. ಇನ್ನು 5ಲಕ್ಷ ರೂ. ನಿಂದ 1 ಕೋಟಿ ರೂ. ಹೂಡಿಕೆಯ ಮೇಲೆ ಎಫ್ ಡಿ ಪೆನಾಲ್ಟಿ ಶೇ.1ರಷ್ಟು ಇರಲಿದೆ. ಏಳು ದಿನಕ್ಕಿಂತ ಕಡಿಮೆ ಅವಧಿಯ ಹೂಡಿಕೆಯ ಮೇಲೆ ಯಾವುದೇ ಬಡ್ಡಿ ಇರೋದಿಲ್ಲ.