Asianet Suvarna News Asianet Suvarna News

ವಜ್ರಕ್ಕೆ ಕುಸಿದ ಬೇಡಿಕೆ: 50 ಸಾವಿರ ಉದ್ಯೋಗಿಗಳಿಗೆ 10 ದಿನ ರಜೆ ಕೊಟ್ಟ ಡೈಮಂಡ್ ಕಂಪನಿ

 ವಿಶ್ವದ ಅತಿ ದೊಡ್ಡ ನೈಸರ್ಗಿಕ ವಜ್ರ ತಯಾರಿಕಾ ಸಂಸ್ಥೆ ಸೂರತ್‌ನಲ್ಲಿರುವ ಕಿರಣ್‌ ಜೆಮ್ಸ್ ಕಂಪನಿ, ತನ್ನ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ 50 ಸಾವಿರ ಉದ್ಯೋಗಿಗಳಿಗೆ 10 ದಿನಗಳ ಕಾಲ ರಜೆ ಘೋಷಿಸಿದೆ. ವಜ್ರೋದ್ಯಮಕ್ಕೆ ಬೇಡಿಕೆ ಇಳಿಕೆಯಾದ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಂಡಿದೆ. 

Surat based diamond company announces 10 day holiday for 50000 employees akb
Author
First Published Aug 7, 2024, 3:09 PM IST | Last Updated Aug 7, 2024, 3:10 PM IST

ಸೂರತ್‌: ವಿಶ್ವದ ಅತಿ ದೊಡ್ಡ ನೈಸರ್ಗಿಕ ವಜ್ರ ತಯಾರಿಕಾ ಸಂಸ್ಥೆ ಸೂರತ್‌ನಲ್ಲಿರುವ ಕಿರಣ್‌ ಜೆಮ್ಸ್ ಕಂಪನಿ, ತನ್ನ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ 50 ಸಾವಿರ ಉದ್ಯೋಗಿಗಳಿಗೆ 10 ದಿನಗಳ ಕಾಲ ರಜೆ ಘೋಷಿಸಿದೆ. ವಜ್ರೋದ್ಯಮಕ್ಕೆ ಬೇಡಿಕೆ ಇಳಿಕೆಯಾದ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಂಡಿದೆ. 

ಅತಿದೊಡ್ಡ ಪಾಲಿಶ್‌ ಮಾಡಿದ ವಜ್ರ ರಫ್ತು ಮಾಡುವ ಕಂಪೆನಿಯಾಗಿರುವ ಕಂಪೆನಿ ಕಿರಣ್‌ ಜೆಮ್ಸ್‌ ಆ.17 ರಿಂದ ಆ.27ರವರೆಗೆ ಉದ್ಯೋಗಿಗಳಿಗೆ ರಜೆ ಘೋಷಿಸಿದೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಕಂಪೆನಿ ಅಧ್ಯಕ್ಷ ವಲ್ಲಭಾಯಿ ಲಖಾನಿ 'ಪ್ರಸ್ತುತ ವಜ್ರೋದ್ಯಮ ಸಂಸ್ಥೆಯು ಕೆಟ್ಟ ಪರಿಸ್ಥಿತಿಯಲ್ಲಿದೆ. ವಜ್ರೋದ್ಯಮಕ್ಕೆ ಹೆಚ್ಚಿನ ಬೇಡಿಕೆಯಿಲ್ಲ. ಹೀಗಾಗಿ ವಜ್ರಗಳ ಉತ್ಪಾದನೆ ಕಡಿಮೆ ಮಾಡಲು ಉದ್ಯೋಗಿಗಳಿಗೆ ರಜೆ ನೀಡಲಾಗಿದೆ. ಇದು ಕಂಪೆನಿ ಇತಿಹಾಸದಲ್ಲಿ ಮೊದಲ ಸಲ ಎಂದಿದ್ದಾರೆ. ಕಂಪನಿ ವಾರ್ಷಿಕ 17000 ಕೋಟಿ ರು. ಮೊತ್ತದ ವಹಿವಾಟು ನಡೆಸುತ್ತದೆ.

ರಾಷ್ಟ್ರಪತಿ ಮುರ್ಮುಗೆ ಫಿಜಿ ದೇಶದ ಅತ್ಯುನ್ನತ ಗೌರವ

ಸುವಾ: ಎರಡು ದಿನಗಳ ಕಾಲ ಫಿಜಿ ಪ್ರವಾಸದಲ್ಲಿರುವ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಫಿಜಿ ಸರ್ಕಾರ ತನ್ನ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದೆ. ಫಿಜಿ ಅಧ್ಯಕ್ಷ ರತು ವಿಲಿಯಂ ಮೈವಲಿಲಿ ಮಂಗಳವಾರ ಇಲ್ಲಿ ನಡೆದ ಸಮಾರಂಭದಲ್ಲಿ ಮುರ್ಮು ಅವರಿಗೆ 'ಆಫ್‌ ದಿ ಆರ್ಡರ್ ಫಿಜಿ' ಗೌರವ ಪ್ರಧಾನ ಮಾಡಿದರು. ಈ ವೇಳೆ ಮಾತನಾಡಿದ ಮುರ್ಮು, ಫಿಜಿಯನ್ನು ಸಧೃಡ ದೇಶವನ್ನಾಗಿ ಬಲ ಪಡಿಸಲು ಭಾರತವು ಬೆಂಬಲ ನೀಡುತ್ತದೆ ಎಂದರು. ಅಲ್ಲದೇ ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ಶ್ಲಾಘಿಸಿದರು.

ಇಲ್ಲಿದೆ ನೀತಾ ಅಂಬಾನಿಯ ನೂರಾರು ಕೋಟಿ ಮೌಲ್ಯದ ಅಪರೂಪದ ವಜ್ರದ ಹಾರಗಳು

ವರ್ಷದಲ್ಲಿ 30 ಲಕ್ಷ ಜನರಿಗೆ ನಾಯಿ ಕಡಿತ, 286 ಸಾವು: ಸಂಸತ್‌ ಸದಸ್ಯರ ಕಳವಳ

ನವದೆಹಲಿ: ಇತ್ತೀಚೆಗೆ ದೇಶದಲ್ಲಿ ನಾಯಿ ಕಚ್ಚುವಿಕೆ ಪ್ರಕರಣಗಳು ಹೆಚ್ಚುತ್ತಿವೆ. ಭಾರತದಲ್ಲಿ 30.5 ಲಕ್ಷ ಜನರು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಅದರಲ್ಲಿ 286 ಜನರು ಸಾವನ್ನಪ್ಪಿದ್ದಾರೆ. ಗಾಜಿಯಾಬಾದ್‌ನಲ್ಲಿ ಈ ವರ್ಷ 35000 ಮಂದಿ ನಾಯಿಗಳಿಂದ ಕಚ್ಚಿಸಿಕೊಂಡಿದ್ದಾರೆ ಎಂದು ಗಾಜಿಯಾಬಾದ್‌ ಸಂಸದ ಅತುಲ್‌ ಗರ್ಗ್‌ ಮಂಗಳವಾರ ಲೋಕಸಭೆಯ ಗಮನ ಸೆಳೆದರು. ಅಲ್ಲದೆ ಈ ಘಟನೆಗಳಿಂದ ಮಕ್ಕಳು ಮುಕ್ತವಾಗಿ ಆಟವಾಡಲು ಸಾಧ್ಯವಾಗುತ್ತಿಲ್ಲ. ಹಿರಿಯ ನಾಗರಿಕರು ಒಂಟಿಯಾಗಿ ತಿರುಗಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಈ ಸೂಕ್ಷ್ಮ ವಿಷಯವನ್ನು ನಿಭಾಯಿಸಲು ಸಮಿತಿಯನ್ನು ರಚಿಸಬೇಕು ಎಂದು ಒತ್ತಾಯಿಸಿದರು.

7 ಕೋಟಿ ಮೊತ್ತದ ವಜ್ರಾಭರಣದೊಂದಿಗೆ ರಾಧಿಕಾ ಡೈಮಂಡ್ಸ್‌ನ ಕಾರು ಚಾಲಕ ಎಸ್ಕೇಪ್

Latest Videos
Follow Us:
Download App:
  • android
  • ios