ಮುಕೇಶ್ ಅಂಬಾನಿ ಹಾಗೂ ಕುಟುಂಬಕ್ಕೆ ಗರಿಷ್ಠ Z+ ಭದ್ರತೆ;ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ!
ಕೇಂದ್ರಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ. ಉದ್ಯಮಿ ಮುಕೇಶ್ ಅಂಬಾನಿ ಹಾಗೂ ಕುಟುಂಬಕ್ಕೆ ಗರಿಷ್ಠ ಮಟ್ಟದ Z+ ಭದ್ರತೆ ನೀಡಲು ಸೂಚಿಸಿದೆ. ಈ ಭದ್ರತೆ ಕೇವಲ ಮುಂಬೈನಲ್ಲಿ ಮಾತ್ರವಲ್, ಭಾರತ ಹಾಗೂ ವಿದೇಶಗಳಲ್ಲೂ Z+ ಭದ್ರತೆ ನೀಡಲು ಸೂಚಿಸಿದೆ.
ಮುಂಬೈ(ಫೆ.28): ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಹಾಗೂ ಕುಟುಂಬ ಇತ್ತೀಚೆಗೆ ಪದೇ ಪದೇ ಬೆದರಿಕೆ ಕರೆ ಎದುರಿಸುತ್ತಿದೆ. ದಾಳಿ ಬೆದರಿಕೆ, ಬಾಂಬ್ ಬೆದರಿಕೆ ಸೇರಿದಂತೆ ಹಲವು ಬೆದರಿಕೆ ಕರೆಗಳನ್ನು ಮುಂಬೈ ಹಾಗೂ ನಾಗ್ಪುರ ಪೊಲೀಸರು ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆಯನ್ನು ಕೇಂದ್ರ ಸರ್ಕಾರ ನೀಡಿದೆ. ಉದ್ಯಮಿ ಮುಕೇಶ್ ಅಂಬಾನಿ ಹಾಗೂ ಅಂಬಾನಿ ಕುಟುಂಬಕ್ಕೆ ಭಾರತದಲ್ಲಿರವು ಗರಿಷ್ಠ ಮಟ್ಟದ ಭದ್ರತೆ Z+ ನೀಡಲು ಕೋರ್ಟ್ ಸೂಚಿಸಿದೆ. ಮುಂಬೈ ಮಾತ್ರವಲ್ಲ, ಭಾರತ ಹಾಗೂ ವಿದೇಶಗಳಲ್ಲೂ Z+ ಭದ್ರತೆಯನ್ನು ಕೇಂದ್ರ ಸರ್ಕಾರ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಸುಪ್ರೀಂ ಕೋರ್ಟ್ ಜಸ್ಟೀಸ್ ಕೃಷ್ಣ ಮುರಾರಿ, ಜಸ್ಚೀಸ್ ಅಹಸಾನುದ್ದೀನ್ ಅಮಾನುಲ್ಲಾಹ ಅವರಿದ್ದ ಪೀಠ ಈ ಮಹತ್ವದ ಆದೇಶವನ್ನು ನೀಡಿದೆ. ಅಂಬಾನಿ ಕುಟುಂಬ ಎದುರಿಸುತ್ತಿರವ ಬೆದರಿಕೆ ಕರೆ ಹಾಗೂ ಇತರ ದಾಖಲೆಗಳ ಆಧಾರದಲ್ಲಿ ಸುಪ್ರೀಂ ಕೋರ್ಟ್ ಗರಿಷ್ಠ ಭದ್ರತೆ ನೀಡಲು ಸೂಚಿಸಿದೆ. ಅಂಬಾನಿ ಹಾಗೂ ಕುಟುಂಬ ಸದಸ್ಯರು ವಿದೇಶ ಪ್ರಯಾಣದ ವೇಳೆಯೂ Z+ ಭದ್ರತೆ ನೀಡುವಂತೆ ಸೂಚಿಸಿದೆ. ಇದರ ಎಲ್ಲಾ ವೆಚ್ಚವನ್ನು ಅಂಬಾನಿ ಕುಟುಂಬವೇ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮುಂಬೈ ದಾಳಿಗೆ 25 ಉಗ್ರರು ಸಜ್ಜು, ಅಂಬಾನಿ, ಬಚ್ಚನ್ ಸೇರಿ ಗಣ್ಯರ ಮನೆ ಸ್ಫೋಟಿಸುವ ಬೆದರಿಕೆ!
ಅಂಬಾನಿ ಹಾಗೂ ಕುಟುಂಬಕ್ಕೆ ನೀಡುವ ಭದ್ರತೆಯ ಎಲ್ಲಾ ವೆಚ್ಚ ಅವರೇ ನೋಡಿಕೊಳ್ಳಬೇಕು. ಆದರೆ ಕೇಂದ್ರ ಸರ್ಕಾರ ಗರಿಷ್ಠ ಭದ್ರತೆಯನ್ನು ಒದಗಿಸಿ ಅವರ ಸುರಕ್ಷತೆಯನ್ನು ಕಾಪಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದುವರೆಗೆ ಮುಕೇಶ್ ಅಂಬಾನಿ ಹಾಗೂ ಕುಟುಂಬಕ್ಕೆ ಹಲವು ಹೈಕೋರ್ಟ್ ಆದೇಶದಂತೆ ವಿವಿಧ ಭದ್ರತೆ ನೀಡಲಾಗಿದೆ. ಇದರಿಂದ ಗೊಂದಲ ವಾತಾವರಣ ನಿರ್ಮಾಣವಾಗಿದೆ. ಇದೀಗ ದೇಶಾದ್ಯಂತ ಹಾಗೂ ವಿದೇಶದಲ್ಲಿ ಅಂಬಾನಿಗೆ Z+ ಭದ್ರತೆ ನೀಡಲು ಸೂಚಿಸಲಾಗಿದೆ.
ಓರ್ವ ವ್ಯಕ್ತಿಯ ಭದ್ರತೆಯನ್ನು ಕೆಲ ಪ್ರದೇಶಕ್ಕೆ, ಕೆಲ ನಗರಕ್ಕೆ ಮಾತ್ರ ಸೀಮಿತಗೊಳಿಸಲು ಸಾಧ್ಯವಿಲ್ಲ. ಉದ್ಯಮಿ ಮಹಾರಾಷ್ಟ್ರ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ವ್ಯವಹಾರ ಹೊಂದಿದ್ದಾರೆ. ವಿದೇಶಗಳಲ್ಲೂ ಹೂಡಿಕೆ ಮಾಡಿ ವ್ಯವಹಾರ ನಡೆಸುತ್ತಿದ್ದಾರೆ. ಹೀಗಾಗಿ ದೇಶ ಹಾಗೂ ವಿದೇಶದಲ್ಲಿ ಏಕರೂಪದ ಹಾಗೂ ಗರಿಷ್ಠ ಮಟ್ಟದ ಭದ್ರತೆ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿತು.
ಭಾರತದ ಶ್ರೀಮಂತ ಉದ್ಯಮಿಗಳು ಯಾವ ನಗರದಲ್ಲಿ ನೆಲೆಸಿದ್ದಾರೆ? ಅವರ ಐಷಾರಾಮಿ ಮನೆಗಳು ಹೇಗಿವೆ? ಇಲ್ಲಿದೆ ಮಾಹಿತಿ
ಮುಕೇಶ್ ಅಂಬಾನಿ ಹಾಗೂ ಕುಟಂಬದ ಭದ್ರತೆ ವಿಚಾರದ ಪರವಾಗಿ ಸುಪ್ರೀಂ ಕೋರ್ಟ್ಗೆ ಹಿರಿಯ ವಕೀಲ ಮುಕುಲು ರೋಹ್ಟಗಿ ವಾದಿಸಿದರು. ಮುಕೇಶ್ ಅಂಬಾನಿ ಹಾಗೂ ಕುಟುಂಬಸ್ಥರಿಗೆ ಮೇಲಿಂದ ಮೇಲೆ ಬೆದರಿಕೆ ಕರೆಗಳ ಬರುತ್ತಿವೆ. ಮುಂಬೈ ಪೊಲೀಸ್, ಕೇಂದ್ರ ಗೃಹ ಸಚಿವಾಲಯ ಈ ಬೆದರಿಕೆ ಕರೆ ಸ್ವೀಕರಿಸಿದೆ. ಬೆದರಿಕೆ ನಡುವೆ ಅಂಬಾನಿ ಕುಟುಂಬ ಓಡಾಡಲು ಕಷ್ಟ. ಹೀಗಾಗಿ ಗರಿಷ್ಠ ಮಟ್ಟದ ಭದ್ರತೆ ಅವಶ್ಯತೆ ಇದೆ. ಅಂಬಾನಿ ಕುಟುಂಬಕ್ಕೆ ಗರಿಷ್ಠ ಭದ್ರತೆ ಅನಿವಾರ್ಯವಾಗಿದೆ ಎಂದರು.