ನವದೆಹಲಿ(ನ.30): ಅಡುಗೆ ಅನಿಲ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಕಡಿತವಾಗಿದ್ದು, ಜನಸಾಮಾನ್ಯರು ಹೌದು ಅನ್ನೋ ಹಾಗೆ  ಅಡುಗೆ ಅನಿಲ ಸಿಲಿಂಡರ್‌ ಬೆಲೆಯಲ್ಲಿ ಇಳಿಕೆಯಾಗಿದೆ. 

ಸಬ್ಸಿಡಿ ಸಹಿತ ಗ್ಯಾಸ್‌ ಸಿಲಿಂಡರ್ ಬೆಲೆ 6.52 ರೂ. ನಷ್ಟು ಕಡಿತವಾಗಿರುವುದು ಜನಸಾಮಾನ್ಯರಲ್ಲಿ ಭಾರೀ ಸಂತಸ ಮೂಡಿದೆ. ಶುಕ್ರವಾರ ಮಧ್ಯರಾತ್ರಿಯಿಂದಲೇ ಹೊಸ ದರಗಳು ಜಾರಿಗೆ ಬರಲಿವೆ. 

ಇಂದು ರಾತ್ರಿಯಿಂದ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸಿಲಿಂಡರ್‌ ಬೆಲೆ 500.90 ರೂ.ಗಳಾಗಲಿವೆ. 14.2 ತೂಕದ ಸಿಲಿಂಡರ್ ಬೆಲೆ 6.52 ರಷ್ಟು ಕಡಿತಗೊಂಡಿದೆ. ಕಳೆದ ನ.1 ರಂದು ಗ್ಯಾಸ್ ಸಿಲಿಂಡರ್ ಬೆಲೆ 2.94 ರೂ. ಏರಿಕೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.