Asianet Suvarna News Asianet Suvarna News

ಹಬ್ಬ ಬಂತು, ಡಿಸ್ಕೌಟ್ ಆಫರ್ಸ್ ಬಗ್ಗೆ ಹುಷಾರ್: ಇಲ್ಲಿದೆ ಶಾಪಿಂಗ್ ಟಿಪ್ಸ್!

ಹಬ್ಬದ ಸೀಸನ್ ನಲ್ಲಿ ಹಣ ಖರ್ಚು ಮಾಡಲು ಬೇಕು ಪ್ಲ್ಯಾನ್! ಡಿಸ್ಕೌಂಟ್ ಆಫರ್ಸ್ ಗಳ ಬಗ್ಗೆ ಇರಲೇಬೇಕು ಎಚ್ಚರಿಕೆ! ಬಜೆಟ್ ಪ್ಲ್ಯಾನ್ ಮಾಡಿ ಶಾಪಿಂಗ್ ಮಾಡುವುದು ಒಳಿತು! ಎಷ್ಟು ಬಜೆಟ್ ಇದೆಯೋ ಅಷ್ಟಕ್ಕೇ ಲಿಮಿಟ್ ಆಗೋದು ಒಳಿತು! ಆತುರದ ನಿರ್ಧಾರದಿಂದ ಹಣ ಕಳೆದುಕೊಂಡು ಪರಿತಪಡಿಸಬೇಡಿ

 

Spend Your Money Smartly During festival Season
Author
Bengaluru, First Published Oct 11, 2018, 5:02 PM IST
  • Facebook
  • Twitter
  • Whatsapp

ಬೆಂಗಳೂರು(ಅ.11): ಹಬ್ಬದ ಸೀಸನ್ ಬಂತು. ಯಥಾ ಪ್ರಕಾರ ಮಳಿಗೆಗಳಲ್ಲಿ ಆಕರ್ಷಕ ಡಿಸ್ಕೌಂಟ್ ಆಫರ್'ಗಳು ಗ್ರಾಹಕರನ್ನು ಸೆಳೆಯುತ್ತಿವೆ. ಗ್ರಾಹಕರಿಗೆ ಕೊಳ್ಳಲು ಸಿಕ್ಕಾಪಟ್ಟೆ ವಸ್ತುಗಳಿವೆ. ಕೆಲ ಜನರು ಬಹಳ ಮೊದಲೇ ಹಣ ಉಳಿಸಿ ಎತ್ತಿಟ್ಟುಕೊಂಡಿರುತ್ತಾರೆ. ಇನ್ನೂ ಕೆಲವರಿಗೆ ಕೊಳ್ಳಲು ಬಹಳಷ್ಟಿದ್ದರೂ ಬಜೆಟ್ ಕೊರತೆಯಿಂದ ಹತಾಶರಾಗಿರುತ್ತಾರೆ. ಆಸೆಯಿಂದ ಹೆಚ್ಚು ಕೊಂಡು ಹಣಕಾಸು ದುಸ್ಥಿತಿಗೆ ಜಾರಿಬಿಡುತ್ತಾರೆ. ಆಫರ್'ಗಳು ಮತ್ತು ಡಿಸ್ಕೌಂಟ್'ಗಳಿಗೆ ಮಾರುಹೋಗದೇ ಶಾಪಿಂಗ್ ಮಾಡುವುದು ಜಾಣತನ.

ಹಣವನ್ನು ಸ್ಮಾರ್ಟ್ ಆಗಿ ವೆಚ್ಚ ಮಾಡುವುದು ಹೇಗೆ? ಈ ಬಗ್ಗೆ ಕೆಲ ಟಿಪ್ಸ್ ಇಲ್ಲಿವೆ.

ಬಜೆಟ್ ರೂಪಿಸಿ:
ನಿಮ್ಮ ತಿಂಗಳ ಅಥವಾ ವರ್ಷದ ಬಜೆಟ್'ನ್ನು ನೀವು ಹೇಗೆ ಸಿದ್ಧಪಡಿಸುತ್ತೀರೋ ಅದೇ ರೀತಿ ಹಬ್ಬದ ಶಾಪಿಂಗ್'ಗೂ ಬಜೆಟ್ ರೂಪಿಸಿರಿ. ನಿಮಗೆ ಏನು ಅಗತ್ಯ ಮತ್ತು ಏನು ಬೇಕು ಎಂಬುದರ ಪಟ್ಟಿ ಮಾಡಿ. ಇದರಿಂದ ಅವಶ್ಯಕತೆಗಿಂತ ಹೆಚ್ಚು ವೆಚ್ಚ ಮಾಡುವುದನ್ನು ತಪ್ಪಿಸಬಹುದು. ಶಾಪಿಂಗ್'ಗೆ ಹೋದಾಗ ಕಣ್ಣಿಗೆ ಬಿದ್ದವನ್ನೆಲ್ಲಾ ಕೊಳ್ಳಬೇಕೆಂದ ಆಸೆ ಇರುತ್ತದೆ. ಅದನ್ನು ತಪ್ಪಿಸಿ. ಡಿಸ್ಕೌಂಟ್ ಅಥವಾ ಇಎಂಐ ಇದೆ ಎಂಬ ಕಾರಣಕ್ಕೆಯೇ ವಸ್ತುಗಳನ್ನು ಕೊಳ್ಳಲು ಹೋಗಬೇಡಿ. ನಿಮ್ಮ ಬಜೆಟ್ ಎಷ್ಟಿದೆಯೋ ಅಷ್ಟಕ್ಕೇ ಲಿಮಿಟ್ ಆಗಿರಿ.

ಡಿಸ್ಕೌಂಟ್ ಮತ್ತು ಆಫರ್ ಬಗ್ಗೆ ಹುಷಾರ್:
ಹಬ್ಬದ ಸೀಸನ್'ನಲ್ಲಿ ರಿಯಾಯಿತಿ ಮತ್ತು ಉಚಿತ ಕೊಡುಗೆ ಇತ್ಯಾದಿ ಆಫರ್'ಗಳು ತುಂಬಾ ಇರುತ್ತವೆ. ಡಿಸ್ಕೌಂಟ್ ಬೋರ್ಡ್ ನೋಡಿದ ತತ್'ಕ್ಷಣ ಡೀಲ್'ಗೆ ಮುಂದಾಗಲು ಹೋಗಬೇಡಿ. ನಿಮ್ಮದೇ ಸಂಶೋಧನೆ ಮಾಡಿ ಬೇರೆ ಪ್ರಾಡಕ್ಟ್'ಗಳಿಗೆ ತುಲನೆ ಮಾಡಿ ಲೆಕ್ಕಾಚಾರ ಹಾಕಿರಿ. ನಿಜವಾಗಿಯೂ ಡಿಸ್ಕೌಂಟ್ ಇದೆಯಾ ಅಥವಾ ಅದು ಮಾರ್ಕೆಟಿಂಗ್ ಗಿಮಿಕ್ಕಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ನೀವು ಬಲ್ಕ್ ಆಗಿ ವಸ್ತುಗಳನ್ನು ಖರೀದಿಸಬೇಕೆಂದಿದ್ದರೆ ವೋಲ್'ಸೇಲ್ ಮಾರ್ಕೆಟ್'ಗೆ ಹೋಗಿರಿ.

ದಿಢೀರ್ ನಿರ್ಧಾರ ಬೇಡ:
ಹಬ್ಬದ ಸಂದರ್ಭದಲ್ಲಿ ಶಾಪಿಂಗ್ ಮಾಡುವಾಗ ನಿಮ್ಮ ಮನಸಲ್ಲಿಲ್ಲದ ಹೊಸ ವಸ್ತುವೊಂದು ನಿಮ್ಮನ್ನು ಆಕರ್ಷಿಸಿ ನೀವು ಖರೀದಿಸಿಬಿಡಬಹುದು. ಇಂತಹ ನಿರ್ಧಾರಗಳು ನಿಮ್ಮ ಸಾಲವನ್ನು ಹೆಚ್ಚಿಸಬಹುದು ಹುಷಾರ್. ನಿಮಗೆ ಅಗತ್ಯವಾದದ್ದನ್ನು ಕ್ರೆಡಿಟ್ ಕಾರ್ಟ್ ಮೂಲಕ ಖರೀದಿಸುವುದೇನೋ ಸರಿ. ಆದರೆ, ಈಗಾಗಲೇ ಬೇರೆ ಸಾಲಗಳಿಗೆ ನೀವು ಕಮಿಟ್ ಆಗಿದ್ದರೆ ಮತ್ತೊಂದು ಸಾಲದ ಹೊರೆ ಹೊರುವ ಮುನ್ನ ಯೋಚಿಸಿರಿ. ಹೊಸ ಸಾಲಕ್ಕೆ ನಿಮಗೆ ರೀಪೇಮೆಂಟ್ ಮಾಡಲು ಸಾಧ್ಯವಾಗುತ್ತದೆಂದು ಅನಿಸಿದರೆ ಕಡಿಮೆ ಬಡ್ಡಿ ದರ ಇರುವ ಸಾಲದ ಸ್ಕೀಮ್'ಗಳನ್ನು ಹುಡುಕಿರಿ. ನಿಮ್ಮ ರೀಪೇಮೆಂಟ್ ಕಮಿಟ್ಮೆಂಟ್'ಗಳಿಗೆ ಅನುಗುಣವಾಗಿ ಇಎಂಐಗಳನ್ನು ಮಾಡಿಕೊಳ್ಳಿ.

ಆನ್'ಲೈನ್ ಶಾಪಿಂಗ್:
ಹಬ್ಬದ ಸೀಸನ್'ನಲ್ಲಿ ಆನ್'ಲೈನ್'ನಲ್ಲಿ ಶಾಪಿಂಗ್ ಮಾಡಿದರೆ ಸಾಕಷ್ಟು ಹಣ ಉಳಿತಾಯ ಮಾಡಬಹುದು. ಯಾಕೆಂದರೆ, ಆನ್'ಲೈನ್ ಮಳಿಗೆಗಳಲ್ಲಿ ಸಾಕಷ್ಟು ಡಿಸ್ಕೌಂಟ್, ರಿವಾರ್ಡ್ ಪಾಯಿಂಟ್, ಕ್ಯಾಷ್'ಬ್ಯಾಕ್ಸ್ ಇತ್ಯಾದಿ ಆಫರ್'ಗಳಿರುತ್ತವೆ. ಈಗಂತೂ ಆನ್'ಲೈನ್ ಮಳಿಗೆಗಳ ನಡುವೆ ಡಿಸ್ಕೌಂಟ್'ಗಳ ಸ್ಪರ್ಧೆ ನಡೆಯುತ್ತಿದ್ದು, ವಸ್ತುಗಳ ಬೆಲೆ ಕಿರಿದಾಗುತ್ತಿದೆ. ಅಲ್ಲದೇ ನಿಮಗೆ ಬೇಕಾದ ರೀತಿಯಲ್ಲಿ ಪೇಮೆಂಟ್ ಅವಕಾಶಗಳು ಸಿಗುತ್ತವೆ.

ಹಬ್ಬದ ಸೀಸನ್ ಈಗಾಗಲೇ ಶುರವಾಗಿರುವುದರಿಂದ ನೀವು ಖರ್ಚು ವೆಚ್ಚದ ವಿಚಾರದಲ್ಲಿ ಸ್ವನಿಯಂತ್ರಣ ಇಟ್ಟುಕೊಳ್ಳುವುದು ಒಳ್ಳೆಯದು. ಆಕರ್ಷಕ ಆಫರ್ ಮತ್ತು ಡಿಸ್ಕೌಂಟ್'ಗಳಿಗೆ ಮಾರುಹೋಗಬೇಡಿ.

Follow Us:
Download App:
  • android
  • ios