ದಕ್ಷಿಣ ಭಾರತದ ಮೊದಲ ಅಂಡರ್‌ಗ್ರೌಂಡ್ ಎ.ಸಿ. ಮಾರುಕಟ್ಟೆ ಬೆಂಗಳೂರಿನಲ್ಲಿ ಆರಂಭ! ಏನೆಲ್ಲ ಸೌಲಭ್ಯ ಇವೆ ನೋಡಿ!
ದೆಹಲಿಯ ಪಾಲಿಕಾ ಬಜಾರ್ ಮಾದರಿಯಲ್ಲಿ ಬೆಂಗಳೂರಿನ ವಿಜಯನಗರ ಮೆಟ್ರೋ ನಿಲ್ದಾಣದ ಬಳಿ ನೆಲದಾಳದಲ್ಲಿ ನಿರ್ಮಿಸಲಾಗಿರುವ ಹವಾನಿಯಂತ್ರಿತ ಮಾರುಕಟ್ಟೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಉದ್ಘಾಟನೆ ಮಾಡಿದರು. ಈ ಮಾರುಕಟ್ಟೆಗೆ ‘ಶ್ರೀ ಕೃಷ್ಣದೇವರಾಯ ಪಾಲಿಕೆ ಬಜಾರ್’ ಎಂದು ನಾಮಕರಣ ಮಾಡಲಾಗಿದೆ.
ವಿಜಯನಗರ (ಆ.26) : ಇದು ಅಂಡರ್‌ಗ್ರೌಂಡ್ ಮಾರುಕಟ್ಟೆಯಾಗಿದ್ದು, ಹವಾನಿಯಂತ್ರಿತವನ್ನು ಹೊಂದಿದೆ. ಈ ಹೊಸ ಮಾರುಕಟ್ಟೆ ವಿಜಯನಗರ ಮೆಟ್ರೋ ನಿಲ್ದಾಣಕ್ಕೆ ಸಮೀಪ ಇದ್ದು, ಇದರಲ್ಲಿ ಒಟ್ಟು 79 ಅಂಗಡಿಗಳಿವೆ. ಇಡೀ ಮಾರುಕಟ್ಟೆಯನ್ನು ಸಂಪೂರ್ಣ ಗ್ರಾನೈಟ್ ನಲ್ಲಿ ಪ್ಲೋರಿಂಗ್ ಮಾಡಲಾಗಿದ್ದು, ಸೆನ್ಸರ್ ಹೊಂದಿದ 3 ಗ್ಲಾಸ್ ಸ್ಲೈಡಿಂಗ್ ಡೋರ್‌ಗಳು, 2 ಎಸ್ಕಲೇಟರ್‌ಗಳು ಮತ್ತು ಗೂಡ್ಸ್ ಲಿಫ್ಟ್ ಸೌಲಭ್ಯವನ್ನು ಹೊಂದಿದೆ. ಒಟ್ಟು 26 ಒಳಾಂಗಣ ಎಸಿ ಯೂನಿಟ್ಸ್ ಗಳನ್ನೂ ಕಾಣಬಹುದಾಗಿದೆ.
ಅಷ್ಟೇ ಅಲ್ಲದೇ ಒಂದು ಎಲೆಕ್ಟ್ರೀಕಲ್ ರೂಂ, ಒಂದು ಸ್ಟೋರ್ ಹಾಗೂ ಆಫೀಸ್ ರೂಂ, ಒಟ್ಟು 8 ಎಂಟ್ರಿ ಎಕ್ಸಿಟ್ ಪಾಯಿಂಟ್ ಗಳಿದ್ದು ಸುಲಭವಾಗಿ ಪ್ರವೇಶಿಸಬಹುದಾಗಿದೆ. ಪ್ರತಿ ಅಂಗಡಿಗಳಲ್ಲೂ ಅಗ್ನಿ ನಿಯಂತ್ರಕಗಳಿದ್ದು, ಒಳ್ಳೇಯ ಗಾಳಿ, ಬೆಳಕು ಬರುವಂತಿದೆ.
ಗೃಹಲಕ್ಷ್ಮೀ ದುಡ್ಡಿನಲ್ಲಿ ಊರಿಗೆಲ್ಲ ಹೋಳಿಗೆ ಊಟ ಹಾಕಿಸಿದ ವೃದ್ಧೆ!
ನಗರೋತ್ಥಾನ ಯೋಜನೆಯಡಿ ಮೊದಲ ಹಂತದಲ್ಲಿ 5 ಕೋಟಿ ರೂ. ವೆಚ್ಛದಲ್ಲಿ ಹಾಗೂ ಸಿಎಂ ನವ ನಗರೋತ್ಥಾನ ಯೋಜನೆಯಡಿ ಎರಡನೇ ಹಂತದಲ್ಲಿ 8 ಕೋಟಿ ರೂ. ವೆಚ್ಛದಲ್ಲಿ ಒಟ್ಟು 13 ಕೋಟಿ ರೂ. ವೆಚ್ಛದಲ್ಲಿ ಈ ಸುಸಜ್ಜಿತ, ಅತ್ಯಾಕರ್ಷಕ ಮಾರುಕಟ್ಟೆ ನಿರ್ಮಾಣ ಮಾಡಲಾಗಿದೆ.
ನೂತನ ಅಂಡರ್ ಗ್ರೌಂಡ್ ಪಾಲಿಕೆ ಬಜಾರ್ 100 ಮೀಟರ್ ಉದ್ದ, 11 ಮೀಟರ್ ಅಗಲ ಇದ್ದು, 3 ಮೀಟರ್ ಅಗಲದ ಪಾದಚಾರಿ ಮಾರ್ಗವನ್ನು ಹೊಂದಿದೆ. ಪಾದಚಾರಿ ಮಾರ್ಗದ ಎರಡೂ ಬದಿಗೆ ಮಳಿಗೆಗಳನ್ನು ಕಾಣಬಹುದಾಗಿದೆ. ಮಾರುಕಟ್ಟೆಗೆ ಮಳೆನೀರು ನುಗ್ಗದಂತೆ ಅದರ ಸುತ್ತ ಪ್ರತ್ಯೇಕ ಪೈಪ್‌ಲೈನ್ ನಿರ್ಮಿಸಿ ಮಳೆ ನೀರನ್ನು ಮುಖ್ಯರಸ್ತೆಯಲ್ಲಿರುವ ಚರಂಡಿಗೆ ಹರಿಯುವಂತೆ ಮಾಡಲಾಗಿದೆ.