ಹೂಡಿಕೆದಾರರಿಗೆ ಸಿಹಿ ಸುದ್ದಿ ನೀಡಿದ ಷೇರು ಮಾರುಕಟ್ಟೆ! ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ 200 ಅಂಕಗಳ ಏರಿಕೆ! ಆಟೋ, ಲೋಹ, ಬ್ಯಾಂಕಿಂಗ್ ವಲಯದ ಷೇರು ಮಾರಾಟಗಳಲ್ಲಿ ಚೇತರಿಕೆ! ಡಾಲರ್ ಎದುರು ರೂಪಾಯಿ ಮೌಲ್ಯ 23 ಪೈಸೆ ಏರಿಕೆ
ಮುಂಬೈ(ಅ.10): ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 200 ಅಂಕಗಳ ಏರಿಕೆ ಕಂಡುಬಂದಿದೆ. ಆಟೋ, ಲೋಹ, ಬ್ಯಾಂಕಿಂಗ್ ವಲಯದ ಷೇರು ಮಾರಾಟಗಳಲ್ಲಿ ಚೇತರಿಕೆ ಕಂಡು ಬಂದಿದ್ದು, ಷೇರು ಸೂಚ್ಯಂಕ ಏರಲು ಕಾರಣವಾಗಿದೆ.
ಮುಂಬೈ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ 220.38 ಅಂಕ ಅಥವಾ ಶೇ.0.64 ಏರಿಕೆಯಾಗಿದ್ದು, 34,520ರಲ್ಲಿ ವಹಿವಾಟು ನಡೆಸಿತು.ಇಂದಿನ ವಹಿವಾಟಿನಲ್ಲಿ ಕೂಡ ಆಟೋ, ತೈಲ ಮತ್ತು ಅನಿಲ, ಲೋಹ, ಆರೋಗ್ಯವಲಯದಲ್ಲಿ ಷೇರು ಸಂವೇದಿ ಸೂಚ್ಯಂಕ ಶೇ.1.50ರಷ್ಟು ಏರಿಕೆ ಕಂಡುಬಂದಿದೆ.
ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ 45.55 ಅಂಕ ಏರಿಕೆ ಕಂಡುಬಂದು 10,346.60ರಲ್ಲಿ ವಹಿವಾಟು ನಡೆಸಿದೆ. ಇನ್ನು ಡಾಲರ್ ಎದುರು ರೂಪಾಯಿ ಮೌಲ್ಯ 23 ಪೈಸೆ ಏರಿಕೆಯಾಗಿ ರೂಪಾಯಿ ಮೌಲ್ಯ ಡಾಲರ್ ಎದುರು 74.16 ರೂ ಆಗಿದೆ.
