ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ರೈಲ್ವೆ ಇಲಾಖೆಗೆ ಹಿರಿಯ ನಾಗರಿಕರ ಅಭಯ| ಇಲಾಖೆಯ ಸಮಸ್ಯೆಗೆ ಸ್ಪಂದಿಸಿ ಸಬ್ಸಿಡಿ ಬೇಡ ಎಂದ ಹಿರಿಯರು| ಸಬ್ಸಿಡಿ ಬಿಟ್ಟುಕೊಟ್ಟ 32 ಲಕ್ಷಕ್ಕೂ ಹೆಚ್ಚಿನ ಹಿರಿಯ ನಾಗರಿಕರು| ಇಲಾಖೆಗೆ ಬರೋಬ್ಬರಿ 55.12 ಕೋಟಿ ರೂ. ಉಳಿತಾಯ| ಇಲಾಖೆಯ 'ಗಿವ್ ಅಪ್' ಯೋಜನೆಗೆ ಉತ್ತಮ ಸ್ಪಂದನೆ|
ನವದೆಹಲಿ(ಡಿ.07): ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ರೈಲ್ವೆ ಇಲಾಖೆಯ ಸಮಸ್ಯೆಗೆ ಸ್ಪಂದಿಸಿ ಹಿರಿಯ ನಾಗರಿಕರು ತಮ್ಮ ಸಬ್ಸಿಡಿಯನ್ನು ಬಿಟ್ಟುಕೊಡುತ್ತಿದ್ದಾರೆ. ಸುಮಾರು 32 ಲಕ್ಷಕ್ಕೂ ಹೆಚ್ಚಿನ ಹಿರಿಯ ನಾಗರಿಕರು 2017 ರ ಜುಲೈ ನಿಂದ ಈ ವರ್ಷದ ಜೂನ್ ವರೆಗೆ ದರ ವಿನಾಯ್ತಿಯನ್ನು ಬಿಟ್ಟುಕೊಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ನಷ್ಟದಲ್ಲಿದ್ದ ರೈಲ್ವೇ ಇಲಾಖೆಗೆ ಬರೋಬ್ಬರಿ 55.12 ಕೋಟಿ ರೂ. ಉಳಿತಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರ್ಥಿಕವಾಗಿ ಸದೃಢವಾಗಿರುವ ಹಿರಿಯ ನಾಗರಿಕರು ಸಬ್ಸಿಡಿ ಬಿಟ್ಟರೆ ಇಲಾಖೆಗೆ ಅನುಕೂಲವಾಗಲಿದೆ ಎಂದು ಇಲಾಖೆ ಈ ಹಿಂದೆ ಮನವಿ ಮಾಡಿತ್ತು.
ಇದಕ್ಕಾಗಿ ಕಳೆದ ವರ್ಷ ಜುಲೈ 22 ರಂದು 'ಗಿವ್ ಅಪ್' ಯೋಜನೆಯನ್ನು ಕೂಡ ಇಲಾಖೆ ಜಾರಿಗೊಳಿತ್ತು. ಆನ್‌ಲನ್ ನಲ್ಲಿ ಟಿಕೆಟ್ ಕಾಯ್ದಿರಿಸುವವರಿಗಾಗಿ ಶೇ.100 ರಷ್ಟು ದರ ವಿನಾಯ್ತಿ, ಶೇ.50 ರಷ್ಟು ದರ ವಿನಾಯ್ತಿಯೇ ವಿನಾಯ್ತಿಯೇ ಬೇಡ ಎಂಬ ಮೂರು ಆಯ್ಕೆಗಳನ್ನು ನೀಡಲಾಗಿತ್ತು.
ಈ ಸಂಬಂಧ ಆರ್‌ಟಿಐ ನಿಂದ ಪಡೆಯಲಾದ ಮಾಹಿತಿಯ ಪ್ರಕಾರ, ಈ ವರೆಗೆ ಒಟ್ಟು 32.12 ಲಕ್ಷ ಹಿರಿಯ ನಾಗರಿಕರು ದರ ವಿನಾಯ್ತಿಯನ್ನು ಬಿಟ್ಟುಕೊಟ್ಟಿದ್ದು, ಇಲಾಖೆಗೆ 55.12 ಕೋಟಿ ರೂ. ಉಳಿಸಲು ಸಹಾಯ ಮಾಡಿದ್ದಾರೆ ಎನ್ನಲಾಗಿದೆ.
