Asianet Suvarna News Asianet Suvarna News

ಅಮೆಜಾನ್, ಫ್ಲಿಪ್‌ಕಾರ್ಟ್‌ಗಿಂತ ಸೋವಿ, ಎಸ್‌ಬಿಐನಿಂದ ಯುನೋ ಮೇಳ!

ಆನ್ ಲೈನ್ ಮಾರಾಟ ತಾಣಗಳ ಹಾದಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹ ಇಳಿದಿದೆ. ಗ್ರಾಹಕರಿಗಾಗಿ 6 ದಿನಗಳ ಕಾಲ ಭರ್ಜರಿ ಆಫರ್ ನೀಡುತ್ತಿದೆ. ಏನಿದು ಸುದ್ದಿ ಅಂತೀರಾ? ಸಕಲ ಮಾಹಿತಿ ನಿಮ್ಮ ಮುಂದಿದೆ.

SBI launches 6-day YONO shopping festival Offers List
Author
Bengaluru, First Published Oct 15, 2018, 10:40 PM IST
  • Facebook
  • Twitter
  • Whatsapp

ನವದೆಹಲಿ[ಅ.15] ಎಸ್​ಬಿಐನ ಡಿಜಿಟಲ್​ ಸೇವೆಯಾದ ಯುನೋ 6 ದಿನಗಳ ಶಾಪಿಂಗ್​ ಮೇಳವನ್ನು ಆರಂಭಿಸುತ್ತಿದೆ. ಅಕ್ಟೋಬರ್​ 16ರಿಂದ ಆರಂಭವಾಗುವ ಈ ಮೇಳದಲ್ಲಿ ಯುನೋ ಆ್ಯಪ್​ ಮೂಲಕ ಗ್ರಾಹಕರು ಆನ್​ಲೈನ್​ ಶಾಪಿಂಗ್​ ಪೋರ್ಟಲ್​ಗಳಲ್ಲಿ ಭಾರೀ ಡಿಸ್ಕೌಂಟ್​ ಪಡೆಯಬಹುದಾಗಿದ್ದು ಆಫರ್ ಗಳ ಸುರಿಮಳೆಯೇ ಇದೆ.

ಎಲೆಕ್ಟ್ರಾನಿಕ್ಸ್​, ಫ್ಯಾಷನ್​, ಗೃಹ ವಸ್ತುಗಳು, ಗಿಫ್ಟ್​, ಜ್ಯುವೆಲರಿ ಹೀಗೆ ಸುಮಾರು 14 ಎ ಕಾಮರ್ಸ್​ ಮಾರಾಟಗಾರರೊಂದಿಗೆ ಸೇರಿಕೊಂಡು ಯುನೋ ಶಾಪಿಂಗ್​ ಮೇಳ ಗ್ರಾಹಕರಿಗೆ ಶೇ. 40 ರಷ್ಟು ರಿಯಾಯಿತಿಯನ್ನೂ ನೀಡುತ್ತಿದೆ. ಎಸ್​​ಬಿಐ ಕ್ರೆಡಿಟ್​ ಮತ್ತು ಡೆಬಿಟ್​ ಕಾರ್ಡ್​ ಬಳಕೆದಾರರಿಗೆ ಹೆಚ್ಚುವರಿಯಾಗಿ ಶೇ. 10 ರಷ್ಟು ಕ್ಯಾಶ್​ ಬ್ಯಾಕ್​ ಸೌಲಭ್ಯ ಸಿಗಲಿದೆ. ಈ ಮೇಳ ಅಕ್ಟೋಬರ್​ 16ಕ್ಕೆ ಆರಂಭವಾಗಿ ಅಕ್ಟೋಬರ್​ 21ರವರೆಗೂ ನಡೆಯಲಿದೆ.

ಕಳೆದ ವರ್ಷವಷ್ಟೇ ಆರಂಭವಾದ ಯುನೋ ಅಲ್ಪ ಕಾಲದಲ್ಲೇ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದ್ದು, ದಿನಕ್ಕೆ ಸರಾಸರಿ 25 ಸಾವಿರ ಗ್ರಾಹಕರನ್ನು ಪಡೆಯುತ್ತಾ ಮುನ್ನುಗ್ಗುತ್ತಿದ್ದು ಇದೀಗ ಮೇಳದ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆದುಕೊಳ್ಳಲಿದೆ.

Follow Us:
Download App:
  • android
  • ios