Asianet Suvarna News Asianet Suvarna News

ಪಿಂಚಣಿದಾರರು ಮನೆಯಲ್ಲೇ ಕುಳಿತು ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡ್ಬಹುದು; ಬರೀ ಒಂದು ವಿಡಿಯೋ ಕರೆ ಮೂಲಕ!

ಪಿಂಚಣಿದಾರರಿಗೆ ಮನೆಯಲ್ಲೇ ಕುಳಿತು ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡಲು ಎಸ್ ಬಿಐ ಹಾಗೂ ಬ್ಯಾಂಕ್ ಆಫ್ ಬರೋಡಾ ಅವಕಾಶ ಕಲ್ಪಿಸಿದೆ. ಕೇವಲ ಒಂದು ವಿಡಿಯೋ ಕರೆ ಮೂಲಕ ಪಿಂಚಣಿದಾರರು ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡಬಹುದು. ಇದಕ್ಕಾಗಿ ಏನು ಮಾಡಬೇಕು? ಇಲ್ಲಿದೆ ಮಾಹಿತಿ. 
 

SBI Bank of Baroda Video life certificate Here is how pension holders can submit their Jeevan Pramaan document
Author
First Published Nov 18, 2022, 5:52 PM IST

Business Desk:ಪಿಂಚಣಿ ಪಡೆಯುವವರು ಪ್ರತಿ ವರ್ಷ ಪಿಂಚಣಿ ವಿತರಣಾ ಸಂಸ್ಥೆಗೆ (ಪಿಡಿಎ) ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡೋದು ಕಡ್ಡಾಯ. ಇದಕ್ಕಾಗಿ ಪಿಂಚಣಿದಾರರು ಪಿಂಚಣಿ ವಿತರಣೆ ಮಾಡುವ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಸ್ವತಃ ಭೇಟಿ ನೀಡಿ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲಬೇಕಿತ್ತು. ಆದರೆ, ಇದೀಗ ವಿಡಿಯೋ ಕರೆ ಮೂಲಕ ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡುವ ಅವಕಾಶವನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ನೀಡಿದೆ. ಎಸ್ ಬಿಐ ಅಧಿಕಾರಿಗೆ ವಿಡಿಯೋ ಕರೆ ಮಾಡುವ ಮೂಲಕ ಪಿಂಚಣಿದಾರರು  ಜೀವನ ಪ್ರಮಾಣ ಪತ್ರ ಸಲ್ಲಿಕೆ ಮಾಡಬಹುದು. ವೆಬ್ ಸೈಟ್ ಅಥವಾ ಮೊಬೈಲ್ ಆ್ಯಪ್ ಮುಖಾಂತರ ವಿಡಿಯೋ ಕರೆ ಮಾಡಿ ಜೀವನ ಪ್ರಮಾಣಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಈ ಸೇವೆ ಪ್ರಾರಂಭದ ಬಗ್ಗೆ ಎಸ್ ಬಿಐ ಟ್ವೀಟ್ ಮೂಲಕ ಗ್ರಾಹಕರಿಗೆ ಮಾಹಿತಿ ನೀಡಿದೆ. ಇನ್ನು ಸಾರ್ವಜನಿಕ ವಲಯದ ಇನ್ನೊಂದು ಪ್ರಮುಖ ಬ್ಯಾಂಕ್ ಆದ ಬ್ಯಾಂಕ್ ಆಫ್ ಬರೋಡಾ ಕೂಡ ವಿಡಿಯೋ ಕರೆ ಮೂಲಕ ಜೀವನ ಪ್ರಮಾಣಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಿದೆ. ಹಾಗಾದ್ರೆ ವಿಡಿಯೋ ಕರೆ ಮೂಲಕ ಜೀವನ ಪ್ರಮಾಣಪತ್ರ ಸಲ್ಲಿಕೆ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ.

ಎಸ್ ಬಿಐ (SBI) ಬ್ಯಾಂಕ್ 
ವಿಡಿಯೋ ಕರೆ ಮೂಲಕ ಜೀವನ ಪ್ರಮಾಣ ಪತ್ರ ಸಲ್ಲಿಕೆಗೆ ಪಿಂಚಣಿದಾರರ ಪಿಂಚಣಿ ಖಾತೆ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರಬೇಕು. 
ಹಂತ 1: ಎಸ್ ಬಿಐ ಅಧಿಕೃತ ಪಿಂಚಣಿ ಸೇವಾ ವೆಬ್ ಸೈಟ್ ಗೆ(PensionSeva website) ಭೇಟಿ ನೀಡಿ.
ಹಂತ 2: ಮೇಲ್ಭಾಗದಲ್ಲಿರುವ 'VideoLC'ಲಿಂಕ್ ಮೇಲೆ ಕ್ಲಿಕ್ ಮಾಡಿ. ಎಸ್ ಬಿಐ ಪಿಂಚಣಿ ಸೇವಾ ಮೊಬೈಲ್ ಆ್ಯಪ್  ಬಳಸುತ್ತಿರೋರು 'Video Life Certificate tab' ಮೇಲೆ ಕ್ಲಿಕ್ ಮಾಡಿ.
ಹಂತ 3: ಪಿಂಚಣಿ ಜಮೆ ಆಗುವ ಖಾತೆ ಸಂಖ್ಯೆ ನಮೂದಿಸಿ. ಆ ಬಳಿಕ ಕ್ಯಾಪ್ಚಾ ಕೋಡ್ ನಮೂದಿಸಿ. ನಂತರ ಬ್ಯಾಂಕಿಗೆ ನಿಮ್ಮ ಆಧಾರ್ ಮಾಹಿತಿ ಬಳಕೆಗೆ ಅನುವು ಮಾಡಿಕೊಡಲು ಬಾಕ್ಸ್  ಮೇಲೆ ಕ್ಲಿಕಿಸಿ.
ಹಂತ 4:Validate Account ಬಟನ್ ಮೇಲೆ ಕ್ಲಿಕ್ ಮಾಡಿ. ಒಟಿಪಿ ನಮೂದಿಸಿ. 
ಹಂತ 5: ಅಗತ್ಯ ದಾಖಲೆಗಳನ್ನು ಅಪ್ ಲೋಡ್ ಮಾಡಿ. ಆ ಬಳಿಕ 'Proceed'ಮೇಲೆ ಕ್ಲಿಕ್ ಮಾಡಿ.
ಹಂತ 6: ನಂತರದ ಪುಟದಲ್ಲಿ ವಿಡಿಯೋ ಕರೆಗೆ ಸಮಯ ನಿಗದಿಪಡಿಸಿ. ಈ ಸಂಬಂಧ ನಿಮಗೆ ಇ-ಮೇಲ್ ಹಾಗೂ ಮೊಬೈಲ್ ಗೆ ಸಂದೇಶ ಬರುತ್ತದೆ.

ಗ್ರಾಹಕರೇ ಗಮನಿಸಿ, ನಾಳೆ ಬ್ಯಾಂಕ್ ನೌಕರರ ಮುಷ್ಕರ; ಬ್ಯಾಂಕಿಂಗ್ ಸೇವೆಗಳು ದೊರಕುವುದು ಕಷ್ಟ

ಹಂತ 7: ನಿಗದಿಪಡಿಸಿರುವ ಸಮಯಕ್ಕೆ ಸರಿಯಾಗಿ ವಿಡಿಯೋ ಕರೆಗೆ ಸೇರಿ. 
ಹಂತ 8: ವಿಡಿಯೋ ಕರೆಯಲ್ಲಿ ವೆರಿಫಿಕೇಶನ್ ಕೋಡ್ ತಿಳಿಸಿ. ಹಾಗೆಯೇ ಪ್ಯಾನ್ ಕಾರ್ಡ್ ತೋರಿಸಿ.
ಹಂತ 9: ನಿಮ್ಮ  ಫೋಟೋ ಸೆರೆ ಹಿಡಿಯಲು ಅನುಕೂಲವಾಗುವಂತೆ ಕ್ಯಾಮೆರ್ ಸೆಟ್ ಮಾಡಿ.
ಹಂತ 10: ನಿಮ್ಮ ಮಾಹಿತಿ ದಾಖಲಾಗಿರುವ ಬಗ್ಗೆ ನಿಮಗೆ ಸಂದೇಶ ಕಳುಹಿಸಲಾಗುತ್ತದೆ. ಜೀವನ ಪ್ರಮಾಣ ಪತ್ರ ಸಲ್ಲಿಕೆ ಯಾವ ಹಂತದಲ್ಲಿದೆ ಎಂಬ ಸ್ಟೇಟಸ್ ಕೂಡ ಎಸ್ ಎಂಎಸ್ ಮೂಲಕ ಲಭಿಸುತ್ತದೆ. 

ಅಂಬಾನಿ ಬಳಿಕ ಅದಾನಿಯೂ ವಿದೇಶದಲ್ಲಿ ನೆಲೆಸಲು ಸಿದ್ಧತೆ?

ಬ್ಯಾಂಕ್ ಆಫ್ ಬರೋಡಾ
ಹಂತ 1:  https://tabit.bankofbaroda.com/lfcrt/#/request ಭೇಟಿ ನೀಡಿ.
ಹಂತ 2: ಪಿಪಿಒ ಸಂಖ್ಯೆ ಹಾಗೂ ಆಧಾರ್ ಸಂಖ್ಯೆ ನಮೂದಿಸಿ.
ಹಂತ 3: ಆಧಾರ್ ಲಿಂಕ್ ಆಗಿರುವ ಮೊಬೈಲ್ ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ ಸಲ್ಲಿಕೆ ಮೇಲೆ ಕ್ಲಿಕ್ ಮಾಡಿ.
ಹಂತ 4: ಈ ನಂತರ ಪಿಂಚಣಿದಾರರು ಅಲ್ಲಿ ನೀಡಿರುವ ನಾಲ್ಕು ಆಯ್ಕೆಗಳಿಗೆ ಹೌದು/ಇಲ್ಲಎಂದು ಉತ್ತರಿಸಬೇಕು.
ಹಂತ 5: ಈಗಲೇ ಕರೆ ಮಾಡೋದಾ ಅಥವಾ ನಂತರವೇ ಎಂಬುದನ್ನು ಆಯ್ಕೆ ಮಾಡಿ. 
ಹಂತ 6: ಕರೆ ಬಂದಾಗ ಫೋಟೋ ಐಡಿ ತೋರಿಸಿ. ಅದನ್ನು ಸಿಬ್ಬಂದಿ ಸ್ಕ್ಯಾನ್ ಮಾಡುತ್ತಾರೆ.
ಹಂತ 7: ಫೋಟೋ ತೆಗೆದ ಬಳಿಕ ಮೊಬೈಲ್ ಗೆ ಮತ್ತೆ ಒಟಿಪಿ ಬರುತ್ತದೆ. 
ಹಂತ 8: ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಜೀವನ ಪ್ರಮಾಣಪತ್ರ ಪಿಂಚಣಿ ಸಾಫ್ಟ್ ವೇರ್ ನಲ್ಲಿ ಅಪ್ಡೇಟ್ ಆಗುತ್ತದೆ. 


 

Follow Us:
Download App:
  • android
  • ios