ಓವರ್‌ಟೈಮ್ ಹಣ ಹಿಂದಕ್ಕೆ ಕೊಡಿ..! ಎಸ್‌ಬಿಐದು ಇದೆಂಥಾ ನಿಯಮ?

SBI asks 70,000 pre-merger associate bank employees to return demonetisation overtime payment
Highlights

ಕೊಟ್ಟ ಸಂಬಳವನ್ನು ವಾಪಸ್ ಕೇಳುವ ಸುದ್ದಿಯನ್ನು ಕೇಳಿದ್ದೀರಾ? ಖಾಸಗಿ ಕಂಪನಿಗಳು ಎಲ್ಲೋ ಹೀಗೆ ಮಾಡಿದ ಉದಾಹರಣೆ ಇತ್ತು ಎಂದು ನೀವು ಭಾವಿಸಬಹುದು.. ಆದರೆ ಇಲ್ಲಿ ದೇಶದ ಅತಿದೊಡ್ಡ ಸರಕಾರಿ ಸ್ವಾಮ್ಯದ ಬ್ಯಾಂಕ್ ಎಂದು ಗುರುತಿಸಕೊಂಡಿರುವ ಎಸ್ ಬಿಐ ಓವರ್ ಟೈಮ್ ಸಂಬಳ ಹಿಂದಿರುಗಿಸಲು ತನ್ನ ಸಿಬ್ಬಂದಿ ಬಳಿ ಕೇಳಿದೆ.

ನವದೆಹಲಿ[ಜು.17]  ದೇಶದ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೋಟು ನಿಷೇಧದ ಸಮಯದಲ್ಲಿ ಓವರ್ ಟೈಮ್ ಕೆಲಸ ಮಾಡಿ ಹೆಚ್ಚುವರಿಯಾಗಿ ಪಡೆದಿದ್ದ ಸಂಬಳವನ್ನು ಹಿಂದಿರುಗಿಸುವಂತೆ ನೋಟು ನಿಷೇಧಕ್ಕೂ ಮುನ್ನ ವಿಲೀನಗೊಂಡಿದ್ದ ಬ್ಯಾಂಕ್ ಗಳ 70 ಸಾವಿರ ಉದ್ಯೋಗಿಗಳಿಗೆ ಸೂಚಿಸಿದೆ. 

2016ರ ನವೆಂಬರ್ 14ರಿಂದ 2016ರ ಡಿಸೆಂಬರ್ 30ರವರೆಗೆ  ಅಧಿಕ ಕೆಲಸ ಮಾಡಿದ್ದಕ್ಕೆ ಉದ್ಯೋಗಿಗಳಿಗೆ ಹೆಚ್ಚುವರಿಯಾಗಿ ಸಂಬಳ ನೀಡಲಾಗಿತ್ತು.  ಉದ್ಯೋಗಿಗಳ ಪೋಸ್ಟ್ ಗೆ ಅನುಗುಣವಾಗಿ 15 ಸಾವಿರದಿಂದ 30 ಸಾವಿರ ರುಪಾಯಿವರೆಗೂ ಹೆಚ್ಚುವರಿಯಾಗಿ ಸಂಬಳ ನೀಡಲಾಗಿದ್ದು ಅದನ್ನು ಹಿಂದಕ್ಕೆ ಪಡೆಯಬೇಕು ಎಂದು ಹೇಳಲಾಗಿದೆ.

ನೋಟು ನಿಷೇಧಕ್ಕೂ ಮುನ್ನ 2017ರ ಏಪ್ರಿಲ್ 1ರಂದು ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಟ್ರವನ್ಕೋರೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಮತ್ತು ಜೈಪುರ ಬ್ಯಾಂಕ್ ಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜತೆ ವಿಲೀನವಾಗಿದ್ದವು.ಆದರೆ ಸಿಬ್ಬಂದಿಯಲ್ಲಿ ಎರಡು ಪ್ರಕಾರ ಮಾಡಿಕೊಂಡಿರುವ ಎಸ್ ಬಿಐ ಮೂಲ ಸಿಬ್ಬಂದಿ ಮಾತ್ರ ಹೆಚ್ಚುವರಿ ವೇತನಕ್ಕೆ ಅರ್ಹರಾಗುತ್ತಾರೆ ಎಂದು ಹೇಳಿರುವುದು ವಿಲೀನಗೊಂಡ ಬ್ಯಾಂಕ್ ಸಿಬ್ಬಂದಿ ಆಕ್ರೋಶಕ್ಕೆ ಕಾರಣವಾಗಿದೆ.

loader