ರೂಪಾಯಿ ಅತ್ಯಂತ ಸದೃಢವಾಗಿದೆ ಎಂದ ಆರ್ಬಿಐ ಗವರ್ನರ್! ನಾಲ್ಕನೇ ತ್ರೈಮಾಸಿಕ ನೀತಿ ಪ್ರಕಟಿಸಿದ ಆರ್ಬಿಐ! ಬಾಹ್ಯ ಅಂಶಗಳ ಹರಡುವಿಕೆ ನಿಯಂತ್ರಿಸಲು ಸಾಧ್ಯವಿಲ್ಲ! ಉದ್ಯೋನ್ಮುಖ ಮಾರುಕಟ್ಟೆಗಳಿಗೆ ಹೋಲಿಸಿದರೆ ರೂಪಾಯಿ ಸದೃಢ
ಮುಂಬೈ(ಅ.7): ಇತರ ಕರೆನ್ಸಿಗಳಿಗೆ ಹೋಲಿಸಿದರೆ ಭಾರತದ ರೂಪಾಯಿ ಅತ್ಯಂತ ಸದೃಢವಾಗಿದೆ ಎಂದು ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ಸಮರ್ಥಿಸಿಕೊಂಡಿದ್ದಾರೆ.
ನಾಲ್ಕನೇ ತ್ರೈಮಾಸಿಕ ನೀತಿ ಪ್ರಕಟಿಸಿದ ಆರ್ಬಿಐ , ಯಾವುದೇ ಬದಲಾವಣೆ ಮಾಡದೇ ಹಳೆಯ ಕ್ರಮಗಳನ್ನ ಮುಂದುವರೆಸಿತು. ಈ ನಡುವೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ವಿರುದ್ಧ ರೂಪಾಯಿ, 73.52 ರಿಂದ 74.10ಕ್ಕೆ ಜಿಗಿತ ಕಂಡಿತ್ತು.
ಈ ಕುರಿತು ಮಾತನಾಡಿದ ಊರ್ಜಿತ್ ಪಟೇಲ್, ಸದ್ಯದ ಪರಿಸ್ಥಿತಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅಂದರೆ ಬಾಹ್ಯ ಅಂಶಗಳ ಹರಡುವಿಕೆಯನ್ನು ನಿಯಂತ್ರಿಸುವ ಹಕ್ಕು ನಮಗಿಲ್ಲ. ಆದರೆ, ಇತರ ಉದ್ಯೋನ್ಮುಖ ಮಾರುಕಟ್ಟೆಗಳಿಗೆ ಹೋಲಿಸಿದರೆ ರೂಪಾಯಿ ಸದೃಢವಾಗಿಯೇ ಇದೆ ಎಂದು ಸಮರ್ಥಿಸಿಕೊಂಡರು.
