ಮತ್ತೆ ಡಾಲರ್ ಎದುರು ಮಕಾಡೆ ಮಲಗಿದ ರೂಪಾಯಿ! ಪ್ರತೀ ಡಾಲರ್ ಗೆ 70.32 ರೂ. ಸಾರ್ವಕಾಲಿಕ ಕುಸಿತ! 3 ಪೈಸೆಯಷ್ಟು ದಿಢೀರ್ ಕುಸಿತ ಕಂಡ ರೂಪಾಯಿ ಮೌಲ್ಯ! ಆತಂಕ ಬೇಡ ಎಂದ ವಿತ್ತ ಸಚಿವ ಅರುಣ್ ಜೇಟ್ಲಿ! ಭಾರತದ ಆರ್ಥಿಕತೆ ಸ್ಥಿರವಾಗಿದೆ ಎಂದ ಜೇಟ್ಲಿ

ಮುಂಬೈ(ಆ.16): ಮತ್ತೆ ಭಾರತೀಯ ರೂಪಾಯಿ ಪಾತಾಳಕ್ಕೆ ಕುಸಿದಿದ್ದು, ಇದೇ ಮೊದಲ ಬಾರಿಗೆ ರೂಪಾಯಿ ಮೌಲ್ಯ ಪ್ರತೀ ಡಾಲರ್ ಗೆ 70.32 ರೂಗೆ ಕುಸಿದಿದೆ. ಇಂದು ವಹಿವಾಟು ಆರಂಭವಾಗುತ್ತಿದ್ದಂತೆಯೇ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಮತ್ತೆ 43 ಪೈಸೆಯಷ್ಟು ದಿಢೀರ್ ಕುಸಿತ ಕಂಡಿದೆ. ಆ ಮೂಲಕ ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಛ ಮೌಲ್ಯಕ್ಕೆ ಕುಸಿದಿದೆ.

Scroll to load tweet…

ಇನ್ನು ಮಾರುಕಟ್ಟೆ ಪರಿಸ್ಥಿತಿಯನ್ನು ಕೇಂದ್ರ ವಿತ್ತ ಸಚಿವಾಲಯ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಈ ಕುರಿತು ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಮಾರುಕಟ್ಟೆ ಪರಿಸ್ಥಿತಿಯನ್ನು ಸಚಿವಾಲಯ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಹೂಡಿಕೆದಾರರು ಆತಂಕ ಪಡುವ ಅಗತ್ಯವಿಲ್ಲ. ಭಾರತೀಯ ಆರ್ಥಿಕತೆ ಸ್ಥಿರವಾಗಿದ್ದು, ಅಸ್ಥಿರವಾದ ಅಂತಾರಾಷ್ಟ್ರೀಯ ಆರ್ಥಿಕ ವಾತಾವರಣಕ್ಕೆ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

Scroll to load tweet…

ಭಾರತದ ವಿದೇಶಿ ವಿನಿಮಯ ಖಜಾನೆಯಲ್ಲಿ ಸಾಕಷ್ಟು ಪ್ರಮಾಣದ ದಾಸ್ತಾನಿದ್ದು, ಆತಂಕ ಪಡಬೇಕಿಲ್ಲ. ಟರ್ಕಿಯಲ್ಲಿನ ಆರ್ಥಿಕ ಬಿಕ್ಕಟ್ಟು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೊಂಚ ಹಿನ್ನಡೆಗೆ ಕಾರಣವಾಗಿದೆ. ಹೀಗಾಗಿ ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಜೇಟ್ಲಿ ಟ್ವೀಟ್ ಮಾಡಿದ್ದಾರೆ.

Scroll to load tweet…

Scroll to load tweet…

Scroll to load tweet…