Asianet Suvarna News Asianet Suvarna News

ಮತ್ತೆ ರೂಪಾಯಿ ಬಿತ್ತು: ನಿಮ್ಮ ಜೇಬಿಗೂ ಬಂತು ಕುತ್ತು!

ಡಾಲರ್ ಎದುರು ಮತ್ತೆ ಕುಸಿದ ರೂಪಾಯಿ ಮೌಲ್ಯ! ಡಾಲರ್ ಎದುರು ರೂಪಾಯಿ ಮೌಲ್ಯ 33 ಪೈಸೆಯಷ್ಟು ಕುಸಿತ! ಇಂದಿನ ವಹಿವಾಟಿನಲ್ಲಿ ಪ್ರತಿ ಡಾಲರ್ ಗೆ  72.96 ರೂ.! 
4 ವರ್ಷಗಳ ಈ ಹಿಂದಿನ ದಾಖಲೆ ಸರಿಗಟ್ಟಿದ ರೂಪಾಯಿ ಮೌಲ್ಯ

Rupee Falls 33 Paise To 72.96 Against US Dollar
Author
Bengaluru, First Published Sep 25, 2018, 12:34 PM IST
  • Facebook
  • Twitter
  • Whatsapp

ಮುಂಬೈ(ಸೆ.25): ಅತ್ತ ಪೆಟ್ರೋಲ್ ದರ ದಿನೇ ದಿನೇ ಏರುತ್ತಿರುವಂತೆಯೇ ಇತ್ತ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೂಪಾಯಿ ಮೌಲ್ಯ ಕೂಡ ಕುಸಿತದತ್ತ ಸಾಗಿದೆ.

ಇಂದು ವಹಿವಾಟು ಆರಂಭವಾಗುತ್ತಿದ್ದಂತೆಯೇ ಡಾಲರ್ ಎದುರು ರೂಪಾಯಿ ಮೌಲ್ಯ 33 ಪೈಸೆಯಷ್ಟು ಕುಸಿತಗೊಂಡಿದೆ. ಈ ಮೂಲಕ ಪ್ರತೀ ಡಾಲರ್ ಎದುರು ರೂಪಾಯಿ ಮೌಲ್ಯ 72.96 ರೂ.ಗೆ ಕುಸಿದಿದೆ.

ಇನ್ನು ಹಾಲಿ ರೂಪಾಯಿ ಮೌಲ್ಯ 4 ವರ್ಷಗಳ ಈ ಹಿಂದಿನ ದಾಖಲೆಯನ್ನು ಮುಟ್ಟಿದ್ದು, ಈ ಹಿಂದೆ 2014ರಲ್ಲೂ ರೂಪಾಯಿ ಮೌಲ್ಯ ಇಷ್ಟೇ ಪ್ರಮಾಣಕ್ಕೆ ಏರಿಕೆಯಾಗಿತ್ತು.

ಇನ್ನು ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಪ್ರತೀ ಬ್ಯಾರೆಲ್ ಕಚ್ಛಾ ತೈಲದರಲ್ಲಿ ಶೇ.3ರಷ್ಟು ಏರಿಕೆಯಾಗಿದ್ದು, ಪ್ರತೀ ಬ್ಯಾರೆಲ್ ತೈಲ ದರ 81 ಡಾಲರ್ ಗೆ ಏರಿಕೆಯಾಗಿದೆ. ಹಾಲಿ ದರ ಪ್ರತೀ ಬ್ಯಾರೆಲ್ ಗೆ 81.28ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ನಿನ್ನೆ ಅಮೆರಿಕ ಸರ್ಕಾರ ಭಾರತ, ಚೀನಾ ಸೇರಿದಂತೆ ಹಲವು ದೇಶಗಳ ವಾಣಿಜ್ಯ ವಹಿವಾಟುಗಳ ಮೇಲೆ ಹೇರಿದ್ದ ನಿರ್ಬಂದ ಹಾಗೂ ಭಾರತೀಯ ವಸ್ತುಗಳ ಮೇಲಿನ ಆಮದು ಸುಂಕ ಏರಿಕೆ ಬೆಳವಣಿಗೆಯಿಂದಾಗಿ ರುಪಾಯಿಮೌಲ್ಯದಲ್ಲಿ 43ಪೈಸೆಯಷ್ಟು ಕುಸಿತವಾಗಿತ್ತು.

Follow Us:
Download App:
  • android
  • ios