ಗರಿಷ್ಠ ಮಟ್ಟ ತಲುಪಿದ ಚಿಲ್ಲರೆ ಹಣದುಬ್ಬರಜೂನ್ ತಿಂಗಳಲ್ಲಿ ಗರಿಷ್ಠ ಶೇ.5ಕ್ಕೆ ಏರಿಕೆಕೇಂದ್ರೀಯ ಅಂಕಿ ಅಂಶಗಳ ಕಚೇರಿ ಮಾಹಿತಿಇಂಧನ ಬೆಲೆ ಏರಿಕೆ ಹಣದುಬ್ಬರಕ್ಕೆ ಕಾರಣ 

ನವದೆಹಲಿ(ಜು.12): ಚಿಲ್ಲರೆ ಹಣದುಬ್ಬರ ಕಳೆದ ಜೂನ್ ತಿಂಗಳಲ್ಲಿ ಮತ್ತೆ ಹೆಚ್ಚಾಗಿದ್ದು, ಹಿಂದಿನ ಐದು ತಿಂಗಳಿಗೆ ಹೋಲಿಸಿದರೆ ಶೇ.5ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರೀಯ ಅಂಕಿ ಅಂಶಗಳ ಕಚೇರಿ (ಸಿಎಸ್‌ಒ) ತಿಳಿಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗ್ರಾಹಕ ದರ ಸೂಚ್ಯಂಕ ಆಧಾರದ ಮೇಲೆ ಸಿಎಸ್‌ಒ ವರದಿ ತಯಾರಿಸಿದ್ದು, ಕಳೆದ ಮೇ ತಿಂಗಳಲ್ಲಿ ಶೇ.4.87ರಷ್ಟಿದ್ದ ಚಿಲ್ಲರೆ ಹಣದುಬ್ಬರ ಜೂನ್ ನಲ್ಲಿ ಶೇ.5ಕ್ಕೆ ಏರಿಕೆಯಾಗಿದೆ.

ಇಂಧನ ಬೆಲೆ ಏರಿಕೆಯೇ ಹಣದುಬ್ಬರ ಏರಿಕೆಗೆ ಕಾರಣ ಎಂದು ಕೇಂದ್ರೀಯ ಅಂಕಿ ಅಂಶಗಳ ಕಚೇರಿ ಹೇಳಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರವನ್ನು ಶೇ.4ರ ಆಸುಪಾಸಿನಲ್ಲಿ ಕಾಯ್ದುಕೊಳ್ಳುವಂತೆ ಕೇಂದ್ರ ಸರ್ಕಾರ ಆರ್‌ಬಿಐಗೆ ಸೂಚಿಸಿದೆ.