ಸಿಹಿ ಸುದ್ದಿ: ಗೃಹ ಸಾಲದ ಮೇಲಿನ ಬಡ್ಡಿ ಅಗ್ಗ

RBI revises upwards housing loan limits under priority sector: Report
Highlights

ಗೃಹ ಸಾಲ ಪಡೆದುಕೊಳ್ಳುವವರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಭ ಸುದ್ದಿ ನೀಡಿದೆ. ದೊಡ್ಡ ಗಾತ್ರದ ಗೃಹ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ನೀಡುವಂತೆ ಬ್ಯಾಂಕುಗಳಿಗೆ ಸೂಚನೆ ನೀಡುವುದಾಗಿ ಮಂಗಳವಾರ ಹೇಳಿದೆ. 

ಮುಂಬೈ ಜೂನ್ 19: ಗೃಹ ಸಾಲ ಪಡೆದುಕೊಳ್ಳುವವರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಭ ಸುದ್ದಿ ನೀಡಿದೆ. ದೊಡ್ಡ ಗಾತ್ರದ ಗೃಹ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ನೀಡುವಂತೆ ಬ್ಯಾಂಕುಗಳಿಗೆ ಸೂಚನೆ ನೀಡುವುದಾಗಿ ಮಂಗಳವಾರ ಹೇಳಿದೆ. 

35 ಲಕ್ಷ ರೂ. ನಿಂದ 45 ಲಕ್ಷ ರೂ. ಒಳಗಿನ ಗೃಹ ಸಾಲಕ್ಕೆ ಬಡ್ಡಿ ದರ ಕಡಿಮೆ ಮಾಡುವ ಚಿಂತನೆಯನ್ನು ಆರ್ ಬಿಐ ನಡೆಸಿದೆ. ಮಹಾನಗರದ ವ್ಯಾಪಪ್ತಿಗೆ 35 ಲಕ್ಷ ವ್ಯಾಪ್ತಿ ನಿಗದಿ ಪಡಿಸಿದರೆ ಉಳಿದ ಕಡೆಗೆ 25 ಲಕ್ಷ ನಿಗದಿಪಡಿಸುವ ಸಾಧ್ಯತೆಯಿದೆ.

ಜೂನ್ 6 ರಂದೇ ವರದಿಯೊಂದನ್ನು ಆರ್ ಬಿಐ ಬಿಡುಗಡೆ ಮಾಡಿತ್ತು. ಪ್ರಧಾನ ಮಂತ್ರಿ ಆವಾಸ ಯೋಜನೆಯ ಅಡಿಯಲ್ಲಿಯೇ ಕುಟುಂಬದ ವಾರ್ಷಿಕ ಆದಾಯವನ್ನು ಲೆಕ್ಕ ಹಾಕಿ ಸಾಲ ನೀಡಿಕೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಆರ್ ಬಿಐ ಹೇಳಿದೆ.

 

 

 

loader